Astrology: ಈ 4 ರಾಶಿಯವರು ಪ್ರೀತಿ ಒಪ್ಪಿಕೊಳ್ಳಲು ತಮ್ಮ ಸಂಗಾತಿಯನ್ನು ಸತಾಯಿಸುತ್ತಾರೆ

Love: ಕೆಲ ರಾಶಿಯವರು ಸಂಬಂಧದ ವಿಚಾರದಲ್ಲಿ ಆತುರಪಡುವುದಿಲ್ಲ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹೆಚ್ಚು ಆಲೋಚನೆ ಮಾಡುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಂದು ಉತ್ತಮ ಸಂಬಂಧ ಬೆಳೆಯಲು ಕೇವಲ ಒಂದು ದಿನ ಸಾಕಾಗುವುದಿಲ್ಲ. ಬಾಂಧವ್ಯ ಗಟ್ಟಿಯಾಗಲೂ ಅಗತ್ಯ ಶ್ರಮ ಮತ್ತು ಸಮಯದ ಅಗತ್ಯವಿದೆ. ಆದರೆ ಕೆಲವರಲ್ಲಿ ವಿಶೇಷ ಗುಣವಿರುತ್ತದೆ, ಅವರಿಗೆ ಅವರ ಸಂಬಂಧದ ಬಗ್ಗೆ ಬಹು ಬೇಗನೆ ನಂಬಿಕೆ ಬರುತ್ತದೆ. ನಮ್ಮ ಈ ಸಂಬಂಧ ಕೊನೆಯವರೆಗೂ ಇರುತ್ತದೆ ಎಂಬ ವಿಶ್ವಾಸ ಅವರಲ್ಲಿ ಬೆಳೆಯುತ್ತದೆ. ಇನ್ನು ನೀವು ಅದೆಷ್ಟೇ ಬಾರಿ ಡೇಟಿಂಗ್ ಹೋಗಿ, ನೀವು ಪ್ರೀತಿಸುವ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ, ಬಹಳ ಸಮಯ ಹಿಡಿಯುವುದಂತೂ ಸತ್ಯ. ಜ್ಯೋತಿಷಿಗಳ ಪ್ರಕಾರ, ಕೆಲ ರಾಶಿಯವರು ಸಂಬಂಧದ ವಿಚಾರದಲ್ಲಿ ಆತುರಪಡುವುದಿಲ್ಲ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹೆಚ್ಚು ಆಲೋಚನೆ ಮಾಡುತ್ತಾರೆ. ಹಾಗೆಯೇ ಅವರುಯ ತಮ್ಮ ಸಂಗಾತಿಯೊಂದಿಗಿನ ಪ್ರತಿ ಕ್ಷಣವನ್ನು ಆನಂದಿಸುತ್ತಾರೆ, ಆದರೆ ಪ್ರೀತಿಯಲ್ಲಿ ಬೀಳುವ ಮೊದಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ.

ಮಕರ
ಈ ರಾಶಿಗೆ ಸೇರಿದ ಜನರು ಒಳ್ಳೆಯ ವಿಷಯಗಳು ಸಮಯಕ್ಕೆ ಸರಿಯಾಗಿ ಆಗುತ್ತದೆ ಎಂದು ನಂಬಿರುತ್ತಾರೆ, ಅಲ್ಲದೇ ಈ ವಿಚಾರವಾಗಿ ಒಬ್ಬ ವ್ಯಕ್ತಿಯನ್ನು ಕಾಯಿಸಲು ಹಿಂದೆ ಮುಂದೆ ನೋಡುವುದಿಲ್ಲ. ಈ ರಾಶಿಯವರು ಹೆಚ್ಚು ಜವಾಬ್ದಾರಿಯುತ ಜನರು, ಒಳ್ಳೆಯದಕ್ಕಾಗಿ ಅವರು ಯಾರಿಗಾದರೂ ಬದ್ಧರಾಗಿರುತ್ತಾರೆ. ಅಲ್ಲದೇ ಜೀವನದ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಮಾಡಲು ತಮ್ಮ ಸಮಯವನ್ನು ತೆಗೆದುಕೊಳ್ಳುತ್ತಾರೆ. ಗಂಭೀರವಾದ ವಿಚಾರಗಳನ್ನು ಪರಿಶೀಲಿಸಿ ಮುಂದೆ ಹೆಜ್ಜೆ ಇಡುವ ವ್ಯಕ್ತಿತ್ವ ಈ ರಾಶಿಯವರದ್ದು. ಹಾಗೆಯೇ ಪ್ರಮುಖ ವಿಚಾರಗಳನ್ನು ಹಂಚಿಕೊಳ್ಳುವಾಗ ಸಮಯ, ಸಂದರ್ಭವನ್ನು ನೋಡಿಕೊಂಡು ಹೇಳುತ್ತಾರೆ.

ಇದನ್ನೂ ಓದಿ: ಈ ಹೂವುಗಳಿಂದ ಏನೆಲ್ಲ ಆಹಾರ ಪದಾರ್ಥಗಳನ್ನು ತಯಾರಿಸಬಹುದು ಗೊತ್ತಾ?

ಕನ್ಯಾರಾಶಿ

ಈ ರಾಶಿಗೆ ಸೇರಿದವರು ಬಹುತೇಕ ಎಲ್ಲ ವಿಚಾರದ ಕುರಿತು ಅತಿಯಾಗಿ ಯೋಚಿಸುತ್ತಾರೆ. ಅವರು ಪ್ರತಿ ದಿನವನ್ನು ಸರಿಯಾಗಿ ವಿಶ್ಲೇಷಣೆ ಮೂಲಕ ಪ್ಲಾನ್ ಮಾಡಿ ಆರಂಭಿಸುತ್ತಾರೆ. ಇನ್ನು ಸಂಬಂಧದ ವಿಚಾರದಲ್ಲಿ ಸಹ ಎಲ್ಲವನ್ನು ಕೂಲಂಕುಶವಾಗಿ ನೋಡಿ, ಸಮಯ ಸರಿ ಇದೆ ಎಂದು ತಿಳಿದ ನಂತರ ಒಪ್ಪಿಗೆ ನೀಡುತ್ತಾರೆ. ಎಲ್ಲವನ್ನು ಯಾವುದೇ ತಪ್ಪಿಲ್ಲದೇ ಸರಿಯಾಗಿ ಮಾಡಬೇಕು ಎಂಬುದು ಅವರ ಆಶಯವಾಗಿರುತ್ತದೆ. ಹಾಗೆಯೇ ಅವರು ತಮ್ಮ ಮಾತುಗಳಿಗೆ ಬದ್ಧರಾಗಿರುತ್ತಾರೆ.

ಕಟಕ ರಾಶಿ
ಈ ರಾಶಿಗೆ ಸೇರಿದವರು ಸೂಕ್ಷ್ಮ ಲಕ್ಷಣಗಳನ್ನು ತಿಳಿದಿರುತ್ತಾರೆ. ಈ ಕರ್ಕಾಟಕ ರಾಶಿಯವರು ಸಂಗಾತಿಯೊಂದಿಗಿನ ಒಡನಾಟ ಇಷ್ಟಪಡುತ್ತಾರೆ, ಹಾಗೆಯೇ ಒಮ್ಮೆ ಮಾತು ಕೊಟ್ಟರೆ ಅದನ್ನು ಪಾಲಿಸಿಯೇ ತೀರುತ್ತಾರೆ. ಇನ್ನು ಅವರು ಸಂಬಂಧದಲ್ಲಿ ಗಟ್ಟಿಯಾಗುವ ತನಕ, ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅಲ್ಲದೇ ತಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಬಯಸುತ್ತಾರೆ. ಬದ್ಧತೆಗೆ ಈ ರಾಶಿಯವರನ್ನು ಸಂಕೇತ ಎನ್ಬಹುದು. ಇನ್ನು ಒಮ್ಮೆ ಬದ್ಧರಾದರೆ ಆ ಸಂಬಂಧಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಯಾರನ್ನು ಬೇಕಾದರೂ ಎದುರಿಸಲು ಸಜ್ಜಾಗುತ್ತಾರೆ.

ವೃಷಭ ರಾಶಿ

ಈ ರಾಶಿಯವರು ಪ್ರೀತಿ ಮತ್ತು ಕಾಳಜಿ ಉಳ್ಳುವವರಾಗಿರುತ್ತಾರೆ. ಇವರಿಗೆ ತೊಂದರೆಯಲ್ಲಿ ಸಿಲುಕಿಕೊಳ್ಳುವುದು ಆಗುವುದಿಲ್ಲ. ಆದರೆ ಬಲವಾದ ಸಂಬಂಧದಲ್ಲಿ ನಂಬಿಕೆ ಹೊಂದಿರುತ್ತಾರೆ. ಆದರೆ ಸಂಬಂಧದ ವಿಷಯದಲ್ಲಿ ನಿಧಾನವಾಗಿ ನಿರ್ಧಾರ ಮಾಡುತ್ತಾರೆ. ಈ ರಾಶಿಯವರ ಸ್ವಭಾವ ಹೇಗೆ ಎಂದರೆ ಅವರಿಗೆ ಪ್ರೀತಿ ಆಗಿರುತ್ತದೆ, ಆದರೆ ಅದನ್ನು ಗುರುತಿಸಲು ಮತ್ತು ಅರ್ಥ ಮಾಡಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: