Yoga Poses: ನಿಮ್ಮ ದೇಹದ ಆಕಾರವನ್ನು ಸುಧಾರಿಸುತ್ತದೆ ಈ 3 ಯೋಗಾಸನಗಳು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯೋಗವು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಗಳು ನೀಡುವುದಲ್ಲದೆ, ನಮ್ಮ ದೇಹದ ಭಂಗಿಯನ್ನು ಸಹ ಸರಿಯಾಗಿಡುತ್ತದೆ.

  • Share this:

ಈ ಕೋವಿಡ್-19 ಸಾಂಕ್ರಾಮಿಕ ರೋಗ ಶುರುವಾದಾಗಿನಿಂದ ಅನೇಕರು ತಮ್ಮ ಕಚೇರಿಗೆ ಹೋಗದೆ, ಮನೆಯಲ್ಲಿಯೇ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ (Laptop) ಮುಂದೆ ಕುಳಿತುಕೊಂಡು ಗಂಟೆಗಟ್ಟಲೆ ಕುರ್ಚಿಯಿಂದ ಮೇಲಕ್ಕೆ ಏಳದೆ ಕೆಲಸ ಮಾಡುತ್ತಿದ್ದಾರೆ. ಹೀಗೆ ಗಂಟೆಗಟ್ಟಲೆ ಒಂದೇ ಕಡೆ ಕೂತು ಕೆಲಸ ಮಾಡುವುದರಿಂದ ಜೀವನಶೈಲಿ (Lifestyle) ಜಡತ್ವದ ಹಾದಿಯನ್ನು ಹಿಡಿಯುತ್ತದೆ. ಹೀಗೆ ಕುಳಿತು ಕೆಲಸ ಮಾಡುವುದರಿಂದ ಮತ್ತು ಹೆಚ್ಚು ಓಡಾಡದೆ ಇರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಈಗಿನ ಯುವಕ ಮತ್ತು ಯುವತಿಯರು ಕೂತಲ್ಲಿಯೇ ಕೂತು ಕೆಲಸ ಮಾಡುವುದರಿಂದ ದೇಹದಲ್ಲಿ ಅತಿಯಾದ ಬೊಜ್ಜು (Obesity) ಶೇಖರಣೆಯಾಗುವುದು, ಯಾವುದೇ ವ್ಯಾಯಾಮ (Exercise) ಮಾಡದೆ ಇರುವುದರಿಂದ ಸಕ್ಕರೆ ಕಾಯಿಲೆ (Diabetes) ಮತ್ತು ಅಧಿಕ ರಕ್ತದೊತ್ತಡದಂತಹ (BP) ಅನಾರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ.


ಹಾಗಾದರೆ ಇದಕ್ಕೆ ಪರಿಹಾರ ಏನು ಅಂತ ಕೇಳಿದರೆ, ನೆನಪಿಗೆ ಬರುವ ಮೊದಲ ಪರಿಹಾರ ಎಂದರೆ ಪ್ರತಿದಿನ ತಪ್ಪದೆ ಯೋಗಾಭ್ಯಾಸ ಮಾಡುವುದು ಅಂತ ತಜ್ಞರು ಹೇಳುತ್ತಾರೆ. ಯೋಗವು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಗಳು ನೀಡುವುದಲ್ಲದೆ, ನಮ್ಮ ದೇಹದ ಭಂಗಿಯನ್ನು ಸಹ ಸರಿಯಾಗಿಡುತ್ತದೆ.


ಈ ಬಗ್ಗೆ ಯೋಗ ಗುರು ನಿಮಿಷ್ ದಯಾಳು ಅವರ ಅನಿಸಿಕೆ


ಯೋಗ ಗುರು ನಿಮಿಷ್ ದಯಾಳು ಅವರು "ಯೋಗವು ಮನಸ್ಸು ಮತ್ತು ದೇಹ ಎರಡಕ್ಕೂ ಹಲವಾರು ಪ್ರಯೋಜನಗಳನ್ನು ನೀಡುವ ಬಹುಮುಖ ಅಭ್ಯಾಸವಾಗಿದೆ. ಮತ್ತೆ ಇದನ್ನು ನಾವು ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಮಾಡಬಹುದು.


ಇದನ್ನೂ ಓದಿ: ಹದಿಹರೆಯವದರಲ್ಲೂ ಕಾಣಿಸಿಕೊಳ್ಳುತ್ತಿದೆ ಚಿಕನ್‌ ಪಾಕ್ಸ್:‌ ಲಸಿಕೆಯನ್ನು ನಿರ್ಲಕ್ಷಿಸಬೇಡಿ ಎಂದ ವೈದ್ಯರು


ಸಾಂಕ್ರಾಮಿಕ ರೋಗದ ಹಾವಳಿಯ ನಂತರದ ದಿನಗಳಲ್ಲಿ, ಪ್ರಯಾಣದ ನಿರ್ಬಂಧಗಳು ಸಡಿಲಗೊಳ್ಳುತ್ತಿದ್ದಂತೆ, ಅನೇಕ ಜನರು ವಾರಾಂತ್ಯಗಳಲ್ಲಿ ಪ್ರವಾಸಕ್ಕೆ ಹೋಗುವುದು ಹೆಚ್ಚಾಗಿದೆ. ಹೀಗೆ ವಾರ ವಾರ ಪ್ರವಾಸಕ್ಕೆ ಹೋದಾಗ ತಮ್ಮ ಫಿಟ್ನೆಸ್ ದಿನಚರಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಅಂತ ಹೇಳುತ್ತಾರೆ.


ಯೋಗ ಗುರು ಅದಕ್ಕೆ "ಪ್ರಯಾಣ ಮಾಡುವಾಗ ಸಕ್ರಿಯವಾಗಿ ಮತ್ತು ಸದೃಢವಾಗಿರಲು ಬಯಸುವವರಿಗೆ ಯೋಗವು ಪರಿಪೂರ್ಣ ಪರಿಹಾರವನ್ನು ನೀಡುತ್ತದೆ, ಏಕೆಂದರೆ ಇದನ್ನು ಎಲ್ಲಿ ಬೇಕಾದರೂ ಮಾಡಬಹುದು ಮತ್ತು ಯಾವುದೇ ವಿಶೇಷ ಉಪಕರಣಗಳ ಅಗತ್ಯವಿಲ್ಲ.


ನೀವು ವಿಮಾನದಲ್ಲಿರಿ ಅಥವಾ ರಸ್ತೆ ಪ್ರವಾಸವನ್ನು ಕೈಗೊಳ್ಳಿ, ನಿಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ನೀವು ಈ ಯೋಗಾಸನಗಳನ್ನು ಮಾಡಬಹುದು" ಎಂದು ದಯಾಳು ಹೇಳುತ್ತಾರೆ.


ನಿಮ್ಮ ದೇಹದ ಭಂಗಿಯನ್ನು ಸರಿಪಡಿಸಲು ಇಲ್ಲಿವೆ 3 ಯೋಗಾಸನಗಳು:


1. ಕ್ಯಾಟ್-ಕವ್ ಸ್ಟ್ರೆಚ್ (ಬೆಕ್ಕು-ಹಸು ಸ್ಟ್ರೆಚ್): ಈ ಯೋಗ ಭಂಗಿಯನ್ನು ಕುರ್ಚಿಯ ಸಹಾಯದಿಂದ ಸುಲಭವಾಗಿ ಮಾಡಬಹುದು ಮತ್ತು ಇದು ಬೆನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಬಾಗುವಿಕೆಯ ಅದ್ಭುತ ಸಂಯೋಜನೆಯಾಗಿದೆ ಮತ್ತು ಬೆನ್ನುಮೂಳೆಯನ್ನು ನಿಧಾನವಾಗಿ ಹಿಗ್ಗಿಸುತ್ತದೆ. ಉಸಿರಾಟದ ಮೇಲೆ ಗಮನವಿರಿಸಿ, ನಿಮ್ಮ ಬೆನ್ನುಮೂಳೆಯನ್ನು ಬಾಗಿಸಿ ಮತ್ತು ನಿಮ್ಮ ಭುಜಗಳನ್ನು ಕೆಳಗೆ ಮತ್ತು ಹಿಂದೆ ತಿರುಗಿಸಿ, ನಿಮ್ಮ ಭುಜದ ಬ್ಲೇಡ್ ಗಳನ್ನು ನಿಮ್ಮ ಬೆನ್ನಿನ ಮೇಲೆ ತನ್ನಿರಿ.


ಉಸಿರನ್ನು ಹೊರ ಹಾಕುವಾಗ, ನಿಮ್ಮ ಬೆನ್ನುಮೂಳೆಯನ್ನು ಸುತ್ತಿ ಮತ್ತು ನಿಮ್ಮ ಗದ್ದವನ್ನು ನಿಮ್ಮ ಎದೆಗೆ ತಾಕಿಸಿ, ಭುಜ ಮತ್ತು ತಲೆಯನ್ನು ಮುಂದೆ ಬರಲು ಬಿಡಿ. ಈ ಭಂಗಿ ನಿಮ್ಮ ಬೆನ್ನುನೋವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ, ವಿಶೇಷವಾಗಿ ನೀವು ದೀರ್ಘ ಪ್ರಯಾಣದಲ್ಲಿರುವಾಗ.


2. ಚೇರ್ ಈಗಲ್ ಅಥವಾ ಗರುಡಾಸನ: ನಿಮ್ಮ ಪಾದಗಳನ್ನು ನೆಲದ ಮೇಲೆ ಭದ್ರವಾಗಿ ಇರಿಸಿ ಮತ್ತು ನಿಮ್ಮ ಕೈಗಳನ್ನು ನಿಮ್ಮ ತೊಡೆಗಳ ಮೇಲೆ ಇರಿಸಿಕೊಂಡು ನೇರವಾಗಿ ಕುಳಿತುಕೊಳ್ಳಿ. ನಿಮ್ಮ ಬಲಗಾಲನ್ನು ನಿಮ್ಮ ಎಡ ತೊಡೆಯ ಮೇಲೆ ಅಡ್ಡಹಾಕಿ, ತದ ನಂತರ ನಿಮ್ಮ ಎಡಗೈಯನ್ನು ನಿಮ್ಮ ಬಲಗೈಯ ಮೇಲೆ ಸುತ್ತಿ, ಇದರಿಂದ ನಿಮ್ಮ ಅಂಗೈಗಳು ಪರಸ್ಪರ ಎದುರಾಗುತ್ತವೆ.


ಸಾಧ್ಯವಾದರೆ, ನಿಮ್ಮ ಬೆರಳುಗಳನ್ನು ಪರಸ್ಪರ ಜೋಡಿಸಿ ಮತ್ತು ನಿಮ್ಮ ಮೊಣಕೈಗಳನ್ನು ಭುಜದ ಎತ್ತರಕ್ಕೆ ತನ್ನಿ. ಈ ಭಂಗಿಯನ್ನು ಅನೇಕ ಬಾರಿ ಉಸಿರಾಡುವಾಗ ಆಳವಾಗಿ ಹಿಡಿದಿಟ್ಟುಕೊಳ್ಳಿ, ನಂತರ ನಿಧಾನವಾಗಿ ಬಿಡುಗಡೆ ಮಾಡಿ ಮತ್ತು ಇದನ್ನು ಹೀಗೆ ಪುನರಾವರ್ತಿಸಿ. ಭುಜಗಳು, ಮೇಲಿನ ಬೆನ್ನು ಮತ್ತು ಸೊಂಟವನ್ನು ಹಿಗ್ಗಿಸಲು ಮತ್ತು ತೆರೆಯಲು ಇದು ಅತ್ಯುತ್ತಮ ಭಂಗಿಯಾಗಿದ್ದು, ಸಮತೋಲನ ಮತ್ತು ಗಮನವನ್ನು ಸುಧಾರಿಸುತ್ತದೆ.


3. ಹಸ್ತಪಾದಾಸನ: ನಿಮ್ಮ ಪಾದಗಳನ್ನು ನೆಲದ ಮೇಲೆ ಸಮತಟ್ಟಾಗಿಸಿ ಕುರ್ಚಿಯ ಮೇಲೆ ಕುಳಿತುಕೊಳ್ಳಿ. ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ತೋಳುಗಳನ್ನು ಕೋಣೆಯ ಛಾವಣಿಯ ಕಡೆಗೆ ಎತ್ತಿ.




ನೀವು ಉಸಿರನ್ನು ಹೊರ ಹಾಕುವಾಗ, ನಿಮ್ಮ ಸೊಂಟದಿಂದ ಮುಂದೆ ಬಾಗಿ, ನಿಮ್ಮ ಎದೆಯನ್ನು ನಿಮ್ಮ ತೊಡೆಗಳ ಕಡೆಗೆ ತನ್ನಿರಿ. ನಿಮ್ಮ ತೋಳುಗಳನ್ನು ನೆಲದ ಕಡೆಗೆ ಇಳಿಬಿಡಿ ಮತ್ತು ನಿಮ್ಮ ನಮ್ಯತೆಯನ್ನು ಅವಲಂಬಿಸಿ ನಿಮ್ಮ ಕೈಗಳನ್ನು ನೆಲದ ಮೇಲೆ ಇರಿಸಿ. ನಿಮ್ಮ ಮೊಣಕಾಲುಗಳನ್ನು ನೇರವಾಗಿರಿಸಿ, ಆದರೆ ಲಾಕ್ ಆಗದಂತೆ ಇರಿಸಿ ಮತ್ತು ನಿಮ್ಮ ತಲೆ ಮತ್ತು ಕುತ್ತಿಗೆಯನ್ನು ವಿಶ್ರಾಂತಿ ಪಡೆಯಲು ಬಿಡಿ.


ಈ ಭಂಗಿಯನ್ನು ಹಲವಾರು ಆಳವಾದ ಉಸಿರಾಟಗಳವರೆಗೆ ಹಿಡಿದಿಟ್ಟುಕೊಳ್ಳಿ, ನಂತರ ನಿಮ್ಮ ದೇಹವನ್ನು ಮತ್ತೆ ಸಹಜ ಸ್ಥಿತಿಗೆ ತರುವಾಗ ನಿಧಾನವಾಗಿ ಉಸಿರನ್ನು ಒಳಗೆಳೆದುಕೊಳ್ಳಿ. ಹಸ್ತಪಾದಾಸನವು ಸ್ನಾಯುಗಳು, ಕೆಳ ಬೆನ್ನು ಮತ್ತು ಬೆನ್ನುಮೂಳೆಯನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ, ಜೊತೆಗೆ ನಿಮ್ಮ ಮನಸ್ಸನ್ನು ತುಂಬಾನೇ ಶಾಂತಗೊಳಿಸುತ್ತದೆ ಮತ್ತು ನಿಮ್ಮಲ್ಲಿರುವ ಒತ್ತಡವನ್ನು ನಿವಾರಿಸುತ್ತದೆ.

top videos
    First published: