Puttu Recipe: ಕೇರಳದ ಫೇಮಸ್ ಬ್ರೇಕ್ ಫಾಸ್ಟ್ ಫುಡ್ ಪುಟ್ಟು ಮಾಡೋದು ಬಲು ಸುಲಭ, ಸಖತ್ ಟೇಸ್ಟಿ ಒಮ್ಮೆ ಟ್ರೈ ಮಾಡಿ

ಕೇರಳದ ಸಾಂಪ್ರದಾಯಿಕ ತಿಂಡಿ ಪುಟ್ಟು ಹಬೆಯಲ್ಲಿ ಬೇಯುವುದರಿಂದ, ಪೋಷಕಾಂಶ ಹೆಚ್ಚಾಗಿರುತ್ತೆ. ಇದನ್ನು ಚಿಕನ್ ಕರಿ, ಮೊಟ್ಟೆ ಕರಿ ಮತ್ತು ಮೂಂಗ್ ದಾಲ್ ಕರಿ ಜೊತೆ ತಿಂದರಂತೂ ಆಹಾ ಸ್ವರ್ಗವೇ ಸಿಕ್ಕಂತ ರುಚಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೇರಳ (Kerala) ಸಂಸ್ಕೃತಿ, ಆಚಾರ-ವಿಚಾರ, ಸಾಕ್ಷರತೆ, ಉತ್ತಮ ಪ್ರವಾಸಿ ತಾಣ ಹೀಗೆ ಹಲವು ವಿಚಾರಗಳಲ್ಲಿ ಹೆಸರುವಾಸಿ ರಾಜ್ಯವಾಗಿದೆ. ಇದರ ಜೊತೆಗೆ ದಕ್ಷಿಣ ಭಾರತದ ಸಂಸ್ಕೃತಿಯಷ್ಟೇ ಶ್ರೀಮಂತವಾಗಿರುವ ಪರಿಮಳಯುಕ್ತ ಮತ್ತು ರುಚಿಕರ ತಿಂಡಿಯೊಂದು (Tasty Food) ಸಹ ಜಗತ್ಪಪ್ರಸಿದ್ಧವಾಗಿದೆ. ಹೌದು, ಕೇರಳದ ಫೇಮಸ್ (Famous) ತಿಂಡಿ ಪುಟ್ಟು , ವಿಭಿನ್ನ ರೀತಿಯ ಪದಾರ್ಥವಾಗಿದೆ. ಇದು ಕರ್ನಾಟಕ (Karnataka) ಕರಾವಳಿ ಭಾಗದಲ್ಲಿ ಸಹ ಪ್ರಚಲಿತದಲ್ಲಿದೆ. ಹಾಗಾದರೆ ಕೇರಳದ ಫೇಮಸ್ ತಿಂಡಿ ಪುಟ್ಟು ಮಾಡುವುದು ಹೇಗೆ? ಅದರ ಇತಿಹಾಸ ಏನು? ಎಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ.

ಪುಟ್ಟುವಿನ ಮೂಲ

ಪುಟ್ಟು ಮಲಯಾಳಿಗಳ ಮೂಲ ಆಹಾರ. ಪುಟ್ಟು ಮೊದಲು ತಮಿಳುನಾಡಿನಲ್ಲಿ ತಯಾರಾಗಿದೆ ಎಂದು ಇತಿಹಾಸಕಾರರು ಹೇಳುತ್ತಾರೆ. ಕೇರಳ, ತಮಿಳುನಾಡು, ಪಾಂಡಿಚೇರಿ ಮತ್ತು ಶ್ರೀಲಂಕಾಗಳಲ್ಲಿಯೂ ಪುಟ್ಟು ತಯಾರಿಸುತ್ತಾರೆ. ಅಸ್ಸಾಂನಲ್ಲಿ ಸುಂಗಪಿತಾ ಎಂಬ ಇದೇ ರೀತಿಯ ಖಾದ್ಯವಿದ್ದು, ಪುಟ್ಟು ಎಂದು ಹೇಳಲಾಗುತ್ತದೆ. 15 ನೇ ಶತಮಾನದ ತಮಿಳು ಕವಿ ಅರುಣಗಿರಿನಾಥರ ಪುಸ್ತಕದಲ್ಲಿ ಇದನ್ನು'ತಿರುಪುಗಳ್' ಎಂದು ಉಲ್ಲೇಖಿಸಲಾಗಿದೆ. ಅಲ್ಲದೇ ಆರಂಭಿಕ ಮಲಯಾಳಂ ಸಾಹಿತ್ಯದಲ್ಲಿ ಪುಟ್ಟುವನ್ನು ಉಲ್ಲೇಖಿಸಲಾಗಿದೆ. ಆ ಸಮಯದಲ್ಲಿ ಕೇರಳ ಮತ್ತು ತಮಿಳುನಾಡಿಗೆ ಪ್ರತ್ಯೇಕ ಆಹಾರ ಪದ್ಧತಿ ಇರಲಿಲ್ಲ.

ಇನ್ನು ಕೆಲವರು ಪುಟ್ಟು ಹುಟ್ಟಿದ್ದು ಕೇರಳದಲ್ಲಿ ಎನ್ನುತ್ತಾರೆ. ಪುಟ್ಟು ಹೇಗೆ ಹುಟ್ಟಿಕೊಂಡಿತು ಎಂದು ಕಥೆಗಳು ಹೇಳುವ ಪ್ರಕಾರ, ಮುದುಕಿಯೊಬ್ಬಳಿಗೆ ಪುಟ್ಟು ಮಾಡಲು ಸಹಾಯ ಮಾಡಲು ಸಾಮಾನ್ಯನ ವೇಷದಲ್ಲಿ ವಿಘ್ನ ನಿವಾರಕ ಗಣೇಶ ಬರುತ್ತಾನೆ, ಅವನಿಗೆ ಕೊಡಲು ತನ್ನ ಬಳಿ ಹಣವಿಲ್ಲ ಎಂದು ಅಜ್ಜಿ ಹೇಳಿದಾಗ, ಅವನು ಕೊಡುವಂತೆ ಕೇಳಿದನು. ಆಗ ಅಜ್ಜಿ ಪುಟ್ಟುವಿನ ಚೂರುಗಳನ್ನು ನೀಡಿದಳು. ಹೀಗಾಗಿ ಇಂದಿಗೂ ಮಧುರೆಯ ಗಣಪತಿಗೆ ಪುಟ್ಟುವಿನ ತುಂಡುಗಳನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ.

ಪುಟ್ಟುವಿನ ಬಗ್ಗೆ ಇನ್ನೂ ಹೆಚ್ಚಿನ ಕಥೆಗಳಿವೆ. ಎಲ್ಲರಿಗೂ ಚಿರಪರಿಚಿತವಾಗಿರುವ ಎಸ್.ಕೆ.ಪೊಟ್ಟಕಾಡು ಅವರ ‘ಒರು ದೇಶದಿಂದ ಕಥೆ’, ‘ಕುಠೀರ ಬಿರಿಯಾನಿ’ಯಲ್ಲೂ ಸಹ ಉಲ್ಲೇಖವಾಗಿದೆ.

ಅತ್ಯಂತ ಪೌಷ್ಟಿಕ ಉಪಹಾರ

ಪೌಷ್ಟಿಕತಜ್ಞರು ಪುಟ್ಟುವನ್ನು ಆರೋಗ್ಯಕರವೆಂದು ಹೇಳುತ್ತಾರೆ. ಈ ಉಪಹಾರವು ಕಾರ್ಬೋಹೈಡ್ರೇಟ್ಗಳು ಮತ್ತು ಪ್ರೋಟೀನ್ಗಳ ಸಂಯೋಜನೆಯಾಗಿದೆ.

ಇದು ಆವಿಯಲ್ಲಿ ಬೇಯುವುದರಿಂದ, ಪೋಷಕಾಂಶಗಳನ್ನು ಉಳಿಸಿಕೊಳ್ಳುತ್ತದೆ ಮತ್ತು ಶಕ್ತಿಯ ಉತ್ತಮ ಮೂಲವಾಗಿದೆ ಎನ್ನುತ್ತಾರೆ. ಇದನ್ನು ಚಿಕನ್ ಕರಿ, ಮೊಟ್ಟೆ ಕರಿ ಮತ್ತು ಮೂಂಗ್ ದಾಲ್ ಕರಿ ಜೊತೆ ತಿಂದರಂತೂ ಆಹಾ ಸ್ವರ್ಗವೇ ಸಿಕ್ಕಂತ ರುಚಿ.

ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಮಕ್ಕಳಿಗಾಗಿ ಪ್ರೋಟೀನ್ ಪಾಲಕ್ ಪಲಾವ್

ಪುಟ್ಟುವಿನಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸಲು ಕೆಲವು ವಿಧಾನಗಳು:

• ತುರಿದ ತೆಂಗಿನಕಾಯಿ ಜೊತೆಗೆ ತುರಿದ ಕ್ಯಾರೆಟ್‌ಗಳನ್ನು ನೀವು ಸೇರಿಸಬಹುದು
• ರಾಗಿ ಮತ್ತು ಗೋಧಿ ಪುಟ್ಟು ಪ್ರಯತ್ನಿಸಿ.
• ಮಧುಮೇಹ ರೋಗಿಗಳು ಪುಟ್ಟುವನ್ನು ಸಣ್ಣ ಭಾಗಗಳಲ್ಲಿ ಸೇವಿಸಬಹುದು.
• ಬಿದಿರು ಮತ್ತು ತೆಂಗಿನ ಚಿಪ್ಪಿನಲ್ಲಿ ಪುಟ್ಟು ಉಗಿ ಮಾಡುವುದು ಸೂಕ್ತವಾಗಿದೆ.
• ಪುಟ್ಟುವಿನಲ್ಲಿ ಸಕ್ಕರೆಯನ್ನು ತಪ್ಪಿಸಿ.
• ಮೇಲೋಗರವನ್ನು ತಯಾರಿಸುವಾಗ, ಮೂಂಗ್ ಮೊಳಕೆ ಅಥವಾ ಮಿಶ್ರ ಕಾಳು ಬಳಸಿ

ಮೃದುವಾದ ಪುಟ್ಟು ಮಾಡಲು ಸಲಹೆ

ಫುಡ್ ವ್ಲೋಗರ್ ಮೃಣಾಲ್ ದಾಸ್ ವೆಂಕಲಟ್ ಪುಟ್ಟು ಮೃದುವಾಗಿ ಮಾಡಲು ಕೆಲ ಸಲಹೆ ನೀಡಿದ್ದಾರೆ. ಪುಟ್ಟು ಮಾಡಲು ಅಕ್ಕಿಯನ್ನು ಗ್ರೌಂಡ್ ಮಾಡುವುದು ಮತ್ತು ಹುರಿಯುವುದು ಸೇರಿದಂತೆ ಮೊದಲಿನಿಂದಲೂ ಹೇಳಿದ್ದಾರೆ.

ಪುಟ್ಟು ಮಾಡಲು ಹಿಟ್ಟು ಒಣಗಬೇಕು ಮತ್ತು ನಂತರ ಕ್ರಮೇಣ ಸಾಕಷ್ಟು ನೀರು ಸೇರಿಸಿ ಮತ್ತು ಪುಟ್ಟು ತಯಾರಿಸಲು ಹಿಟ್ಟು ಮಿಶ್ರಣ ಮಾಡಿಕೊಳ್ಳಬೇಕು ಎಂದಿದ್ದಾರೆ. ಹಿಟ್ಟು ಇದು ರುಚಿಕರವಾದ ಪುಟ್ಟು ತಯಾರಿಸಲು ಕಾರಣವಾಗುತ್ತದೆ ಎಂದಿದ್ದಾರೆ. ಪುಟ್ಟುವನ್ನು ದಾಲ್ ಮತ್ತು ಪಪ್ಪಡ್‌ನೊಂದಿಗೆ ಸೇರಿಸಿದರೆ ಅದು ಅಸಾಮಾನ್ಯವಾಗಿ ಮೃದುವಾಗುತ್ತದೆ ಎಂದು ಹೇಳಿದ್ದಾರೆ.

ಮಸಾಲಾ ಪುಟ್ಟು
ಮಸಾಲಾ ಪುಟ್ಟು ಮಾಡುವ ಮೊದಲು ಪುಟ್ಟು ತಯಾರಿಸಿಕೊಳ್ಳುವುದು ಹೇಗೆ ಮೊದಲು ತಿಳಿಯೋಣ.

ಪುಟ್ಟು ವಿಧಾನ

ಮೊದಲು ಅಕ್ಕಿಯನ್ನು 4 ಗಂಟೆ ನೀರಿನಲ್ಲಿ ನೆನಸಿ ಇಡಿ. 4 ಗಂಟೆಗಳ ನಂತರ ಅದನ್ನು ಚೆನ್ನಾಗಿ ತೊಳೆದು ಅಕ್ಕಿಯನ್ನು ಸೋಸಿಕೊಂಡ ಮೇಲೆ ಅಕ್ಕಿಯನ್ನು ಪುಡಿ ಮಾಡಬೇಕು, ಆದರೆ ಪುಡಿ ಮಾಡುವಾಗ ಹೆಚ್ಚು ನುಣ್ಣಗೆ ಮಾಡಬಾರದು. ಪುಡಿ ಮಾಡಿಕೊಂಡ ನಂತರ ಅಕ್ಕಿ ಹಿಟ್ಟನ್ನು ಒಂದು ಬಾಣಲೆಯಲ್ಲಿ ಹಾಕಿ ಸ್ವಲ್ಪ ಬಿಸಿ ಮಾಡಿಕೊಳ್ಳಿ. ಅಕ್ಕಿ ಹಿಟ್ಟನ್ನು ಸೌಟ್ ನಿಂದ ಕಲಸುತ್ತಾ ಇರಬೇಕು. ನಂತರ ಅಕ್ಕಿ ಹಿಟ್ಟನ್ನು ಆರಲು ಬಿಡಿ..

ಹಿಟ್ಟನ್ನು ಮಿಶ್ರಣ ಮಾಡುವಾಗ ಹಿಟ್ಟು ತುಂಬಾ ಮೆತ್ತಗೆ ಆಗಬಾರದು ಅಥವಾ ತುಂಬಾ ಪುಡಿ ಪುಡಿಯಾಗಿರಬಾರದು. ಪುಟ್ಟು ಮಾಡಲು ಒಂದು ಪಾತ್ರೆ ಬರುತ್ತದೆ ಅದರ ತಳದಲ್ಲಿ ನೀರು ಹಾಕಿ ಕುದಿಯಲು ಇಡಬೇಕು. ಆ ಪಾತ್ರೆಯಲ್ಲಿ ಮೇಲ್ಭಾಗದಲ್ಲಿ ಉದ್ದಕ್ಕಿರುವ ಒಂದು ಕೊಳವೆ ಇರುತ್ತದೆ.

ಈಗ ಆ ಕೊಳವೆಗೆ ತಯಾರಾಗಿರುವ ಮಿಶ್ರಣವನ್ನು ಹಾಕಿ, ಮತ್ತೆ 1/4 ಭಾಗ ಅಕ್ಕಿ ಹಿಟ್ಟು ಸ್ವಲ್ಪ ತೆಂಗಿನ ತುರಿ ಹೀಗೆ ಹಾಕಿ ಆ ಕೊಳವೆ ಆಕಾರದ ಪಾತ್ರೆ ತುಂಬಿಸಿ. ಅದರ ಮೇಲ್ಭಾಗದಲ್ಲಿ ತುರಿದ ತೆಂಗಿನ ಕಾಯಿ ಮತ್ತು ಸಕ್ಕರೆ ಹಾಕಿ ಅದರ ಮುಚ್ಚಳ ಹಾಕಿ ಬೇಯಿಸಿ.

ನಂತರ ಹತ್ತು ನಿಮಿಷದಲ್ಲಿ ಅಥವಾ ಅದು ಬೆಂದಾಗ ಆವಿ ಹೊರಗೆ ಬರಲು ಆರಂಭಿಸುತ್ತದೆ. ಅದನ್ನು ನಿಧಾನವಾಗಿ ತೆಗೆದರೆ ಪುಟ್ಟು ರೆಡಿ.

ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಸುಲಭವಾಗಿ ಮಾಡೋ 2 ಬಗೆಯ ರೈಸ್​ ಬಾತ್ ರೆಸಿಪಿ

ಪದಾರ್ಥಗಳು
1 ಕಪ್ ಬೀನ್ಸ್
1 ಕಪ್ ಕ್ಯಾರೆಟ್
1 ಕಪ್ ಕ್ಯಾಪ್ಸಿಕಂ
1 ಈರುಳ್ಳಿ
2 ಟೊಮ್ಯಾಟೊ
ಒಂದು ಸಣ್ಣ ತುಂಡು ಶುಂಠಿ
3 ಹಸಿರು ಮೆಣಸಿನಕಾಯಿಗಳು
2 ಕಪ್ ಚಿಕನ್
½ ಟೀಸ್ಪೂನ್ ಗರಂ ಮಸಾಲಾ
½ ಟೀಸ್ಪೂನ್ ಮೆಣಸು ಪುಡಿ

ವಿಧಾನ
ಕಡಾಯಿಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಶುಂಠಿ,ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಗಳನ್ನು ಸೇರಿಸಿದ ನಂತರ, ಟೊಮೆಟೊಗಳನ್ನು ಹಾಕಿ ಟೊಮೆಟೊ ಮೃದುವಾದ ನಂತರ, ಚಿಕನ್ ಸೇರಿಸಿ ಮತ್ತು ಬೇಯಿಸಿ. ಪುಟ್ಟು ಪೋಡಿ ಮತ್ತು ತುರಿದ ತೆಂಗಿನಕಾಯಿಯನ್ನು ಕ್ರಮವಾಗಿ ಸೇರಿಸಿ ಮತ್ತು ಉಗಿಯಲ್ಲಿ ಬೇಯಿಸಿದರೆ ರುಚಿಯಾದ ಪುಟ್ಟು ರೆಡಿ.

ಕಪ್ಪು ಕಡಲೆ ಗ್ರೇವಿ ಮಾಡುವ ವಿಧಾನ

ಪುಟ್ಟುವಿಗೆ ಈ ಕಡಲೆ ಗ್ರೇವೆ ಉತ್ತಮ ಕಾಂಬಿನೇಷನ್ ಆಗಿರುತ್ತದೆ.
ಕಪ್ಪು ಚನ್ನಾವನ್ನು ರಾತ್ರಿಯಿಡೀ ನೆನೆಸಿಡಿ. ಮರುದಿನ ಚನ್ನವನ್ನು ತೊಳೆಯಿರಿ
ಮತ್ತು ಅದಕ್ಕೆ ಕೆಲವು ಈರುಳ್ಳಿ ಮತ್ತು ಉಪ್ಪನ್ನು ಹಾಕಿ ಅದು ಮೃದುವಾಗುವವರೆಗೆ ಬೇಯಿಸಿ.
• ಮೇಲೋಗರಕ್ಕೆ, ಕಡಾಯಿಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ, ತುರಿದ ತೆಂಗಿನಕಾಯಿ, ಈರುಳ್ಳಿ, ಕರಿಬೇವಿನ ಎಲೆಗಳನ್ನು ಸೇರಿಸಿ ಹುರಿಯಿರಿ ನಂತರ, ಮೆಣಸು ಪುಡಿ ಮತ್ತು ಕೊತ್ತಂಬರಿ ಪುಡಿ ಸೇರಿಸಿ ಕೆಲವು ನಿಮಿಷಗಳ ಕಾಲ ಅದನ್ನು ಹುರಿಯಿರಿ.ಮತ್ತು ಬ್ಲೆಂಡರ್ನಲ್ಲಿ ರುಬ್ಬಿಕೊಳ್ಳಿ.
• ಈಗ ಪ್ರತ್ಯೇಕ ಪ್ಯಾನ್ ತೆಗೆದುಕೊಳ್ಳಿ, ಸ್ವಲ್ಪ ಸಾಸಿವೆ ಕಾಳುಗಳು, ಕೆಂಪು ಮೆಣಸಿನಕಾಯಿಗಳು ಕತ್ತರಿಸಿದ ತೆಂಗಿನ ಕಾಯಿ ತುಂಡುಗಳನ್ನು ಫ್ರೈ ಮಾಡಿ. ನಂತರ ಬೇಯಿಸಿದ ಕಡಲೆ ಹಾಕಿ ಕೆಲವು ನಿಮಿಷಗಳ ಕಾಲ ಅದನ್ನು ಕುದಿಸಿ. ಕೆಲವು ಗರಂ ಮಸಾಲಾ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಕುದಿಸಿ.
Published by:Pavana HS
First published: