ತುಳಸಿಯಲ್ಲಿ ಹಲವು ಔಷಧೀಯ ಗುಣಗಳಿರುವುದು ನಿಜ, ಆದರೆ ಈ ಬಗ್ಗೆ ಕೂಡ ಗೊತ್ತಿರಲಿ..!

ತುಳಸಿ ಎಲೆಗಳು ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯನ್ನು ಸಹ ನಿಧಾನಗೊಳಿಸುತ್ತವೆ. ಆದ್ದರಿಂದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅಥವಾ ಶಸ್ತ್ರಚಿಕಿತ್ಸೆಯ ನಂತರ ರಕ್ತಸ್ರಾವವಾಗುವ ಹೆಚ್ಚಿನ ಅಪಾಯವಿದೆ.

ತುಳಸಿ

ತುಳಸಿ

 • Share this:
  ಭಾರತೀಯ ಸಂಸ್ಕೃತಿಯಲ್ಲಿ ತುಳಸಿಗೆ ಬಹುಮುಖ್ಯ ಸ್ಥಾನವಿದೆ. ಅದರಲ್ಲೂ ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಹಿಂದೂಗಳಲ್ಲಿದೆ. ಇನ್ನು ಪುರಾಣಗಳಲ್ಲೂ ತುಳಸಿ ಬಗ್ಗೆ ಪ್ರಸ್ತಾಪಗಳಿದ್ದು, ಹಾಗೆಯೇ ಆಯುರ್ವೇದದಲ್ಲೂ ಈ ಗಿಡವನ್ನು ಔಷಧಿಯಾಗಿ ಬಳಸಲಾಗುತ್ತದೆ. ತುಳಸಿ ಗಿಡದಲ್ಲಿ ಅನೇಕ ಔಷಧೀಯ ಗುಣಗಳಿದ್ದು, ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಅತಿಯಾದ ಅಮೃತವು ವಿಷ ಎಂಬ ನಾಣ್ಣುಡಿ ತುಳಸಿಗೂ ಅನ್ವಯಿಸುತ್ತದೆ. ಅಲ್ಲದೆ ಕೆಲವೊಂದು ಸಂದರ್ಭಗಳಲ್ಲಿ ತುಳಸಿಗಳಿಂದ ದೂರವಿರುವುದು ಉತ್ತಮ. ಏಕೆಂದರೆ ಇದರಿಂದ ಸಿಗುವ ಅನುಕೂಲಕ್ಕಿಂತ, ಕೆಲ ಬಾರಿ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಿದ್ರೆ ಯಾವ ಸಂದರ್ಭಗಳಲ್ಲಿ ಮುನ್ನೆಚ್ಚರಿಕೆವಹಿಸಬೇಕು ಎಂಬುದನ್ನು ತಿಳಿಯೋಣ.

  1. ಗರ್ಭಿಣಿಯರು ತುಳಸಿಯನ್ನು ಸೇವಿಸಬಾರದು: ಯುಜೆನಾಲ್ ಎಂಬ ಅಂಶವು ತುಳಸಿಯಲ್ಲಿ ಕಂಡುಬರುತ್ತದೆ. ಇದರಿಂದ ಗರ್ಭಾವಸ್ಥೆಯಲ್ಲಿ ತುಳಸಿಯನ್ನು ಸೇವಿಸುವುದರಿಂದ ಗರ್ಭಾಶಯದ ಸಂಕೋಚನ ಮತ್ತು ಮುಟ್ಟಿಗೆ ಕಾರಣವಾಗಬಹುದು. ಹಾಗೆಯೇ ಇದು ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಗರ್ಭಧಾರಣೆಯ ಆರಂಭಿಕ 3 ತಿಂಗಳುಗಳಲ್ಲಿ ತುಳಸಿಯಿಂದ ದೂರವಿರುವುದು ಉತ್ತಮ. ಹಾಗೆಯೇ ಸ್ತನ್ಯಪಾನ ಮಾಡುವ ಮಹಿಳೆಯರೂ ಸಹ ತುಳಸಿಯನ್ನು ಸೇವಿಸದಿರುವುದು ಉತ್ತಮ ಎನ್ನುತ್ತಾರೆ.

  2. ಮಧುಮೇಹ ರೋಗಿಗಳು ತುಳಸಿ ತಿನ್ನಬಾರದು: ಮಧುಮೇಹ ಅಥವಾ ಹೈಪೊಗ್ಲಿಸಿಮಿಯಾ (ಅಸಹಜವಾಗಿ ಕಡಿಮೆ ಮಟ್ಟದ ರಕ್ತದಲ್ಲಿನ ಸಕ್ಕರೆ) ಮತ್ತು ಶುಗರ್​ ಔಷಧಿಗಳನ್ನು ತೆಗೆದುಕೊಳ್ಳುವ ಜನರು ತುಳಸಿಯನ್ನು ಸೇವಿಸಿದರೆ ಅದು ಅವರ ರಕ್ತದಲ್ಲಿನ ಸಕ್ಕರೆಯಲ್ಲಿ ಸಾಕಷ್ಟು ಇಳಿಕೆಗೆ ಕಾರಣವಾಗಬಹುದು. ಇದು ರೋಗಿಗಳ ಆರೋಗ್ಯಕ್ಕೆ ಅಪಾಯಕಾರಿ. ಆದ್ದರಿಂದ ಮಧುಮೇಹ ಅಥವಾ ಸಕ್ಕರೆ ಇರುವ ರೋಗಿಗಳು ವೈದ್ಯರ ಸಲಹೆ ಇಲ್ಲದೆ ತುಳಸಿಯನ್ನು ಸೇವಿಸಬಾರದು.

  3. ಹೈಪೋಥೈರಾಯ್ಡಿಸಮ್ ರೋಗಿಗಳಿಗೆ ತುಳಸಿ ಒಳ್ಳೆಯದಲ್ಲ: ಹೈಪೋಥೈರಾಯ್ಡಿಸಮ್​ನಲ್ಲಿ ಕಡಿಮೆ ಮಟ್ಟದ ಥೈರಾಯ್ಡ್ ಹಾರ್ಮೋನ್ ಹೊಂದಿರುವ ಜನರು ಸಹ ತುಳಸಿಯನ್ನು ಸೇವಿಸಬಾರದು. ಏಕೆಂದರೆ ತುಳಸಿ ಥೈರಾಕ್ಸಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಸಮಸ್ಯೆಯಿಂದ ಬಳಲುವ ರೋಗಿಗಳು ತುಳಸಿಯನ್ನು ಸೇವಿಸಿದರೆ ಅದು ಅವರ ದೇಹದಲ್ಲಿ ಥೈರಾಕ್ಸಿನ್ ಹಾರ್ಮೋನುಗಳು ಅಪಾಯಕಾರಿಯಾಗಿ ಕೊರತೆಯನ್ನು ಹೊಂದಬಹುದು.

  4. ಶಸ್ತ್ರಚಿಕಿತ್ಸೆಯಾದವರು ತುಳಸಿ ತಿನ್ನಬಾರದು: ತುಳಸಿ ಎಲೆಗಳು ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಯನ್ನು ಸಹ ನಿಧಾನಗೊಳಿಸುತ್ತವೆ. ಆದ್ದರಿಂದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅಥವಾ ಶಸ್ತ್ರಚಿಕಿತ್ಸೆಯ ನಂತರ ರಕ್ತಸ್ರಾವವಾಗುವ ಹೆಚ್ಚಿನ ಅಪಾಯವಿದೆ. ಆದ್ದರಿಂದ ಒಬ್ಬ ವ್ಯಕ್ತಿಯು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದರೆ, ಅವರು ಕನಿಷ್ಠ 2 ವಾರಗಳ ಮುಂಚಿತವಾಗಿ ತುಳಸಿಯನ್ನು ಸೇವಿಸುವುದನ್ನು ನಿಲ್ಲಿಸಬೇಕು ಮತ್ತು ಶಸ್ತ್ರಚಿಕಿತ್ಸೆಯ ನಂತರವೂ ಕೆಲವು ದಿನಗಳವರೆಗೆ ತುಳಸಿಯನ್ನು ತಿನ್ನಬಾರದು.

  5. ಲೈಂಗಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ: ಈ ಬಗ್ಗೆ ಇಲ್ಲಿಯವರೆಗೆ ಮಾನವರ ಮೇಲೆ ಯಾವುದೇ ಅಧ್ಯಯನ ನಡೆದಿಲ್ಲ. ಆದರೆ ಪ್ರಾಣಿಗಳ ಮೇಲಿನ ಅಧ್ಯಯನಗಳು ತುಳಸಿ ಮಹಿಳೆಯರು ಮತ್ತು ಪುರುಷರ ಲೈಂಗಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತೋರಿಸುತ್ತದೆ. ತುಳಸಿಯನ್ನು ದೊಡ್ಡ ಪ್ರಮಾಣದಲ್ಲಿ ಸೇವಿಸುವುದರಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ಮಹಿಳೆಯರು ಗರ್ಭಧರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಆದ್ದರಿಂದ, ಗರ್ಭಿಣಿಯಾಗಲು ಬಯಸುವ ಮಹಿಳೆಯರು ಸಹ ತುಳಸಿಯನ್ನು ಸೇವಿಸಬಾರದು.
  Published by:zahir
  First published: