ಕನಿಷ್ಠ ಮಾಂಸಾಹಾರ ಸೇವಿಸುವ ಟಾಪ್-20 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ!

news18
Updated:August 30, 2018, 7:08 PM IST
ಕನಿಷ್ಠ ಮಾಂಸಾಹಾರ ಸೇವಿಸುವ ಟಾಪ್-20 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ!
news18
Updated: August 30, 2018, 7:08 PM IST
-ನ್ಯೂಸ್ 18 ಕನ್ನಡ

ಆಹಾರ ಎಂಬುದು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಅದರಲ್ಲೂ ಎಲ್ಲ ರಾಷ್ಟ್ರಗಳಲ್ಲೂ ಮಾಂಸಹಾರ ಮತ್ತು ಸಸ್ಯಹಾರಗಳೆಂಬ ಎರಡು ಆಹಾರ ಪದ್ದತಿಗಳನ್ನು ಕಾಣಬಹುದು. ಪ್ರಪಂಚದಲ್ಲಿ ಅತಿ ಹೆಚ್ಚು ಸಸ್ಯಹಾರ ಮತ್ತು ಮಾಂಸಹಾರವನ್ನು ಸೇವಿಸುವ ರಾಷ್ಟ್ರಗಳನ್ನು ಗುರುತಿಸುವ ಕೆಲಸವನ್ನು ವಿಶ್ವ ಸಂಸ್ಥೆ ಮಾಡುತ್ತದೆ. ಈ ಮೂಲಕ ಒಂದು ದೇಶದ ಆಹಾರ ಪದ್ಧತಿ ಮತ್ತು ಜನರ ಆದಾಯದ ಮೇಲೆ ಬೆಳಕು ಚೆಲ್ಲುವ ಕೆಲಸಗಳಾಗುತ್ತದೆ. ಅದರಂತೆ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಸಸ್ಯಹಾರವನ್ನು ಸೇವಿಸುವ ದೇಶ ಎಂಬುದು ನಿಮ್ಮ ಊಹೆ ಆಗಿದ್ದರೆ ಖಂಡಿತ ಅದು ತಪ್ಪು. ಏಕೆಂದರೆ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವುದು ನಮ್ಮ ನೆರೆ ರಾಷ್ಟ್ರ ಬಾಂಗ್ಲಾದೇಶ.  2009 ರ ಅಂಕಿ ಅಂಶಗಳ ಪ್ರಕಾರ (ಇತ್ತೀಚಿನ ಸಮಗ್ರ ಅಂಕಿ ಅಂಶ) ತಮ್ಮ ಆಹಾರ ಕ್ರಮದಲ್ಲಿ ಅತಿ ಹೆಚ್ಚು ಸಸ್ಯಹಾರವನ್ನು ಬಾಂಗ್ಲಾದೇಶಿಗರು ಬಳಸುತ್ತಾರೆ.

ಕನಿಷ್ಠ ಪ್ರಮಾಣದ ಮಾಂಸಹಾರವನ್ನು ತಿನ್ನುವವರ ಅಂಕಿ ಅಂಶಗಳ ಮೂಲಕ ಈ ಲೆಕ್ಕಚಾರ ಮಾಡಲಾಗುತ್ತದೆ. ಅದರಂತೆ ಬಾಂಗ್ಲಾ ಮೊದಲ ಸ್ಥಾನದಲ್ಲಿದ್ದರೆ ನಂತರ ಸ್ಥಾನ ಭಾರತಕ್ಕೆ ಲಭಿಸಿದೆ. ಒಂದು ವರ್ಷದಲ್ಲಿ ಬಾಂಗ್ಲಾದೇಶಿಗನೊಬ್ಬ ಕೇವಲ 4 ಕೆ.ಜಿಗಳಷ್ಟು ಮಾತ್ರ ಮಾಂಸವನ್ನು ತಿನ್ನುತ್ತಾನೆ. ಅಂದರೆ ವಾರ್ಷಿಕ ಲೆಕ್ಕಾಚಾರದಲ್ಲಿ ಬಾಂಗ್ಲಾದಲ್ಲಿ ಮಾಂಸಹಾರಕ್ಕಿಂತ ಸಸ್ಯಹಾರವನ್ನೇ ಹೆಚ್ಚು ಸೇವಿಸುತ್ತಾರೆ ಎಂದಾಯಿತು. ಅದೇ ರೀತಿ ಭಾರತೀಯನೊಬ್ಬ ವರ್ಷಕ್ಕೆ ಸೇವಿಸುವ ಒಟ್ಟು ಮಾಂಸಾಹಾರ ಕೇವಲ 4.4 ಕೆ.ಜಿ ಮಾತ್ರ ಎಂದು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ತಿಳಿಸಿದೆ.

ಇದೇ ಪಟ್ಟಿಯಲ್ಲಿ ಭಾರತದ ನಂತರದ ಸ್ಥಾನದಲ್ಲಿ ಬುರುಂಡಿ, ಶ್ರೀಲಂಕಾ ದೇಶಗಳು ಕಾಣಿಸಿಕೊಂಡಿದೆ. ಈ ಅಂಕಿ ಅಂಶದ ಪ್ರಕಾರ ವಾರ್ಷಿಕವಾಗಿ ಭಾರತೀಯರಿಗಿಂತ ಶ್ರೀಲಂಕಾ ದೇಶದವರು ಹೆಚ್ಚು ಮಾಂಸ ಸೇವಿಸುತ್ತಾರೆ. ಹಾಗೆಯೇ ಈ ಪಟ್ಟಿಯ ಮೊದಲ ಹತ್ತರದಲ್ಲಿ 5 ಆಫ್ರಿಕಾ ರಾಷ್ಟ್ರಗಳು ಸ್ಥಾನ ಪಡೆದಿದ್ದು, ರುವಾಂಡಾ, ಸಿಯೆರಾ ಲಿಯೊನ್, ಎರಿಟ್ರಿಯಾ, ಮೊಜಾಂಬಿಕ್, ಗ್ಯಾಂಬಿಯಾ ಮತ್ತು ಮಲಾವಿ ದೇಶಗಳು ಈ ಪಟ್ಟಿಯಲ್ಲಿದೆ.

ಕನಿಷ್ಠ ಪ್ರಮಾಣದಲ್ಲಿ ಮಾಂಸಹಾರ ಸೇವಿಸುವ 20 ರಾಷ್ಟ್ರಗಳು (ವಾರ್ಷಿಕ ಪ್ರತಿ ವ್ಯಕ್ತಿಗೆ)


Loading...


ದೇಶ ಮಾಂಸ ಸೇವನೆ (ವಾರ್ಷಿಕ ಪ್ರತಿ ವ್ಯಕ್ತಿಗೆ ಕೆ.ಜಿ ಲೆಕ್ಕದಲ್ಲಿ)
ಬಾಂಗ್ಲಾದೇಶ 4 ಕೆ.ಜಿ
ಭಾರತ 4.4
ಬುರುಂಡಿ 5.2
ಶ್ರೀಲಂಕಾ 6.3
ರುವಾಂಡಾ 6.5
ಸಿಯೆರಾ ಲಿಯೋನ್ 7.3
ಎರಿಟ್ರಿಯಾ 7.7
ಮೊಜಾಂಬಿಕ್ 7.8
ಗ್ಯಾಂಬಿಯಾ 8.1
ಮಲಾವಿ 8.3
 ಇಥಿಯೋಪಿಯಾ  8.5
 ಗುನಿಯಾ 8.6
ನೈಜೀರಿಯಾ 8.8
ತಾಂಜಾನಿಯಾ 9.6
ನೇಪಾಳ 9.9
ಲೈಬೀರಿಯಾ 10.4
ಉಗಾಂಡಾ 11
ಇಂಡೋನೇಷ್ಯಾ 11.6
ಟೋಗೊ 11.7
ಸೊಲೊಮನ್ ದ್ವೀಪಗಳು 11.9

ಕನಿಷ್ಠ ಪ್ರಮಾಣದಲ್ಲಿ ಮಾಂಸಾಹಾರ ಸೇವಿಸಲು ಆಯಾ ದೇಶಗಳ ಬಡತನ ಕೂಡ ಕಾರಣವಾಗಿರಬಹುದು. 2015ರ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 836 ದಶಲಕ್ಷ ಜನ ನಿತ್ಯ 20 ರೂಪಾಯಿಗಿಂತ ಕಡಿಮೆ ಆದಾಯ ಪಡೆಯುತ್ತಿದ್ದಾರೆ. ಇದನ್ನು ಗಣನೆಗೆ ತೆಗೆದುಕೊಂಡರೆ ದುಬಾರಿ ಮಾಂಸ ಭಕ್ಷ್ಯಗಳನ್ನು ಸೇವಿಸಲು ಕುಟುಂಬಗಳ ಆರ್ಥಿಕ ಪರಿಸ್ಥಿತಿ ಕಾರಣವಾಗಿರುತ್ತದೆ ಎಂಬುದು ತಿಳಿಯುತ್ತದೆ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...