Stroke: ಹಾರ್ಟ್ ಸ್ಟ್ರೋಕ್ ಆಗಿರುವುದನ್ನು ಸೂಚಿಸುವ ಮೂರು ಲಕ್ಷಣಗಳಿವು! ನೆಗ್ಲೆಕ್ಟ್ ಮಾಡಬೇಡಿ

ಅಮೆರಿಕದ ಹಾರ್ಟ್ ಅಸೋಸಿಯೇಷನ್ ಈಗ ಸ್ಟ್ರೋಕ್ ಬಗ್ಗೆ ಇಲ್ಲಿಯವರೆಗೂ ಬಹುತೇಕರಿಗೆ ತಿಳಿಯದ ಕೆಲ ವಿಶಿಷ್ಟ ಮೂರು ಲಕ್ಷಣಗಳ ಬಗ್ಗೆ ಅಭ್ಯಸಿಸಿದ್ದು ಆ ಬಗ್ಗೆ ಇತ್ತೀಚಿನ ಹೊಸ ಜರ್ನಲ್ ಒಂದರಲ್ಲಿ ಪ್ರಕಟಿಸಿದ್ದಾರೆ. ಹಾಗಾದರೆ, ಅವರು ಈ ಬಗ್ಗೆ ಏನು ಹೇಳಿದ್ದಾರೆ, ಆ ಕ್ಲಾಸಿಕ್ ಹಾಗೂ ಇನ್ನೂ ಬಹಳ ಜನರಿಗೆ ತಿಳಿಯದ ಆ ಮೂರು ಲಕ್ಷಣಗಳು ಯಾವುವು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಿಗಂತೂ ಹೃದಯದ ಕಾಯಿಲೆಗಳ (Heart Disease) ಕಾಟ ವಿಪರೀತವಾಗುತ್ತಿದೆ ಎಂಬಂತಾಗಿದೆ. ಬಹುಮಟ್ಟಿಗಿನ ಸಾವುಗಳಿಗೆ (Deaths) ಕಾರಣ ಹೃದಯದ ಅಸ್ಥಿರತೆ, ಅಥವಾ ಹೃದಯಾಘಾತಗಳೇ (Heart Attack) ಆಗಿವೆ. ಅದರಲ್ಲೂ ವಿಶೇಷವಾಗಿ 40ರ ಆಸುಪಾಸಿನವರಲ್ಲೂ ಈ ಹೃದಯಾಘಾತ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದು ಕೇವಲ ಪುರುಷರಿಗಷ್ಟೇ ಅಲ್ಲದೆ ಮಹಿಳೆಯರಲ್ಲೂ (Women's) ಕಂಡುಬರುತ್ತಿದೆ. ಇತ್ತೀಚೆಗೆ 42 ರ ಪ್ರಾಯದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಎಂಬುವವರು ಹೃದಯಾಘಾತದಿಂದ ನಿಧನರಾಗಿರುವುದು ತಿಳಿದೇ ಇದೆ. ಅಷ್ಟಕ್ಕೂ ಎಲ್ಲೆಡೆ ವೈದ್ಯರು ಹೃದಯಾಘಾತ ಅಥವಾ ಸ್ಟ್ರೋಕ್ (Stroke) ಆದ ಸಂದರ್ಭದ ಲಕ್ಷಣಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದು ಹಲವರಿಗೆ ಈ ಬಗ್ಗೆ ತಿಳಿದಿದೆ.

ಆದರೆ, ಅಮೆರಿಕದ ಹಾರ್ಟ್ ಅಸೋಸಿಯೇಷನ್ ಈಗ ಸ್ಟ್ರೋಕ್ ಬಗ್ಗೆ ಇಲ್ಲಿಯವರೆಗೂ ಬಹುತೇಕರಿಗೆ ತಿಳಿಯದ ಕೆಲ ವಿಶಿಷ್ಟ ಮೂರು ಲಕ್ಷಣಗಳ ಬಗ್ಗೆ ಅಭ್ಯಸಿಸಿದ್ದು ಆ ಬಗ್ಗೆ ಇತ್ತೀಚಿನ ಹೊಸ ಜರ್ನಲ್ ಒಂದರಲ್ಲಿ ಪ್ರಕಟಿಸಿದ್ದಾರೆ. ಹಾಗಾದರೆ, ಅವರು ಈ ಬಗ್ಗೆ ಏನು ಹೇಳಿದ್ದಾರೆ, ಆ ಕ್ಲಾಸಿಕ್ ಹಾಗೂ ಇನ್ನೂ ಬಹಳ ಜನರಿಗೆ ತಿಳಿಯದ ಆ ಮೂರು ಲಕ್ಷಣಗಳು ಯಾವುವು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.

ಕಾರ್ಡಿಯೋ ವಾಸ್ಕ್ಯೂಲರ್ ಕಾಯಿಲೆಗಳ ಹೊಸ ಲಕ್ಷಣಗಳು
ಕಳೆದ ಗುರುವಾರದಂದು ಅಮೆರಿಕದ ಹಾರ್ಟ್ ಅಸೋಸಿಯೇಷನ್ ಅವರಿಂದ ಪ್ರಕಟಿಸಲಾದ ವರದಿಯಲ್ಲಿ ಸ್ಟ್ರೋಕ್ ಗಳನ್ನೊಳಗೊಂಡಂತೆ ಕಾರ್ಡಿಯೋ ವಾಸ್ಕ್ಯೂಲರ್ ಕಾಯಿಲೆಗಳ ಹೊಸ ಲಕ್ಷಣಗಳ ಬಗ್ಗೆ ತಿಳಿಸಿದ್ದಾರೆ. 'ಬ್ರೈನ್ ಅಟ್ಯಾಕ್' ಎನ್ನಲಾಗುವ ಅಕ್ಯೂಟ್ ಸ್ಟ್ರೋಕ್ ಆದಾಗ ಮೆದುಳಿಗೆ ರಕ್ತ ಪೂರೈಸುವ ರಕ್ತನಾಳಗಳು ತಕ್ಷಣ ಬ್ಲಾಕ್ ಆಗುತ್ತವೆ ಅಥವಾ ಬರ್ಸ್ಟ್ ಆಗುತ್ತವೆ ಮತ್ತು ಇದರಿಂದಾಗಿ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡು ಮೆದುಳಿಗೆ ಹಾನಿಯಾಗುತ್ತದೆ. ಅಮೆರಿಕ ಹಾರ್ಟ್ ಅಸೋಸಿಯೇಷನ್ (AHA) ಈ ಸಂದರ್ಭದಲ್ಲಿ ಅದನ್ನು ಗುರುತಿಸುವುದು ಹಾಗೂ ಅದಕ್ಕೆ ಪೂರಕವಾಗಿ ಸ್ಪಂದಿಸುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದ್ದು ಸಮಯೋಚಿತವಾಗಿ ಅದಕ್ಕೆ ಚಿಕಿತ್ಸೆ ನೀಡಿದರೆ ಮುಂದೆ ಗಂಭೀರ ಪರಿಣಾಮ ಅಥವಾ ಸಾವಿನಿಂದ ಪಾರಾಗಬಹುದು ಎಂದು AHA ತಿಳಿಸುತ್ತದೆ.

ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ದೇಶದಲ್ಲಿ ಪ್ರತಿ 40 ಸೆಕೆಂಡುಗಳಿಗೊಬ್ಬ ವ್ಯಕ್ತಿ ಸ್ಟ್ರೋಕ್ ಅನುಭವಿಸುತ್ತಾನೆ ಹಾಗೂ ಈ ಸ್ಟ್ರೋಕ್ ಎಂಬುದೇ, ಉಂಟಾಗುವ ಸಾವುಗಳಲ್ಲಿ ಪ್ರಮುಖ ಕಾರಣವಾಗಿದೆ. ಸ್ಟ್ರೋಕ್ ಎಂಬುದು ಯಾರಿಗಾದರೂ ಆಗಬಹುದು, ಆದರೆ ಅದಾಗುವ ಅಪಾಯ ಅಥವಾ ಸಾಧ್ಯತೆಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

ಇದನ್ನೂ ಓದಿ: Heart Attack: ಸರಿಯಾಗಿ ನಿದ್ದೆ ಮಾಡಿಲ್ಲ ಅಂದ್ರೆ ಹೃದಯಕ್ಕೆ ಅಪಾಯ ಗ್ಯಾರಂಟಿ

ಸಿಡಿಸಿ ಪ್ರಕಾರ, ಉದಾಹರಣೆಗೆ ಕಪ್ಪು ವರ್ಣೀಯ ಜನರು ಶ್ವೇತ ವರ್ಣೀಯರಿಗೆ ಹೋಲಿಸಿದರೆ ಮೊದಲ ಸ್ಟ್ರೋಕ್ ಅನುಭವಿಸುವ ಸಾಧ್ಯತೆ ದುಪ್ಪಟ್ಟಾಗಿರುತ್ತದೆ ಹಾಗೂ ತದನಂತರ ಒಂದೊಮ್ಮೆ 55 ದಾಟಿದ ಮೇಲೆ ಪ್ರತಿ ದಶಕಕ್ಕೊಮ್ಮೆ ಸ್ಟ್ರೋಕ್ ಬರುವ ಸಾಧ್ಯತೆ ದುಪ್ಪಟ್ಟಾಗುತ್ತ ಹೋಗುತ್ತದೆ. ಇನ್ನು ವೈದ್ಯಕೀಯ ಸ್ಥಿತಿಗಳಾದಂತಹ ಡಯಾಬಿಟಿಸ್, ಹೈ ಕೊಲೆಸ್ಟ್ರಾಲ್, ಹೈ ಬ್ಲಡ್ ಪ್ರೆಶರ್, ಬೊಜ್ಜು, ಕಳಪೆ ಜೀವನಶೈಲಿ ಇವುಗಳಿಂದಲೂ ಸ್ಟ್ರೋಕ್ ಬರುವ ಸಂಭವನೀಯತೆ ಹೆಚ್ಚುತ್ತದೆ.

ಆದರೆ AHA ಪಟ್ಟಿ ಮಾಡಿರುವ ಆ ಮೂರು ವಿಶಿಷ್ಟ ಲಕ್ಷಣಗಳು ಯಾವುವು?
ಅಷ್ಟಕ್ಕೂ, ಈ ಲೇಖನದಲ್ಲಿ ಈ ಮುಂಚೆಯೇ ತಿಳಿಸಿರುವಂತೆ AHA ಸ್ಟ್ರೋಕ್ ಉಂಟಾಗಿರುವ ಮೂರು ಕ್ಲಾಸಿಕ್ ಲಕ್ಷಣಗಳ ಬಗ್ಗೆ ಹೇಳಿದ್ದು ಅವು ಈ ಕೆಳಗಿನಂತಿವೆ

  • ಇಳಿಬೀಳುತ್ತಿರುವ/ಇಳಿಬಿದ್ದ ಮುಖ

  • ಅಸ್ಪಷ್ಟ/ಮಂದವಾದ ಮಾತು

  • ಅಂಗ ದೌರ್ಬಲ್ಯತೆ/ಅಶಕ್ತತೆ


ಸ್ಟ್ರೋಕ್ ತಕ್ಷಣ ಉಂಟಾಗುತ್ತದೆ ಹಾಗೂ ಅದು ಆದಾಗ ಅಂಗ ಅಥವಾ ಮುಖದಲ್ಲಿ ಅಶಕ್ತತೆ ಕಂಡುಬರುತ್ತದೆ (ದೇಹದ ಒಂದು ಭಾಗದಲ್ಲಿ ಮಾತ್ರ). ಮಾತನಾಡಲು ಕಷ್ಟಪಡುವುದು, ಗೊಂದಲತೆ, ನಡೆಯುವಾಗ ಸಮತೋಲನ ಕಾಪಾಡಿಕೊಳ್ಳಲು ಕಷ್ಟವಾಗುವುದು, ತಲೆ ಸುತ್ತಿದಂತಾಗುವುದು ಉಂಟಾಗುತ್ತದೆ. ಕಣ್ಣಿನ ಒಂದು ಅಥವಾ ಎರಡೂ ದೃಷ್ಟಿಗಳಲ್ಲಿ ಅಡಚಣೆಯಾದಂತಾಗುತ್ತದೆ.

ವಿಲಕ್ಷಣವಾದಂತಹ ಲಕ್ಷಣ
AHA ಹೇಳಿರುವಂತೆ, ಭಾಗಶಃ ಗ್ರಹಿಸುವಿಕೆ ಕೊರತೆ ಉಂಟಾಗುತ್ತದೆ. ಅಂದರೆ ಸ್ಪರ್ಶ, ನೋವಿನ ಅನುಭವ ಕಡಿಮೆಯಾಗುತ್ತದೆ ಹಾಗೂ ವರ್ಟಿಗೋ ಇಲ್ಲವೆ ಎರಡೆರಡು ದೃಷ್ಟಿಗಳುಂಟಾಗುವಂತಾಗುತ್ತದೆ. ಈ ನಿಟ್ಟಿನಲ್ಲಿ AHA ಇನ್ನಷ್ಟು ದೀರ್ಘವಾಗಿ ಅಧ್ಯಯನ ನಡೆಸುವ ಅಗತ್ಯವಿರುವುದಾಗಿ ಹೇಳಿದೆ. ಏಕೆಂದರೆ ಇದನ್ನು ವಿವಿಧ ಸ್ಥಳ, ಜನ, ಪಂಗಡ, ಶೈಲಿ ಮುಂತಾದ ನೆಲೆಗಟ್ಟಿನಲ್ಲಿ ಅಭ್ಯಸಿಸಬೇಕಾಗಿದೆ ಎಂದು ಹೇಳಿದೆ.

ಇದನ್ನೂ ಓದಿ:  Cancer In Men: ಪುರುಷರನ್ನೇ ಹೆಚ್ಚು ಕಾಡುವ ಕ್ಯಾನ್ಸರ್‌ ಇವು, ಎಚ್ಚರ!

ಮಹಿಳೆಯರು ಹೆಚ್ಚಾಗಿ ಈ ಲಕ್ಷಣಗಳನ್ನು ಅನುಭವಿಸುತ್ತಾರೆ
ಇನ್ನು ಮಹಿಳೆಯರು ಪುರುಷರಂತೆಯೇ ನಿರ್ದಿಷ್ಟವಾಗಿ ಅದೇ ಲಕ್ಷಣಗಳನ್ನು ಅನುಭವಿಸುತ್ತಾರೆ ಎನ್ನಲು ಸಾಧ್ಯವಿಲ್ಲ. ಸ್ಟ್ರೋಕ್ ಸಂದರ್ಭದಲ್ಲಿ ವಿಶೇಷವಾಗಿ ಮಹಿಳೆಯರು ತಲೆನೋವು, ಬದಲಾದ ಮನಸ್ಥಿತಿ, ಕೋಮಾ ಅಥವಾ ಮೂಕರಂತೆ ನಿಂತು ಬಿಡುವುದು (ಸ್ಟುಪರ್ ಸ್ಥಿತಿ) ಮುಂತಾದ ಲಕ್ಷಣಗಳನ್ನು ಅನುಭವಿಸುತ್ತಾರೆ.
Published by:Ashwini Prabhu
First published: