ನಿಮಗಿದು ಗೊತ್ತೆ? ತುರಿಕೆಯ ಹಿಂದಿದೆ ಒಂದು ವೈಜ್ಞಾನಿಕ ಕಾರಣ..!

ಈ ಅಧ್ಯಯನದಲ್ಲಿ ನಿರಂತರ ತುರಿಕೆ ಎಂಬುದು ಕೂಡ ದೊಡ್ಡ ರೋಗಗಳ ಲಕ್ಷಣ ಎಂಬುದು ತಿಳಿದು ಬಂದಿದೆ. ತುರಿಕೆ ಪ್ರಕ್ರಿಯೆಯು ಅನೇಕ ಸಂದರ್ಭಗಳಲ್ಲಿ ಎಸ್ಜಿಮಾ, ಮಧುಮೇಹ, ಕ್ಯಾನ್ಸರ್ ರೋಗದ ಲಕ್ಷಣ ಕೂಡ ಆಗಿರುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

zahir | news18-kannada
Updated:August 28, 2019, 11:55 AM IST
ನಿಮಗಿದು ಗೊತ್ತೆ? ತುರಿಕೆಯ ಹಿಂದಿದೆ ಒಂದು ವೈಜ್ಞಾನಿಕ ಕಾರಣ..!
ಸಾಂದರ್ಭಿಕ ಚಿತ್ರ
zahir | news18-kannada
Updated: August 28, 2019, 11:55 AM IST
ಕೆಲವು ವಿಷಯಗಳಿವೆ, ಅದು ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿದ್ದರೂ ಅದರ ಹಿಂದಿನ ಕಾರಣದ ಬಗ್ಗೆ ಮಾತ್ರ ನಾವು ಒಂದು ಬಾರಿ ಕೂಡ ಯೋಚಿಸಿರುವುದಿಲ್ಲ. ನಾವೇಕೆ ಬಿಕ್ಕಳಿಸುತ್ತೀವಿ? ಸೀನುವಾಗ ಕಣ್ಣುಗಳೇಕೆ ಮುಚ್ಚಿಕೊಳ್ಳುತ್ತವೆ? ಹೀಗೆ ನಮ್ಮನ್ನೇ ನಾವು ಪ್ರಶ್ನಿಸಲು ನೂರಾರು ಪ್ರಶ್ನೆಗಳಿವೆ. ಅದರಲ್ಲೊಂದು ತುರಿಕೆ ಕೂಡ. ಸಾಮಾನ್ಯವಾಗಿ ದೇಹದಲ್ಲಿ ತುರಿಕೆಗಳು ಉಂಟಾಗುತ್ತದೆ. ಅಂದರೆ ಇದಕ್ಕೂ ಒಂದು ಕಾರಣವಿರಬೇಕಲ್ಲವೇ. ಹೌದು, ತುರಿಕೆ ಹಿಂದಿರುವ ವೈಜ್ಞಾನಿಕ ಕಾರಣವನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ದೇಹ ಭಾಗದಲ್ಲಿ ತುರಿಕೆಯಾದರೆ ಅಲ್ಲಿಗೆ ಕೈ ಹೋಗಬೇಕು ಎಂಬುದು ಮೆದುಳಿಗೆ ನಮ್ಮ ಸ್ನಾಯುಗಳಲ್ಲಿರುವ ನ್ಯೂರಾನ್​ ಸಂವೇದನೆಯನ್ನು ಕಳುಹಿಸುತ್ತವೆ ಎಂಬುದನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ. ಜರ್ನಲ್ ಆಫ್ ಮೆಕ್ಯಾನಿಕಲ್ ಬಿಹೇವಿಯರ್ ಆಫ್ ಬಯೋಮೆಡಿಕಲ್ ಮೆಟೀರಿಯಲ್ಸ್‌ನಲ್ಲಿ ಪ್ರಕಟವಾಗಿರುವ ಈ ಸಂಶೋಧನಾ ಅಧ್ಯಯನದಲ್ಲಿ ತುರಿಕೆಯ ಹಿಂದಿನ ಕಾರಣಗಳನ್ನು ಪತ್ತೆ ಹಚ್ಚಲಾಗಿದೆ.

ಈ ಅಧ್ಯಯನದಲ್ಲಿ ನಿರಂತರ ತುರಿಕೆ ಎಂಬುದು ಕೂಡ ದೊಡ್ಡ ರೋಗಗಳ ಲಕ್ಷಣ ಎಂಬುದು ತಿಳಿದು ಬಂದಿದೆ. ತುರಿಕೆ ಪ್ರಕ್ರಿಯೆಯು ಅನೇಕ ಸಂದರ್ಭಗಳಲ್ಲಿ ಎಸ್ಜಿಮಾ, ಮಧುಮೇಹ, ಕ್ಯಾನ್ಸರ್ ರೋಗದ ಲಕ್ಷಣ ಕೂಡ ಆಗಿರುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಚರ್ಮದ ಮೇಲೆ ಏನಾದರೂ ಕುಳಿತಾಗ, ಕಚಗುಳಿಯಿಡುವುದು ಮತ್ತು ಕೆಲವೊಮ್ಮೆ ತೀವ್ರ ತುರಿಕೆಯ ಅನುಭವವಾಗುತ್ತದೆ. ಈ ಪ್ರತಿಕ್ರಿಯೆಯನ್ನು ಯಾಂತ್ರಿಕ ತುರಿಕೆ ಎಂದು ಕರೆಯಲಾಗುತ್ತದೆ. ಇಂತಹ ಸಂದರ್ಭದಲ್ಲಿ ಬೆನ್ನುಹಿರಿಯಲ್ಲಿನ ಪ್ರತಿಬಂಧಕ ನ್ಯೂರಾನ್​ಗಳು ಕಾರ್ಯನಿರ್ವಹಿಸುತ್ತದೆ. ಇದರಿಂದ ನಿಮಗೆ ತುರಿಕೆ ಅನುಭವವಾಗುತ್ತದೆ ಎಂದು ಸಂಶೋಧಕಿ ಮಾರ್ಟಿನ್ ಗೋಲ್ಡಿಂಗ್​ ಹೇಳಿದ್ದಾರೆ.

ಬೆನ್ನುಹುರಿಯ ನರಕೋಶಗಳು ಯಾಂತ್ರಿಕ ತುರಿಕೆ ಸಂವೇದನಾತ್ಮಕ ಮಾಹಿತಿಯನ್ನು ಮೆದುಳಿಗೆ ರವಾನಿಸುತ್ತದೆ. ಈ ನ್ಯೂರನ್ Y neuropeptide ಅನ್ನು ಉತ್ಪತ್ತಿ ಮಾಡುತ್ತದೆ. ಇದು ಹೆಚ್ಚಾದಂತೆ ರೋಗದ ಸಮಸ್ಯೆಯ ಅಪಾಯ ಕೂಡ ತಲೆದೂರುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.


ರಾಬರ್ಟ್​ ಅಡ್ಡಾಗೆ ಎಂಟ್ರಿ ಕೊಡಲಿದ್ದಾರೆ ಸೌತ್ ಸುಂದರಿ..!
Loading...First published:August 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...