Cockroach Problem: ಅಡುಗೆಮನೆಯಲ್ಲಿ ಜಿರಳೆ ಕಾಟ ಹೆಚ್ಚಾಗಿದ್ಯಾ? ಸೌತೆಕಾಯಿ-ದಾಲ್ಚಿನ್ನಿ ಬಳಸಿ ಜಿರಳೆಯನ್ನು ಶಾಶ್ವತವಾಗಿ ಓಡಿಸಿ!

best ways to kill Cockroach : ಹುಶಃ ಜಿರಳೆಗಳು ಇರದ ಮನೆ ಜಗತ್ತಿನಲ್ಲಿ ಇರಲು ಸಾಧ್ಯವಿಲ್ಲ. ನಿಮ್ಮ ಸಿಂಕ್‌ನಲ್ಲಿ, ಪೈಪ್ ರಂಧ್ರದ ಕೆಳಗೆ ಕಸದ ರಾಶಿಯ ಮೇಲೆ ಅಥವಾ ನಿಮ್ಮ ರೆಫ್ರಿಜರೇಟರ್‌ನ ಮೂಲೆಗಳಲ್ಲಿ ಶಾಂತಿಯುತವಾಗಿ ವಿಶ್ರಾಂತಿ ಪಡೆಯುವ ಜಿರಳೆಗಳು ಹಗಲಿಗಿಂತ ರಾತ್ರಿ ವೇಳೆ ತಮ್ಮ ಪರಾಕ್ರಮವನ್ನು ತೋರಿಸುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಯಾವುದೇ ಊರು ಆಗಲಿ ಅಥವಾ ಪ್ರತಿಯೊಂದು ಹಳ್ಳಿ(Village) ಆಗಲಿ ಸಿಟಿ(City) ಆಗಲಿ ಊರು ಅಂದ ಮೇಲೆ ಮನೆ ಇದ್ದೇ ಇರಲೇಬೇಕಲ್ಲವೇ ಹಾಗೆ ಆ ಮನೆಯಲ್ಲೇ(Home) ನೀವು ಕೂಡ ವಾಸ ಮಾಡುತ್ತಾ ಇರುತ್ತೀರಾ..? ಹಾಗೆ ನಿಮ್ಮ ಮನೆಯಲ್ಲಿ ನಿಮ್ಮ ಅನುಮತಿ ಇಲ್ಲದೆ ಜಿರಳೆಗಳು(Cockroach )ಕೂಡ ವಾಸ ಮಾಡುತ್ತಿರುತ್ತವೆ.. ಹೀಗೆ ಮನೆಯ ಅಂದ ಚಂದ ಕಾಪಾಡಿಕೊಂಡ್ರು, ಜಿರಳೆಗಳು ಎಲ್ಲೆಂದರಲ್ಲಿ ನುಗ್ಗಿ ಓಡಾಡುತ್ತವೆ.. ಅದರಲ್ಲೂ ಇಡೀ ಮನೆಯಲ್ಲಿ ಅಡುಗೆಮನೆಯಲ್ಲಿ(Kitchen) ಜಿರಳೆಗಳ ಹಾವಳಿಹೆಚ್ಚಾಗಿರುತ್ತೆ.. ಮುಚ್ಚಿಟ್ಟ ಆಹಾರ(Food) ಪದಾರ್ಥಗಳ ಮೇಲೆಯೂ ಜಿರಲೆಗಳು ತಮ್ಮಷ್ಟಕ್ಕೆ ತಾವು ಓಡಾಡುವುದಲ್ಲದೆ ಅನೇಕ ರೋಗಗಳನ್ನು ಹೊತ್ತು ತರುತ್ತದೆ.. ಹೀಗಾಗಿ ಜಿರಳೆಗಳ ಸಂಹಾರಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಔಷಧಿಗಳನ್ನು ತಂದು ನೀವು ಪ್ರಯೋಗ ಮಾಡಿದ್ರು, ಯಾವುದೇ ಉಪಯೋಗ ಆಗಿಲ್ಲ ಅಂದ್ರೆ ನಾವು ಹೇಳು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಮನೆಯಲ್ಲಿ ಜಿರಳೆಗಳು ಹೇಳಹೆಸರಿಲ್ಲದಂತೆ ಮಾಯವಾಗುತ್ತದೆ.

  ಮಾನವರು ಮತ್ತು ಜಿರಳೆಗಳ ನಡುವಿನ ಸಂಬಂಧವು ನಿನ್ನೆ ಮೊನ್ನೆಯದಲ್ಲ. ನಮ್ಮ ಪೂರ್ವಜರು ಗುಹೆಗಳಲ್ಲಿ ವಾಸಿಸುತ್ತಿದ್ದ ಕಾಲದಿಂದ ಹಿಡಿದು ನಾವು ಗಗನಚುಂಬಿ ಕಟ್ಟಡಗಳನ್ನು ನಿರ್ಮಾಣ ಮಾಡುವವರೆಗೂ ಮನುಷ್ಯರನ್ನು ಹಿಂಬಾಲಿಸುತ್ತಲೇ ಇವೆ. ಎಷ್ಟರ ಮಟ್ಟಿಗೆ ಅಂದರೆ ಬಹುಶಃ ಜಿರಳೆಗಳು ಇರದ ಮನೆ ಜಗತ್ತಿನಲ್ಲಿ ಇರಲು ಸಾಧ್ಯವಿಲ್ಲ. ನಿಮ್ಮ ಸಿಂಕ್‌ನಲ್ಲಿ, ಪೈಪ್ ರಂಧ್ರದ ಕೆಳಗೆ ಕಸದ ರಾಶಿಯ ಮೇಲೆ ಅಥವಾ ನಿಮ್ಮ ರೆಫ್ರಿಜರೇಟರ್‌ನ ಮೂಲೆಗಳಲ್ಲಿ ಶಾಂತಿಯುತವಾಗಿ ವಿಶ್ರಾಂತಿ ಪಡೆಯುವ ಜಿರಳೆಗಳು ಹಗಲಿಗಿಂತ ರಾತ್ರಿ ವೇಳೆ ತಮ್ಮ ಪರಾಕ್ರಮವನ್ನು ತೋರಿಸುತ್ತವೆ.

  1) ಹೆಚ್ಚು ಸ್ವಚ್ಛತೆ ಕಾಪಾಡಿಕೊಳ್ಳುವುದು

  ಅಡುಗೆ ಮನೆಯ ಸಿಂಕ್, ಕ್ಯಾಬಿನೆಟ್ ಗಳು ಮನೆಯ ಮೂಲೆ ಮೂಲ, ಬೀರು ಕಪಾಟುಗಳಲ್ಲಿ ಜಿರಳೆಗಳ ಹಾವಳಿ ಹೆಚ್ಚಾಗಿ ಇರುತ್ತದೆ.. ಜಿರಳೆಗಳ ಸಂಖ್ಯೆ ಹೆಚ್ಚಾದಷ್ಟು ಅನಾರೋಗ್ಯಕ್ಕೆ ಕಾರಣ ಆಗುತ್ತವೆ.. ಹೀಗಾಗಿ ಜಿರಳೆಗಳನ್ನು ಮನೆಯಿಂದ ಹೊರಹಾಕಲು ಅತಿ ಹೆಚ್ಚು ಸ್ವಚ್ಛತೆ ಅಗತ್ಯ

  ಇದನ್ನೂ ಓದಿ :ಜಾಮೂನ್ ಬಟ್ಟಲಿನಲ್ಲಿ ಸತ್ತ ಜಿರಳೆ: ಬೆಂಗಳೂರಿನ ವ್ಯಕ್ತಿಗೆ 55 ಸಾವಿರ ಪರಿಹಾರ ನೀಡಲು ಹೋಟೆಲ್‌ಗೆ ಆದೇಶಿಸಿದ ಕೋರ್ಟ್‌
  .
  2) ಬಿಸಿ ನೀರು ಹಾಗೂ ವಿನೆಗರ್

  ಬಿಸಿ ನೀರಿನೊಂದಿಗೆ ವಿನೆಗರ್ ಬೆರೆಸಿ ಎಲ್ಲೆಲ್ಲಿ ಜಿರಳೆಗಳ ಹಾವಳಿ ಇದೆಯೋ ಅಲ್ಲೆಲ್ಲಾ ಸಿಂಪಡನೆ ಮಾಡಿದ್ರೆ ಜಿರಳೆಗಳಕಾಟದಿಂದ ಮುಕ್ತಿ ಪಡೆಯಬಹುದು.

  3)ಬೋರಿಕ್ ಪೌಡರ್ ಮತ್ತು ಸಕ್ಕರೆಯ ಮಿಶ್ರಣ: ಬೋರಿಕ್ ಪುಡಿ ಮತ್ತು ಸಕ್ಕರೆಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಜಿರಲೆಗಳಿರುವ ಮೂಲೆಗಳಲ್ಲಿ ಇರಿಸಿ. ವಿಶೇಷವಾಗಿ ಹೆಚ್ಚು ಕತ್ತಲೆ ಮತ್ತು ತೇವಾಂಶ ಇರುವ ಸ್ಥಳಗಳಲ್ಲಿ ಈ ಮಿಶ್ರಣವನ್ನು ಹಾಕಿದರೆ ಜಿರಲೆಗಳು ಓಡಿ ಹೋಗುತ್ತವೆ.

  4)ಬಿಸಿ ನೀರು, ನಿಂಬೆ ಹಣ್ಣು ಬೇಕಿಂಗ್ ಸೋಡಾ

  ಮನೆಯಿಂದ ಜಿರಳೆಗಳನ್ನು ಅವರ ಹಾಕಲು ಇರುವ ಮತ್ತೊಂದು ಸುಲಭವಾದ ಮಾರ್ಗ ಅಂದ್ರೆ ಬಿಸಿನೀರು ನಿಂಬೆಹಣ್ಣು ಹಾಗೂ ಬೇಕಿಂಗ್ ಸೋಡಾ.. ಒಂದು ನಿಂಬೆಹಣ್ಣಿಗೆ 2 ಟೇಬಲ್ ಸ್ಪೂನ್ ಬೇಕಿಂಗ್ ಸೋಡಾ ಸೇರಿಸಿ, ಒಂದು ಲೀಟರ್ ನೀರಿನೊಂದಿಗೆ ಮಿಶ್ರಣ ಮಾಡಿ ಜಿರಳೆಗಳು ಹೆಚ್ಚು ಕಂಡುಬರುವ ಜಾಗದಲ್ಲಿ ಸಿಂಪಡನೆ ಮಾಡಿದ್ರೆ ಜಿರಳೆಗಳ ಸಂಖ್ಯೆ ಇಳಿಮುಖವಾಗುತ್ತದೆ.

  ಇದನ್ನೂ ಓದಿ :ಹೆಂಡತಿಗೆ ಜಿರಳೆ ಎಂದರೆ ಎಲ್ಲಿಲ್ಲದ ಹೆದರಿಕೆ: ಬಾಡಿಗೆ ಮನೆಗಳನ್ನು ಬದಲಾಯಿಸಿ ರೋಸಿ ಹೋದ ಗಂಡ!

  5)ಎಣ್ಣೆ

  ನಾವು ನಮ್ಮ ತ್ವಚೆಯ ಆರೈಕೆಗಾಗಿ ಸಾಮಾನ್ಯವಾಗಿ ವಿವಿಧ ಬಗೆಯ ಎಣ್ಣೆಗಳನ್ನು ಖರೀದಿ ಮಾಡಿರುತ್ತೇವೆ..ಮನೆಯಲ್ಲಿಯೂ ಅಡುಗೆಗಾಗಿ ವಿವಿಧ ಬಗೆಯ ಎಣ್ಣೆಯ ಬಳಕೆ ಮಾಡುತ್ತೇವೆ. ಅದ್ರಲ್ಲೂ ಪುದೀನಾ ಎಣ್ಣೆಗಳು ಮತ್ತು ಲ್ಯಾವೆಂಡರ್ ಎಣ್ಣೆಯನ್ನ ನಾವು ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರೆ ಜಿರಳೆ ಓಡಾಡುವ ಜಾಗದಲ್ಲಿ ಅದನ್ನ ಸಿಂಪಡನೆ ಮಾಡಿದ್ರೆ, ಅದರ ಪರಿಮಳ ಎಲ್ಲಾ ಕಡೆ ಹರಡುವಂತೆ ಮಾಡಿ ಜಿರಳೆಗಳನ್ನು ಮನೆಯಿಂದ ಓಡಿಸುತ್ತೆ.

  6) ಕಾಫೀ ಪುಡಿ

  ಹಾಗೆ ನೀವು ಉಪಯೋಗಿಸುವ ಕಾಫಿ ಪುಡಿಯನ್ನು ಅಡುಗೆ ಮನೆಯ ಮೂಲೆಗಳಲ್ಲಿ ಸಿಂಪಡಿಸಿ ಬೆಳಿಗ್ಗೆ ಎದ್ದ ತಕ್ಷಣ ಅದನ್ನು ಸ್ವಚ್ಛ ಮಾಡಿಕೊಳ್ಳಿ. ಹೀಗೆ ವಾರದಲ್ಲಿ 3 ರಿಂದ 4 ಬಾರಿ ಮಾಡಿದರೆ ನಿಮ್ಮ ಮನೆಯಲ್ಲಿ ಜಿರಳೆಗಳ ಕಾಟ ಇರುವುದಿಲ್ಲ

  7) ಜಿರಳೆ ಉಂಡೆ

  ಜಿರಳೆಗಳನ್ನು ಮನೆಯಿಂದ ಹೊರ ಹಾಕಲು ಇರುವ ಮತ್ತೊಂದು ಪ್ರಮುಖವಾದ ಆಸ್ತ್ರ ಅಂದ್ರೆ ಅದು ಜಿರಳೆ ಉಂಡೆ.. ಎಲ್ಲೆಲ್ಲಿ ಜಿರಳೆಗಳು ಓಡಾಡುತ್ತವೋ ಅಲ್ಲಿ ಎಲ್ಲಾ ಜಿರಳೆಗಳನ್ನು ಉಂಡೆಯನ್ನ ಮನೆಯಲ್ಲಿ ಇಟ್ಟರೆ, ಜಿರಲೆಗಳಿಗೆ ಇವು ಅಪ್ರಿಯ ಆಗಿರುವುದರಿಂದ ಜಿರಳೆಗಳ ಕಾಟ ಇರುವುದಿಲ್ಲ.
  Published by:ranjumbkgowda1 ranjumbkgowda1
  First published: