ವೈದ್ಯರು ಹೇಳಿದ ಡಯಟ್​ನಿಂದ ಮೂರೇ ತಿಂಗಳಲ್ಲಿ ಗುಣವಾಯ್ತು 12 ವರ್ಷಗಳ Migraine ಸಮಸ್ಯೆ

ವೈದ್ಯರು ಇವರಿಗೆ ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಲು ಹೇಳಿದ್ದು, ವ್ಯಕ್ತಿಯು ಅದನ್ನೇ ಅನುಸರಿಸಿದ್ದು ಕೇವಲ 3 ತಿಂಗಳೊಳಗೆ ಮೈಗ್ರೇನ್ ಸಮಸ್ಯೆಯಿಂದ ಮುಕ್ತಿ ಪಡೆದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಹುತೇಕರು ತೀವ್ರವಾದ ತಲೆ ನೋವು ‘ಮೈಗ್ರೇನ್’ (Migraine) ಸಮಸ್ಯೆಯಿಂದ ಬಳಲುತ್ತಿರುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಅವರು ಆ ಸಮಸ್ಯೆಯಿಂದ ದಿನವಿಡೀ ಯಾವುದೇ ಕೆಲಸ ಮಾಡದೆ ಮನೆಯಲ್ಲಿಯೇ ಮಲಗಿರುತ್ತಾರೆ. ಹೌದು, ಈ ಮೈಗ್ರೇನ್ ಸಮಸ್ಯೆಯೇ ಅಂತಹದ್ದು. ಹಾಗಿದ್ದರೆ ಇದಕ್ಕೆ ಏನು ಪರಿಹಾರ ಅಂತೀರಾ..? ಬನ್ನಿ ಹಾಗಾದರೆ 12 ವರ್ಷಗಳ ತೀವ್ರ ಮೈಗ್ರೇನ್ ನಿಂದ ಬಳಲುತ್ತಿದ್ದ 60 ವರ್ಷದ ವ್ಯಕ್ತಿಗೆ ವೈದ್ಯರು ಯಾವ ಸಲಹೆ ನೀಡಿದ್ದು, ಅವರ ದೀರ್ಘಕಾಲದ ಮೈಗ್ರೇನ್ ಮೂರೇ ತಿಂಗಳಲ್ಲಿ ವಾಸಿಯಾಗಿದೆ ಎಂದು ನೋಡೋಣ.

ವೈದ್ಯರು ಇವರಿಗೆ ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಲು ಹೇಳಿದ್ದು, ವ್ಯಕ್ತಿಯು ಅದನ್ನೇ ಅನುಸರಿಸಿದ್ದು ಕೇವಲ 3 ತಿಂಗಳೊಳಗೆ ಮೈಗ್ರೇನ್ ಸಮಸ್ಯೆಯಿಂದ ಮುಕ್ತಿ ಪಡೆದಿದ್ದಾರೆ.

Why migraine sufferers may want to eat more fish
ಸಾಂದರ್ಭಿಕ ಚಿತ್ರ Photo: Google


ಬಿಎಂಜೆ ಕೇಸ್ ರಿಪೋರ್ಟ್ಸ್ ಗುರುವಾರ ಪ್ರಕಟಿಸಿದ ಪ್ರಕರಣ ಅಧ್ಯಯನದ ಪ್ರಕಾರ, 12 ವರ್ಷಗಳಿಂದ ತೀವ್ರ ಮೈಗ್ರೇನ್ ಹೊಂದಿದ್ದ ರೋಗಿಯು 7 ವರ್ಷಗಳಿಂದ ತಲೆನೋವು ಮುಕ್ತರಾಗಿದ್ದಾರೆ. ಆಹಾರದ ಬದಲಾವಣೆಯ ನಂತರ ದೀರ್ಘಕಾಲದ ಮೈಗ್ರೇನ್ ಪರಿಹರಿಸಿಕೊಂಡ ಪ್ರಕರಣವನ್ನು ಆ ವ್ಯಕ್ತಿ ಪ್ರದರ್ಶಿಸಿದ್ದಾರೆ ಎಂದು ಅಧ್ಯಯನದ ಲೇಖಕರು ತಿಳಿಸಿದ್ದಾರೆ.

ಕೇವಲ ಒಂದು ಪ್ರಕರಣ ಅಧ್ಯಯನದ ಆಧಾರದ ಮೇಲೆ, ಆಹಾರದಲ್ಲಿನ ಬದಲಾವಣೆಯು ದೀರ್ಘಕಾಲದ ಮೈಗ್ರೇನ್‌ಗಳನ್ನು ಗುಣಪಡಿಸುತ್ತದೆ ಎಂದು ತೀರ್ಮಾನಿಸುವುದು ಅಸಾಧ್ಯ. ಈ ರೋಗಿಯ ರೋಗ ಲಕ್ಷಣಗಳ ಮೇಲೆ ಪ್ರಭಾವ ಬೀರಬಹುದಾದ ಇತರ ಅಂಶಗಳೂ ಇದ್ದವು. ಅವುಗಳಲ್ಲಿ ಅವರು ಎಚ್‌ಐವಿ ಪಾಸಿಟಿವ್ ಸಹ ಆಗಿದ್ದರು.

ಇದನ್ನೂ ಓದಿ: Lifestyle: ಅವಳಿ ಶಿಶುಗಳ ಆರೈಕೆ ಮಾಡಲು ಇಲ್ಲಿವೆ ಕೆಲವು ಸಲಹೆಗಳು

ತಲೆನೋವು ತೀವ್ರತೆಯನ್ನು ಕಡಿಮೆ ಮಾಡಲು ಪ್ರಯತ್ನಿಸಲು ರೋಗಿಗಳು ಕೆಲವೊಮ್ಮೆ ಆಹಾರಗಳನ್ನು ಬದಲಾಯಿಸುತ್ತಾರೆ. ಆದರೆ ಮೈಗ್ರೇನ್ ರಿಸರ್ಚ್ ಫೌಂಡೇಶನ್ ಇಲ್ಲಿಯವರೆಗೆ ಮೈಗ್ರೇನ್ ಮತ್ತು ನಿರ್ದಿಷ್ಟ ಆಹಾರಗಳ ನಡುವೆ ಯಾವುದೇ ನಿರ್ಣಾಯಕ ಸಂಬಂಧವಿಲ್ಲ ಎಂದು ತಿಳಿಸಿದೆ.

ಈ ವ್ಯಕ್ತಿಯು ಕಳೆದ 6 ತಿಂಗಳಲ್ಲಿ ಹೆಚ್ಚು ಮೈಗ್ರೇನ್ ಸಮಸ್ಯೆಯನ್ನು ಹೊಂದಿದ್ದರು ಎಂದು ಅಧ್ಯಯನವು ತಿಳಿಸುತ್ತದೆ. ಅವರು ತಿಂಗಳಿಗೆ 6- 8 ಬಾರಿ ಈ ಸಮಸ್ಯೆ ಎದುರಿಸುತ್ತಿದ್ದರು ಎಂದು ತಿಳಿಸಿದ್ದರು. ಪ್ರಕರಣದ ವರದಿಯಲ್ಲಿ ಸೇರಿಸಲಾದ ಒಂದು ಸಣ್ಣ ಪ್ರಮಾಣ ಪತ್ರದಲ್ಲಿ, ಮೈಗ್ರೇನ್ ಸುಮಾರು 72 ಗಂಟೆಗಳವರೆಗೆ ದೇಹವನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದ್ದರು.

“ಮೈಗ್ರೇನ್ ಎಷ್ಟು ಕೆಟ್ಟದಾಗಿರುತ್ತದೆ ಎಂದರೆ ಇದು ಬಂದಾದ ಮೇಲೆ ಅದರಿಂದ ಚೇತರಿಸಿಕೊಳ್ಳಲು ತುಂಬಾ ದಿನಗಳು ಹಿಡಿಯುತ್ತಿತ್ತು ಮತ್ತು ನಾನೊಬ್ಬ ಛಾಯಾಗ್ರಾಹಕನಾಗಿ ಕೆಲಸ ಮಾಡುತ್ತಿದ್ದವನಿಗೆ ಇದು ಕಷ್ಟದಾಯಕವಾಗಿತ್ತು” ಎಂದು ಅವರು ಹೇಳಿದ್ದಾರೆ.

ವೈದ್ಯರು ನೀಡಿದ ಸಲಹೆ ಅನುಸರಿಸಿದ ನಂತರ ಈ ಮೈಗ್ರೇನ್‌ನಿಂದ ಮುಕ್ತಿ ಪಡೆದ ವ್ಯಕ್ತಿ “ನಾನು ಇನ್ನು ಮುಂದೆ ನನ್ನ ಸ್ವಂತ ದೇಹದಲ್ಲಿ ಖೈದಿಯಲ್ಲ. ನನ್ನ ಜೀವನವನ್ನು ಮರಳಿ ಪಡೆದಿದ್ದೇನೆ" ಎಂದು ತಿಳಿಸಿದ್ದಾರೆ.

ಈ ವ್ಯಕ್ತಿಗೆ ಅನುಸರಿಸುವಂತೆ ಹೇಳಿದ ಸಲಹೆಗಳು ಇಲ್ಲಿವೆ ನೋಡಿ

  1. ಪ್ರತಿದಿನ ಕನಿಷ್ಠ ಐದು ಔನ್ಸ್ ಕಚ್ಚಾ ಅಥವಾ ಬೇಯಿಸಿದ ಹಸಿರು ಎಲೆ ತರಕಾರಿಗಳನ್ನು ತಿನ್ನುವುದು.

  2. ಪ್ರತಿದಿನ 32-ಔನ್ಸ್ ದೈನಂದಿನ ಹಸಿರು ಸ್ಮೂಥಿ ಕುಡಿಯುವುದು.

  3. ಸಂಪೂರ್ಣ ಧಾನ್ಯಗಳು, ಪಿಷ್ಟಯುಕ್ತ ತರಕಾರಿಗಳು, ಎಣ್ಣೆಗಳು ಮತ್ತು ಪ್ರಾಣಿಗಳ ಪ್ರೋಟೀನ್, ವಿಶೇಷವಾಗಿ ಡೈರಿ ಮತ್ತು ಕೆಂಪು ಮಾಂಸದ ಸೇವನೆ ಮಿತಿಗೊಳಿಸುವುದು.


ಈ ಆಹಾರ ಬದಲಾವಣೆ ಮಾಡಿಕೊಂಡ ನಂತರ ವ್ಯಕ್ತಿಯು ತನ್ನ ಮೈಗ್ರೇನ್ ಔಷಧಿ ತೆಗೆದುಕೊಳ್ಳುವುದನ್ನು ಸಹ ನಿಲ್ಲಿಸಿದನು ಎಂದು ಅಧ್ಯಯನ ತಿಳಿಸಿದೆ.

ಅಮೆರಿಕನ್ ಮೈಗ್ರೇನ್ ಫೌಂಡೇಶನ್ ಪ್ರಕಾರ, ಮೈಗ್ರೇನ್‌ ಒಂದು ಆನುವಂಶಿಕ ಅಸ್ವಸ್ಥತೆ ಎಂದು ಅಧ್ಯಯನಗಳು ಹೇಳಿವೆ. ಆದರೆ, ಜೀವನ ಶೈಲಿ, ಆಹಾರ ಮತ್ತು ಸುತ್ತಮುತ್ತಲಿನ ಪರಿಸರ, ವ್ಯಕ್ತಿಯು ಎಷ್ಟು ಬಾರಿ ಮೈಗ್ರೇನ್ ಸಮಸ್ಯೆಯಿಂದ ಬಳಲುತ್ತಾನೆ ಎಂಬುದರಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ.

ಇದನ್ನೂ ಓದಿ: ಶಾರುಖ್​ ಖಾನ್​-ಗೌರಿ ದಂಪತಿಯಿಂದ ವಿರುಷ್ಕಾವರೆಗೆ: ಸೆಲೆಬ್ರಿಟಿಗಳ Honeymoon Destinations

ಪೋಷಕಾಂಶಗಳ ಕೊರತೆಗೆ ಕಾರಣವಾಗಬಹುದಾದ ಅತ್ಯಂತ ಕಟ್ಟುನಿಟ್ಟಾದ ಆಹಾರ ಕ್ರಮ ಪ್ರಯತ್ನಿಸುವಾಗ ರೋಗಿಗಳಿಗೆ ಜಾಗರೂಕರಾಗಿರಬೇಕು ಎಂದು ಫೌಂಡೇಶನ್ ಎಚ್ಚರಿಸಿದೆ. ಆ ವ್ಯಕ್ತಿಯು ಈಗಾಗಲೇ ಸಮತೋಲಿತ ಆಹಾರ ಸೇವಿಸುತ್ತಿದ್ದರೂ, ಹಸಿರು ಎಲೆಗಳ ಸೇರ್ಪಡೆಯು ಅವನ ಸೀರಮ್ ಮಟ್ಟದ ಬೀಟಾ-ಕ್ಯಾರೋಟಿನ್ ಹೆಚ್ಚಿಸಿತು ಎಂದು ಅಧ್ಯಯನವು ವರದಿ ಮಾಡಿದೆ. ಈ ವ್ಯಕ್ತಿಯು ಎಚ್ಐವಿ ಪಾಸಿಟಿವ್ ಆಗಿದ್ದು, ಇದು ಮೈಗ್ರೇನ್‌ನ ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿದೆ ಎಂದು ಲೇಖಕರು ಅಧ್ಯಯನದಲ್ಲಿ ತಿಳಿಸಿದ್ದಾರೆ.

ಅಧ್ಯಯನ ಲೇಖಕರ ಪ್ರಕಾರ, ಆಹಾರದಲ್ಲಿ ಬದಲಾದ ನಂತರ ಮನುಷ್ಯನ ಅಲರ್ಜಿಗಳು ಸಹ ಸುಧಾರಿಸಿದವು. ನ್ಯೂಯಾರ್ಕ್‌ನ ಪೌಷ್ಠಿಕಾಂಶ ಔಷಧ ಪರಿಣತರಾದ ಡೇವಿಡ್ ಎಂ ಡುನೈಫ್ ಪ್ರಕಾರ, ಇತರ ರೋಗಿಗಳು ಸಹ ಅವರ ಆಹಾರ ಕ್ರಮವನ್ನು ಬದಲಾಯಿಸಿದ 3 ತಿಂಗಳೊಳಗೆ ಅವರ ಮೈಗ್ರೇನ್ ಕಡಿಮೆಯಾಗಿರುವುದನ್ನು ಗಮನಿಸಿದ್ದೇನೆ ಎಂದು ವಿವರಿಸಿದ್ದಾರೆ.
Published by:Anitha E
First published: