Throat Infection: ಉರಿ ಬಿಸಿಲು ಮತ್ತು ತಂಪು ವಾತಾವರಣದ ಹಠಾತ್ ಬದಲಾವಣೆ ಗಂಟಲು ನೋವಿಗೆ ಕಾರಣ, ಪರಿಹಾರ ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶೀತ, ಕೆಮ್ಮು ಮಳೆಗಾಲ ಮತ್ತು ಬೇಸಿಗೆಯಲ್ಲಿ ಅತಿ ಹೆಚ್ಚು ಇದು ಗಂಟಲಿನ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಗಂಟಲಿನಲ್ಲಿ ಅಲರ್ಜಿ ಕೂಡ ಉಂಟಾಗುತ್ತದೆ. ಇದು ತಿನ್ನುವುದು ಮತ್ತು ಕುಡಿಯುವ ವೇಳೆ ಸಮಸ್ಯೆ ಉಂಟು ಮಾಡುತ್ತದೆ.

  • Share this:

    ಹಠಾತ್ ಸುಡುವ ಉರಿ ಬಿಸಿಲು (Heat) ಒಮ್ಮೆಲೆ ಹವಾಮಾನ (Weather) ತ್ವರಿತವಾಗಿ ಬದಲಾವಣೆಯಾಗಿ (Changes), ತಂಪಾಗುವುದು (Cold). ಇದು ಆರೋಗ್ಯದ (Health) ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ವಾತಾವರಣದ ಬದಲಾವಣೆ ಹಲವು ಕಾಯಿಲೆಗಳ ಜನಿಸುವುದಕ್ಕೆ ಕಾರಣ ಆಗಿದೆ. ಮತ್ತು ನಂತರ ಕೆಲವೊಮ್ಮೆ ಗುಡುಗು ಮತ್ತು ಮಳೆಯಾಗುತ್ತದೆ. ಇದು ಆರೋಗ್ಯದ ಮೇಲೂ ಅಡ್ಡ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ತಣ್ಣೀರು ಕುಡಿಯುವುದು ಮತ್ತು ಮಳೆಯಲ್ಲಿ ಐಸ್ ಕ್ರೀಮ್ ತಿನ್ನುವುದು ಗಂಟಲು ಊತ ಮತ್ತು ನೋವು ಉಂಟಾಗಲು ಕಾರಣ ಆಗಿದೆ. ಕೆಲವರಿಗೆ ಈ ಸಮಸ್ಯೆ ಎಷ್ಟರ ಮಟ್ಟಿಗೆ ಹೆಚ್ಚುತ್ತದೆ ಎಂದರೆ ಜ್ವರ ಸಹ ಬರುತ್ತದೆ.


    ನೋಯುತ್ತಿರುವ ಗಂಟಲು ಮತ್ತು ಸೋಂಕು ಸಮಸ್ಯೆ


    ಶೀತ, ಕೆಮ್ಮು ಮಳೆಗಾಲ ಮತ್ತು ಬೇಸಿಗೆಯಲ್ಲಿ ಅತಿ ಹೆಚ್ಚು ಇದು ಗಂಟಲಿನ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಗಂಟಲಿನಲ್ಲಿ ಅಲರ್ಜಿ ಕೂಡ ಉಂಟಾಗುತ್ತದೆ. ಇದು ತಿನ್ನುವುದು ಮತ್ತು ಕುಡಿಯುವ ವೇಳೆ ಸಮಸ್ಯೆ ಉಂಟು ಮಾಡುತ್ತದೆ.


    ನಿಮಗೂ ಇಂತಹ ಸಮಸ್ಯೆಗಳಿದ್ದರೆ ಯಾವಾಗಲೂ ಔಷಧಿ ತೆಗೆದುಕೊಳ್ಳುವ ಬದಲು ಕೆಲವು ಮನೆ ಮದ್ದುಗಳನ್ನು ಪ್ರಯತ್ನಿಸಿ ನೋಡಿ. ಇದು ನೋಯುತ್ತಿರುವ ಗಂಟಲು ಮತ್ತು ಸೋಂಕಿನಿಂದ ನಿಮಗೆ ಪರಿಹಾರ ನೀಡುತ್ತದೆ.


    ಇದನ್ನೂ ಓದಿ: ಮಹಿಳೆಯರನ್ನು ಹೆಚ್ಚು ಬಾಧಿಸುವ ಮೈಗ್ರೇನ್ ಗೆ ಕಾರಣಗಳು ಮತ್ತು ಪರಿಹಾರ ಹೇಗೆ?


    ನೋಯುತ್ತಿರುವ ಗಂಟಲು ಮತ್ತು ಊತ ಹಾಗೂ ನೋವಿಗೆ ಪರಿಹಾರಗಳು


    ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ


    ಗಂಟಲಿನ ನೋವು, ಊತ ಅಥವಾ ನೋವನ್ನು ತೆಗೆದು ಹಾಕಲು, ನೀವು ಉಪ್ಪು ನೀರಿನಿಂದ ಗಾರ್ಗ್ಲ್ ಮಾಡಬೇಕು. ಇದು ಗಂಟಲಿಗೆ ಹೆಚ್ಚಿನ ಪರಿಹಾ ನೀಡುತ್ತದೆ. ಗಾರ್ಗ್ಲಿಂಗ್ ಮಾಡಲು ನೀರು ಸ್ವಲ್ಪ ಬೆಚ್ಚಗಿರಬೇಕು. ನಿಮ್ಮ ಗಂಟಲು ಸ್ವಲ್ಪ ನೋಯುತ್ತಿದ್ದರೆ, ಗಾರ್ಗ್ ಮಾಡುವ ಬದಲು ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ.


    ಉಗುರು ಬೆಚ್ಚನೆಯ ನೀರಿನಿಂದ ಊತ ಮಾಯ


    ಗಂಟಲಿನಲ್ಲಿ ಊತವಿದ್ದರೆ ಉಗುರು ಬೆಚ್ಚಗಿನ ನೀರು ಕುಡಿಯುವುದು ಬೆಸ್ಟ್ ಆಯ್ಕೆ. ತಣ್ಣೀರಿನಿಂದ ಈ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಸೋಂಕು ಕ್ರಮೇಣ ಕಡಿಮೆಯಾಗುತ್ತದೆ. ನೀವು ಬಯಸಿದರೆ, ನೀರಿಗೆ ಸ್ವಲ್ಪ ಅರಿಶಿನ ಮತ್ತು ಕಪ್ಪು ಸೇರಿಸಬಹುದು. ಇದು ಊತ ಕಡಿಮೆ ಮಾಡುತ್ತದೆ.


    ಜೇನು ತುಪ್ಪದಿಂದ ನಿಮಗೆ ಪರಿಹಾರ ಸಿಗುತ್ತದೆ


    ನಿಮಗೆ ಗಂಟಲು ನೋವು ಅಥವಾ ಯಾವುದೇ ರೀತಿಯ ಸೋಂಕು ಇದ್ದರೆ, ನೀವು ಜೇನು ತುಪ್ಪ ಸೇವಿಸಬೇಕು. ಜೇನು ತುಪ್ಪವು ಗಂಟಲು ನೋವು, ಕೆಮ್ಮು ಮತ್ತು ಶೀತ ನಿವಾರಿಸುವ ಪ್ರತಿಜೀವಕ ಗುಣ ಹೊಂದಿದೆ. ಜೇನುತುಪ್ಪವು ನೋಯುತ್ತಿರುವ ಗಂಟಲು ಮತ್ತು ಊತಕ್ಕೆ ಸಹ ಪರಿಹಾರ ನೀಡುತ್ತದೆ.


    ಅರಿಶಿನ ಹಾಲು ಕುಡಿಯಿರಿ


    ನಿಮಗೆ ಗಂಟಲು ನೋವು ಇದ್ದರೆ, ನೀವು ರಾತ್ರಿಯಲ್ಲಿ ಅರಿಶಿನ ಹಾಲನ್ನು ಕುಡಿಯಬೇಕು. ಅರಿಶಿನವು ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುವ ಪ್ರತಿಜೀವಕ ಮತ್ತು ನಂಜುನಿರೋಧಕ ಅಂಶಗಳನ್ನು ಒಳಗೊಂಡಿದೆ. ಅರಿಶಿನವು ಗಂಟಲಿಗೆ ಪ್ರಯೋಜನಕಾರಿ.


    ಶುಂಠಿ ಸೇವನೆ


    ಗಂಟಲು ನೋವು ಅಥವಾ ಶೀತ ಕೆಮ್ಮಿನ ಸಂದರ್ಭದಲ್ಲಿ ಶುಂಠಿ ಬಳಸಿ. ಶುಂಠಿಯು ಜಿಂಜೆರಾಲ್ ಹೊಂದಿದೆ. ಇದು ಶಕ್ತಿಯುತ ಔಷಧೀಯ ಗುಣ ಹೊಂದಿದೆ. ಗಂಟಲು ನೋವು ನಿವಾರಣೆಗೆ ಶುಂಠಿಯನ್ನು ತುರಿದು ಒಂದು ಲೋಟ ನೀರಿಗೆ ಹಾಕಿ ಕುದಿಸಿ. 5 ನಿಮಿಷಗಳ ಕಾಲ ಕುದಿಸಿದ ನಂತರ, ಆ ನೀರನ್ನು ಫಿಲ್ಟರ್ ಮಾಡಿ ಮತ್ತು ಅದನ್ನು ಉಗುರು ಬೆಚ್ಚಗಿನ ಕುಡಿಯಿರಿ.


    ಇದನ್ನೂ ಓದಿ: ಚರ್ಮದ ಕಾಂತಿ ಹೆಚ್ಚಿಸಲು ಮತ್ತು ವಯಸ್ಸಾಗುವಿಕೆ ತಡೆಯಲು ವಿಟಮಿನ್ ಸಿ ಪ್ರಯೋಜನಕಾರಿ


    ಗಂಟಲಿನಲ್ಲಿ ಊತವಿದ್ದರೆ, ತಣ್ಣನೆಯ ಅಥವಾ ಸಾಮಾನ್ಯ ನೀರನ್ನು ಮರೆಯದೆ ಕುಡಿಯಬೇಡಿ, ಅದು ಸಮಸ್ಯೆ ಹೆಚ್ಚಿಸುತ್ತದೆ. ಬಿಸಿ ನೀರು ಸೇವನೆ ಸೋಂಕು ಕ್ರಮೇಣ ಕಡಿಮೆಯಾಗಲು ಸಹಾಯ ಮಾಡುತ್ತದೆ. ಬೇಕಾದರೆ ಅರಿಶಿನ ಮತ್ತು ಕಪ್ಪು ಉಪ್ಪನ್ನು ನೀರಿಗೆ ಬೆರೆಸಿ ಕುಡಿಯಬಹುದು. ಅಲ್ಲದೆ ದಿನಕ್ಕೆರಡು ಬಾರಿ ಈ ನೀರಿನಿಂದ ಬಾಯಿ ಮುಕ್ಕಳಿಸುವು ಉತ್ತಮ.

    Published by:renukadariyannavar
    First published: