ವೈರಲ್​ ಆಗುತ್ತಿದೆ ಹೊಸ ಚಾಲೆಂಜ್: ಫ್ರೆಂಡ್ಸ್ ​ಮನಸ್ಸು ಮಾಡಿದ್ರೆ ಹಿಂಗೂ ಮಾಡ್ಬಹುದು

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಆದರೆ, ನಾವು-ನೀವುಗಳು ಸ್ವಾರ್ಥಕ್ಕಾಗಿ ಪೃಕೃತಿ ದೌರ್ಜನ್ಯ ಮಾಡ್ತಿದ್ದೇವೆ.

zahir | news18
Updated:March 15, 2019, 2:24 PM IST
ವೈರಲ್​ ಆಗುತ್ತಿದೆ ಹೊಸ ಚಾಲೆಂಜ್: ಫ್ರೆಂಡ್ಸ್ ​ಮನಸ್ಸು ಮಾಡಿದ್ರೆ ಹಿಂಗೂ ಮಾಡ್ಬಹುದು
@PetaPixel
  • News18
  • Last Updated: March 15, 2019, 2:24 PM IST
  • Share this:
ಸದ್ಯ ಈಗ ಸೋಷಿಯಲ್​​ ಮೀಡಿಯಾದಲ್ಲಿ  ಹ್ಯಾಷ್​ಟ್ಯಾಗ್ (#)​ ಇರುವ ಚಾಲೆಂಜ್​ಗಳದ್ದೇ ಕಾರುಬಾರು. #ಕೀಕೀ ಚಾಲೆಂಜ್​, #10 ಇಯರ್ಸ್​ ಚಾಲೆಂಜ್​​, #ಡಾನ್ಸ್, #ಫಿಟ್​ನೆಸ್​​ ಚಾಲೆಂಜ್​ ಹೀಗೆ ದಿನಕ್ಕೊಂದು ಚಾಲೆಂಜ್​ಗಳು ಸೋಷಿಯಲ್​ ಮೀಡಿಯಾದಲ್ಲಿ ನಡೀತಾನೆ ಇರುತ್ತದೆ. ಆದ್ರೀಗ ಮ್ಯಾಟ್ರೂ ಸೇಮ್,​ ಆದರೆ​ ಟಾಪಿಕ್ ಮಾತ್ರ​ ತುಂಬಾ ಡಿಫ್ರೆಂಟ್ ಮತ್ತು​ ಯೂಸ್​ಫುಲ್​.

ಹಾಗಿದ್ರೆ ಯಾವುದು ಆ ಚಾಲೆಂಜ್​ ಅಂತೀರಾ? ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರು ಗಲೀಜು, ಅಸ್ವಚ್ಛತೆ ತಾಂಡವಾಡುತ್ತಿದೆ. ಬರೀ ಪ್ಲಾಸ್ಟಿಕ್​, ಪೇಪರ್​ಗಳೇ ಕಾಣಿಸುತ್ತಿರುತ್ತದೆ. ಇಲ್ಲೇ ಇರೋದು ವಿಷಯ. ನೋಡೋದಕ್ಕೆ ಒಂದು ನಿಮಿಷ ಯೋಚಿಸಿ. ನಮ್ಮ ಭೂಮಿ ಮೇಲೆ ಇಷ್ಟೋಂದು ಕಸ ಹೇಗ್ಬಂತು? ಪ್ರಾಣಿಗಳು ತಂದು ಹಾಕಿದ್ದಾ? ಇಲ್ಲಾ ತನ್ ತಾನಾಗೆ ಬಂದು ಬಿತ್ತಾ? ಖಂಡಿತಾ ಇಲ್ಲ. ಯಾವ ಪ್ರಾಣಿನೂ ಇಲ್ಲಿ ಕಸ ತಂದು ಹಾಕಿಲ್ಲಾ ಅಥವಾ ತನ್ನಿಂತಾನೆ​ ಯಾವ ಕಸಾನೂ ಇಲ್ಲಿ ಬಂದು ಬಿದ್ದಿಲ್ಲ. ಪರಿಸರವನ್ನು ನೋಡೋದಕ್ಕು ಅಸಹ್ಯವಾಗೋ ರೀತಿಯಲ್ಲಿ ಇಷ್ಟು ಗಲೀಜು ಮಾಡಿರೋದು ನಾವು-ನೀವುಗಳೇ.

ಈಗ ಈ ಗಲೀಜಾಗಿರುವ ಜಾಗವನ್ನ ಸ್ವ ಇಚ್ಛೆಯಿಂದ, ಬೇರೆಯವರಿಗೆ ಅಲ್ಲಾ, ನಮ್ಗೆ ಒಳ್ಳೆದಾಗ್ಲಿ ಅಂತ ಸ್ವಚ್ಛಗೊಳಿಸೋದೆ ಸದ್ಯಕ್ಕೆ ಟ್ರೆಂಡಿಂಗ್​ನಲ್ಲಿರುವ ಚಾಲೆಂಜ್​. ಈ ಚಾಲೆಂಜ್​ಗೆ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಒಳ್ಳೆ ರೆಸ್ಪಾನ್ಸ್​ ಕೂಡ ವ್ಯಕ್ತವಾಗ್ತಿದೆ.

ಇಷ್ಟು ದಿನ ನಾವು-ನೀವು ನೋಡಿದ್ದಂತಹ ಎಲ್ಲಾ ಥರಹದ ಚಾಲೆಂಜ್​​ಗಿಂತ ಈ ಚಾಲೆಂಜ್​ ಭಿನ್ನವಾಗಿದೆ. ಒಂದು ರೀತಿ ಹೇಳಬೆಕಂದ್ರೆ, ಈ ಚಾಲೆಂಜ್​ ಆಕ್ಸೆಪ್ಟ್​ ಮಾಡೋದ್ರಿಂದ ಒಂದ್ಕಡೆ ಪೃಕೃತಿಯ ರಕ್ಷಣೆ, ಮತ್ತೊಂದ್ಕಡೆ ಸಮಾಜಕ್ಕೆ ಒಂದೊಳ್ಳೆ ಕೊಡುಗೆಯನ್ನ ಕೊಟ್ಟು, ಇತರರಿಗೆ ಮಾದರಿಯಾಗುವಂತಿದೆ. ಸದ್ಯ ಈಗ ಈ ಚಾಲೆಂಜ್​ ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕ ಹವಾ ಎಬ್ಬಿಸಿದೆ.

ಈಗ ಸೋಷಿಯಲ್ ಮೀಡಿಯಾದಲ್ಲಿ ಬಹುಮುಖ್ಯ ಗುಣವೆ ವ್ಯಕ್ತಿಗತ ತೋರಿಕೆ. ಹಾಗಾಗಿ ಈ ಚಾಲೆಂಜ್​ಗಳು ಅಂತಾ ಬಂದಾಗ, ಅದನ್ನ ಆಕ್ಸೆಪ್ಟ್​ ಮಾಡಿ ಫಾಲೋ ಮಾಡೋರ ಸಂಖ್ಯೆ ಸಹಜವಾಗೆ ಹೆಚ್ಚಾಗಿದೆ. ಚಾಲೆಂಜ್​ ಹಾಕೋರು ಸೆಲೆಬ್ರೆಟಿಗಳು, ಸಾಮಾನ್ಯ​ ವ್ಯಕ್ತಿಗಳೇ ಆದರೂ, ನಮ್ಮ ಯುವ ಸಮೂಹ ಮಾತ್ರ​ ಚಾಲೆಂಜ್​ಗಳನ್ನ ಸ್ವೀಕರಿಸುತ್ತಿದ್ದಾರೆ. ನಮ್ದು ಒಂದಿರ್ಲಿ ಅಂತ ವಿಡಿಯೋ ಮಾಡಿ, ಮತ್ತೊಬ್ಬರಿಗೆ ಚಾಲೆಂಜ್​ ಹಾಕಿ ವಿಡಿಯೋ ಅಪ್ಲೋಡ್​ ಮಾಡ್ತಾರೆ.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಆದರೆ, ನಾವು-ನೀವುಗಳು ಸ್ವಾರ್ಥಕ್ಕಾಗಿ ಪೃಕೃತಿ ದೌರ್ಜನ್ಯ ಮಾಡ್ತಿದ್ದೇವೆ. ಹೀಗಾಗಿ ಪೃಕೃತಿ ಮಾತೆ ನಮ್ಮ ಮೇಲೆ ನೇರವಾಗೆ ಅಲ್ಲಲ್ಲಿ ಕಾಡ್ಗಿಚ್ಚು, ಬರಗಾಲ, ನೀರಿನ ಸಮಸ್ಯೆಯನ್ನೊಡ್ಡಿ, ನಮಗೆ ಕಾಟ, ದೇವರಿಗೆ ಆಟ ಅನ್ನೋ ಹಾಗಾಗಿದೆ.  ಅದೇನೆ ಇರಲಿ ನಾವೇನೆ ಮಾಡೋಕೆ ಹೊರಟರು ಅದರಲ್ಲಿ ಒಂದು ಉತ್ತಮ ಸಂದೇಶವಿರಬೇಕು, ಅನ್ನೋದಕ್ಕೆ ಈ #Trashtag ​ ಅನ್ನೋ ಹೊಸ ಚಾಲೆಂಜ್​ ಒಂದು ಉದಾಹರಣೆ. ಆದಷ್ಟು ನಮ್ಮ ಯೂತ್ಸ್​ ಸಮಯ ಹೊಂದಿಸಿ​, ಡೇಟಾ ವೇಸ್ಟ್​ ಮಾಡೋದನ್ನ ಬಿಟ್ಟುಈ ರೀತಿ ಮಾದರಿಯುತ, ಆದರ್ಶಯುತ ಕೆಲಸಗಳನ್ನ ಮಾಡಿದಾಗ ನಮ್ಮ ದೇಶ ಕಸ ರಹಿತ, ಸಂದೇಶ ಸಹಿತವಾಗಿ ಇತರೇ ದೇಶಗಳಿಗೆ ಮಾದರಿಯಾಗೋದರಲ್ಲಿ ಅನುಮಾನವಿಲ್ಲ ಅಂತ ಹೇಳಬಹುದು.-ವಿದ್ಯಾ, ನ್ಯೂಸ್ 18 ಕನ್ನಡ

First published:March 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ