news18-kannada Updated:March 18, 2020, 4:20 PM IST
@google
ಅಪಘಾತ ಅಥವಾ ಅವಘಡಗಳಿಂದ ದೇಹದಲ್ಲಿರುವ ಮೂಳೆಗಳಿಗೆ ಹಾನಿಯಾಗುತ್ತದೆ. ಹೀಗೆ ಮೂಳೆಗಳಿಗೆ ಹಾನಿಯುಂಟಾದರೆ ದೇಹದಲ್ಲಿರುವ ಎಲ್ಲ ಎಲುಬಿನ ಸಾಂದ್ರತೆಯು ಕುಂಠಿತವಾಗುತ್ತದೆ ಎಂದು ಹೊಸ ಅಧ್ಯಯನ ತಂಡವೊಂದು ಕಂಡುಕೊಂಡಿದ್ದಾರೆ. ಮೂಳೆ ಮುರಿತಕ್ಕೊಳಗಾದಾಗ ಮತ್ತು ಪ್ರಥಾಮಿಕ ಮುರಿತದ ಸಮಯದಲ್ಲಿ ನಡೆಸಲಾದ ಈ ಎರಡು ಸಂಶೋಧನೆಯಿಂದ ಈ ಅಂಶ ಬೆಳಕಿಗೆ ಬಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ವಯಸ್ಸಾದರವರ ಮತ್ತು ಖಾಯಿಲೆಯಿಂದ ಮಸ್ಕ್ಯುಲೋಸ್ಕೆಲಿಟಲ್ ಅಂಗಾಂಶಗಳಲ್ಲಿನ ಬದಲಾವಣೆಗಳನ್ನು ಗುರುತಿಸಲು ಈ ಅಧ್ಯಯನವನ್ನು ಕೇಂದ್ರೀಕರಿಸಲಾಗಿದೆ.
ಈ ಅಧ್ಯಯನವು ಮೂಳೆಗಳ ಸಾಂದ್ರತೆಯ ನಷ್ಟದ ಕಾರ್ಯ ವಿಧಾನಗಳನ್ನು ಗುರುತಿಸುವ ಮೊದಲ ಹಂತವಾಗಿದ್ದು, ಮುಂಬರುವ ದಿನಗಳಲ್ಲಿ ಈ ಕುರಿತಾಗಿ ಮತ್ತಷ್ಟು ಅಧ್ಯಯನ ನಡೆಯಲಿದೆ ಎಂದು ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದ ಪ್ರಧ್ಯಾಪಕ ಬ್ಲೇನ್ ಕ್ರಿಶ್ಚಿಯನ್ ಹೇಳಿದ್ದಾರೆ.
ಈ ಸಂಶೋಧನೆಯಲ್ಲಿ 4 ಸಾವಿರ ಮಂದಿ ಭಾಗವಹಿಸಿದ್ದು, ಇವರಲ್ಲಿ ಮೂಳೆ ಮುರಿತಕ್ಕೊಳಗಾದವರಲ್ಲಿ ಪ್ರತಿ ವರ್ಷ ಶೇ.0.89 ರಿಂದ 0.77 ಎಲುಬಿನ ಸಾಂದ್ರತೆ ಕಡಿಮೆಯಾಗಿರುವುದು ಪತ್ತೆಯಾಗಿದೆ. ಆದರೆ ಮೂಳೆಗಳಿಗೆ ಯಾವುದೇ ಹಾನಿಯಾಗದವರಲ್ಲಿ ಈ ಪ್ರಮಾಣವು ಶೇ.0.66 ಮಾತ್ರ ಕಂಡು ಬಂದಿರುವುದಾಗಿ ತಿಳಿದು ಬಂದಿದೆ. ಮೂಳೆ ಹಾನಿಗೊಳಗಾದ ಮೊದಲ ಎರಡು ವರ್ಷಗಳಲ್ಲಿ ಎಲುಬಿನ ಸಾಂದ್ರತೆಯಲ್ಲಿ ಹೆಚ್ಚಿನ ನಷ್ಟ ಉಂಟಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಈ ರೀತಿಯಾಗಿ ಎಲುಬಿನ ಸಾಂದ್ರತೆ ಕಡಿಮೆಯಾದರೆ ರಕ್ತದಲ್ಲಿ ಉರಿಯೂತದ ಮಟ್ಟವು ಹೆಚ್ಚಾಗುತ್ತದೆ. ಕಿರಿಯರ ಮೂಳೆಗಳ ಸಾಂದ್ರತೆಯ ನಷ್ಟವನ್ನು ಚಿಕಿತ್ಸೆಯ ಮೂಲಕ ನಿಯಂತ್ರಿಸಬಹುದಾದರೂ, ವಯಸ್ಸಾದವರ ಮೂಳೆ ಸಾಂದ್ರತೆ ಬಿಎಂಡಿಯನ್ನು ಹೆಚ್ಚಿಸಲು ಸಾಧ್ಯವಾಗುವುದಿಲ್ಲ ಎಂದು ಅಧ್ಯಯನ ತಂಡ ತಿಳಿಸಿದೆ. ಮೂಳೆಯು ಮುರಿಯಲ್ಪಟ್ಟಾಗದ ದೇಹದ ಎಲುಬುಗಳ ಬಿಎಂಡಿ ನಷ್ಟ ಪ್ರಾರಂಭವಾಗುತ್ತದೆ. ಈ ಅಧ್ಯಯನದಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಸಲುವಾಗಿ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಭಾವಿಸುತ್ತೇವೆ ಎಂದು ಸಂಶೋಧಕ ಬ್ಲೇನ್ ಕ್ರಿಶ್ಚಿಯನ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೋನಾ ವಿರುದ್ಧ ಸೈನಿಕರಂತೆ ಹೋರಾಡುತ್ತಿರುವ ರಾಜ್ಯದ ವೈದ್ಯರಿಗೆ ಸಲಾಂ ಎಂದ ಸಚಿವ ಶ್ರೀರಾಮುಲು
First published:
March 18, 2020, 4:14 PM IST