Healthy Tips: ನೀವು ಕೊಲೆಸ್ಟ್ರಾಲ್, ಮಧುಮೇಹದಂತಹ ಕಾಯಿಲೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಸೊಪ್ಪನ್ನು ತಿನ್ನಿ

ದಂಟಿನ ಸೊಪ್ಪಿನ ಬಗ್ಗೆ ಬಹುತೇಕರಿಗೆ ಗೊತ್ತೇ ಇರುವುದಿಲ್ಲ ಅಥವಾ ಕಡಿಮೆ ತಿಳಿದಿರಬಹುದು. ಜನರು ಇದನ್ನು ಬಳಸುವುದು ತುಂಬಾನೇ ವಿರಳ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಪೋಷಕಾಂಶಗಳ ವಿಷಯಕ್ಕೆ ಬಂದಾಗ ದಂಟಿನ ಸೊಪ್ಪು ಪೋಷಕಾಂಶಗಳ ಭಂಡಾರವಾಗಿದೆ. ಪೌಷ್ಟಿಕಾಂಶ ತಜ್ಞೆ ಲವ್ನೀತ್ ಬಾತ್ರಾ ಅವರು ವಿವರಿಸಿದ ಅದರ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿ.

ದಂಟಿನ ಸೊಪ್ಪು

ದಂಟಿನ ಸೊಪ್ಪು

  • Share this:
ಹಸಿರು ತರಕಾರಿಗಳನ್ನು (Green vegetable) ಹೆಚ್ಚಾಗಿ ಸೇವಿಸುವುದರಿಂದ ಆರೋಗ್ಯಕ್ಕೆ (Health) ತುಂಬಾನೇ ಪ್ರಯೋಜನಗಳಾಗುತ್ತವೆ ಎಂದು ಅನೇಕರು ಹೇಳುವುದನ್ನು ನಾವು ಕೇಳಿರುತ್ತೇವೆ ಅಲ್ಲವೇ? ಹೌದು.. ಹಸಿರು ತರಕಾರಿಗಳಲ್ಲಿ ಅದರಲ್ಲೂ ಈ ಹಸಿರು ಸೊಪ್ಪುಗಳನ್ನು (Leafy Vegetable) ಪ್ರತಿದಿನ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಗಳಿರುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಹಸಿರು ಸೊಪ್ಪು ಎಂದ ತಕ್ಷಣ ನಮ್ಮ ತಲೆಯಲ್ಲಿ ಹೊಳೆಯುವ ಕೆಲವು ಸೊಪ್ಪುಗಳು ಎಂದರೆ ಅದು ಪಾಲಕ್, ಮೆಂತ್ಯ ಅಥವಾ ಎಲೆಕೋಸು ಎಂದು ಹೇಳಬಹುದು. ಇದರಂತೆಯೇ ಅನೇಕ ಸೊಪ್ಪುಗಳು ಬೇರೆ ಬೇರೆ ರೀತಿಯ ಪ್ರಯೋಜನಗಳನ್ನು ನೀಡುತ್ತವೆ.

ದಂಟಿನ ಸೊಪ್ಪು ಅಥವಾ ಹರಿವೆ ಸೊಪ್ಪಿನ ಬಗ್ಗೆ ನೀವು ಕೇಳಿದ್ದೀರಾ? ಅದನ್ನು ನೀವು ಎಂದಾದರೂ ನಿಮ್ಮ ಮನೆಯಲ್ಲಿ ಮಾಡಿಕೊಂಡು ತಿಂದಿದ್ದೀರಾ? ನಿಮ್ಮ ಉತ್ತರ ಇದಕ್ಕೆ ಹೌದು ಎಂದಾದಲ್ಲಿ ಇದರಿಂದಾಗುವ ಆರೋಗ್ಯ ಪ್ರಯೋಜನಗಳನ್ನು ನಿಮಗೆ ತಿಳಿಸುತ್ತೇವೆ. ಈ ಸೊಪ್ಪಿನಿಂದ ನೀವು ಪಲ್ಯ ಮಾಡಿಕೊಂಡು ತಿನ್ನಬಹುದು ಅಥವಾ ಬೆಳೆ ಸಾರಿನಲ್ಲಿ ಸಹ ಹಾಕಿಕೊಂಡು ಸೇವಿಸಬಹುದು. ಹೀಗೆ ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದಲ್ಲದೆ ಹೃದಯವನ್ನು ಆರೋಗ್ಯಕರವಾಗಿಡಲು ಸಹ ಇದು ಸಹಾಯ ಮಾಡುತ್ತದೆ.

ದಂಟಿನ ಸೊಪ್ಪಿನ ಬಗ್ಗೆ ಬಹುತೇಕರಿಗೆ ಗೊತ್ತೇ ಇರುವುದಿಲ್ಲ ಅಥವಾ ಕಡಿಮೆ ತಿಳಿದಿರಬಹುದು. ಜನರು ಇದನ್ನು ಬಳಸುವುದು ತುಂಬಾನೇ ವಿರಳ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಪೋಷಕಾಂಶಗಳ ವಿಷಯಕ್ಕೆ ಬಂದಾಗ ದಂಟಿನ ಸೊಪ್ಪು ಪೋಷಕಾಂಶಗಳ ಭಂಡಾರವಾಗಿದೆ. ಪೌಷ್ಟಿಕಾಂಶ ತಜ್ಞೆ ಲವ್ನೀತ್ ಬಾತ್ರಾ ಅವರು ವಿವರಿಸಿದ ಅದರ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ ನೋಡಿ.

1. ಈ ಸೊಪ್ಪಿಗಿದೆ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಸಾಮರ್ಥ್ಯ
ದಂಟಿನ ಸೊಪ್ಪಿನ ಎಲೆಗಳ ಪ್ರಮುಖ ಆರೋಗ್ಯ ಪ್ರಯೋಜನಗಳಲ್ಲಿ ಒಂದು ನಿಮ್ಮ ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯ. ಹೆಚ್ಚಿನ ನಾರಿನಂಶದಿಂದಾಗಿ, ಈ ಸೊಪ್ಪು/ತರಕಾರಿ ರಕ್ತದಲ್ಲಿನ ಎಲ್‌ಡಿಎಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಟೊಕೊಟ್ರಿನಾಲ್ ಗಳು, ಈ ತರಕಾರಿ ಸೊಪ್ಪಿನಲ್ಲಿ ಲಭ್ಯವಿರುವ ಒಂದು ರೀತಿಯ ವಿಟಮಿನ್ ಇ, ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಸಾಮರ್ಥ್ಯಕ್ಕೆ ಕೊಡುಗೆ ನೀಡುತ್ತದೆ ಎಂದು ಹೇಳಲಾಗುತ್ತದೆ.

2. ಈ ಸೊಪ್ಪು ಮಧುಮೇಹಕ್ಕೆ ಒಳ್ಳೆಯದು
ದಂಟಿನ ಸೊಪ್ಪಿನ ಎಲೆಗಳು ಹೈಪರ್ ಗ್ಲೈಸೆಮಿಕ್ ವಿರೋಧಿ ಚಟುವಟಿಕೆಯನ್ನು ಪ್ರದರ್ಶಿಸುತ್ತವೆ ಮತ್ತು ಇದರಿಂದಾಗಿ, ಟೈಪ್ 2 ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Health Tips: ರುಚಿಯಷ್ಟೇ, ಸಕ್ಕರೆ ಮಟ್ಟವನ್ನೂ ಸುಲಭವಾಗಿ ಕಂಟ್ರೋಲ್ ಮಾಡುತ್ತೆ ಪಿಸ್ತಾ

ಎಲೆಗಳಲ್ಲಿರುವ ಪ್ರೋಟೀನ್ ರಕ್ತದಲ್ಲಿ ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ತುಂಬಾ ಹಸಿವು ಆಗುವುದನ್ನು ಕಡಿಮೆ ಮಾಡುವ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುವ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ.

3. ದಂಟಿನ ಸೊಪ್ಪು ಕ್ಯಾಲ್ಸಿಯಂ ಕೊರತೆಯನ್ನು ಕಡಿಮೆ ಮಾಡುತ್ತದೆ
ಇದರಲ್ಲಿರುವ ಖನಿಜಾಂಶ ನಿಮ್ಮ ದೇಹದಲ್ಲಿರುವ ಮೂಳೆಗಳನ್ನು ಇನ್ನಷ್ಟು ಬಲಪಡಿಸುತ್ತದೆ. ಮೂಳೆಗಳ ನಿರ್ವಹಣೆಯಲ್ಲಿ ಕ್ಯಾಲ್ಸಿಯಂ ಪ್ರಮುಖ ಪಾತ್ರ ವಹಿಸುತ್ತದೆ.

ಈ ಸೊಪ್ಪಿನ ಎಲೆಗಳು ಕ್ಯಾಲ್ಸಿಯಂ ಅನ್ನು ಹೊಂದಿರುತ್ತವೆ, ಇದು ಮೂಳೆಗಳ ಆರೋಗ್ಯಕರ ಬೆಳವಣಿಗೆಯನ್ನು ಹೊಂದಲು ಸಹಾಯ ಮಾಡುವ ಅಮೂಲ್ಯವಾದ ಆಹಾರವಾಗಿದೆ, ಇದು ಆಸ್ಟಿಯೊಪೊರೋಸಿಸ್ ಅನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Ghee Benefits: ಪ್ರತಿದಿನ ತುಪ್ಪ ಸೇವಿಸಿದರೆ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭವಿದೆಯಾ?

4. ನಿಮ್ಮನ್ನು ಈ ಸೊಪ್ಪು ಕ್ಯಾನ್ಸರ್ ನಿಂದ ಕಾಪಾಡುತ್ತದೆ
ವಿಟಮಿನ್ ಇ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಜೊತೆಗೆ ಲೈಸಿನ್ (ಅತ್ಯಗತ್ಯ ಅಮೈನೋ ಆಮ್ಲ) ಉಪಸ್ಥಿತಿಯು ವಯಸ್ಸಾಗುವಿಕೆ ಮತ್ತು ಮಾರಣಾಂತಿಕ ಕೋಶಗಳ ರಚನೆಗೆ ಕಾರಣವಾಗುವ ಫ್ರೀ ರಾಡಿಕಲ್ ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ಇದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
Published by:Ashwini Prabhu
First published: