Mushroom: ಚಿಕ್ಕ ಚಿಕ್ಕ ವಿಚಾರಗಳಿಗೆ ಸಿಕ್ಕಾಪಟ್ಟೆ ಆತಂಕ ಆಗುತ್ತಾ? ಹಾಗಿದ್ರೆ ಈ ಮಶ್ರೂಮ್ ನಿಮಗೆ ಬೆಸ್ಟ್

ಅಣಬೆ

ಅಣಬೆ

ಈ ಮಶ್ರೂಮ್ ನಲ್ಲಿರುವ ಅಂಶ ಬುದ್ಧಿಮಾಂದ್ಯತೆಯಿಂದ ನಿಮ್ಮನ್ನು ರಕ್ಷಿಸಬಹುದು. ನಿಮ್ಮಲ್ಲಿರುವ ಖಿನ್ನತೆ, ಆತಂಕವನ್ನು ನಿವಾರಿಸಬಹುದು . ನರಗಳಿಗಾಗುವ ಗಾಯಗಳನ್ನು ಬೇಗನೆ ಗುಣಪಡಿಸಬಲ್ಲದು.

  • News18 Kannada
  • 3-MIN READ
  • Last Updated :
  • Bangalore, India
  • Share this:

ನಮ್ಮಲ್ಲಿರುವ ಅನೇಕ ಆಹಾರ (Food) ಪದಾರ್ಥಗಳಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಅಂತ ನಮಗೆ ಎಷ್ಟೋ ಬಾರಿ ತಿಳಿದೇ ಇರುವುದಿಲ್ಲ. ಇಂತಹ ಪಟ್ಟಿಯಲ್ಲಿ ಮಶ್ರೂಮ್ (Mushroom) ಸಹ ಸೇರುತ್ತದೆ. ಹೌದು. ಅನೇಕ ಜನರು ಅಣಬೆಯನ್ನು ತಿನ್ನುತ್ತಾರೆ. ಆದರೆ ಅದರಿಂದಾಗುವ ಅನೇಕ ಆರೋಗ್ಯ ಪ್ರಯೋಜನಗಳು (Health Benefits) ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ. ಮಶ್ರೂಮ್ ನಮ್ಮ ಜ್ಞಾಪಕ ಶಕ್ತಿಯನ್ನು (Memory Power) ಸುಧಾರಿಸಲು ಮತ್ತು ಮೆದುಳಿನ ಆರೋಗ್ಯವನ್ನು  ಹೆಚ್ಚಿಸಲು ತುಂಬಾನೇ ಸಹಾಯ ಮಾಡುತ್ತವೆ ಎಂದು ನಿಮಗೆ ತಿಳಿದಿದೆಯೇ?


ಕ್ವೀನ್ಸ್ ಲ್ಯಾಂಡ್ ವಿಶ್ವವಿದ್ಯಾಲಯದ ಸಂಶೋಧಕರು ಅಣಬೆಯಿಂದ ಸಕ್ರಿಯ ಸಂಯುಕ್ತವನ್ನು ಕಂಡು ಹಿಡಿದಿದ್ದಾರೆ. ಇದು ನರಗಳ ಬೆಳವಣಿಗೆಯನ್ನು ಸಹ ಹೆಚ್ಚಿಸುತ್ತದೆ. ನೆನಪಿನ ಶಕ್ತಿ ಹೆಚ್ಚಿಸುತ್ತದೆ.


ಹೇಗಿರುತ್ತೆ ಈ ಲಯನ್ಸ್ ಮೇನ್ ಮಶ್ರೂಮ್?


ಇವರು ಈ ವಿಶೇಷ ಅಂಶವನ್ನು ಲಯನ್ಸ್ ಮೇನ್ ಮಶ್ರೂಮ್ ನಲ್ಲಿ ಕಂಡುಕೊಂಡಿದ್ದಾರೆ. ಅವು ದೊಡ್ಡದಾಗಿ, ಬಿಳಿ ಬಣ್ಣದ್ದಾಗಿದ್ದು ಮತ್ತು ದಪ್ಪವಾಗಿರುತ್ತವೆ. ಅವು ಬೆಳೆದಂತೆ ಸಿಂಹದ ಕೂದಲನ್ನು ಹೋಲುತ್ತವೆ. ಇವು ತಿನ್ನಬಹುದಾದ ಅಣಬೆಗಳಾಗಿವೆ. ಅವುಗಳಲ್ಲಿರುವ ಆರೋಗ್ಯವನ್ನು ಉತ್ತೇಜಿಸುವ ಗುಣಲಕ್ಷಣಗಳಿಗಾಗಿ ಹಿಂದಿನಿಂದಲೂ ಔಷಧದಲ್ಲಿ ಇದನ್ನು ಬಳಸಲಾಗುತ್ತದೆ ಎಂದು ಹೇಳಲಾಗುತ್ತಿದೆ.


ಈ ಆಹಾರವು ದೇಹದ ಮೇಲೆ, ವಿಶೇಷವಾಗಿ ಮೆದುಳು, ಹೃದಯ ಮತ್ತು ಕರುಳಿನ ಮೇಲೆ ಅನೇಕ ಪ್ರಯೋಜನಕಾರಿ ಪರಿಣಾಮಗಳನ್ನು ಬೀರುವ ಜೈವಿಕ ಸಕ್ರಿಯ ವಸ್ತುಗಳನ್ನು ಹೊಂದಿರುತ್ತದೆ. ಆದ್ದರಿಂದ, ಹೊಸ ಸಂಶೋಧನೆಯು ಹಳೆಯ ಪದ್ಧತಿಯನ್ನು ಮತ್ತೊಮ್ಮೆ ದೃಢಪಡಿಸಿದ್ದು, ಇದರ ಪ್ರಯೋಜನಗಳ ಬಗ್ಗೆ ತಿಳಿಸಿಕೊಟ್ಟಿದೆ.


ನೆನಪಿನ ಶಕ್ತಿ ಹೆಚ್ಚಿಸುತ್ತೆ


ಇದು ಕ್ಲೆಮೆಂಟಿ ಬಳಿಯ ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರ್ (ಎನ್‌ಯುಎಸ್) ನ ಹಿಂದಿನ ಸಂಶೋಧನೆಗೆ ಅನುಗುಣವಾಗಿದೆ. ಇದು ಅಣಬೆಗಳನ್ನು ಬೇಗನೆ ತಿನ್ನುವುದು ಪ್ರೌಢಾವಸ್ಥೆಯ ಕೊನೆಯಲ್ಲಿ ನೆನಪಿನ ಶಕ್ತಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಕಂಡುಹಿಡಿದಿದೆ.


ಅಣಬೆಯಲ್ಲಿನ ಈ ಘಟಕಗಳಿಂದ ಅನೇಕ ಆರೋಗ್ಯ ಪ್ರಯೋಜನ


ಈ ರೀತಿಯ ಅಣಬೆಗಳಲ್ಲಿ ಕಂಡು ಬರುವ ಹೆರಿಸೆನೋನ್ಸ್ ಎಂದು ಕರೆಯಲ್ಪಡುವ ಘಟಕವನ್ನು ಗುರುತಿಸುವ ಮೂಲಕ ಸಂಶೋಧಕರು ಅರಿವಿನ ವಿಜ್ಞಾನ ಕ್ಷೇತ್ರದಲ್ಲಿ ಭರವಸೆಯ ಆವಿಷ್ಕಾರವನ್ನು ಮಾಡಿದ್ದಾರೆ. ಅಣಬೆ ಸಾರಗಳು ನ್ಯೂರಾನ್ ಪ್ರೊಜೆಕ್ಷನ್ ಗಳನ್ನು ಉತ್ತೇಜಿಸುತ್ತವೆ.
ಈ ಮಶ್ರೂಮ್ ನಲ್ಲಿರುವ ಅಂಶ ಬುದ್ಧಿಮಾಂದ್ಯತೆಯಿಂದ ನಿಮ್ಮನ್ನು ರಕ್ಷಿಸಬಹುದು. ನಿಮ್ಮಲ್ಲಿರುವ ಖಿನ್ನತೆ, ಆತಂಕವನ್ನು ನಿವಾರಿಸಬಹುದು . ನರಗಳಿಗಾಗುವ ಗಾಯಗಳನ್ನು ಬೇಗನೆ ಚೇತರಿಸಬಹುದು.


ಈ ಅಣಬೆಯನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದು


ಈ ಅಣಬೆಗಳು ಪೋಷಕಾಂಶಯುಕ್ತವಾಗಿದೆ. ಕಡಿಮೆ ಕ್ಯಾಲೊರಿಗಳನ್ನು ಹೊಂದಿವೆ. ಆದ್ದರಿಂದ ಅವುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇವು ಪೊಟ್ಯಾಸಿಯಮ್, ತಾಮ್ರ ಮತ್ತು ವಿಟಮಿನ್ ಬಿ5 ಸೇರಿದಂತೆ ಫೈಬರ್ ಗಳು, ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ.


ಇದನ್ನೂ ಓದಿ: Healthy Habits: ಬಾಲ್ಯದಿಂದಲೇ ಈ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡು ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಿ!


ಹುರಿದ ತರಕಾರಿಗಳು, ಹಬೆಯಲ್ಲಿ ಬೇಯಿಸಿದ ಸಲಾಡ್ ಗಳು, ರಿಸೊಟ್ಟೊ, ಪಾಸ್ತಾ, ಸೂಪ್ ಗಳು, ಪಲ್ಯ, ಗ್ರೇವಿಗಳು ಅಥವಾ ಚಹಾಗಳಲ್ಲಿ ಹಾಕಿಕೊಂಡು ಸಹ ಸೇವಿಸಬಹುದು.


ಈ ಅಣಬೆಗಳ ಸೇವನೆಯನ್ನು ನೆನಪಿನ ದೌರ್ಬಲ್ಯಗಳು ಅಥವಾ ನ್ಯೂರೋಡಿಜೆನರೇಟಿವ್ ಕಾಯಿಲೆಗಳಿಗೆ ಚಿಕಿತ್ಸೆಯಾಗಿ ಮಾತ್ರ ಅವಲಂಬಿಸಬಾರದು. ಅಣಬೆ ಮೂಲಕ ನೆನಪು ಶಕ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲದ ಆಹಾರ, ಊಟ, ನಿಯಮಿತ ದೈಹಿಕ ಚಟುವಟಿಕೆ, ಸಾಕಷ್ಟು ನಿದ್ರೆ ಮತ್ತು ಒತ್ತಡ ನಿರ್ವಹಣೆಯನ್ನು ಒಳಗೊಂಡಿರುವ ಆರೋಗ್ಯಕರ ಜೀವನಶೈಲಿ ಅತ್ಯಗತ್ಯ.

Published by:Divya D
First published: