Tourist Spot: ಹಡಗು ಮುಳುಗಿದ ಜಾಗವೂ ಈಗ ಗೋವಾದ ಮತ್ತೊಂದು ಆಕರ್ಷಣೆಯ ಸ್ಥಳವಂತೆ

ಅರ್ಧ ಶತಮಾನದ ಹಿಂದೆ ದಕ್ಷಿಣ ಗೋವಾ ಜಿಲ್ಲೆಯ ವಾಸ್ಕೋ ಬಂದರು ಪಟ್ಟಣ ಬಳಿ ಮುಳುಗಿದ ಹಡಗು ದೇಶಾದ್ಯಂತ ಡೈವಿಂಗ್ ಉತ್ಸಾಹಿಗಳನ್ನು ಸೆಳೆಯುತ್ತಿದೆ. ಗೋವಾದಲ್ಲಿ ಸಾಹಸ ಮಾಡಲು ಇಷ್ಟ ಪಡುವವರು ಮತ್ತು ವಾಟರ್ ಗೇಮ್ಸ್ ಇಷ್ಟ ಪಡುವವರು ಸ್ಕೂಬಾ ಡೈವಿಂಗ್ ಅನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಹೀಗೆ ಸ್ಕೂಬಾ ಡೈವಿಂಗ್ ಮಾಡಲು ಈ ಜಾಗವನ್ನು ಪ್ರವಾಸಿಗರು ಇಷ್ಟಪಡುತ್ತಿದ್ದಾರೆ.

1960ರಲ್ಲಿ ಮುಳುಗಿದ ಹಡಗು

1960ರಲ್ಲಿ ಮುಳುಗಿದ ಹಡಗು

  • Share this:
ಎಲ್ಲಾದರೂ ಪ್ರವಾಸ (Tour) ಹೋಗಬೇಕು ಅಂತಾ ಪ್ಲ್ಯಾನ್ ಮಾಡಿದರೆ ಮೊದಲು ನಮ್ಮ ಬಾಯಲ್ಲಿ ಹೆಸರು ಬರುವುದೇ ಗೋವಾ (Goa). ಅಲ್ಲಿನ ಬೀಜ್, ಟ್ರೆಕ್ಕಿಂಗ್, ಕ್ಯಾಸಿನೋ, ಸ್ಕೂಬಾ ಡೈವಿಂಗ್, ಹಳೇ ಗೋವಾ... ಅಬ್ಬಬ್ಬಾ ಪರಿಪೂರ್ಣ ಪ್ರವಾಸಕ್ಕೆ ಏನೆಲ್ಲಾ ಬೇಕೋ ಅದೆಲ್ಲಾ ಗೋವಾದಲ್ಲಿದೆ. ಗೋವಾ ಕಡಲತೀರಗಳಿಗೆ ಹೆಚ್ಚು ಜನಪ್ರಿಯವಾಗಿದೆ. ಅಗೋಡಾ ಬೀಚ್, ಕಲ್ಲಂಗೂಟ್ ಬೀಚ್ (Beach) ಹೀಗೆ ಇನ್ನೂ ಸುಮಾರು ಕಡಲತೀರಗಳಿವೆ. ಇವೆಲ್ಲದರ ಜೊತೆ ಗೋವಾದಲ್ಲಿ ನೋಡಬಹುದಾದ ಮತ್ತೊಂದು ಸ್ಥಳ ಸದ್ಯ ಪ್ರವಾಸಿಗರ ಹಾಟ್ ಫೇವರೆಟ್ ಜಾಗವಾಗಿದೆ (Hot Favorite Place). ಅದ್ಯಾವುದು ಅಂದರೆ ಹಡಗು ಮುಳುಗಡೆಯಾಗಿದ್ದ ಸ್ಥಳ.

ಹೌದು ಅರ್ಧ ಶತಮಾನದ ಹಿಂದೆ ದಕ್ಷಿಣ ಗೋವಾ ಜಿಲ್ಲೆಯ ವಾಸ್ಕೋ ಬಂದರು ಪಟ್ಟಣ ಬಳಿ ಮುಳುಗಿದ ಹಡಗು ದೇಶಾದ್ಯಂತ ಡೈವಿಂಗ್ ಉತ್ಸಾಹಿಗಳನ್ನು ಸೆಳೆಯುತ್ತಿದೆ. ಗೋವಾದಲ್ಲಿ ಸಾಹಸ ಮಾಡಲು ಇಷ್ಟ ಪಡುವವರು ಮತ್ತು ವಾಟರ್ ಗೇಮ್ಸ್ ಇಷ್ಟ ಪಡುವವರು ಸ್ಕೂಬಾ ಡೈವಿಂಗ್ ಅನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಹೀಗೆ ಸ್ಕೂಬಾ ಡೈವಿಂಗ್ ಮಾಡಲು ಈ ಜಾಗವನ್ನು ಪ್ರವಾಸಿಗರು ಇಷ್ಟಪಡುತ್ತಿದ್ದಾರೆ.

ಹೇಗೆ ಹಡಗು ಮುಳುಗಡೆಯಾಗಿತ್ತು?
1960ರ ದಶಕದಲ್ಲಿ ಗುಜರಾತ್‌ನಿಂದ ಗೋವಾಕ್ಕೆ ರೈಲು ಹಳಿಗಳನ್ನು ಸಾಗಿಸುತ್ತಿದ್ದ ಎಸ್‌ಎಸ್ ರೀಟಾ ಎಂಬ ಹಡಗು ಗ್ರ್ಯಾಂಡ್ ಐಲ್ಯಾಂಡ್ ಬಳಿ ಮುಳುಗಡೆಯಾಗಿತ್ತು. ಆದರೆ ಇದಕ್ಕೆ ಸರಿಯಾದ ಯಾವುದೇ ದಾಖಲೆಗಳು ಲಭ್ಯವಿಲ್ಲ. ಆದರೆ ಸ್ವಲ್ಪ ದೂರದಲ್ಲಿ ನೀರಿನ ಆಳದಲ್ಲಿರುವ ಅವಶೇಷಗಳು ಹಡಗು ಮುಳುಗಿರುವ ಬಗ್ಗೆ ಸಾಕ್ಷ್ಯಗಳನ್ನು ನೀಡುತ್ತಿವೆ.

ಇದನ್ನೂ ಓದಿ: Tourist Places In Goa: ಮಳೆಗಾಲದಲ್ಲಿ ಗೋವಾ ನೋಡೋದೆ ಚೆಂದ; ಈ ಸ್ಥಳಗಳಿಗೆ ಮಿಸ್ ಮಾಡ್ದೆ ಹೋಗಿ ಬನ್ನಿ

“ನೌಕಾಘಾತವನ್ನು ವೀಕ್ಷಿಸಲು ಪ್ರವಾಸಿಗರು ಹೆಚ್ಚು ಆಸಕ್ತಿ ತೋರುತ್ತಾರೆ. ಇದು ದ್ವೀಪದ ಸಮೀಪವಿರುವ ಏಳು ಡೈವಿಂಗ್ ಸೈಟ್‌ಗಳಲ್ಲಿ ಒಂದಾಗಿದೆ ”ಎಂದು ಸ್ಕೂಬಾ ಡೈವಿಂಗ್ ತರಬೇತಿ ಸಂಸ್ಥೆಯನ್ನು ನಡೆಸುತ್ತಿರುವ ಮಾಜಿ ನೌಕಾಪಡೆಯ ವ್ಯಕ್ತಿ ಸ್ಕಂದನ್ ವಾರಿಯರ್ ಹೇಳಿದರು. ಸುಮಾರು ಏಳರಿಂದ 13-14 ಮೀಟರ್ ಆಳದಲ್ಲಿ ನೀರಿನ ಅಡಿಯಲ್ಲಿ ಹುದುಗಿರುವ ಹಡಗಿನ ಅವಶೇಷಗಳು ಕೃತಕ ಬಂಡೆಯಾಗಿ ಮಾರ್ಪಟ್ಟಿವೆ. ಇದು ಪ್ರವಾಸಿಗರನ್ನು ಸೆಳೆಯುತ್ತಿದೆ ಎಂದು ಅವರು ಹೇಳಿದರು. "ಪ್ರವಾಸಿಗರು ಎಸ್‌ಎಸ್ ರೀಟಾವನ್ನು ಅನ್ವೇಷಿಸುವ ರೀತಿಯಲ್ಲಿ ಅನ್ವೇಷಿಸಬಹುದಾದ ಯಾವುದೇ ಹಡಗು ಧ್ವಂಸಗಳು ಅಷ್ಟೇನೂ ಇಲ್ಲ. ಇದು ಮೀನುಗಳಿಗೆ ಆಶ್ರಯವಾಗಿದೆ" ಎಂದು ಸ್ಕಂದನ್ ವಾರಿಯರ್ ಮತ್ತಷ್ಟು ಮಾಹಿತಿ ನೀಡಿದರು.

ಪ್ರವಾಸಿಗರಿಗೆ ಇದೊಂದು ಅದ್ಭುತ ಪ್ರವಾಸಿ ತಾಣವಂತೆ 
ಹಡಗು ಮುಳುಗಿದ ಈ ಜಾಗಕ್ಕೆ ಭೇಟಿ ನೀಡುವ ಹಲವಾರು ಪ್ರವಾಸಿಗರು ಇದೊಂದು ಅದ್ಭುತ ತಾಣ ಎಂದು ಮೆಚ್ಚಿಕೊಂಡಿದ್ದಾರಂತೆ. ಹಡಗಿನ ವಿಂಚ್‌ಗಳು, ಬಿಲ್ಲು, ಡೇವಿಟ್ (ದೋಣಿಗಳನ್ನು ಇಳಿಸಲು ಬಳಸುವ ಕ್ರೇನ್), ಪೋರ್ಟ್‌ಹೋಲ್‌ಗಳು ಮತ್ತು ಏಣಿಯನ್ನು ಇಲ್ಲಿ ನೋಡಬಹುದಾಗಿದೆ. ಗ್ರ್ಯಾಂಡ್ ಐಲ್ಯಾಂಡ್ ಸುತ್ತಲಿನ ಪ್ರದೇಶವು ಏಳು ಡೈವಿಂಗ್ ತಾಣಗಳನ್ನು ಹೊಂದಿದೆ. ಭಾರತೀಯ ಪ್ರವಾಸಿಗರಲ್ಲಿ ಸ್ಕೂಬಾ ಡೈವಿಂಗ್‌ನಲ್ಲಿ ಆಸಕ್ತಿ ಹೆಚ್ಚುತ್ತಿದೆ ಎಂದು ಸ್ಥಳೀಯ ಮೀನುಗಾರ ಆಂಥೋನಿ ಫರ್ನಾಂಡಿಸ್ ಹೇಳುತ್ತಾರೆ.

ಇದನ್ನೂ ಓದಿ:  Tourist Spots: ಆಫ್‌ಬೀಟ್ ಅನುಭವವನ್ನು ನೀಡುವ ಕರ್ನಾಟಕದ ಪ್ರವಾಸಿ ತಾಣಗಳಿವು!

"ಕೋವಿಡ್ -19 ಸಾಂಕ್ರಾಮಿಕದ ನಂತರ, ಹೆಚ್ಚು ಹೆಚ್ಚು ದೇಶೀಯ ಪ್ರವಾಸಿಗರು ಡೈವಿಂಗ್ ಮಾಡಲು ಪ್ರಯತ್ನಿಸುವುದನ್ನು ನಾವು ನೋಡಿದ್ದೇವೆ" ಎಂದು ಅವರು ಹೇಳಿದರು. ಇಂತಹ ವಾಟರ್‌ ಗೇಮ್ಸ್‌ ಕೈಗೊಳ್ಳಲು ಗೋವಾದಲ್ಲಿ ಪ್ರತ್ಯೇಕವಾದ ತಾಣಗಳಿವೆ. ಅವುಗಳೆಂದರೆ, ಮಾಲ್ವಾನ್‌ ದ್ವೀಪ, ಗ್ರಾಂಡೆ ದ್ವೀಪ ಮತ್ತು ಬಾಗಾ ಬೀಚ್. ಸದ್ಯ ಈ ಪಟ್ಟಿಗೆ ಗ್ರ್ಯಾಂಡ್ ಐಲ್ಯಾಂಡ್ ಹೊಸ ಸೇರ್ಪಡೆಯಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಇನ್ನೂ ಅದೇ ಪ್ರದೇಶದಲ್ಲಿ ಮತ್ತರೆಡು ಹಡಗುಗಳು ಮುಳುಗಿವೆ ಎಂದು ಸ್ಕಂದನ್ ವಾರಿಯರ್ ಹೇಳಿದರು. ಆದರೆ ಅವು ಸಮುದ್ರತಳದ ಆಳವಾದ ಭಾಗಗಳಲ್ಲಿ ಸಿಲುಕಿಕೊಂಡಿವೆ ಮತ್ತು ಅಷ್ಟು ಸುಲಭವಾಗಿ ತಲುಪಲು ಸಾಧ್ಯವಿಲ್ಲ, ಹೀಗಾಗಿ ಪ್ರವಾಸಿಗರು ಎಸ್‌ಎಸ್ ರೀಟಾ ಹಡಗನ್ನು ಅನ್ವೇಷಿಸುವ ರೀತಿಯಲ್ಲಿ ಅವುಗಳನ್ನು ನೋಡುವುದು ಕಷ್ಟಸಾಧ್ಯವಾಗಿದೆ. "ಈ ಎರಡೂ ಹಡಗಿನ ಅವಶೇಷಗಳು ನೀರಿನ ಕೆಳಗೆ 18 ರಿಂದ 20 ಮೀಟರ್‌ಗಳಷ್ಟು ಇದೆ, ಆದ್ದರಿಂದ ಅನನುಭವಿ ಡೈವರ್‌ಗಳಿಗೆ ಅಲ್ಲಿಗೆ ತಲುಪಲು ಕಷ್ಟವಾಗುತ್ತದೆ" ಎಂದು ಅವರು ಹೇಳಿದರು. ಹಾಗಾದರೆ, ನೀವು ಸಹ ಗೋವಾಕ್ಕೆ ಹೋಗುವವರಿದ್ದರೆ ಈ ಜಾಗಕ್ಕೆ ಭೇಟಿ ನೀಡುವುದನ್ನು ಮಿಸ್ ಮಾಡಬೇಡಿ.
Published by:Ashwini Prabhu
First published: