HOME » NEWS » Lifestyle » THE TEN STEP KOREAN SKIN CARE ROUTINE STG HG

ಕೊರಿಯನ್ನರ ಸೌಂದರ್ಯದ ಹತ್ತು ಗುಟ್ಟುಗಳನ್ನು ಬಲ್ಲಿರಾ? ಇಲ್ಲಿ ತಿಳಿದುಕೊಳ್ಳಿ!

Beauty Tips: ನಮಗೆಲ್ಲಾ, ಕ್ಲೆನ್ಸಿಂಗ್, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್ ಎಂಬ ಮೂರು ಹಂತದ ಚರ್ಮದ ಆರೈಕೆಯ ಕ್ರಮಗಳು ತಿಳಿದೇ ಇದೆ. ಆದರೆ ಇದನ್ನೂ ಹೊರತುಪಡಿಸಿ, ಎಸೆನ್ಸ್‌, ಶೀಟ್‍ಮಾಸ್ಕ್‌ ಮತ್ತು ಸೆರಮ್‍ಗಳನ್ನು ಬಳಸುವ ಚರ್ಮದ ಆರೈಕೆಯ ಕ್ರಮಗಳು ಕೂಡ ಚಾಲ್ತಿಯಲ್ಲಿವೆ.

news18-kannada
Updated:June 9, 2021, 4:38 PM IST
ಕೊರಿಯನ್ನರ ಸೌಂದರ್ಯದ ಹತ್ತು ಗುಟ್ಟುಗಳನ್ನು ಬಲ್ಲಿರಾ? ಇಲ್ಲಿ ತಿಳಿದುಕೊಳ್ಳಿ!
Han Ga-in
  • Share this:

ಆರೋಗ್ಯಕರ ಮತ್ತು ಹೊಳೆಯುವ ತ್ವಚೆಯ ಬಗ್ಗೆ ಕೊರಿಯನ್ನರಿಗೆ ಇರುವ ಅತಿ ವ್ಯಾಮೋಹ ಈಗಾಗಲೇ ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಆರೋಗ್ಯಕರ ಮತ್ತು ಹೊಳೆಯುವ ತ್ವಚೆಯನ್ನು ಹೊಂದುವುದು ಸುಲಭದ ಕೆಲಸವಲ್ಲ, ಅದಕ್ಕಾಗಿ ಸಾಕಷ್ಟು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ನಮಗೆಲ್ಲಾ, ಕ್ಲೆನ್ಸಿಂಗ್, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್ ಎಂಬ ಮೂರು ಹಂತದ ಚರ್ಮದ ಆರೈಕೆಯ ಕ್ರಮಗಳು ತಿಳಿದೇ ಇದೆ. ಆದರೆ ಇದನ್ನೂ ಹೊರತುಪಡಿಸಿ, ಎಸೆನ್ಸ್‌, ಶೀಟ್‍ಮಾಸ್ಕ್‌ ಮತ್ತು ಸೆರಮ್‍ಗಳನ್ನು ಬಳಸುವ ಚರ್ಮದ ಆರೈಕೆಯ ಕ್ರಮಗಳು ಕೂಡ ಚಾಲ್ತಿಯಲ್ಲಿವೆ.


ಕೊರಿಯನ್ನರು ಅನುಸರಿಸುವ 10 ಹಂತದ ಚರ್ಮದ ಆರೈಕೆಯ ಕ್ರಮಗಳನ್ನು ಇಲ್ಲಿ ನೀಡಲಾಗಿದೆ.



ಹಂತ 1: ತೈಲ ಆಧಾರಿತ ಕ್ಲೆನ್ಸರ್


ಮೊದಲನೇ ಹಂತ ಕಡ್ಡಾಯ, ಆದರೆ ಅನುಸರಿಸಲು ಸುಲಭ. ಈ ಹಂತದಲ್ಲಿ ಬಳಸುವ ತೈಲ ಆಧಾರಿತ ಕ್ಲೆನ್ಸರ್, ಚರ್ಮದ ಮೇಲಿರುವ ಕಲ್ಮಶಗಳು, ಕೊಳಕು ರಂಧ್ರಗಳು ಮತ್ತು ಮೇಕಪ್ ಶೇಷಗಳನ್ನು ತೆಗೆದು ಹಾಕುತ್ತದೆ. ಆದರೆ ಲಿಪಿಡ್ ಪದರದ ಮೇಲೆ ಇರುವ ಉತ್ತಮ ಬ್ಯಾಕ್ಟೀರಿಯಾವನ್ನು ರಕ್ಷಿಸುತ್ತದೆ.


ಹಂತ 2: ದುಪ್ಪಟ್ಟು ಕ್ಲೆನ್ಸಿಂಗ್


ಎರಡನೇ ಹಂತದಲ್ಲಿ ಬಳಸ್ಪಡುವ ಕ್ಲೆನ್ಸರ್ ನೀರು ಆಧಾರಿತವಾಗಿದ್ದು, ಮೊದಲನೇ ಹಂತವನ್ನು ಅನುಸರಿಸಿದಾಗ ಚರ್ಮದಲ್ಲಿ ಉಳಿದುಕೊಂಡಿದ್ದ ಅನಾವಶ್ಯಕ ಜಿಡ್ಡನ್ನು ತೆಗೆದು ಹಾಕುತ್ತದೆ. ಅದು ಚರ್ಮದ ಕಲ್ಮಶ ಮತ್ತು ಬೆವರನ್ನು ತೆಗೆದು ಹಾಕಿ, ರಂಧ್ರಗಳಿಗೆ ನವಚೈತನ್ಯ ನೀಡುತ್ತದೆ.


ಹಂತ 3: ಎಕ್ಸ್‌ಫೋಲಿಯೇಟ್‌

ನಿಮ್ಮ ಚರ್ಮರೋಗ ವೈದ್ಯರ ಸಲಹೆ ಪಡೆದು, ವಾರದಲ್ಲಿ 2-3ಸಲ ಚರ್ಮವನ್ನು ಎಕ್ಸ್‌ಫೋಲಿಯೇಟ್‌ ಮಾಡಿಕೊಳ್ಳಬಹುದು. ಇದು ಚರ್ಮದ ಬಣ್ಣ ಮತ್ತು ವಿನ್ಯಾಸವನ್ನು ಉತ್ತಮಗೊಳಿಸಲು ಸಹಕಾರಿ. ಅದು ಚರ್ಮದ ನಿರ್ಜೀವ ಜೀವಕೋಶಗಳನ್ನು ತೆಗೆದು ಹಾಕುತ್ತದೆ ಮತ್ತು ರಂಧ್ರಗಳ ಮುಚ್ಚುವಿಕೆಯನ್ನು ತಡೆಯುತ್ತದೆ. ನಿಮ್ಮ ಚರ್ಮದ ಮಾದರಿಗೆ ಅನುಗುಣವಾಗಿ, ಸ್ಕ್ರಬ್‍ಗಳು ಅಥವಾ ರಾಸಾಯನಿಕ ದ್ರವಗಳನ್ನು ಬಳಸಿ ಎಕ್ಸ್‌ಫೋಲಿಯೇಟ್‌ ಮಾಡಿಕೊಳ್ಳಬಹುದು.


ಹಂತ 4: ಟೋನರ್


ಟೋನರ್ ಮುಂದಿನ ಹಂತಗಳಿಗೆ ಮುಖವನ್ನು ಸಿದ್ಧಗೊಳಿಸುತ್ತದೆ ಮತ್ತು ಚರ್ಮದ ಪಿಹೆಚ್ ಮಟ್ಟವನ್ನು ನಿಯಂತ್ರಿಸುತ್ತದೆ.


ಹಂತ 5: ಎಸೆನ್ಸ್


ಎಸೆನ್ಸ್ ಮೂಲತಃ ನೀರು ಆಧಾರಿತ ಸೀರಮ್ ಮತ್ತು ಟೋನರ್ನ‌ ಮಿಶ್ರಣ. ಅದು ನಿಮ್ಮ ಚರ್ಮದಲ್ಲಿ ನೀರಿನ ಅಂಶವನ್ನು ಕಾಪಾಡುತ್ತದೆ. ಯಾವುದೇ ಕಪ್ಪು ಕಲೆಗಳಿಲ್ಲದ ಹೊಳಪುಳ್ಳ ತ್ವಚೆಯನ್ನು ಹೊಂದಲು ಇದನ್ನು ಹಚ್ಚಲಾಗುತ್ತದೆ.


ಹಂತ 6: ಆಂಪೋಲೆ /ಸೀರಮ್


ಸುಕ್ಕು, ಒಣಚರ್ಮ ಮತ್ತು ಅಧಿಕ ಕಪ್ಪು ಕಲೆಗಳ ಸಮಸ್ಯೆಯನ್ನು ದೂರ ಮಾಡುವ ಸೀರಮ್‍ಗಳನ್ನು ಬಳಸಿ. ಈ ಹಂತದಲ್ಲಿ ನಿಮ್ಮ ಚರ್ಮಕ್ಕೆ ಅಗತ್ಯವಿರುವ ಜಲಸಂಚಯವನ್ನು ಮರುಸ್ಥಾಪಿಸಲಾಗುತ್ತದೆ.


ಹಂತ 7: ಶೀಟ್ ಮಾಸ್ಕ್


ಶೀಟ್ ಮಾಸ್ಕ್ ಚರ್ಮಕ್ಕೆ ಉಪಯೋಗಕಾರಿ ಮತ್ತು ಬಳಸಲು ಸುಲಭವಾಗಿರುವ ಒಂದು ಜನಪ್ರಿಯ ಕೊರಿಯಾದ ಉತ್ಪನ್ನ. ಸೀರಮ್ ಮತ್ತು ಹೈಡ್ರೇಟಿಂಗ್ ಎಸೆನ್ಸ್‌ಗಳಿಂದ ಅದ್ದಲಾಗಿರುವ ಮುಖದ ಆಕೃತಿಯ ಈ ಶೀಟ್ ಮಾಸ್ಕ್ ಚರ್ಮಕ್ಕೆ ಸೌಂದರ್ಯ ನೀಡುತ್ತದೆ. ಇದು ಎಲ್ಲಾ ಮಾದರಿಯ ಚರ್ಮಗಳಿಗೆ ಹೊಂದುತ್ತದೆ.


ಹಂತ 8: ಕಣ್ಣಿನ ಕ್ರೀಂ


ಕಣ್ಣಿನ ಹತ್ತಿರ ಇರುವ ಚರ್ಮ ಮುಖದ ಅತ್ಯಂತ ಸೂಕ್ಷ್ಮ ಭಾಗ. ಈ ಭಾಗದಲ್ಲಿ ಸುಕ್ಕು ಮತ್ತು ವಯಸ್ಸಿನ ಲಕ್ಷಣಗಳು ಮೊದಲು ಕಂಡು ಬರುವುದು. ಕಣ್ಣಿನ ಕ್ರೀಂ ಕಣ್ಣಿನ ಸುತ್ತಲಿನ ಚರ್ಮವನ್ನು ಒಣಗದಂತೆ ತಡೆಯುತ್ತದೆ ಹಾಗೂ ಆ ಭಾಗ ಯೌವನದಿಂದ ಕಂಗೊಳಿಸುವಂತೆ ಮಾಡುತ್ತದೆ.


ಹಂತ 9 : ಮಾಯಿಶ್ಚರೈಸರ್


ಈ ವರೆಗೆ ಬಳಸಿದ ಎಲ್ಲಾ ಉತ್ಪನ್ನಗಳನ್ನು , ಮಾಯಿಶ್ಚರೈಸರ್ ಚರ್ಮದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಮತ್ತು ಚರ್ಮದ ಸೌಂದರ್ಯವನ್ನು ಹೆಚ್ಚಿಸುತ್ತದೆ.


ಹಂತ 10: ಸನ್ ಸ್ಕ್ರೀನ್


ಈ ಕ್ರಮದಲ್ಲಿ ಸನ್‍ಸ್ಕ್ರೀನ್‍ ಅನ್ನು ಹಚ್ಚುವುದು ಅತ್ಯಂತ ಅಗತ್ಯ. ಅದು ಹಾನಿಕಾರಕ ಅತೀ ನೇರಳೆ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಚರ್ಮದ ಕ್ಯಾನ್ಸರ್ ಮತ್ತು ಡಿಎನ್‍ಎ ಡ್ಯಾಮೇಜ್ ಆಗದಂತೆ ನೋಡಿಕೊಳ್ಳುತ್ತದೆ. ಅನಗತ್ಯವಾಗಿ ಚರ್ಮ ಬಣ್ಣ ಕಳೆದುಕೊಳ್ಳುವುದನ್ನು ತಡೆಯುತ್ತದೆ.


First published: June 9, 2021, 4:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories