• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Artificial Sweeteners: ಕೃತಕ ಸಿಹಿಕಾರಕಗಳನ್ನು ಬಳಸುತ್ತೀರಾ? ಎಚ್ಚರ, ವಿಶ್ವಸಂಸ್ಥೆಯಿಂದಲೇ ಸಿಕ್ಕಿದೆ ವಾರ್ನಿಂಗ್

Artificial Sweeteners: ಕೃತಕ ಸಿಹಿಕಾರಕಗಳನ್ನು ಬಳಸುತ್ತೀರಾ? ಎಚ್ಚರ, ವಿಶ್ವಸಂಸ್ಥೆಯಿಂದಲೇ ಸಿಕ್ಕಿದೆ ವಾರ್ನಿಂಗ್

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ದೇಹದ ತೂಕವನ್ನು ನಿಯಂತ್ರಿಸಲು ಅಥವಾ ಸಾಂಕ್ರಾಮಿಕವಲ್ಲದ ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಕ್ಕರೆಗೆ ಬದಲಿಯಾಗಿ ಉತ್ಪನ್ನಗಳಲ್ಲಿ ಕೃತಕ ಸಿಹಿಕಾರಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

  • Share this:

ನಮ್ಮಲ್ಲಿ ಅನೇಕರು ಕೃತಕ ಸಿಹಿಕಾರಕಗಳನ್ನು (Artificial Sweetener) ಬಳಸುತ್ತಿರಬಹುದು. ಅದು ಸಕ್ಕರೆಗಿಂತ ಒಳ್ಳೆಯದು ಎಂದು ಭಾವಿಸುತ್ತಿರಬಹುದು. ಆದರೆ ನೀವು ಅಂದುಕೊಂಡಿರುವುದು ಸುಳ್ಳು. ವಿಶ್ವ ಆರೋಗ್ಯ ಸಂಸ್ಥೆಯು (World Health Organization) ಕೃತಕ ಸಿಹಿಕಾರಕಗಳು ಎಷ್ಟು ಅಪಾಯಕಾರಿ ಎಂಬುದನ್ನು ಹೇಳಿದೆ. ಸಾಂಕ್ರಾಮಿಕವಲ್ಲದ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಬಳಸುವಂತಹ ಕೃತಕ ಸಿಹಿಕಾರಕಗಳ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ. ಅಂತಹ ಸಕ್ಕರೆ (Sugar) ಪರ್ಯಾಯಗಳ ಬಳಕೆಯು ಅನಾರೋಗ್ಯಕರ ಪರಿಣಾಮಗಳನ್ನು ಬೀರುತ್ತದೆ ಎಂದು WHO ಹೇಳಿದೆ.


ದೇಹದ ತೂಕವನ್ನು ನಿಯಂತ್ರಿಸಲು ಅಥವಾ ಸಾಂಕ್ರಾಮಿಕವಲ್ಲದ ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಕ್ಕರೆಗೆ ಬದಲಿಯಾಗಿ ಉತ್ಪನ್ನಗಳಲ್ಲಿ ಕೃತಕ ಸಿಹಿಕಾರಕಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.


ಮರಣದ ಅಪಾಯ ಹೆಚ್ಚಿಸಬಹುದು ಕೃತಕ ಸಿಹಿಕಾರಕಗಳು


ಈ ಬಗ್ಗೆ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದ ಡಬ್ಲ್ಯೂಹೆಚ್‌ಒ, "ವಯಸ್ಕರು ಅಥವಾ ಮಕ್ಕಳಲ್ಲಿ ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಕ್ಕರೆ ರಹಿತ ಸಿಹಿಕಾರಕಗಳ (NSS) ಬಳಕೆಯು ಯಾವುದೇ ದೀರ್ಘಕಾಲೀನ ಪ್ರಯೋಜನವನ್ನು ನೀಡುವುದಿಲ್ಲ. ಲಭ್ಯವಿರುವ ಸಂಶೋಧನೆಗಳ ಆಧಾರದ ಮೇಲೆ ಈ ಶಿಫಾರಸು ಮಾಡಲಾಗಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.


ಇದನ್ನೂ ಓದಿ: ಯಾವುದೇ ಕಾರಣಕ್ಕೂ ಬೆಳಗ್ಗಿನ ತಿಂಡಿಗೆ ಈ ಹಣ್ಣುಗಳನ್ನು ತಿನ್ನಲೇಬಾರದು! ಯಾಕೆ ಗೊತ್ತಾ?


ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಲ್ಲಿ, ಲಭ್ಯವಿರುವ ಪುರಾವೆಗಳ ವಿಮರ್ಶೆಯ ಫಲಿತಾಂಶಗಳು ಸಕ್ಕರೆ ರಹಿತ ಸಿಹಿಕಾರಕಗಳ (NSS) ನ ದೀರ್ಘಾವಧಿಯ ಬಳಕೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಹೇಳಲಾಗಿದೆ. ಉದಾಹರಣೆಗೆ ಟೈಪ್ 2 ಮಧುಮೇಹ, ಹೃದಯರಕ್ತನಾಳದ ಕಾಯಿಲೆಗಳು ಮತ್ತು ವಯಸ್ಕರಲ್ಲಿ ಮರಣದ ಅಪಾಯವನ್ನು ಇದು ಹೆಚ್ಚಿಸಬಹುದು ಎಂದು ಹೇಳಲಾಗಿದೆ.


ನೈಸರ್ಗಿಕ ಸಿಹಿ ತಿಂದರೆ ಒಳ್ಳೆಯದು


" ಸಕ್ಕರೆಯನ್ನು ಸಕ್ಕರೆ ರಹಿತ ಸಿಹಿಕಾರಕಗಳ ( NSS) ನೊಂದಿಗೆ ಬದಲಿಸುವುದು ದೀರ್ಘಾವಧಿಯಲ್ಲಿ ತೂಕ ನಿಯಂತ್ರಣಕ್ಕೆ ಸಹಾಯ ಮಾಡುವುದಿಲ್ಲ. ಜನರು ಸಿಹಿಯ ಸೇವನೆಯನ್ನು ಕಡಿಮೆ ಮಾಡಲು ಇತರ ಮಾರ್ಗಗಳನ್ನು ಪರಿಗಣಿಸಬೇಕು.


ಸಾಂಕೇತಿಕ ಚಿತ್ರ


ಉದಾಹರಣೆಗೆ ಹಣ್ಣುಗಳು ಅಥವಾ ಸಿಹಿಗೊಳಿಸದ ಆಹಾರ ಮತ್ತು ಪಾನೀಯಗಳಂತಹ ನೈಸರ್ಗಿಕವಾಗಿ ಕಂಡುಬರುವ ಸಕ್ಕರೆಗಳೊಂದಿಗೆ ಆಹಾರವನ್ನು ಸೇವಿಸುವುದು ಉತ್ತಮ. ಆದ್ದರಿಂದ ನೈಸರ್ಗಿಕವಾಗಿ ಕಂಡುಬರುವ ಸಕ್ಕರೆಯ ಸೇವನೆಯನ್ನು ಜನರು ರೂಢಿ ಮಾಡಿಕೊಳ್ಳಬೇಕು ಎಂಬುದಾಗಿ ಡಬ್ಲ್ಯೂಹೆಚ್‌ಒ ಪೌಷ್ಟಿಕಾಂಶ ಮತ್ತು ಆಹಾರ ಸುರಕ್ಷತೆಯ ನಿರ್ದೇಶಕರಾದ ಫ್ರಾನ್ಸೆಸ್ಕೊ ಬ್ರಾಂಕಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಆರಂಭದಿಂದಲೇ ಸಿಹಿ ತಿನ್ನುವುದನ್ನು ಕಡಿಮೆ ಮಾಡಿ


ಅಲ್ಲದೇ ಎನ್ಎಸ್ಎಸ್ ಅಗತ್ಯ ಆಹಾರದ ಅಂಶಗಳಲ್ಲ. ಇವು ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿಲ್ಲ. ಜನರು ತಮ್ಮ ಆರೋಗ್ಯವನ್ನು ಸುಧಾರಿಸಲು ಜೀವನದ ಆರಂಭದಲ್ಲಿಯೇ ಆಹಾರದಲ್ಲಿ ಸಿಹಿಯನ್ನು ಸಂಪೂರ್ಣವಾಗಿ ಕಡಿಮೆ ಮಾಡಬೇಕು ಎಂದು ಹೇಳಲಾಗಿದೆ.


ಎಲ್ಲಾ ಕೃತಕ ಮತ್ತು ನೈಸರ್ಗಿಕವಾಗಿ ಸಂಗ್ರಹಿಸಿದ ಸಿಹಿಕಾರಕಗಳ ವಿರುದ್ಧ ಎಚ್ಚರಿಕೆಯನ್ನು ನೀಡಲಾಗಿದೆ. ಇವುಗಳನ್ನು ಸಕ್ಕರೆ ಎಂದು ವರ್ಗೀಕರಿಸಲಾಗಿಲ್ಲ. ಆದರೆ ಹಲವಾರು ತಯಾರಿಸಿದ ಆಹಾರಗಳು ಮತ್ತು ಪಾನೀಯಗಳಲ್ಲಿ ಇವು ಕಂಡುಬರುತ್ತವೆ.
ಇವುಗಳಿಗೆ ಈ ಶಿಫಾರಸು ಅನ್ವಯಿಸುವುದಿಲ್ಲ!


ಇನ್ನು, “ಟೂತ್‌ಪೇಸ್ಟ್, ಸ್ಕಿನ್ ಕ್ರೀಮ್ ಮತ್ತು ಔಷಧಿಗಳಂತಹ ವೈಯಕ್ತಿಕ ಆರೈಕೆ ಮತ್ತು ನೈರ್ಮಲ್ಯ ಉತ್ಪನ್ನಗಳಾದ ಎನ್‌ಎಸ್‌ಎಸ್ ಅಥವಾ ಕಡಿಮೆ ಕ್ಯಾಲೋರಿ ಸಕ್ಕರೆಗಳು ಮತ್ತು ಶುಗರ್‌ ಆಲ್ಕೋಹಾಲ್‌ಗಳಿಗೆ (ಪಾಲಿಯೊಲ್‌ಗಳು) ಈ ಶಿಫಾರಸು ಅನ್ವಯಿಸುವುದಿಲ್ಲ. ಇದು ಸಕ್ಕರೆಗಳು ಅಥವಾ ಸಕ್ಕರೆ ಉತ್ಪನ್ನಗಳಾದ ಕ್ಯಾಲೊರಿಗಳನ್ನು ಒಳಗೊಂಡಿರುತ್ತದೆ. ಆದ್ದರಿಂದ ಅವುಗಳನ್ನು NSS ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗಿದೆ.


ಒಟ್ಟಾರೆಯಾಗಿ ಕೃತಕ ಸಿಹಿಕಾರಗಳು ಇತ್ತೀಚಿಗೆ ಜನಪ್ರಿಯವಾಗಿರುವುದು ನಿಜ. ಅದರಂತೆಯೇ ಅದನ್ನು ತಿಂದರೆ ಸಕ್ಕರೆ ತಿಂದಂತಲ್ಲ... ಬದಲಾಗಿ ಇದು ಆರೋಗ್ಯ ಪ್ರಯೋಜನಗಳಣ್ನು ನೀಡುತ್ತದೆ ಎಂದು ಬಹಳಷ್ಟು ಜನರು ನಂಬಿದ್ದಾರೆ. ಆದರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಾದರೂ ಜನರು ಎಚ್ಚೆತ್ತುಕೊಳ್ಳಬೇಕಿದೆ.

top videos
    First published: