ಋತುವಿನಲ್ಲಿ (Season) ಉಂಟಾಗುವ ಬದಲಾವಣೆ (Changes) ರೋಗಗಳ (Disease) ಅಪಾಯವನ್ನು (Risk) ಹೆಚ್ಚು ಮಾಡುತ್ತದೆ. ಈ ರೀತಿಯಾಗಿ ನಾವು ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಬೇಸಿಗೆ ಮತ್ತು ಮಳೆಗಾಲದಲ್ಲಿ ಬೀಸುವ ಗಾಳಿಯು ವಿಶೇಷ ರೀತಿಯ ಜ್ವರ ಹರಡಲು ಕಾರಣ ಆಗುತ್ತದೆ. ಇದನ್ನು ಹೇ ಜ್ವರ (Hey Fever) ಎಂದು ಕರೆಯುತ್ತಾರೆ. ಬೇಸಿಗೆ ಮತ್ತು ಮಳೆಯಲ್ಲಿ ಬೀಸುವ ಗಾಳಿಯು ಮಾರ್ಚ್ ಮತ್ತು ಸೆಪ್ಟೆಂಬರ್ ನಡುವೆ ಬೀಸುತ್ತದೆ. ಇದು ಗಾಳಿಯಲ್ಲಿ ಕಣಗಳನ್ನು ಬಿಡುಗಡೆ ಮಾಡುತ್ತದೆ. ಅದು ಗಂಟಲು ಮತ್ತು ಮೂಗು ಉಸಿರಾಟಕ್ಕೆ ತೊಂದರೆ ಉಂಟು ಮಾಡುತ್ತದೆ.
ಹೇ ಜ್ವರದ ಲಕ್ಷಣಗಳು:
ಇದು ಜ್ವರ ಮತ್ತು ಅಲರ್ಜಿ ಉಂಟು ಮಾಡುತ್ತದೆ. ಕಣ್ಣಿನ ತುರಿಕೆ, ಮೂಗು ಸೋರುವಿಕೆ, ಸೈನಸ್, ಕಪ್ಪು ವರ್ತುಲ, ಸುಸ್ತು, ನೆಗಡಿ, ಕೆಮ್ಮು, ಜ್ವರ ಇದರ ಲಕ್ಷಣಗಳು. ಈ ಹೇ ಜ್ವರದಲ್ಲಿ ಕೆಲವು ವಿಷಯಗಳನ್ನು ತಪ್ಪಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ಹೆಚ್ಚು ಗಂಭೀರ ಆಗುತ್ತದೆ. ಹೇ ಜ್ವರದಲ್ಲಿ ಯಾವ ವಿಷಯಗಳನ್ನು ತಪ್ಪಿಸಬೇಕು ಎಂದು ಈಗ ತಿಳಿಯೋಣ.
ಚೀಸ್:
ಚೀಸ್ನಲ್ಲಿ ಹಿಸ್ಟಮಿನ್ ರಾಸಾಯನಿಕ ಪದಾರ್ಥವಿದೆ. ಇದು ಅಲರ್ಜಿನ್ ಸಂಪರ್ಕಕ್ಕೆ ಬಂದಾಗ ದೇಹದಲ್ಲಿನ ಪ್ರತಿರಕ್ಷಣಾ ವ್ಯವಸ್ಥೆಯಿಂದ ಬಿಡುಗಡೆ ಆಗುತ್ತದೆ. ಹಿಸ್ಟಮೈನ್ ಬಿಡುಗಡೆ ಆದಾಗ, ಅದು ದೇಹದಲ್ಲಿ ಉರಿಯೂತ ಮತ್ತು ಶೀತ ಉಂಟು ಮಾಡಬಹುದು.
ಇದನ್ನೂ ಓದಿ: ಮುಖದ ಕ್ಲೆನ್ಸಿಂಗ್ ಗೆ ದುಬಾರಿ ವಸ್ತುಗಳ ಮೊರೆ ಹೋಗುವುದು ಬಿಡಿ, ನೈಸರ್ಗಿಕ ಪದಾರ್ಥಗಳನ್ನು ಬಳಸಿ ನೋಡಿ
ಚೀಸ್ ಜೊತೆಗೆ ಹಿಸ್ಟಮೈನ್ ಅನೇಕ ಆಹಾರಗಳಲ್ಲಿ ಕಂಡು ಬರುತ್ತದೆ. ಆದ್ದರಿಂದ ಅಂತಹ ಆಹಾರಗಳ ಸೇವನೆ ತಪ್ಪಿಸಿ. ಅಗತ್ಯವಿದ್ದರೆ, ವೈದ್ಯರ ಸಲಹೆಯ ಮೇರೆಗೆ ಆಂಟಿಹಿಸ್ಟಮೈನ್ ಮಾತ್ರೆಗಳನ್ನು ತೆಗೆದುಕೊಳ್ಳಬಹುದು. ಅದು ಅದರ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ಡೈರಿ ಉತ್ಪನ್ನಗಳು:
ಹೆಚ್ಚಿನ ರೀತಿಯ ಡೈರಿ ಉತ್ಪನ್ನಗಳು ದೇಹದಲ್ಲಿ ಲೋಳೆ ಹೆಚ್ಚಿಸುತ್ತವೆ. ಯಾವುದೇ ಅಲರ್ಜಿ ಇನ್ನಷ್ಟು ಹೆಚ್ಚಬಹುದು. ಸಿರಿಧಾನ್ಯಗಳ ಜೊತೆಗೆ ಹಾಲಿನ ಉತ್ಪನ್ನಗಳಾದ ಚೀಸ್ ಮತ್ತು ಹಾಲು ಮೂಗಿನಲ್ಲಿ ಲೋಳೆಯ ಅಂ ಹೆಚ್ಚಿಸುತ್ತವೆ. ಇದು ಮೂಗು ತಡೆಗಟ್ಟುವಿಕೆಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಸುವಿನ ಹಾಲಿಗೆ ಬದಲಾಗಿ, ಬಾದಾಮಿ ಅಥವಾ ಓಟ್ ಹಾಲನ್ನು ಚಹಾಕ್ಕೆ ಸೇರಿಸಿ. ಆದರೆ ತೆಂಗಿನ ಹಾಲನ್ನು ಸೇವಿಸಬೇಡಿ.
ಮದ್ಯಪಾನ:
ಹಿಸ್ಟಮೈನ್ಗಳು ಆಲ್ಕೋಹಾಲ್ನಲ್ಲಿ ಕಂಡು ಬರುತ್ತವೆ. ಇದು ಜ್ವರದ ಸಮಯದಲ್ಲಿ ಕಣ್ಣಿನ ತುರಿಕೆ ಹೆಚ್ಚಿಸುತ್ತದೆ ಮತ್ತು ವಾಸನೆಯ ಸಾಮರ್ಥ್ಯ ಕಡಿಮೆ ಮಾಡುತ್ತದೆ. ಬಿಯರ್, ಸೈಡರ್ ಮತ್ತು ರೆಡ್ ವೈನ್ ಪಾನೀಯಗಳು ಹಿಸ್ಟಮೈನ್ನಲ್ಲಿ ಅಧಿಕವಾಗಿವೆ.
ಅದು ಹೇ ಜ್ವರದ ಲಕ್ಷಣಗಳನ್ನು ಉಲ್ಬಣಗೊಳಿಸುತ್ತದೆ. ಅವುಗಳನ್ನು ಸೇವಿಸುವುದನ್ನು ತಪ್ಪಿಸಿ. ಆಲ್ಕೋಹಾಲ್ ಕುಡಿಯುವುದು ಯಕೃತ್ತಿನ ಮೇಲೆ ಹೊರೆ ಬೀಳಬಹುದು. ಯಕೃತ್ತು ದೇಹದಿಂದ ಹಿಸ್ಟಮೈನ್ ತೆರವುಗೊಳಿಸಲು ಕಷ್ಟವಾಗುತ್ತದೆ ಮತ್ತು ರೋಗ ಲಕ್ಷಣಗಳು ಮುಂದುವರಿಯುತ್ತವೆ.
ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳು:
ಸಕ್ಕರೆ ಮತ್ತು ಸಂಸ್ಕರಿಸಿದ ಆಹಾರಗಳು ದೇಹದಲ್ಲಿ ಹಿಸ್ಟಮೈನ್ ಉತ್ಪಾದನೆಗೆ ಕಾರಣ. ಇದು ಹೇ ಜ್ವರದ ಲಕ್ಷಣಗಳನ್ನು ಉಲ್ಬಣಗೊಳಿಸುತ್ತದೆ. ಸಿಹಿತಿಂಡಿಗಳ ಸೇವನೆ ಕಡಿಮೆ ಮಾಡಿ ಅಥವಾ ನಿಲ್ಲಿಸಿ.
ಇದನ್ನೂ ಓದಿ: ಮಹಿಳೆಯರಲ್ಲಿ ಅತಿಯಾಗಿ ಕಂಡು ಬರುವ ಈ ಕಾಯಿಲೆಗಳು ಸಾಕಷ್ಟು ಸಂಕಷ್ಟ ತಂದೊಡ್ಡುತ್ತವೆ!
ಕೆಲವು ಹಣ್ಣು ಮತ್ತು ತರಕಾರಿಗಳು:
ಹೇ ಜ್ವರ ಹೊಂದಿರುವ ಜನರು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಮತ್ತು ಆಹಾರ ಅಲರ್ಜಿ ಹೊಂದಿರಬಹುದು. ಅಲರ್ಜಿಯ ಕಾರಣ ಒಬ್ಬ ವ್ಯಕ್ತಿಯು ತಾಜಾ ಹಣ್ಣು ತಿಂದ ನಂತರ ಗಂಟಲಿನಲ್ಲಿ ತುರಿಕೆ, ಕಿವಿಗಳಲ್ಲಿ ತುರಿಕೆ, ನಾಲಿಗೆ ಅಥವಾ ತುಟಿಗಳ ಊತ ಅನುಭವಿಸಬಹುದು. ಆದ್ದರಿಂದ, ಕೆಲವು ಆಮ್ಲ ಅಥವಾ ಸಿಟ್ರಸ್ ಹಣ್ಣು ಸೇವಿಸುವುದನ್ನು ತಪ್ಪಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ