ವಿಶ್ವದಲ್ಲಿ ಅತಿ ಹೆಚ್ಚು ಮಾಂಸಾಹಾರ ಸೇವಿಸುವ ಟಾಪ್ 20 ರಾಷ್ಟ್ರಗಳ ಪಟ್ಟಿ

news18
Updated:September 2, 2018, 6:22 PM IST
ವಿಶ್ವದಲ್ಲಿ ಅತಿ ಹೆಚ್ಚು ಮಾಂಸಾಹಾರ ಸೇವಿಸುವ ಟಾಪ್ 20 ರಾಷ್ಟ್ರಗಳ ಪಟ್ಟಿ
news18
Updated: September 2, 2018, 6:22 PM IST
-ನ್ಯೂಸ್ 18 ಕನ್ನಡ

ವಿಶ್ವದಲ್ಲಿ ಹೆಚ್ಚಿನವರ ಪ್ರಿಯ ಆಹಾರಗಳಲ್ಲಿ ಮಾಂಸಹಾರ ಭಕ್ಷ್ಯಗಳದ್ದೇ ಕಾರುಬಾರು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಆಹಾರಗಳ ಪದ್ಧತಿಗಳು ಬದಲಾವಣೆಯಾದರೂ, ಅಲ್ಲಿ ನಾವು ಮಾಂಸಹಾರ ಮತ್ತು ಸಸ್ಯಹಾರಗಳನ್ನು ಕಾಣಬಹುದು. ಅದರಲ್ಲೂ ಪಾಶ್ಚಾತ್ಯ ದೇಶಗಳಲ್ಲಿ ಮಾಂಸ ಭಕ್ಷ್ಯ ಪ್ರಿಯರುಗಳ ಸಂಖ್ಯೆ ಬಹಳ ದೊಡ್ಡದಿದೆ ಎಂದರೆ ತಪ್ಪಾಗಲಾರದು. ಒಂದು ದೇಶದ ಜನರು ತಮ್ಮ ಆಹಾರದಲ್ಲಿ ಮಾಂಸವನ್ನು ಮತ್ತು ಸಸ್ಯಹಾರವನ್ನು ಯಾವ ಪ್ರಮಾಣದಲ್ಲಿ ಬಳಸುತ್ತಾರೆ ಎಂಬುದನ್ನು ವಿಶ್ವ ಸಂಸ್ಥೆ ಸಮೀಕ್ಷೆ ನಡೆಸುತ್ತದೆ. ಆ ಮೂಲಕ ಪ್ರತಿ ದೇಶದ ಜನರು ವರ್ಷಕ್ಕೆ ಎಷ್ಟು ಪ್ರಮಾಣದಲ್ಲಿ ಮಾಂಸಹಾರವನ್ನು ಸೇವಿಸುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. 2009 ರ ಅಂಕಿ ಅಂಶಗಳ ಪ್ರಕಾರ (ಇತ್ತೀಚಿನ ಸಮಗ್ರ ಅಂಕಿ ಅಂಶ) ತಮ್ಮ ಆಹಾರ ಕ್ರಮದಲ್ಲಿ ಅತಿ ಹೆಚ್ಚು ಮಾಂಸಹಾರವನ್ನು ಬಳಸಿದ ದೇಶವೆಂದರೆ ಅಮೆರಿಕ ಸಂಯುಕ್ತ ಸಂಸ್ಥಾನ.

ಅಮೆರಿಕದ ಒಬ್ಬ ನಿವಾಸಿ ಪ್ರತಿ ವರ್ಷ 120.2 ಕೆ.ಜಿ.ಗಳಷ್ಟು ಮಾಂಸಹಾರವನ್ನು ತಿನ್ನುತ್ತಾರೆಂದು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ತಿಳಿಸಿದೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿರುವುದು ಅರಬ್​ ದೇಶ ಕುವೈತ್​​. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾ, ಬಹಮಾಸ್ ಸೇರಿದಂತೆ ಹಲವು ಖ್ಯಾತ ರಾಷ್ಟ್ರಗಳು ಕಾಣಿಸಿಕೊಂಡಿದೆ. ಆದರೆ ಅಚ್ಚರಿಯ ವಿಷಯವೆಂದರೆ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿರುವ ಯುನೈಟೆಡ್ ಕಿಂಗ್​ಡಮ್ ಮೊದಲ 20ರಲ್ಲಿ ಸ್ಥಾನ ಪಡೆದಿಲ್ಲ ಎಂಬುದು. ಪ್ರತಿ ವರ್ಷ ಇಂಗ್ಲೆಂಡ್ ಮೂಲದ ನಿವಾಸಿಗಳು ಕೇವಲ 84.2 ಕೆ.ಜಿಯಷ್ಟು ಮಾತ್ರ ಮಾಂಸಾಹಾರ ಸೇವಿಸುತ್ತಾರೆ ಎಂದು ಈ ವರದಿ ಹೇಳಿದೆ.

ಹಾಗೆಯೇ ಗಲ್ಫ್​ನ ಪುಟ್ಟ​ ರಾಷ್ಟ್ರವಾದ ಕುವೈತ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿರುವುದು ಅಚ್ಚರಿ ಹುಟ್ಟಿಸಿದೆ. ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿರುವ ಗಲ್ಫ್ ರಾಷ್ಟ್ರಗಳಲ್ಲಿ ಕುವೈತ್​ನಲ್ಲಿ ಮಾತ್ರ ಅತಿ ಹೆಚ್ಚು ಮಾಂಸಾಹಾರವನ್ನು ಸೇವಿಸುತ್ತಿದ್ದಾರೆ. ಈ ಮೂಲಕ ಇತರೆ ರಾಷ್ಟ್ರಗಳಿಗಿಂತ ಕುವೈತ್ ಆಡಂಬರ ಜೀವನವನ್ನು ನಡೆಸುತ್ತಿದೆ ಎನ್ನಲಾಗಿದೆ.

ಅಷ್ಟೇ ಅಲ್ಲದೆ ಮಾಂಸಾಹಾರವನ್ನು ಸೇವಿಸುವ ರಾಷ್ಟ್ರಗಳಲ್ಲಿ ಹೆಚ್ಚು ಸ್ಥೂಲಕಾಯತೆ ಹೊಂದಿರುವವರು ಇದ್ದಾರೆಂಬ ವರದಿಯನ್ನು ಈ ಅಧ್ಯಯನ ತಿಳಿಸಿದೆ. ಮಾಂಸಹಾರದಿಂದ ದೇಹ ತೂಕ ಹೆಚ್ಚಿಸಿದವರ ಪಟ್ಟಿಯಲ್ಲಿ ಅಮೆರಿಕವು 12 ನೇ ಸ್ಥಾನದಲ್ಲಿದ್ದರೆ, ಕುವೈತ್ 9 ನೇ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಟಾಪ್ 20 ಮಾಂಸಹಾರ ಸೇವಿಸುವ ರಾಷ್ಟ್ರಗಳಲ್ಲಿ ಕಾಣಿಸಿರುವ ಬಹಮಾಸ್(10ನೇ), ನ್ಯೂಜಿಲ್ಯಾಂಡ್(24ನೇ) ಮತ್ತು ಆಸ್ಟ್ರೇಲಿಯಾ (26ನೇ) ಸ್ಥೂಲಕಾಯತೆಯ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಗರಿಷ್ಠ ಪ್ರಮಾಣದಲ್ಲಿ ಮಾಂಸಹಾರ ಸೇವಿಸುವ 20 ರಾಷ್ಟ್ರಗಳು

Loading...ದೇಶ ಮಾಂಸ ಸೇವನೆ (ವಾರ್ಷಿಕ ಪ್ರತಿ ವ್ಯಕ್ತಿಗೆ ಕೆ.ಜಿ ಲೆಕ್ಕದಲ್ಲಿ)
ಅಮೆರಿಕ 120
ಕುವೈತ್ 119.2
ಆಸ್ಟ್ರೇಲಿಯಾ 111.5
ಲಕ್ಸೆಂಬರ್ಗ್ 107.9
ನ್ಯೂಜಿಲೆಂಡ್ 106.4
ಆಸ್ಟ್ರಿಯಾ 102
ಫ್ರೆಂಚ್ ಪಾಲಿನೇಷ್ಯಾ 101.9
ಬರ್ಮುಡಾ 101.7
ಅರ್ಜೆಂಟೀನಾ 98.3
ಸ್ಪೇನ್ 97
ಇಸ್ರೇಲ್ 96
ಡೆನ್ಮಾರ್ಕ್ 95.2
ಕೆನಡಾ 94.3
ಸೇಂಟ್ ಲೂಸಿಯಾ 93.6

ಮತ್ತೊಂದು ಆಸಕ್ತಿಕರ ವಿಷಯವೆಂದರೆ ಎಲ್ಲ ದೇಶಗಳಲ್ಲೂ ಇತ್ತೀಚಿನ ದಿನಗಳಲ್ಲಿ ಮಾಂಸಹಾರ ಸೇವನೆಯು ಕುಸಿಯುತ್ತಿದೆ. 2002 ರ ಅಂಕಿ ಅಂಶಗಳ ಪ್ರಕಾರ ಅಮೆರಿಕ ನಿವಾಸಿಯೊಬ್ಬ ವಾರ್ಷಿಕ 124.8 ಕೆ.ಜಿ ಮಾಂಸಾಹಾರ ಸೇವಿಸುತ್ತಿದ್ದರು. ಆದರೆ ಇದೇ ಲೆಕ್ಕವು 2009ಕ್ಕೆ 120.8 ಕೆ.ಜಿ.ಗೆ ಇಳಿದಿದೆ. ಅದರಂತೆ ಕಳೆದ ಬಾರಿ 141.7 ಕೆ.ಜಿ ಸರಾಸರಿಯಲ್ಲಿ ಮಾಂಸಾಹಾರ ಸೇವಿಸುತ್ತಿದ್ದ ಲಕ್ಸಂಬರ್ಗ್ ನಿವಾಸಿಗಳ ಈ ಬಾರಿಯ ಲೆಕ್ಕ 107.9 ಕೆ.ಜಿ. ಹಾಗೆಯೇ ನ್ಯೂಜಿಲೆಂಡ್ ಜನರು 142.1 ಕೆ.ಜಿಯಿಂದ 106 ಕೆ.ಜಿ.ಗೆ ಮತ್ತು ವಿಶ್ವದ ಅತಿ ದೊಡ್ಡ ಮಾಂಸಾಹಾರ ಪ್ರಿಯರ ರಾಷ್ಟ್ರ ಎಂದು ಗುರುತಿಸಿದ್ದ ಡೆನ್ಮಾರ್ಕ್ ಜನರು 145.9 ರಿಂದ 95.2 ಕೆ.ಜಿ ಗೆ ಇಳಿಕೆ ಮಾಡಿಕೊಂಡಿದ್ದಾರೆ.

ಅದೇ ರೀತಿ ಕಡಿಮೆ ಪ್ರಮಾಣದ ಮಾಂಸಹಾರವನ್ನು ತಿನ್ನುವವರ ಅಂಕಿ ಅಂಶಗಳ ಲೆಕ್ಕಚಾರದ ಮೂಲಕ ಹೆಚ್ಚು ಸಸ್ಯಹಾರವನ್ನು ಸೇವಿಸುವ ರಾಷ್ಟ್ರಗಳ ಪಟ್ಟಿ ಮಾಡಲಾಗುತ್ತದೆ. ಅದರಂತೆ ಬಾಂಗ್ಲಾ ಮೊದಲ ಸ್ಥಾನದಲ್ಲಿದ್ದರೆ ನಂತರ ಸ್ಥಾನ ಭಾರತಕ್ಕೆ ಲಭಿಸಿದೆ. ಒಂದು ವರ್ಷದಲ್ಲಿ ಬಾಂಗ್ಲಾದೇಶಿಗನೊಬ್ಬ ಕೇವಲ 4 ಕೆ.ಜಿಗಳಷ್ಟು ಮಾತ್ರ ಮಾಂಸವನ್ನು ತಿನ್ನುತ್ತಾನೆ. ಅಂದರೆ ವಾರ್ಷಿಕ ಲೆಕ್ಕಾಚಾರದಲ್ಲಿ ಬಾಂಗ್ಲಾದಲ್ಲಿ ಮಾಂಸಹಾರಕ್ಕಿಂತ ಸಸ್ಯಹಾರವನ್ನೇ ಹೆಚ್ಚು ಸೇವಿಸುತ್ತಾರೆ ಎಂದಾಯಿತು. ಅದೇ ರೀತಿ ಭಾರತೀಯನೊಬ್ಬ ವರ್ಷಕ್ಕೆ ಸೇವಿಸುವ ಒಟ್ಟು ಮಾಂಸಾಹಾರ ಕೇವಲ 4.4 ಕೆ.ಜಿ ಮಾತ್ರ ಎಂದು ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ತಿಳಿಸಿದೆ.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ