Kitchen Tips: ಅಡುಗೆ ಮನೆ ಕೇವಲ ಕೋಣೆಯಲ್ಲ, ಅದು ಆರೋಗ್ಯದ ಗೂಡು ನಿಮ್ಮ ಕಿಚನ್ ಸ್ವಚ್ಛವಾಗಿರಲಿ

ಅಡುಗೆ ಮನೆಯು ಕೇವಲ ಅಡುಗೆ ಮಾಡುವ ಸ್ಥಳವಲ್ಲ, ಆದರೆ ಜೀವನಶೈಲಿಯ ಸ್ಥಳವಾಗಿದೆ. ಅಡುಗೆ ಮನೆ ಎತ್ತರದ ಛಾವಣಿಗಳು ಮತ್ತು ದೊಡ್ಡ ಕಿಟಕಿಗಳು ನೈಸರ್ಗಿಕ ಬೆಳಕು ನೀಡುವಂತೆ ಇರಲಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಅಡುಗೆ ಮನೆ (Kitchen Room) ಕೇವಲ ಒಂದು ಕೋಣೆಯಲ್ಲ. ಇದು ಕುಟುಂಬ (Family) ಸದಸ್ಯರ ಆರೋಗ್ಯದ ಗೂಡು. ಅಡುಗೆ ಮನೆಯನ್ನು ದಿನವೂ ಸ್ವಚ್ಛವಾಗಿಸಿ (Clean), ಸಾಮಾನುಗಳನ್ನು ನೀಟಾಗಿ ಹೊಂದಿಸಿ ಇಡುವುದು ದಿನ ನಿತ್ಯದ ಕೆಲಸವೇ. ಅಡುಗೆ ಮನೆ ಗಲೀಜಾಗಿದ್ದರೆ (Dirty), ಎಲ್ಲೆಂದರಲ್ಲಿ ಸಾಮಾನುಗಳು ಬಿಕರಿಯಾಗಿ ಬಿದ್ದಿದ್ದರೆ ಅಂಥಹ ಅಡುಗೆ ಮನೆ ಅನಾರೋಗ್ಯದ ಗೂಡಾಗುತ್ತದೆ. ಇರುವೆ, ಜಿರಳೆಗಳು ಮನೆ ಮಾಡುತ್ತವೆ. ಇದು ಕುಟುಂಬಸ್ಥರ ಆರೋಗ್ಯವನ್ನು (Health) ಹದಗೆಡುವಂತೆ ಮಾಡುತ್ತದೆ. ಅಡುಗೆ ಮನೆಯನ್ನು ಸ್ವಚ್ಛವಾಗಿರಿಸುವುದು ಕೇವಲ ಮನೆಯೊಡತಿಯ ಕೆಲಸವಲ್ಲ. ಅದು ಕುಟುಂಬಸ್ಥರೆಲ್ಲರ ಜವಾಬ್ದಾರಿ (Responsibility) ಕೂಡ.  ಬೀರುವನ್ನು ಪ್ರತಿದಿನ ಸ್ವಚ್ಛವಾಗಿಡುವುದು, ಅಡುಗೆ ಮನೆಯ ಕಪಾಟುಗಳನ್ನು ಸ್ವಚ್ಛಗೊಳಿಸುವುದು, ಸಾಮಾನುಗಳನ್ನು ಸಂಸ್ಕರಿಸಿ, ಹುಳು, ಜಿರಳೆಗಳು ಸನಿಹ ಸುಳಿಯದಂತೆ ಇರಿಸುವುದು, ಅಡುಗೆ ಮನೆಯ ಅಲಂಕಾರ ಮಾಡುವುದು ಚೆಂದವಾಗಿರಿಸುವುದು ನೋಡಿದವರ ಮನ ಗೆಲ್ಲುತ್ತದೆ.

    ಅಡುಗೆ ಮನೆಯನ್ನು ನೀಟಾಗಿ, ಸ್ಮಾರ್ಟ್ ಆಗಿರಿಸಿ

    ಈಗ ಎಲ್ಲರ ಮನೆಗಳಲ್ಲೂ ಅಡುಗೆ ಮನೆ ಸ್ಮಾರ್ಟ್ ಆಗ್ತಿದೆ. ಗ್ಯಾಸ್ ಕಟ್ಟೆ, ಸಿಂಕ್, ಡಬ್ಬಿಗಳನ್ನು ಇಡಲು ನೀಟಾದ ಜಾಗ, ಫ್ರಿಡ್ಜ್, ಕುಡಿಯುವ ನೀರಿನ ಟಾಕಿಗಳನ್ನು ಇಡಲು ಬೇರೆ ಜಾಗ ಹೀಗೆ ಅಡುಗೆ ಮನೆಯನ್ನು ನೀಟಾಗಿ, ಸ್ಮಾರ್ಟ್ ಆಗಿಡುವುದು ನಿಜಕ್ಕೂ ಸವಾಲು ಎನಿಸುತ್ತದೆ. ಯಾಕೆಂದರೆ ಇವತ್ತು ನಾವು ಎಲ್ಲವನ್ನೂ ಸ್ವಚ್ಛಗೊಳಿಸಿದ್ದರೆ, ನಾಳೆ ಮತ್ತೆ ಅಡುಗೆ ಮನೆ ಬಿಕರಿಯಾಗಿ ಬಿಟ್ಟಿರುತ್ತದೆ. ಮನೆಯ ಸದಸ್ಯರು ಸಹ ಅಡುಗೆ ಮನೆಯತ್ತ ಜವಾಬ್ದಾರಿ ಮತ್ತು ಸ್ವಚ್ಛಗೊಳಿಸುವುದನ್ನು ಮಾಡುವುದು ಅತ್ಯವಶ್ಯಕ. ಹಾಗಿದ್ದರೆ ಅಡುಗೆ ಮನೆಯನ್ನು ಅಂದವಾಗಿರಿಸುವುದು ಹೇಗೆ ಎಂಬುದನ್ನು ಈ ಕೆಳಗೆ ನೋಡೋಣ..

    ಸದಾ ಒರೆಸಿ, ಸ್ವಚ್ಛಗೊಳಿಸುತ್ತಿರಿ

    ಅಡುಗೆ ಮನೆಯಲ್ಲಿ ಕಟ್ಟಿಗೆಯ ಶೆಲ್ಫ್ ಗಳಿದ್ದರೆ ಅವುಗಳನ್ನು ಬದಲಾಯಿಸಿ, ಕಲ್ಲಿನ ಶೆಲ್ಫ್ ಹಾಕಿಸಿ. ಕಟ್ಟಿಗೆಯ ಶೆಲ್ಫ್ ಗಳ ಸರಿಯಾದ ನಿರ್ವಹಣೆಯ ಕೊರತೆಯಿಂದಾಗಿ, ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳು ಬೆಳೆಯುವ ಸಂಭವ ಹೆಚ್ಚು. ಇದನ್ನು ಸ್ವಚ್ಛಗೊಳಿಸುವುದು ಕೂಡ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅದೇ ಕಲ್ಲಿನ ಶೆಲ್ಫ್ ಗೋಡೆಯೊಳಗಿದ್ದರೆ, ಬೇಗನೆ, ಒರೆಸಿ, ಸ್ವಚ್ಛಗೊಳಿಸಬಹುದು.

    ಇದನ್ನೂ ಓದಿ: ಗರ್ಭಿಣಿಯರಲ್ಲಿ ಮಧುಮೇಹ ಸಮಸ್ಯೆ, ಯಾವ ಆಹಾರಗಳನ್ನು ತಿನ್ನಬೇಕು ಗೊತ್ತಾ?

    ಅಡುಗೆ ಮನೆ ಜೀವನಶೈಲಿಯ ಸ್ಥಳ

    ಅಡುಗೆ ಮನೆ ಸ್ಚಚ್ಛವಾಗಿ, ಆಕರ್ಷಕವಾಗಿ, ಚೆಂದವಾಗಿದ್ದರೆ ಅಲ್ಲಿ ಅಡುಗೆ ಮಾಡಲು ಖುಷಿಯಾಗುತ್ತದೆ. ಊಟ ಮಾಡಲು ಸಂತೋಷವಾಗುತ್ತದೆ. ಅದಕ್ಕಾಗಿಯೇ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ಸುಂದರವಾಗಿ ಆಕರ್ಷಕವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಅಡುಗೆ ಮನೆಯು ಕೇವಲ ಅಡುಗೆ ಮಾಡುವ ಸ್ಥಳವಲ್ಲ, ಆದರೆ ಜೀವನಶೈಲಿಯ ಸ್ಥಳವಾಗಿದೆ. ನಾವೆಲ್ಲರೂ ವಿಶಾಲವಾದ ಅಡುಗೆ ಮನೆಯ ಕನಸು ಕಾಣುತ್ತೇವೆ ಮತ್ತು ಎತ್ತರದ ಛಾವಣಿಗಳು ಮತ್ತು ದೊಡ್ಡ ಕಿಟಕಿಗಳು ನೈಸರ್ಗಿಕ ಬೆಳಕು ನೀಡುವಂತೆ ಇರಲಿ.

    ವಿಭಿನ್ನ ವಿನ್ಯಾಸದ ವಿಧಾನ

    ವಿಭಿನ್ನ ವಿನ್ಯಾಸದ ವಿಧಾನವು ನಿಮ್ಮ ಅಡುಗೆ ಮನೆಯಲ್ಲಿ ಹೆಚ್ಚಿನ ಸ್ಥಳಾವಕಾಶ ಮಾಡಿ ಕೊಡಲು ಸಹಾಯ ಮಾಡುತ್ತದೆ. ನಿಮ್ಮ ಮನೆಯ ಅಡುಗೆ ಮನೆಯಲ್ಲಿ ನಿಮ್ಮ ಕೈಗೆ ಎಟುಕದಷ್ಟು ಎತ್ತರದ ಶೆಲ್ಫ್ ಗಳಿದ್ದಲ್ಲಿ, ಮಧ್ಯ ಮಧ್ಯ ಒಂದೊಂದು ಶೆಲ್ಫ್ ನ್ನು ಕೈಗೆಟುಕುವ ರೀತಿ ಮಾಡಿಸಿಕೊಳ್ಳಿ. ಕೆಳಗಿನ ಶೆಲ್ಫ್ ಅಥವಾ ಕೌಂಟರ್ ಗಳನ್ನು ಬ್ರೇಕ್‌ಫಾಸ್ಟ್ ಟೇಬಲ್ ಅಥವಾ ವಿಭಜನಾ ಘಟಕಗಳಾಗಿಯೂ ಬಳಸಬಹುದು.

    ಇದನ್ನೂ ಓದಿ: ಫಿಟ್ ಆಗಿರಲು ಜಿಮ್​ಗೆ ಹೋಗಲೇಬೇಕಾಗಿಲ್ಲ ಈ 5 ಟಿಪ್ಸ್ ಫಾಲೋ ಮಾಡಿ

    ಅಡುಗೆ ಮನೆ ಧೂಳು ರಹಿತವಾಗಿರಲಿ

    ಅಡುಗೆ ಮಾಡಿದ ನಂತರ ಎಲ್ಲಾ ಪಾತ್ರೆಗಳನ್ನು ಇದ್ದಲ್ಲಿಯೇ ಇಡಬೇಡಿ. ಅವುಗಳನ್ನು ಚೆನ್ನಾಗಿ ಒರೆಸಿ, ಡ್ರಾಯರ್ ಅಥವಾ ಶೆಲ್ಫ್ ಗಳಲ್ಲಿ ಜೋಡಿಸಿಡಿ. ಅಡುಗೆಯ ನಂತರ ಆಹಾರವನ್ನು ಚೆಂದವಾಗಿ ಮುಚ್ಚಿ, ಒಂದು ಕಡೆ ಜೋಡಿಸಿಡಿ. ತರಕಾರಿ ಮತ್ತು ಹಾಲು ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಆಯಾ ಕೌಂಟರ್ ಗಳಲ್ಲಿ ಚೆಂದವಾಗಿ ಇಡಿ. ಧಾನ್ಯಗಳ ಡಬ್ಬಿಗಳನ್ನು ನಿಮಗೆ ಕೈಗೆಟುಕುವ ಹಾಗೂ ತಕ್ಷಣ ಸಿಗುವ ರೀತಿ ಹೊಂದಿಸಿಡಿ. ಒಟ್ಟಿನಲ್ಲಿ ನಿಮ್ಮ ಅಡುಗೆ ಮನೆ ಧೂಳು ರಹಿತವಾಗಿ, ಜಿಡ್ಡು ರಹಿತ ಹಾಗೂ ಅನಾರೋಗ್ಯಕರವಾಗಿರದಿರಲಿ.
    Published by:renukadariyannavar
    First published: