ಥೈರಾಯ್ಡ್ – ಭಾರೀ ಪರಿಣಾಮ ಬೀರುವ ಒಂದು ಸಣ್ಣ ಗ್ರಂಥಿ

Thyroid: ಯುವತಿಯರಲ್ಲಿ, ಇದು 72.5% ಕ್ಕಿಂತ ಹೆಚ್ಚು ಮಹಿಳೆಯರಲ್ಲಿ ಹೆಚ್ಚಿನ/ ದೀರ್ಘಕಾಲದ ರಕ್ತಸ್ರಾವಕ್ಕೆ ಕಾರಣವಾಗುತ್ತದೆ, ಮತ್ತು ಹಲವರಿಗೆ ಮೊಡವೆಗಳು, ಮುಖದ ಕೂದಲು, ಮಧುಮೇಹ ಹೆಚ್ಚಳದ ಅಪಾಯದೊಂದಿಗೆ ಅನಿಯಮಿತ ಋತುಸ್ರಾವ ಕೂಡಾ ಉಂಟಾಗುತ್ತದೆ.

ಥೈರಾಯ್ಡ್

ಥೈರಾಯ್ಡ್

  • Share this:
    ನಮ್ಮ ಜೀವನದಲ್ಲಿ ಸಣ್ಣ ಸಣ್ಣ ಸಂಗತಿಗಳೇ ಆಗಾಗ ಭಾರೀ ವ್ಯತ್ಯಾಸವನ್ನು ಮಾಡಿಬಿಡುತ್ತವೆ. ಉಧಾಹರಣೆಗೆ ನಮ್ಮ ಥೈರಾಯ್ಡ್ ಗ್ರಂಥಿಯನ್ನೇ ತೆಗೆದುಕೊಳ್ಳಿ. ಒಂದು ಚಿಟ್ಟೆಯಾಕಾರದ ಅಂಗವಾದ ಇದು ಅನೇಕ ದೈಹಿಕ ಕಾರ್ಯಗಳನ್ನು ನಿರ್ವಹಿಸುವ ನಿರ್ದಿಷ್ಟ ಪ್ರಮಾಣದ ಹಾರ್ಮೋನ್ ಅನ್ನು ಉತ್ಪಾದಿಸುವ ಜವಾಬ್ದಾರಿಯನ್ನು ಹೊಂದಿದೆ. ಇದರ ಯಾವುದೇ ರೀತಿಯ ಅಸಮತೋಲನವು ನಮ್ಮ ದೇಹದಲ್ಲಿನ ಅನೇಕ ರೋಗಲಕ್ಷಣಗಳಿಗೆ ಕಾರಣವಾಗಬಹುದು.1 ಈ ಹಾರ್ಮೋನ್‌ಗಳ ಅಧಿಕ ಉತ್ಪಾದನೆಯು ಹೈಪರ್ ಥೈರಾಯ್ಡಿಸಮ್‌ಗೆ ಕಾರಣವಾದರೆ ಕಡಿಮೆ ಉತ್ಪಾದನೆಯು ಹೈಪೋಥೈರಾಯ್ಡಿಸಮ್‌ಗೆ ಕಾರಣವಾಗುತ್ತದೆ.

    ಭಾರತದಲ್ಲಿ ಬಹಳ ಸಾಮಾನ್ಯವಾಗಿ ಹೈಪೋಥೈರಾಯ್ಡಿಸಮ್ ಕಂಡುಬರುತ್ತಿದೆ. ನಿಜ ಹೇಳಬೇಕೆಂದರೆ, 11% ವಯಸ್ಕರು ಹೈಪೋಥೈರಾಯ್ಡಿಸಮ್‌ನಿಂದ ಬಳಲುತ್ತಿದ್ದರೆ, 8% ಜನರು ಸಬ್‌ಕ್ಲಿನಿಕಲ್ ಹೈಪೋಥೈರಾಯ್ಡಿಸಮ್‌ನಿಂದ ಬಳಲುತ್ತಿದ್ದಾರೆ4

    ಹೈಪೋಥೈರಾಯ್ಡಿಸಮ್ ಬಗ್ಗೆ ನಾವು ಸ್ವಲ್ಪ ಆಳವಾಗಿ ಅಧ್ಯಯನ ಮಾಡಿ, ಅದನ್ನು ವಿವರವಾಗಿ ಅರ್ಥಮಾಡಿಕೊಳ್ಳೋಣ

    ಹೈಪೋಥೈರಾಯ್ಡಿಸಮ್

    ಈ ಮೊದಲೇ ಹೇಳಿದಂತೆ, ಥೈರಾಯ್ಡ್ ಗ್ರಂಥಿಯು ಸಾಕಷ್ಟು ಹಾರ್ಮೋನ್ ಅನ್ನು ಉತ್ಪಾದಿಸದೇ ಇದ್ದಾಗ ಇದು ಸಂಭವಿಸುತ್ತದೆ. ಇದರಿಂದ ಮೆಟಬೊಲಿಸಂ ಸೇರಿದಂತೆ ದೇಹದ ಕಾರ್ಯಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. 2

    ಸಬ್‌ಕ್ಲಿನಿಕಲ್ ಹೈಪೋಥೈರಾಯ್ಡಿಸಮ್‌ನಲ್ಲಿ, ರಕ್ತದಲ್ಲಿನ ಥೈರಾಯ್ಡ್ ಹಾರ್ಮೋನ್ ಮಟ್ಟವು ಅಗತ್ಯವಾದ ಸಾಮಾನ್ಯ ಮಟ್ಟಕ್ಕಿಂತ ಸ್ವಲ್ಪ ಕಡಿಮೆ ಇರುತ್ತದೆ. ಹೈಪೋಥೈರಾಯ್ಡಿಸಮ್‌ನಂತೆ ಇದರಲ್ಲಿ ಯಾವುದೇ ಗುಣಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಅಂತಹ ಸಂದರ್ಭದಲ್ಲಿ, ಒಬ್ಬ ವ್ಯಕ್ತಿಗೆ ತನ್ನ ಸ್ಥಿತಿಯ ಬಗ್ಗೆ ಅರಿವಿಲ್ಲದೇ ಇರಬಹುದು. 3

     ಹೈಪೋಥೈರಾಯ್ಡಿಸಮ್‌ನ ಗುಣಲಕ್ಷಣಗಳು

    ಜನರು ಸಾಮಾನ್ಯವಾಗಿ ಇತರೆ ರೋಗಲಕ್ಷಣಗಳನ್ನು ಹೈಪೋಥೈರಾಯ್ಡಿಸಮ್ ಗುಣಲಕ್ಷಣಗಳೆಂದು ತಪ್ಪಾಗಿ ಭಾವಿಸುತ್ತಾರೆ. ಆದರೂ, ಕೆಲವೊಮ್ಮೆ ಹಲವಾರು ವರ್ಷಗಳ ಅವಧಿಯಲ್ಲಿ ಈ ರೋಗಲಕ್ಷಣಗಳು ಕ್ರಮೇಣವಾಗಿ ಬೆಳೆಯುತ್ತವೆ ಎಂಬುದನ್ನು ನಾವು ತಿಳಿದಿರಬೇಕು. ದಣಿವು, ತೂಕ ಹೆಚ್ಚಾಗುವುದು, ದುಃಖ ಅಥವಾ ಖಿನ್ನತೆ, ದೀರ್ಘ ಮತ್ತು/ ಅಥವಾ ಆಗಾಗ್ಗೆ ಆಗುವ ಋತುಸ್ರಾವ, ಬಂಜೆತನ, ಲೈಂಗಿಕ ನಿರಾಸಕ್ತಿ, ಹೆಚ್ಚು ಕೂದಲು ಉದುರುವುದು, ಹೆಚ್ಚು ನಿದ್ರೆ ಇವು ಹೈಪೋಥೈರಾಯ್ಡಿಸಮ್‌ನ ಕೆಲವು ಸಾಮಾನ್ಯ ಚಿಹ್ನೆಗಳು ಮತ್ತು ಲಕ್ಷಣಗಳಾಗಿವೆ. 2,5

    ಹೈಪೋಥೈರಾಯ್ಡಿಸಮ್‌ಗೆ ಮಹಿಳೆಯರೇ ಹೆಚ್ಚು ತುತ್ತಾಗುತ್ತಾರೆ

    ಹೌದು, ಮಹಿಳೆಯರಲ್ಲಿ ಹೈಪೋಥೈರಾಯ್ಡಿಸಮ್ ಹೆಚ್ಚಾಗಿ ಕಂಡುಬರುತ್ತದೆ ಎಂಬುವುದು ಸತ್ಯಸಂಗತಿ, ಪುರುಷರಿಗಿಂತ ಮಹಿಳೆಯರಲ್ಲಿ 5 ರಿಂದ 10 ಪಟ್ಟು ಈ ಸಮಸ್ಯೆ ಕಂಡುಬರುತ್ತದೆ. ನಿಜ ಹೇಳಬೇಕೆಂದರೆ, ಇದು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರ ಮೇಲೆ ಪರಿಣಾಮ ಬೀರುವ ಎಂಡೋಕ್ರೈನ್ ಡಿಸಾರ್ಡರ್ (ಗ್ರಂಥಿಗಳಿಗೆ ಸಂಬಂಧಿಸಿದ ಅಸ್ವಸ್ಥತೆ) ಯ ಎರಡನೆಯ ಸಾಮಾನ್ಯ ವಿಧವಾಗಿದೆ. ಬರಿ ಅಷ್ಟೇ ಅಲ್ಲ. ಇದು ಎಲ್ಲಾ ವಯಸ್ಸಿನ ಮಹಿಳೆಯರ ಮೇಲೂ ಪರಿಣಾಮ ಬೀರಬಹುದು! ಅಲ್ಲದೇ ವಯಸ್ಸು ಹೆಚ್ಚಾದಂತೆ, ಗರ್ಭಧಾರಣೆ ಸಮಯದಲ್ಲಿ, ಪ್ರಸವಾನಂತರದಲ್ಲಿ ಮತ್ತು ಮುಟ್ಚು ನಿಲ್ಲುವ ಕಾಲದಲ್ಲಿ, ಮಹಿಳೆಯರಲ್ಲಿ ಈ ಹೈಪೋಥೈರಾಯ್ಡಿಸಮ್ ಬೆಳೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ.

    ಎಲ್ಲಾ ವಯಸ್ಸಿನ ಮಹಿಳೆಯರಿಗೂ ಅಪಾಯ ಇದ್ದೇ ಇದೆ

    ಮಹಿಳೆಯರಲ್ಲಿ ಹೈಪೋಥೈರಾಯ್ಡಿಸಮ್/ ಸಬ್‌ಕ್ಲಿನಿಕಲ್ ಹೈಪೋಥೈರಾಯ್ಡಿಸಮ್ ಹಲವಾರು ತೊಂದರೆಗಳನ್ನು ಉಂಟುಮಾಡುತ್ತದೆ. ಬೇರೆ ರೀತಿಯ ಆರೋಗ್ಯ ಸಮಸ್ಯೆಗಳ ಹೊರತಾಗಿ, ಇದು ಮಹಿಳೆಯರ ಸಂತಾನೋತ್ಪತ್ತಿ ಕಾರ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇಂತಹ ತೊಡಕುಗಳ ತೀವ್ರತೆಯು ಮಹಿಳೆಯ ವಯಸ್ಸು ಮತ್ತು ಜೀವನದ ಯಾವ ಹಂತದಲ್ಲಿದ್ದಾರೆ ಎಂಬುದರ ಆಧಾರದ ಮೇಲೆ ಬದಲಾಗಬಹುದು.3,5,6a,7,8,9,10

    ಹಲವಾರು ಅಧ್ಯಯನಗಳನ್ನು ನಡೆಸಲಾಗಿದ್ದು, ಅದರ ಮೂಲಕ ಈ ಕೆಳಗಿನ ಫಲಿತಾಂಶಗಳನ್ನು ಪಡೆದುಕೊಳ್ಳಲಾಗಿದೆ:

    - ಇದರಿಂದಾಗಿ ಹದಿಹರೆಯದ ಹೆಣ್ಣುಮಕ್ಕಳಲ್ಲಿ ಮೈನರೆಯುವಿಕೆ ತಡವಾಗಬಹುದು ಅಥವಾ ಸ್ತನಗಳು ಮತ್ತು ಜನನಾಂಗಗಳು ಪೂರ್ಣವಾಗಿ ಬೆಳವಣಿಗೆಯಾಗದೇ ಇರಬಹುದು.

    -ಯುವತಿಯರಲ್ಲಿ, ಇದು 72.5% ಕ್ಕಿಂತ ಹೆಚ್ಚು ಮಹಿಳೆಯರಲ್ಲಿ ಹೆಚ್ಚಿನ/ ದೀರ್ಘಕಾಲದ ರಕ್ತಸ್ರಾವಕ್ಕೆ ಕಾರಣವಾಗುತ್ತದೆ, ಮತ್ತು ಹಲವರಿಗೆ ಮೊಡವೆಗಳು, ಮುಖದ ಕೂದಲು, ಮಧುಮೇಹ ಹೆಚ್ಚಳದ ಅಪಾಯದೊಂದಿಗೆ ಅನಿಯಮಿತ ಋತುಸ್ರಾವ ಕೂಡಾ ಉಂಟಾಗುತ್ತದೆ.

    -ವಯಸ್ಕ ಮಹಿಳೆಯರಲ್ಲಿ, 10 ರಲ್ಲಿ 3 ಜನರಿಗೆ ಬಂಜೆತನ ಉಂಟಾಗುವ ಸಾಧ್ಯತೆಯಿದೆ. ಒಂದು ವೇಳೆ ನೀವು ಗರ್ಭವತಿಯಾಗಿದ್ದರೆ, ಇದರಿಂದ ಗರ್ಭಪಾತ, ಅವಧಿಪೂರ್ವ ಜನನ ಮತ್ತು ಗರ್ಭಾಶಯದಲ್ಲಿ ಮಗು ಮರಣ ಹೊಂದುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. 13% ಕ್ಕಿಂತ ಹೆಚ್ಚಿನ ಗರ್ಭವತಿ ಮಹಿಳೆಯರು ಹೈಪೋಥೈರಾಯ್ಡಿಸಮ್‌ನಿಂದ ಬಳಲುತ್ತಿದ್ದಾರೆ.

    -86% ವೃದ್ಧ ಮಹಿಳೆಯರಲ್ಲಿ ಇದರಿಂದಾಗಿ ಮಧುಮೇಹದ ಅಪಾಯ ಹೆಚ್ಚಳವಾಗುತ್ತದೆ, 60% ಜನರಲ್ಲಿ ರಕ್ತದೊತ್ತಡದ ಸಮಸ್ಯೆ ಹೆಚ್ಚಾಗಿದೆ, ಮತ್ತು 33% ರೋಗಿಗಳು ತಮ್ಮ ರಕ್ತದಲ್ಲಿ ಲಿಪಿಡ್ ಹೆಚ್ಚಾದ ಅನುಭವ ಹೊಂದಿದ್ದಾರೆ

    -ಇದನ್ನು ಹೊರತುಪಡಿಸಿ, 60% ಕ್ಕಿಂತ ಹೆಚ್ಚಿನ ಹೈಪೋಥೈರಾಯ್ಡಿಸಮ್ ರೋಗಲಕ್ಷಣಗಳನ್ನು ಹೊಂದಿರುವ ಜನರಲ್ಲಿ ಖಿನ್ನತೆಯ ಲಕ್ಷಣಗಳನ್ನು ಹೊಂದಿರುವುದು ಕಂಡುಬಂದಿದೆ.

    ಆದ್ದರಿಂದ, ಜಗತ್ತಿನಾದ್ಯಂತ ವೈದ್ಯಕೀಯ ಸಂಘಗಳು ಮತ್ತು ಮಾರ್ಗಸೂಚಿಗಳು ಶಿಫಾರಸು ಮಾಡುವ ಪ್ರಕಾರ, ಆದಷ್ಟು ತ್ವರಿತವಾಗಿ ಹೈಪೋಥೈರಾಯ್ಡಿಸಮ್ ಅನ್ನು ಪತ್ತೆ ಹಚ್ಚಲು ಮತ್ತು ಅದಕ್ಕೆ ಚಿಕಿತ್ಸೆ ನೀಡಿ ಗುಣಪಡಿಸಲು ಸೂಕ್ತವಾದ ಮತ್ತು ಸಮಯಕ್ಕೆ ಸರಿಯಾದ ಥೈರಾಯ್ಡ್ ಫಂಕ್ಷನ್‌ನ ಟೆಸ್ಟಿಂಗ್/ ಸ್ಕ್ರೀನಿಂಗ್ (ಥೈರಾಯ್ಡ್ ಹಾರ್ಮೋನ್‌ಗಳ ಮಟ್ಟ) ಮಾಡಿಸುವುದು ಒಳ್ಳೆಯದು. 5,6,18,19,20,21,22

    ಯಾರು ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು:

    • 35 ವರ್ಷ ವಯಸ್ಸಿನ ಮಹಿಳೆಯರು ಮತ್ತು ಆನಂತರ ಪ್ರತಿ 5 ವರ್ಷಕ್ಕೊಮ್ಮೆ

    • ಬಂಜೆತನಕ್ಕೆ ಚಿಕಿತ್ಸೆ ಮಡೆಯಬೇಕಾಗಿರುವ ಎಲ್ಲರೂ.

    • ಎಲ್ಲಾ ಗರ್ಭಿಣಿ ಮಹಿಳೆಯರು

    • ಮುಟ್ಟು ನಿಲ್ಲುವ ವಯಸ್ಸಿನ ಎಲ್ಲಾ ಮಹಿಳೆಯರು ಮತ್ತು ಮುಟ್ಟು ನಿಂತ ಮಹಿಳೆಯರು

    • ಮಧುಮೇಹ ಮತ್ತು ಹೆಚ್ಚಿನ ರಕ್ತದೊತ್ತಡದ ತೊಂದರೆ ಇರುವವರು

    • ಲಿಪಿಡ್ ಡಿಸಾರ್ಡರ್ (ರಕ್ತದಲ್ಲಿ ಕೊಬ್ಬು) ರೋಗಿಗಳು ಚಿಕಿತ್ಸೆಗಿಂತಲೂ ಮೊದಲು


     ಹೈಪೋಥೈರಾಯ್ಡಿಸಮ್‌ನ ರೋಗಲಕ್ಷಣಗಳು ಸ್ಥಿರವಾಗಿಲ್ಲ ಅಥವಾ ನಿರ್ದಿಷ್ಟವಾಗಿಲ್ಲ. ಆದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ರೋಗಲಕ್ಷಣಗಳು ಉಲ್ಬಣಗೊಳ್ಳಬಹುದು ಹಾಗೆಯೇ ಇನ್ನೂ ಹೆಚ್ಚಿನ ತೊಂದರೆಗಳಿಗೆ ಕಾರಣವಾಗಬಹುದು.  ಆದ್ದರಿಂದ ಮನಸ್ಸಿನಲ್ಲಿ ಯಾವುದೇ ರೀತಿಯ ಸಂದೇಹ ಇಟ್ಟುಕೊಳ್ಳದೆ ಸರಳ ರಕ್ತ ಪರೀಕ್ಷೆಯ ಸಹಾಯದಿಂದ ಪ್ರತಿಯೊಬ್ಬ ಮಹಿಳೆಯು ತನ್ನನ್ನು ತಾನೇ ಪರೀಕ್ಷಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. 

    ಸಂತೋಷದ ಸಂಗತಿಯೆಂದರೆ ಈ ರೋಗಲಕ್ಷಣಗಳನ್ನು ಚಿಕಿತ್ಸೆಯ ಮೂಲಕ ಸರಿಪಡಿಸಬಹುದು. ನಿಮಗೆ ಥೈರಾಯ್ಡ್ ಸಮಸ್ಯೆ ಇರುವ ಲಕ್ಷಣಗಳಿದ್ದರೆ ಆದಷ್ಟು ಬೇಗ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

    ಇದು ಒಂದು ಸಹಭಾಗಿತ್ವದ ಪೋಸ್ಟ್ ಆಗಿದೆ.

     

    Disclaimer:

    ** This is in partnership with Abbott India, written by Dr Mahesh DM, MD DM Endo.



    Information appearing in this material is for general awareness only and does not constitute any medical advice. Please consult your doctor for any questions or concerns you may have regarding your condition.

     

    References:

    1. org [Internet]. Cologne, Germany: Institute for Quality and Efficiency in Health Care (IQWiG); 2006-. How does the thyroid gland work? 2010 Nov 17 [Updated 2018 Apr 19].Available from: https://www.ncbi.nlm.nih.gov/books/NBK279388/.

    2. Thyroid disease[Internet]. Available at: https://www.womenshealth.gov/a-z-topics/thyroid-disease. Accessed on Aug 15, 2020.

    3. Livingston EH. Subclinical Hypothyroidism. 2019;322(2):180.

    4. Indian Journal of Endocrinology & Metabolism / Jul – Aug 2013 / Vol -17 / Issue 4

    5. Dunn D, Turner C. Hypothyroidism in Women. Nurs Womens Health. 2016;20(1):93-98.

    6. Sanyal D, Raychaudhuri M. Hypothyroidism and obesity: an intriguing link. Indian J Endocrinol Metab. (2016) 20:554–7.

    7. Weber G, Vigone MC, Stroppa L, Chiumello G. Thyroid function and puberty. J Pediatr Endocrinol Metab. 2003;16 Suppl 2:253-257.

    8. Fatima M, Amjad S, Sharaf Ali H Sr, et al. Correlation of Subclinical Hypothyroidism With Polycystic Ovary Syndrome (PCOS). Cureus. 2020;12(5):e8142.

    9. Polycystic ovarian syndrome[Internet]. Available at: https://www.womenshealth.gov/a-z-topics/polycystic-ovary-syndrome. Accessed on Aug 15, 2020.

    10. Karaca N, Akpak YK. Thyroid disorders and fertility. Int J Res Med Sci. 2015;3: 1299-304.

    11. Ramya MR, Parvathavarthini, Savery D, et al. Menstrual disorders associated with thyroid dysfunction. Int J Reprod Contracept Obstet Gynecol. 2017 Nov;6(11):5113-5117.

    12. Shanmugham D, Natarajan S, Karthik A. Prevalence of thyroid dysfunction in patients with polycystic ovarian syndrome: A cross sectional study. Int J Reprod Contracept Obstet Gynecol. 2018;7:3055-9.

    13. Pushpagiri N, Gracelyn LJ, Nagalingam S. Prevalence of subclinical and overt hypothyroidism in infertile women. Int J Reprod Contracept Obstet Gynecol. 2015;4(6):1733-8.

    14. Dhanwal DK, Bajaj S, Rajput R, et al. Prevalence of hypothyroidism in pregnancy: An epidemiological study from 11 cities in 9 states of India. Indian J Endocrinol Metab. 2016;20(3):387-390.

    15. Deshmukh V, Farishta F, Bhole M. Thyroid dysfunction in patients with metabolic syndrome: a cross-sectional, epidemiological, Pan-India study. International journal of endocrinology. 2018;2018.

    16. A Study of Cardiovascular Changes in Newly Detected Hypothyroid Patients. MVP Journal of Medical Sciences. July-December 2017;4(2): 102–106.

    17. Hypothyroidism: a booklet for patients and their families[Internet]. Available at: https://www.thyroid.org/wp-content/uploads/patients/brochures/Hypothyroidism_web_booklet.pdf. Accessed on Aug 15, 2020.

    18. Alexander EK, Pearce EN, Brent GA, et al. 2017 Guidelines of the American Thyroid Association for the Diagnosis and Management of Thyroid Disease During Pregnancy and the Postpartum. Thyroid. 2017;27(3):315-89.

    19. Talwalkar P, Deshmukh V, Bhole M. Prevalence of hypothyroidism in patients with type 2 diabetes mellitus and hypertension in India: a cross-sectional observational study. Diabetes Metab Syndr Obes. 2019;12:369-376.

    20. FOGSI: Good Clinical Practice Recommendations on preconception care[Internet]. Available at: https://www.fogsi.org/wp-content/uploads/2016/09/FOGSI-PCCR-Guideline-Booklet-Orange.pdf. Accessed on Aug 17, 2020.

    21. Willard DL, Leung AM, Pearce EN. Thyroid function testing in patients with newly diagnosed hyperlipidemia. JAMA Intern Med. 2014;174(2):287-289.

    22. Slopien R, Owecki M, Slopien A, et al. Climacteric symptoms are related to thyroid status in euthyroid menopausal women. J Endocrinol Invest. 2020; 43(1):75–80.

    23. Hypothyroidism[Internet]. Available at: http://www.thyroid.org/wp-content/uploads/patients/brochures/ata-hypothyroidism-brochure.pdf. Accessed on Aug 15, 2020.

    24. Kumar P, Khandelwal D, Mittal S, et al. Knowledge, Awareness, Practices and Adherence to Treatment of Patients with Primary Hypothyroidism in Delhi. Indian J Endocrinol Metab. 2017;21(3):429-433.

    25. Hypothyroidism[Internet]. Available at: https://www.niddk.nih.gov/health-information/endocrinediseases/hypothyroidism#:~:text=Hypothyroidism%2C%20also%20called%20underactive%20thyroid,the%20front%20of%20your%20neck. Accessed on Aug 15, 2020.

    Published by:Harshith AS
    First published: