• Home
  • »
  • News
  • »
  • lifestyle
  • »
  • Health Tips: ಬೇಸಿಗೆಯಲ್ಲಿ ಸಿಗೋ ಈ ಹಣ್ಣಿನಲ್ಲಿದೆ ಆರೋಗ್ಯ, ಕರ್ಬೂಜ ತಿನ್ನಿ ಕೊಬ್ಬು ಕರಗಿಸಿ

Health Tips: ಬೇಸಿಗೆಯಲ್ಲಿ ಸಿಗೋ ಈ ಹಣ್ಣಿನಲ್ಲಿದೆ ಆರೋಗ್ಯ, ಕರ್ಬೂಜ ತಿನ್ನಿ ಕೊಬ್ಬು ಕರಗಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತೂಕವನ್ನು ಕಡಿಮೆ ಮಾಡಲು ಬಯಸುವವರಿಗೆ ಇದು ಸಹಕಾರಿಯಾಗಿದೆ. ಕರ್ಬೂಜ ಹಣ್ಣು ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್‍ಗಳನ್ನು ಸಹ ಸಾಕಷ್ಟು ಪ್ರಮಾಣದಲ್ಲಿ ಹೊಂದಿರುತ್ತವೆ.

  • Share this:

ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಸಿಗೋ ಹಣ್ಣು ಕರ್ಬೂಜ (Muskmelon Fruit), ಈ ಹಣ್ಣಿನಲ್ಲಿ ಶೇ.95% ರಷ್ಟು ನೀರಿನಂಶವನ್ನು ಹೊಂದಿದ್ದು, ವಿಟಮಿನ್ ಮತ್ತು ಖನಿಜಾಂಶಗಳನ್ನು ಯಥೇಚ್ಛವಾಗಿ ಹೊಂದಿರುತ್ತದೆ. ಹೀಗಾಗಿ ಇದನ್ನು ಬೇಸಿಗೆಯಲ್ಲಿ (Summer) ಸೇವಿಸೋದು ಆರೋಗ್ಯಕ್ಕೆ (Health) ಒಳ್ಳೆಯದು. ನೀರಿನಂಶದ (Water) ಜೊತೆಗೆ ಕರ್ಬೂಜ ಹಣ್ಣು ತಂಪು ಮತ್ತು ಶಮನಕಾರಿ ಗುಣವನ್ನು ಹೊಂದಿದೆ. ಇದು ಎದೆ ಉರಿಯನ್ನು ಶಮನ ಮಾಡುತ್ತದೆ ಮತ್ತು ಮೂತ್ರಕೋಶಗಳಲ್ಲಿ ಇರುವ ಕಶ್ಮಲಗಳನ್ನು ಸ್ವಚ್ಛಗೊಳಿಸುತ್ತದೆ. ಈ ಹಣ್ಣಿನಲ್ಲಿ ಸಕ್ಕರೆಯಂಶ (Sugar) ಅಥವಾ ಕ್ಯಾಲೋರಿಗಳು ಅಧಿಕ ಪ್ರಮಾಣದಲ್ಲಿ ಇಲ್ಲ. ಬೇಸಿಗೆಯಲ್ಲಿ ಮನೆಯಲ್ಲಿ ಕರ್ಬೂಜ ಜ್ಯೂಸ್​ ಮಾಡಿಕುಡಿಯಿರಿ.


ತೂಕ ಇಳಿಸಲು ಈ ಹಣ್ಣು ಸಹಕಾರಿ


ತೂಕವನ್ನು ಕಡಿಮೆಗೊಳಿಸಿಕೊಳ್ಳಲು ಬಯಸುವವರಿಗೆ ಇದು ಆರೋಗ್ಯಕರ ತೂಕವನ್ನು ಉಳಿಸಿಕೊಳ್ಳಲು ಮತ್ತು ಹಸಿವಾದಾಗ ತಿನ್ನಲು ಅತ್ಯಂತ ಉಪಯೋಗಕಾರಿಯಾಗಿದೆ. ಕರ್ಬೂಜ ಹಣ್ಣು ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್‍ಗಳನ್ನು ಸಹ ಸಾಕಷ್ಟು ಪ್ರಮಾಣದಲ್ಲಿ ಹೊಂದಿರುತ್ತವೆ. ಇವು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕ್ಯಾನ್ಸರ್ ಅನ್ನು ಸಹ ನಿಯಂತ್ರಿಸುತ್ತವೆ. ಕರ್ಬೂಜವನ್ನು ಸೇವಿಸುವುದರಿಂದ ಉತ್ತಮ ಆರೋಗ್ಯದ ಲಾಭಗಳ ಜೊತೆಗೆ ನಿಮ್ಮ ತ್ವಚೆಯನ್ನು ಸಹ ಕಾಪಾಡುತ್ತದೆ. ಇದರಲ್ಲಿ ವಿಟಮಿನ್ ಎ ಸಹ ಲಭ್ಯವಿದ್ದು, ಅವು ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನುವಹಿಸುತ್ತವೆ...


ಇದನ್ನ ತಿಂದ್ರೆ ಬೇಗ ಹೊಟ್ಟೆ ಹಸಿವಾಗಲ್ಲ


ಇದರಲ್ಲಿ ಅತಿ ಕಡಿಮೆ ಪರ್ಯಾಪ್ತ ಕೊಬ್ಬು ಹಾಗೂ ಅತಿ ಕಡಿಮೆ ಕ್ಯಾಲೋರಿಗಳಿರುವ ಕಾರಣ ತೂಕ ಏರದಿರಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗುವ ನಾರು ಹೊಟ್ಟೆ ತುಂಬಿರುವ ಭಾವನೆಯನ್ನು ಮೂಡಿಸಿ ಹೊಟ್ಟೆಯ ಹಸಿವಿನ ಭಾವನೆ ಬರದಂತೆ ನೋಡಿಕೊಳ್ಳುತ್ತದೆ. ತನ್ಮೂಲಕ ಸೇವಿಸಬಹುದಾಗಿದ್ದ ಆಹಾರಸೇವನೆಯಿಂದ ತಡೆದು ತೂಕ ಏರದಂತೆ ಪರೋಕ್ಷವಾಗಿ ನೆರವಾಗುತ್ತದೆ.


ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ


ಒಂದು ವೇಳೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟಗಳು ಸಾಮಾನ್ಯಕ್ಕೂ ಹೆಚ್ಚಿದ್ದರೆ ಇಂದಿನಿಂದಲೇ ನಿತ್ಯವೂ ಕೇಸರಿ ಕರಬೂಜ ಹಣ್ಣುಗಳನ್ನು ಸೇವಿಸುತ್ತಾ ಬನ್ನಿ. ಇದರಲ್ಲಿ ಕೊಲೆಸ್ಟ್ರಾಲ್ ಅಂಶ ಇಲ್ಲವೇ ಇಲ್ಲ. ಹಾಗಾಗಿ ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಈಗಿರುವುದಕ್ಕಿಂತ ಏರದೇ, ಸಾಮಾನ್ಯ ಮಟ್ಟಕ್ಕೆ ಇಳಿಯಲು ನೆರವಾಗುತ್ತದೆ.


ಕಣ್ಣಿನ ದೃಷ್ಟಿ ದೋಷ ನಿವಾರಣೆ


ಈ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಎ ಮತ್ತು ಸಿ ಕಣ್ಣುಗಳಿಗೆ ಅಗತ್ಯವಾದ ಪೋಷಕಾಂಶಗಳಾಗಿದ್ದು ಕಣ್ಣಿನ ದೃಷ್ಟಿಯನ್ನು ಉತ್ತಮವಾಗಿರಿಸಲು ನೆರವಾಗುತ್ತವೆ. ವಿಶೇಷವಾಗಿ ಈ ಪೋಷಕಾಂಶಗಳು ಕಣ್ಣಿನ ಪಾಪೆಯನ್ನು ಇನ್ನಷ್ಟು ಬಲಪಡಿಸುವ ಮೂಲಕ ಸ್ಪಷ್ಟವಾದ ದೃಷ್ಟಿ ಮತ್ತು ನೋಟವನ್ನು ಉತ್ತಮಗೊಳಿಸುತ್ತವೆ.


ಇದನ್ನೂ ಓದಿ:Health Care: ನೀರು ಕುಡಿಯುವಾಗ ಈ ತಪ್ಪುಗಳನ್ನು ಮಾಡಬೇಡಿ.. ಎಚ್ಚರ ಇವು ಆರೋಗ್ಯಕ್ಕೆ ಮಾರಕ!


ದೂರವಾಗುತ್ತೆ ಹೃದಯದ ಕಾಯಿಲೆ


ಈ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಹೃದಯದ ಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ. ಇದರಲ್ಲಿರುವ ಅಡಿನೋಸಿನ್ ಎಂಬ ಪೋಷಕಾಂಶಕ್ಕೆ ರಕ್ತವನ್ನು ಹೆಪ್ಪುಗಟ್ಟಿಸುವುದನ್ನು ತಡೆಯುವ ಗುಣವಿರುವ ಕಾರಣ ರಕ್ತ ತೆಳುವಾಗಿರಲು ಹಾಗೂ ರಕ್ತನಾಳಗಳಲ್ಲಿ ಸರಾಗವಾಗಿ ಸಂಚರಿಸಲು ನೆರವಾಗುವ ಮೂಲಕ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ಈ ಮೂಲಕ ಬರಬಹುದಾಗಿದ್ದ ಕೆಲವಾರು ಕಾಯಿಲೆಗಳಿಂದ ರಕ್ಷಿಸುತ್ತದೆ.


ಮಧುಮೇಹವನ್ನು ನಿಯಂತ್ರಣಕ್ಕೂ ಸಹಕಾರಿ


ಈ ಹಣ್ಣಿನ ನಿಯಮಿತ ಸೇವನೆಯಿಂದ ಮಧುಮೇಹ ಆವರಿಸುವ ಸಾಧ್ಯತೆಯನ್ನು ತಡವಾಗಿಸಬಹುದು. ಈ ಅದ್ಭುತ ಹಣ್ಣಿನಲ್ಲಿರುವ ಪೋಷಕಾಂಶಗಳು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸಂತುಲಿತ ಪ್ರಮಾಣದಲ್ಲಿರಿಸಿ ಮಧುಮೇಹವನ್ನು ನಿಯಂತ್ರಿಸಲೂ ನೆರವಾಗುತ್ತದೆ.


ಮಲಬದ್ಧತೆಯಿಂದ ರಕ್ಷಿಸುತ್ತದೆ


ಇದರಲ್ಲಿ ನೀರು ಮತ್ತು ಕರಗುವ ನಾರು ಅತ್ಯಂತ ಸಂತುಲಿತ ಅನುಪಾತದಲ್ಲಿವೆ. ಇದು ಮಲಬದ್ಧತೆಯ ತೊಂದರೆಯನ್ನು ಇಲ್ಲವಾಗಿಸಲು ಸೂಕ್ತವಾಗಿದೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ ಹಾಗೂ ಜೀರ್ಣಕ್ರಿಯೆಯ ತೊಂದರೆಗಳನ್ನು ನೈಸರ್ಗಿಕವಾಗಿ ಗುಣಪಡಿಸುತ್ತದೆ.


ಇದನ್ನೂ ಓದಿ: Kitchen Hacks: ಎಣ್ಣೆ ಇಲ್ಲದೇ ಮಾಡಬಹುದು ಈ ಅಡುಗೆಗಳನ್ನು - ಟೇಸ್ಟ್​ ಕೂಡ ಸೂಪರ್


ಕ್ಯಾನ್ಸರ್ ಬರುವುದರಿಂದ ರಕ್ಷಣೆ ಒದಗಿಸುತ್ತದೆ


ಇದರಲ್ಲಿರುವ ವಿಟಮಿನ್ ಸಿ ಹಾಗೂ ಬೀಟಾ ಕ್ಯಾರೋಟೀನ್ ಎಂಬ ಆಂಟಿ ಆಕ್ಸಿಡೆಂಟ್ ದೇಹದಲ್ಲಿ ಕ್ಯಾನ್ಸರ್ ಉಂಟುಮಾಡಬಹುದಾದ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಹಿಮ್ಮೆಟ್ಟಿಸುವ ಕ್ಷಮತೆ ಹೊಂದಿದ್ದು ಈ ಮೂಲಕ ದೇಹದ ಜೀವಕೋಶಗಳಿಗೆ ಈ ಕಣಗಳು ಹಾನಿ ಮಾಡುವುದರಿಂದ ರಕ್ಷಿಸುತ್ತದೆ. ಈ ಹಾನಿ ಮುಂದುವರಿದರೆ ಕ್ಯಾನ್ಸರ್ ಗೂ ತಿರುಗಬಹುದು. ಈ ಮೂಲಕ ಕರಬೂಜದ ಹಣ್ಣು ಕ್ಯಾನ್ಸರ್ ಬರುವುದರಿಂದಲೂ ರಕ್ಷಣೆ ಒದಗಿಸುತ್ತದೆ.

Published by:ಪಾವನ ಎಚ್ ಎಸ್
First published: