Ice Cream ತಿಂದ್ರೆ ತೂಕ ಹೆಚ್ಚುತ್ತೆ ಅನ್ನೋ ಭಯ ಬಿಡಿ: ಈ ರೀತಿ ನಿಮ್ಮ ಡಯೆಟ್​ನಲ್ಲಿ ಐಸ್ ಕ್ರೀಮ್ ಸೇರಿಸಿ

ಐಸ್ ಕ್ರೀಮ್​ನನ್ನು ದೊಡ್ಡವರಿಂದ ಚಿಕ್ಕ ಮಕ್ಕಳವರೆಗೆ  ಎಲ್ಲರೂ ತುಂಬಾ ಇಷ್ಟಪಡ್ತಾರೆ.  ಐಸ್ ಕ್ರೀಮ್ ಜಾಸ್ತಿ ತಿಂದರೆ ದಪ್ಪ ಆಗ್ತಾರೆ ಎನ್ನಲಾಗುತ್ತೆ.  ಹಾಗಾದರೆ ಐಸ್ ಕ್ರೀಮ್ ತಿನ್ನುವಾಗ ನೀವು ತೂಕವನ್ನು ಹೇಗೆ ಕಳೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಡಯಟ್ (Diet) ಮಾಡುವುದು ಸುಲಭದ ವಿಷಯವಲ್ಲ, ಇಲ್ಲಿ ಕೆಲವು ಹೆಚ್ಚು ಕ್ಯಾಲೋರಿ ಇರುವ ನಾವಿಷ್ಟ ಪಡುವ ಕೆಲ ಪದಾರ್ಥಗಳನ್ನು ತಿನ್ನದೇ ತ್ಯಾಗ ಮಾಡಬೇಕಾಗುತ್ತದೆ. ನಾಲಿಗೆ ರುಚಿ ಬಯಸಿದರೂ ಸಹ ದೇಹ ಹೆಚ್ಚಿನ ಕ್ಯಾಲೋರಿಗಳನ್ನು (Calories) ಒಪ್ಪುವುದಿಲ್ಲ. ಹೀಗಾಗಿ ನಿಮ್ಮನ್ನು ನಿರ್ಬಂಧಿಸುವುದು ಮತ್ತು ನಿಮ್ಮ ನೆಚ್ಚಿನ ಆಹಾರವನ್ನು ತಿನ್ನಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಕೆಲವೊಮ್ಮೆ ಒತ್ತಡ (Stress) ಉಂಟಾಗಬಹುದು ಮತ್ತು ನಿಮ್ಮನ್ನು ದುರ್ಬಲಗೊಳಿಸಬಹುದು. ಇದಕ್ಕಾಗಿ ಕೆಲವು ನೀವಿಷ್ಟ ಪಡುವ ಆಹಾರಗಳನ್ನು ದೂರ ಮಾಡದೇ ನಿಮ್ಮ ಡಯಟ್‌ನಲ್ಲಿ ಸರಿಯಾದ ರೀತಿ (Proper Ways) ಅಳವಡಿಸಿಕೊಳ್ಳುವುದು ಪ್ರಮುಖವಾಗುತ್ತದೆ. 

ಐಸ್ ಕ್ರೀಮ್​ನನ್ನು ದೊಡ್ಡವರಿಂದ ಚಿಕ್ಕ ಮಕ್ಕಳವರೆಗೆ  ಎಲ್ಲರೂ ತುಂಬಾ ಇಷ್ಟಪಡ್ತಾರೆ.  ಐಸ್ ಕ್ರೀಮ್ ಜಾಸ್ತಿ ತಿಂದರೆ ದಪ್ಪ ಆಗ್ತಾರೆ ಎನ್ನಲಾಗುತ್ತೆ.  ಹಾಗಾದರೆ ಐಸ್ ಕ್ರೀಮ್ ತಿನ್ನುವಾಗ ನೀವು ತೂಕವನ್ನು ಹೇಗೆ ಕಳೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಿ. ಹೌದು, ನೀವು ಐಸ್ ಕ್ರೀಮ್ ತಿನ್ನಬಹುದು ಮತ್ತು ತೂಕವನ್ನು ಸಹ ಕಳೆದುಕೊಳ್ಳಬಹುದು. ಅದೇ ರೀತಿ ಕೇಕ್‌ ಸಹ.

ಹಾಗಾದರೆ ಡಯಟ್‌ನಲ್ಲಿರುವಾಗ ಐಸ್‌ ಕ್ರೀಮ್‌ ಸೇವಿಸುವ ಸರಿಯಾದ ಮಾರ್ಗಗಳ ಬಗ್ಗೆ ಇಲ್ಲಿದೆ ಮಾಹಿತಿ..

1) ನಿಮ್ಮನ್ನು ವಂಚಿತಗೊಳಿಸಬೇಡಿ

ಯಶಸ್ವಿ ಆಹಾರ ಕ್ರಮದ ಮೊದಲ ನಿಯಮವೆಂದರೆ ನೀವು ಇಷ್ಟಪಡುವ ಆಹಾರವನ್ನು ಎಂದಿಗೂ ದೂರ ಮಾಡಬಾರದು. ನಿಮ್ಮ ನೆಚ್ಚಿನ ಆಹಾರವನ್ನು ಥಟ್ಟನೆ ತಿನ್ನುವುದನ್ನು ನಿಲ್ಲಿಸಬೇಡಿ, ಏಕೆಂದರೆ ಇದು ವಿಫಲವಾದ ಆಹಾರಕ್ರಮಕ್ಕೆ ಕಾರಣವಾಗುತ್ತದೆ. ನಿಮ್ಮ ಆಹಾರದಲ್ಲಿ ಯಶಸ್ವಿಯಾಗಲು ಪ್ರಮುಖ ಅಂಶವೆಂದರೆ ನಿಮ್ಮ ನೆಚ್ಚಿನ ಆಹಾರವನ್ನು ಮಿತವಾಗಿ ತಿನ್ನುವುದು. ನೀವು ಐಸ್ ಕ್ರೀಮ್ ತನ್ನಲು ಬಯಸಿದರೆ ಯಾವುದೇ ವಂಚನೆ ಮಾಡಿಕೊಳ್ಳದೆ ನಿಯಮಿತವಾಗಿ ಸ್ವಲ್ಪ ಸೇವಿಸಬಹುದು.

ಮತ್ತು ಕೇಕ್ ವಿಷಯದಲ್ಲೂ ಇದೇ ಸೂತ್ರ ಅನ್ವಯವಾಗುತ್ತದೆ, ಒಂದೇ ಬಾರಿ ಇಡೀ ಕೇಕ್ ಅನ್ನು ತಿನ್ನಬೇಡಿ. ಹೀಗೆ ಮಾಡುವುದರಿಂದ ನಿಮ್ಮ ತೂಕ ಹೆಚ್ಚುತ್ತದೆ. ನಿಮ್ಮ ಕಡು ಬಯಕೆಗಳನ್ನು ನಿಗ್ರಹಿಸಲು ಆಗೊಮ್ಮೆ ಈಗೊಮ್ಮೆ ಕೇಕನ್ನು ತಿನ್ನಿರಿ.

ಇದನ್ನೂ ಓದಿ: Momos In Bengaluru: ಮೊಮೊ ಸವಿಯೋಕೆ ಬೆಂಗಳೂರಿನ ಈ ಜಾಗಗಳು ಬೆಸ್ಟ್, ಇಲ್ಲಿ ಟೇಸ್ಟ್ ಮಾಡಿದ್ರೆ ನೀವು ಬೇರೆ ಎಲ್ಲೂ ಹೋಗೋಕೆ ಚಾನ್ಸೇ ಇಲ್ಲ!

2) ಕಡಿಮೆ-ಕೊಬ್ಬಿನ ಐಸ್ ಕ್ರೀಮ್ ಆರಿಸಿಕೊಳ್ಳಿ

ನೀವು ಡಯಟ್ ಮಾಡುವಾಗ ಐಸ್ ಕ್ರೀಮ್ ಅಥವಾ ಕೇಕ್ ತಿನ್ನಬೇಕಾದರೆ, ಅದರಲ್ಲಿ ಕೊಬ್ಬಿನಂಶವನ್ನು ಪರಿಗಣಿಸಿ ತಿನ್ನಲು ಮರೆಯದಿರಿ. ಕೇಕ್ ಮತ್ತು ಐಸ್ ಕ್ರೀಂನಲ್ಲಿ ಕಡಿಮೆ ಕೊಬ್ಬಿನ ಹಾಲು, ಕ್ರೀಮ್ ಇತ್ಯಾದಿಗಳನ್ನು ಬಳಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಿ. ಸ್ಪ್ಲೆಂಡಾದಂತಹ ಕೃತಕ ಸಿಹಿಕಾರಕಗಳಿಗೆ ಹೋಗುವುದು ಸಹ ಒಳ್ಳೆಯದು, ಏಕೆಂದರೆ ಇದು ಸಾಮಾನ್ಯ ಸಕ್ಕರೆಗೆ ಹೋಲಿಸಿದರೆ ಯಾವುದೇ ಕ್ಯಾಲೊರಿಗಳನ್ನು ಹೊಂದಿರುವುದಿಲ್ಲ.
ಕೇಕ್ ತಿನ್ನುವಾಗಲೂ ಈ ಕ್ಯಾಲೊರಿಗಳನ್ನು ಪರಿಗಣಿಸುವುದು ಉತ್ತಮ ಮಾರ್ಗವಾಗಿದೆ.

3) ಸಾಕಷ್ಟು ನೀರು ಕುಡಿಯಿರಿ

ಸಕ್ಕರೆಯ ಅಂಶವಿರುವ ಜ್ಯೂಸ್ ಮತ್ತು ಸೋಡಾಗಳಿಂದ ಆದಷ್ಟು ದೂರವಿರಿ ಮತ್ತು ಸಾಕಷ್ಟು ನೀರು ಕುಡಿಯಿರಿ. ನಿಮ್ಮನ್ನು ಹೈಡ್ರೀಕರಿಸಲು ದಿನಕ್ಕೆ ಕನಿಷ್ಠ 8 ಲೋಟ ನೀರು ಕುಡಿಯುವುದನ್ನು ಖಚಿತಪಡಿಸಿಕೊಳ್ಳಿ.

ಒಂದು ಲೋಟ ತಣ್ಣನೆಯ ನೀರನ್ನು ಕುಡಿಯುವುದಕ್ಕಿಂತ ಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ, ಏಕೆಂದರೆ ಇದು ನೀವು ತಿಂದ ಆಹಾರವನ್ನು ಕರಗಿಸಲು ಸಹಾಯ ಮಾಡುತ್ತದೆ. ಕುಡಿಯುವ ನೀರನ್ನು ಕಡಿಮೆ ಮಾಡಬೇಡಿ, ಏಕೆಂದರೆ ನೀವು ನಿಯಮಿತವಾಗಿ ನೀರನ್ನು ಕುಡಿಯಲು ಮರೆತರೆ ನೀವು ಹೆಚ್ಚಾಗಿ ಆಹಾರವನ್ನು ಸೇವಿಸುವಿರಿ.

4) ಕ್ರ್ಯಾಶ್ ಡಯಟ್‌ ಮಾಡಬೇಡಿ

ಈ ಆಹಾರಕ್ರಮವು ತ್ವರಿತ ತೂಕ ನಷ್ಟ ಫಲಿತಾಂಶಗಳನ್ನು ಸಾಧಿಸುವ ಗುರಿಯನ್ನು ಒಳಗೊಂಡಿರುತ್ತದೆ. ಹೀಗಾಗಿ ಕ್ರ್ಯಾಶ್ ಡಯಟ್‌ ಬದಲಿಗೆ ದೀರ್ಘಾವಧಿಯ ಆಹಾರಕ್ರಮವನ್ನು ಆರಿಸಿಕೊಳ್ಳಿ ಮತ್ತು ನಿಮ್ಮ ಆಹಾರದಲ್ಲಿ ಪೌಷ್ಟಿಕತಜ್ಞರ ಸಹಾಯ ಪಡೆಯಿರಿ. ನಿಮಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ನೀವು ಪಡೆಯುತ್ತೀದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ಇದರಿಂದ ನೀವು ತೂಕವನ್ನು ಕಳೆದುಕೊಳ್ಳಬಹುದು ಮತ್ತು ನಿಮ್ಮ ಜೀವನದುದ್ದಕ್ಕೂ ಅದನ್ನು ಉಳಿಸಿಕೊಳ್ಳಬಹುದು.

ಇದನ್ನೂ ಓದಿ: Skin Care: ಬೇಸಿಗೆಯಲ್ಲೂ ಪಾದಗಳಲ್ಲಿ ಬಿರುಕು ಉಂಟಾಗಿದ್ಯಾ? ಈ 5 ಸಲಹೆ ಮೂಲಕ ಸಿಗುತ್ತೆ ಪರಿಹಾರ

ಫ್ಯಾಡ್ ಡಯಟ್‌ಗಳು ಸ್ವಲ್ಪ ಸಮಯದವರೆಗೆ ತೂಕವನ್ನು ಕಡಿಮೆ ಮಾಡುತ್ತದೆ ಮತ್ತು ಕಾಲ ಕ್ರಮೇಣ ತೂಕವು ಹಿಂತಿರುಗುತ್ತದೆ. ದೀರ್ಘಾವಧಿಯ ಆಹಾರಗಳು ಆರೋಗ್ಯಕರ ಮತ್ತು ಹೆಚ್ಚು ಸಮತೋಲಿತವಾಗಿವೆ.

ಆರೋಗ್ಯಕರ ಜೀವನವನ್ನು ನಡೆಸುವುದು ಎಂದರೆ ನಿಮ್ಮ ನೆಚ್ಚಿನ ಆಹಾರವನ್ನು ನೀವು ತ್ಯಾಗ ಮಾಡಬೇಕೆಂದು ಅರ್ಥವಲ್ಲ. ಅವುಗಳನ್ನು ಮಿತವಾಗಿ ತಿನ್ನಲು ಖಚಿತಪಡಿಸಿಕೊಳ್ಳುವುದಾಗಿದೆ.
Published by:Pavana HS
First published: