ಇತ್ತೀಚಿನ ದಿನಗಳಲ್ಲಿ ಜನರನ್ನು ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಅವುಗಳಿಂದ ಪರಿಹಾರ ಪಡೆಯಲು ನಮ್ಮ ಆಹಾರ ಪದಾರ್ಥದಲ್ಲಿ ಬದಲಾವಣೆ ಮಾಡುವುದು ಮುಖ್ಯವಾಗುತ್ತದೆ. ಅದರಲ್ಲೂ ಕೆಲ ಜ್ಯೂಸ್ಗಳ ಸೇವನೆ ಹಲವು ಆರೋಗ್ಯಕರ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಹಾಗಾದ್ರೆ ಯಾವ ಜ್ಯೂಸ್ ಯಾವ ಆರೋಗ್ಕಕರ ಪ್ರಯೋಜನ ನೀಡುತ್ತದೆ ಇಲ್ಲಿದೆ.
ಕರುಳಿನ ಆರೋಗ್ಯಕ್ಕೆ.
ಮನುಷ್ಯನ ಎಲ್ಲಾ ಆರೋಗ್ಯ ಸಮಸ್ಯೆಗಳು ಕರುಳಿನಲ್ಲಿ ಪ್ರಾರಂಭವಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ. ಅದು ಒಂದರ್ಥದಲ್ಲಿ ಸರಿಯಾಗಿಯೇ ಇದೆ. ನಾವು ತಿನ್ನುವ ಆಹಾರದ ಮೂಲಕ ಹೊರಗಿನ ಪ್ರಪಂಚಕ್ಕೆ ನೇರವಾಗಿ ತೆರೆದುಕೊಳ್ಳುವ ಏಕೈಕ ಅಂಗವೆಂದರೆ ಅದು ನಮ್ಮ ಕರುಳು. ಕರುಳನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ಯಾವುದೇ ಆರೋಗ್ಯ ಸಮಸ್ಯೆಯನ್ನು ಸುಧಾರಿಸುವ ಮತ್ತು ಸಮಸ್ಯೆಗಳು ಬರದಂತೆ ತಡೆಯುವ ಒಂದು ದೊಡ್ಡ ಹೆಜ್ಜೆ. ಅದಕ್ಕೆ ನಾವು ಪೋಷಕಾಂಶಯುಕ್ತ ಆಹಾರ ಸೇವನೆ ಮಾಡುವುದು ಅಗತ್ಯ. ಕೆಲ ತರಕಾರಿಗಳ ಜ್ಯೂಸ್ ಸೇವನೆ ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಈ ಜ್ಯೂಸ್ಗಳು ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ, ಗ್ಯಾಸ್, ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ.
ಬೇಕಾಗುವ ಪದಾರ್ಥಗಳು
1 ಸಣ್ಣ ಕೆಂಪು ಅಥವಾ ಹಸಿರು ಎಲೆಕೋಸು
½ ಚೀನೀಕಾಯಿ ಅಥವಾ ಸೌತೆಕಾಯಿ
2 ಸಬ್ಬಸಿಗೆ
1 ತುಂಡು ಶುಂಠಿ
1 ವೀಳ್ಯದ ಎಲೆ
¼ ಕಪ್ ತುಳಸಿ ಎಲೆ
1 ಟೀಸ್ಪೂನ್ ಫೆನ್ನೆಲ್ ಪುಡಿ
1 ಟೀಸ್ಪೂನ್ ಎಲ್-ಗ್ಲುಟಾಮಿನ್ ಪುಡಿ
ಮಾಡುವ ವಿಧಾನ
ಎಲೆಕೋಸು ಮತ್ತು ಚೀನೀಕಾಯಿ ಅಥವಾ ಸೌತೆಕಾಯಿ, ಸಬ್ಬಸಿಗೆ, ಶುಂಠಿ, ವೀಳ್ಯದ ಎಲೆ ಮತ್ತು ತುಳಸಿಯನ್ನು ಸರಿಯಾಗಿ ಕತ್ತರಿಸಿ. ಅವುಗಳನ್ನು ಮಿಕ್ಸಿ ಮಾಡಿ, ಸೋಸಿಕೊಂಡು ಜ್ಯೂಸಿ ತಯಾರಿಸಿ. ಅದಕ್ಕೆ ಫೆನ್ನೆಲ್ ಮತ್ತು ಎಲ್-ಗ್ಲುಟಮೈನ್ ಪುಡಿಗಳನ್ನು ಬೆರೆಸಿ ಸೇವಿಸಿ.
ಇದನ್ನೂ ಓದಿ: : ಬೆಳ್ಳುಳ್ಳಿ ಸಿಪ್ಪೆ ಬಿಡಿಸೋಕೆ ಅಷ್ಟೆಲ್ಲಾ ಕಷ್ಟ ಪಡ್ಬೇಡಿ.. ತುಂಬಾ ಸಲಭದ ಟ್ರಿಕ್ ಇದೆ, ಹೀಗೆ ಮಾಡಿ ನೋಡಿ!
ಕೊಲೊನ್ ಕ್ಲೆನ್ಸರ್
ನಿಮ್ಮ ಆರೋಗ್ಯ ಉತ್ತಮವಾಗಿರಬೇಕು ಎಂದಲ್ಲಿ ಸ್ವಚ್ಚ ಮತ್ತು ಆರೋಗ್ಯಕರ ಕೊಲೊನ್ ಮುಖ್ಯವಾಗುತ್ತದೆ. ಇದು ಮಲಬದ್ಧತೆ ಕಡಿಮೆ ಮಾಡುತ್ತದೆ ಮತ್ತು ಕ್ಯಾನ್ಸರ್ ರಕ್ಷಣೆ ನೀಡುತ್ತದೆ. ಕರುಳಿನಿಂದ ವಿಷವನ್ನು ಸುಲಭವಾಗಿ ಹೊರಹಾಕಲು ಈ ಜ್ಯೂಸ್ ಬಹಳ ಸಹಕಾರಿ.
ಬೇಕಾಗುವ ಪದಾರ್ಥಗಳು
¼ ಪಿಯರ್ ಹಣ್ಣು
½ ಸೇಬು3 ರಿಂದ
4 ಸಿಹಿ ಹಾಕದ ಒಣದ್ರಾಕ್ಷಿ
1 ಟೀಸ್ಪೂನ್ ನಿಂಬೆ ರಸ
1 ಟೀಸ್ಪೂನ್ ಮುಲೇತಿ ಪುಡಿ
5 ರಿಂದ 6 ಕಪ್ಪು ಒಣದ್ರಾಕ್ಷಿ
¼ ಕಪ್ ನೀರು
ಈ ಎಲ್ಲ ಪದಾರ್ಥಗಳನ್ನು ಸೇರಿಸಿ ಮಿಕ್ಸಿ ಮಾಡಿ ಜ್ಯೂಸ್ ತಯಾರಿಸಿ ತಕ್ಷಣವೇ ಸೇವನೆ ಮಾಡುವುದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ಡಿಟಾಕ್ಸಿಪೈ ಜ್ಯೂಸ್
ಹೆಸರೇ ಸೂಚಿಸುವಂತೆ, ಈ ಜ್ಯೂಸ್ ನಿಮ್ಮ ದೇಹದಲ್ಲಿ ವಿಷವನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹವನ್ನು ಹೈಡ್ರೇಟ್ ಮಾಡುತ್ತದೆ. ಜೊತೆಗೆ ಇದು ರಕ್ತದ ಶುದ್ಧಿಕರಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಬೇಕಾಗುವ ಪದಾರ್ಥಗಳು
¼ ಚೀನೀಕಾಯಿ
ಸ್ವಲ್ಪ ಕೊತ್ತಂಬರಿ ಸೊಪ್ಪು
1 ಜಲಪೆನೊ ಮೆಣಸು
1 ಶುಂಟಿ ತುಂಡು
ನಿಂಬೆ ರಸ
1 ಟೀಸ್ಪೂನ್ ಬಾರ್ಲಿ ಪುಡಿ
ಪುದೀನ ಎಲೆಗಳು
ಈ ಎಲ್ಲಾ ಪದಾರ್ಥಗಳನ್ನು ನಯವಾಗಿ ಮಿಕ್ಸಿ ಮಾಡಿ.ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ಮಿಶ್ರಣ ಮಾಡಬಹುದು. ಇದನ್ನು ತಕ್ಷಣವೇ ಸೇವಿಸಿದರೆ ಒಳ್ಳೆಯದು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ