Relationship: ಸಂಗಾತಿಯೊಂದಿಗೆ ಸದಾ ಕಾಲ ಚೆನ್ನಾಗಿರಬೇಕೇ? ಈ 10 ವಿಷಯಗಳು ಗಮನದಲ್ಲಿರಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಿಲೇಶನ್ಶಿಪ್ ಥೆರಪಿಸ್ಟ್ ಚಾರಿಸ್ಸೆ ಕುಕ್, ಈ ಐದು ಪರಿಣಾಮಕಾರಿ ನಿಯಮಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅನುಸರಿಸುವ ಮೂಲಕ ಯಾವುದೇ ಸಮಯದಲ್ಲಿ ತಮ್ಮ ಸಂಗಾತಿಯೊಂದಿಗೆ ಹೇಗೆ ಸಂಬಂಧವನ್ನು ಸರಿಪಡಿಸಿಕೊಳ್ಳಬಹುದು ಅಂತ ಹೇಳಿದ್ದಾರೆ ನೋಡಿ.

 • Trending Desk
 • 2-MIN READ
 • Last Updated :
 • Bangalore [Bangalore], India
 • Share this:

  ತಮ್ಮ ಬಾಳ ಸಂಗಾತಿಯೊಂದಿಗೆ ಸದಾ ಕಾಲ ಚೆನ್ನಾಗಿರಬೇಕು ಎಂದು ಯಾರಿಗೆ ತಾನೇ ಅನ್ನಿಸುವುದಿಲ್ಲ ಹೇಳಿ? ಆದರೆ ಕೆಲವು ಅನಿರೀಕ್ಷಿತ ವಿಷಯಗಳು ಮತ್ತು ಘಟನೆಗಳಿಂದಾಗಿ ಸಂಗಾತಿಗಳ ನಡುವೆ ವೈಮನಸ್ಸು ಮತ್ತು ಸಣ್ಣ-ಪುಟ್ಟ ಜಗಳಗಳು ಆಗುವುದನ್ನು ನಾವೆಲ್ಲಾ ನೋಡಿರುತ್ತೇವೆ. ಆದರೆ ಈ ಜಗಳಗಳು ಸಂಬಂಧವನ್ನು ಹಾಳು ಮಾಡುವ ಹಂತಕ್ಕೆ ಹೋಗಬಾರದು ಅಷ್ಟೇ. ತೃಪ್ತಿದಾಯಕ ಮತ್ತು ಪ್ರೀತಿಯ ಸಂಬಂಧವನ್ನು ಹೊಂದಲು ಸಂಗಾತಿಗಳಲ್ಲಿ ಸಾಕಷ್ಟು ಪ್ರಯತ್ನ ಮತ್ತು ತಾಳ್ಮೆ ಬೇಕಾಗುತ್ತದೆ. ಆದಾಗ್ಯೂ, ಈ ಸಂಬಂಧಗಳನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ನಮಗೆ ಸಹಾಯ ಮಾಡುವ ಕೆಲವು ಕೌಶಲ್ಯಗಳು ಮತ್ತು ನಡವಳಿಕೆಯ ಮಾದರಿಗಳಿವೆ. 


  ರಿಲೇಶನ್ಶಿಪ್ ಥೆರಪಿಸ್ಟ್ ಚಾರಿಸ್ಸೆ ಕುಕ್, ಈ ಐದು ಪರಿಣಾಮಕಾರಿ ನಿಯಮಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅನುಸರಿಸುವ ಮೂಲಕ ಯಾವುದೇ ಸಮಯದಲ್ಲಿ ತಮ್ಮ ಸಂಗಾತಿಯೊಂದಿಗೆ ಹೇಗೆ ಸಂಬಂಧವನ್ನು ಸರಿಪಡಿಸಿಕೊಳ್ಳಬಹುದು ಅಂತ ಹೇಳಿದ್ದಾರೆ ನೋಡಿ.


  1. ದೈಹಿಕವಾಗಿ ಹತ್ತಿರವಾಗಿರಿ: ಜಗಳವಾದಾಗ ಇಬ್ಬರು ಮಾತನಾಡದೆ ಇರುವಾಗ ಪರಿಹಾರಕ್ಕೆ ಬರಲು ಪ್ರಯತ್ನಿಸುವ ಬಗ್ಗೆ ಮರೆತುಬಿಡಿ. ಒಬ್ಬರನ್ನೊಬ್ಬರು ತಬ್ಬಿಕೊಳ್ಳಿ ಮತ್ತು ಇದು ನಿಮಗೆ ಸ್ವಲ್ಪ ಇರಿಸು ಮುರಿಸು ಅನ್ನಿಸುತ್ತಿದ್ದರೆ, ನಿಮ್ಮ ಸಂಗಾತಿಯ ಬಳಿಗೆ ಹೋಗಿ ಮತ್ತು ನಿಮ್ಮನ್ನು ತಬ್ಬಿಕೊಳ್ಳುವಂತೆ ಅವರಿಗೆ ತಿಳಿಸಿ.


  2. ನೀವು ಏನು ಹೇಳುತ್ತೀರೋ ಅದನ್ನು ಸ್ಪಷ್ಟವಾಗಿ ಹೇಳಿ: ನಿಮ್ಮ ಭಾವನೆಗಳಿಗೆ ನೋವಾಗಿಲ್ಲ ಎಂದು ನಟಿಸಬೇಡಿ. ಆದರೆ ನೀವು ಕೋಪದಲ್ಲಿ ಏನೇನೊ ಮಾತನಾಡಬೇಡಿ. ನಿಮ್ಮ ಜಗಳದ ಬಗ್ಗೆ ನಿಮಗೆ ಅರಿವಿರಲಿ ಮತ್ತು ನಿಮ್ಮ ಸಂಗಾತಿಯೊಂದಿಗೆ ಸ್ಪಷ್ಟವಾಗಿ ಮಾತಾಡಿ.


  ಇದನ್ನೂ ಓದಿ: Kheer: ಹೋಳಿ ಹಬ್ಬಕ್ಕೆ ಈ ರೀತಿ ಪಾಯಸ ಮಾಡಿ, ಮುಂದಿನ ವರ್ಷದವರೆಗೂ ಇದರ ರುಚಿ ನಿಮ್ಮ ನೆನಪಿನಲ್ಲಿರುತ್ತೆ


  3. ಸಂಗಾತಿಗೆ ಸುಳ್ಳು ಹೇಳಬೇಡಿ: ಇಲ್ಲದ ವಿಷಯಗಳನ್ನು ನೀವು ಸೃಷ್ಟಿಸಬೇಡಿ. ನಿಮಗೆ ಏನು ಅನ್ನಿಸುತ್ತದೆಯೋ ಮತ್ತು ಅಗತ್ಯವಿದ್ದಷ್ಟೆ ಸ್ಪಷ್ಟವಾಗಿ ಹೇಳಲು ಪ್ರಯತ್ನಿಸಿ. ಇದ್ದುದ್ದಕ್ಕಿಂತ ಹೆಚ್ಚಿಗೆ ಹೇಳಲು ಹೋಗಬೇಡಿ ಮತ್ತು ಸುಳ್ಳು ಸಹ ಹೇಳಬೇಡಿ.


  4. ನಿಮ್ಮ ನಡತೆಯನ್ನು ಕಾಪಾಡಿಕೊಳ್ಳಿ: ನಿಮ್ಮ ಸಂಗಾತಿಯ ಮೇಲೆ ದಯೆ ತೋರಿಸಿ ಮತ್ತು ಅವರೊಟ್ಟಿಗೆ ಮಾತನಾಡುವಾಗ ಗೌರವಾನ್ವಿತ ಭಾಷೆಯನ್ನು ಬಳಸಿ.


  ದಯವಿಟ್ಟು ಧನ್ಯವಾದಗಳು ಅಂತ ಹೇಳುವುದನ್ನು ಮಾತ್ರ ಮರೀಬೇಡಿ. ಇದು ನಮ್ಮನ್ನು ಸಂಬಂಧದಲ್ಲಿ ತುಂಬಾನೇ ದೂರಕ್ಕೆ ಕರೆದುಕೊಂಡು ಹೋಗುತ್ತದೆ.


  5. ಸಂಗಾತಿಯನ್ನು ಬಿಟ್ಟು ಕೊಡಬೇಡಿ: ಸಂಗಾತಿಯೊಂದಿಗೆ ಜಗಳವಾದಾಗ ಕೂಡಲೇ ಹತಾಶೆ ಆಗಬೇಡಿ. ಇದು ಒಂದು ಸಾಮಾನ್ಯವಾದ ಸಮಸ್ಯೆಯಾಗಿದೆ. ನೀವು ಜಗಳ ಏಕೆ ಆಯ್ತು ಅಂತ ಕಾರಣವನ್ನು ಕಂಡುಕೊಳ್ಳಿ. ನೀವು ಅದನ್ನು ಚರ್ಚಿಸಿ ಮತ್ತು ನಿಮ್ಮ ಸಂಬಂಧದಲ್ಲಿ ಮುಂದುವರಿಯಿರಿ.
  ಜಿಂದಾಲ್ ಇನ್ಸ್ಟಿಟ್ಯೂಟ್ ಆಫ್ ಬಿಹೇವಿಯರಲ್ ಸೈನ್ಸಸ್ ಡಾಕ್ಟರೇಟ್ ಸಂಶೋಧನಾ ಸಹವರ್ತಿ ಇರ್ಫಾನ್ ಫಯಾಜ್, ಯಾವುದೇ ಸಂಬಂಧವು ಪರಿಪೂರ್ಣವಲ್ಲ ಮತ್ತು ಯಾವುದೇ ಸಂಬಂಧದಲ್ಲಿ ಏರಿಳಿತಗಳು, ಸಂಘರ್ಷಗಳು ಮತ್ತು ಸವಾಲುಗಳನ್ನು ಅನುಭವಿಸುವುದು ಸಾಮಾನ್ಯ ಎಂದು ಹೇಳುತ್ತಾರೆ.


  "ಆದಾಗ್ಯೂ, ಸಂಬಂಧವು ಪರಿಪೂರ್ಣವಾಗಿಲ್ಲ ಎಂದ ಮಾತ್ರಕ್ಕೆ ಅದು ವಿಫಲವಾಗುತ್ತದೆ ಎಂದು ಅರ್ಥವಲ್ಲ. ನಿಮ್ಮ ಸಂಬಂಧದ ಮೇಲೆ ಕೆಲಸ ಮಾಡಲು ಪ್ರಯತ್ನಿಸುವ ಮೂಲಕ, ನೀವು ಅದನ್ನು ಇನ್ನಷ್ಟು ಸುಧಾರಿಸಿಕೊಳ್ಳಬಹುದು ಮತ್ತು ಕಾಲಾನಂತರದಲ್ಲಿ ಅದನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಬಹುದು" ಎಂದು ಅವರು ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.


  ಇದನ್ನೂ ಓದಿ: Kissing Device: ಸಂಗಾತಿಯಿಂದ ದೂರವಿದ್ದ ವ್ಯಕ್ತಿಯಿಂದ ‌ಕಿಸ್ಸಿಂಗ್‌ ಡಿವೈಸ್ ಆವಿಷ್ಕಾರ! ಇದ್ರಲ್ಲಿ ನೀವೂ ಮುತ್ತು ಕೊಡಬಹುದು ನೋಡಿ!


  ಹೊಸ ವಿಷಯಗಳನ್ನು ಪ್ರಯತ್ನಿಸಲು ಹೆದರಬೇಡಿ ಎಂದು ಒತ್ತಿ ಹೇಳುತ್ತಾ, ಅವರು ಸಂಗಾತಿಯೊಂದಿಗೆ ಮತ್ತೊಮ್ಮೆ ಸಂಪರ್ಕ ಸಾಧಿಸಲು ಐದು ಮಾರ್ಗಗಳನ್ನು ಹಂಚಿಕೊಂಡರು.


  6. ಅವರ ಜೀವನದಲ್ಲಿ ಆಸಕ್ತಿ ತೋರಿಸಿ: ಪ್ರತಿದಿನ ನಿಮ್ಮ ಸಂಗಾತಿಯ ಆಸಕ್ತಿಗಳು ಮತ್ತು ಅವರ ಗುರಿಗಳ ಬಗ್ಗೆ ಕೇಳಿ ತಿಳಿದುಕೊಳ್ಳಿ. ಅವರ ಜೀವನದಲ್ಲಿ ನಿಜವಾದ ಆಸಕ್ತಿಯನ್ನು ತೋರಿಸಿ ಮತ್ತು ಅವರ ಪ್ರತಿಕ್ರಿಯೆಗಳನ್ನು ಗಮನವಿಟ್ಟು ಕೇಳಿ.


  ಇದು ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಪರ್ಕವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಮತ್ತು ನಿಮ್ಮ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.


  7. ಇಬ್ಬರು ಒಟ್ಟಿಗೆ ಹೊಸ ಸವಾಲುಗಳನ್ನು ತೆಗೆದುಕೊಳ್ಳಿ: ಒಟ್ಟಿಗೆ ಸೇರಿಕೊಂಡು ಇಬ್ಬರು ಹೊಸ ಕೌಶಲ್ಯವನ್ನು ಕಲಿಯುವುದು ಅಥವಾ ತರಗತಿ ತೆಗೆದುಕೊಳ್ಳುವುದು ಮುಂತಾದ ಹೊಸ ಸವಾಲನ್ನು ಒಟ್ಟಿಗೆ ತೆಗೆದುಕೊಳ್ಳಲು ಪ್ರಯತ್ನಿಸಿ. ಇದು ನಿಮ್ಮ ಬಂಧವನ್ನು ಇನ್ನಷ್ಟು ಗಟ್ಟಿ ಮಾಡುತ್ತದೆ.


  8. ತಪ್ಪಾದಲ್ಲಿ ಕ್ಷಮೆ ಕೇಳಿ: ಹಿಂದಿನ ಯಾವುದೇ ತಪ್ಪುಗಳು ಅಥವಾ ತಪ್ಪು ತಿಳುವಳಿಕೆಗಳಿಗಾಗಿ ಪರಸ್ಪರರು ಕ್ಷಮೆ ಕೇಳುವುದರಲ್ಲಿ ಹಿಂದೆ ಬೀಳಬೇಡಿ.


  ದ್ವೇಷವನ್ನು ಇಟ್ಟುಕೊಳ್ಳುವುದು ನಿಮ್ಮ ಸಂಬಂಧದಲ್ಲಿ ಅಂತರವನ್ನು ಸೃಷ್ಟಿಸುತ್ತದೆ ಮತ್ತು ಮರುಸಂಪರ್ಕಿಸುವ ನಿಮ್ಮ ಸಾಮರ್ಥ್ಯವನ್ನು ಅಡ್ಡಿಪಡಿಸುತ್ತದೆ. ಕ್ಷಮೆಯನ್ನು ಅಭ್ಯಾಸ ಮಾಡಿಕೊಳ್ಳಿ ಮತ್ತು ಒಟ್ಟಿಗೆ ಸಂತೋಷದಿಂದ ಮುಂದುವರಿಯಿರಿ.


  9. ಸರ್‌ಪ್ರೈಸ್ ನೀಡುವುದರ ಮೂಲಕ ಅವರನ್ನು ಅಚ್ಚರಿಗೊಳಿಸಿ: ನಿಮ್ಮ ಸಂಗಾತಿಯನ್ನು ಅವರ ದಿಂಬಿನ ಮೇಲೆ ಒಂದು ಚಿಕ್ಕ ಟಿಪ್ಪಣಿಯನ್ನು ಬರೆಯುವುದು ಅಥವಾ ಅವರ ನೆಚ್ಚಿನ ಊಟವನ್ನು ತಯಾರು ಮಾಡಿ ಕೊಡುವುದು ಮುಂತಾದ ನಿಮ್ಮ ಕಾಳಜಿಯನ್ನು ತೋರಿಸುವ ಸಣ್ಣ ಸನ್ನೆಗಳಿಂದ ಆಶ್ಚರ್ಯಗೊಳಿಸಿ.
  10. ಒಟ್ಟಿಗೆ ಒಳ್ಳೆಯ ಸಮಯವನ್ನು ಕಳೆಯಿರಿ: ನಿಮ್ಮ ಸಂಗಾತಿಯೊಂದಿಗೆ ಮತ್ತೆ ಒಂದಾಗಬೇಕಾದರೆ ಇರುವ ಪ್ರಮುಖ ಮಾರ್ಗವೆಂದರೆ ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು.


  ನೀವಿಬ್ಬರೂ ಆನಂದಿಸುವ ಏನನ್ನಾದರೂ ಮಾಡಲು ವಾರದಲ್ಲಿ ಕೆಲವು ಗಂಟೆಗಳನ್ನು ಮೀಸಲಿಡುವುದು ಒಳ್ಳೆಯದು. ಉದಾಹರಣೆಗೆ ಒಟ್ಟಿಗೆ ಕೂತು ಚಲನಚಿತ್ರ ನೋಡುವುದು ಅಥವಾ ವಾಕ್ ಹೋಗುವುದು.

  Published by:Precilla Olivia Dias
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು