Lifestyle: ಸೋಮಾರಿತನದಿಂದ ಸೋತು ಹೋಗಿದ್ದೀರಾ? ಹಾಗಾದ್ರೆ ನೀವು ಈ ಜಪಾನೀಯರ ಟ್ರಿಕ್ಸ್ ಫಾಲೋ ಮಾಡ್ಲೇಬೇಕು

ಜಪಾನಿನ ಸಂಸ್ಕೃತಿಯು ಅನೇಕ ಉಪಯುಕ್ತ ತಂತ್ರಗಳನ್ನು ಒಳಗೊಂಡಿದೆ, ಕೈಜೆನ್ ಸೋಮಾರಿತನವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ,

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿಯೊಬ್ಬರಿಗೂ ಜೀವನದಲ್ಲಿ ಅವರದೇ ಆದ ಗುರಿಗಳು, (Aspirations) ಆಕಾಂಕ್ಷೆಗಳಿರುತ್ತವೆ, ಆದರೆ ಅವುಗಳನ್ನು ಸಾಧಿಸಲು ನಾವು ಕಷ್ಟಪಟ್ಟು ಕೆಲಸ ಮಾಡಬೇಕು. ಆದರೆ ಬಹುತೇಕರು ತಾವು ಮಾಡುವ ಕೆಲಸಗಳನ್ನು ಕೆಲವೊಮ್ಮೆ ಮುಂದೂಡುತ್ತಾರೆ, ಇದಕ್ಕೆ ಮುಖ್ಯವಾದ ಕಾರಣ ಎಂದರೆ ಅವರ ಸೋಮಾರಿತನ (Laziness) ಎಂದು ಹೇಳಬಹುದು.ನಾವು ಬಹಳ ಉತ್ಸಾಹದಿಂದ ಹೊಸ (Enthusiasm) ಯೋಜನೆಯನ್ನು ಪ್ರಾರಂಭಿಸಿದರೂ ಸಹ ಎಲ್ಲೋ ಮಧ್ಯದಲ್ಲಿ ನಾವು ಆ ಪ್ರಾರಂಭದ ಉತ್ಸಾಹವನ್ನು(Excitement) ಕೊಂಚ ಕಡಿಮೆ ಮಾಡಿಕೊಳ್ಳುತ್ತೇವೆ ಅಥವಾ ಒಮ್ಮೊಮ್ಮೆ ಪೂರ್ತಿಯಾಗಿ ಅದನ್ನು ಕಳೆದುಕೊಳ್ಳುತ್ತೇವೆ.

ಕೆಲಸವನ್ನು ಮುಂದೂಡುವ ಮತ್ತು ಬೇರೆ ಯಾವುದಾದರೂ ದಿನ ಅದನ್ನು ಮಾಡಿದರೆ ಆಯ್ತು ಎನ್ನುವ ಮಾತು ಎಷ್ಟು ಪ್ರಬಲವಾಗಿದೆಯೆಂದರೆ, ನಾವು ಆ ಕೆಲಸವನ್ನು ಮತ್ತೆ ಕೈಗೆತ್ತಿಕೊಂಡು ಮಾಡಲು ಆಗುವುದೇ ಇಲ್ಲ. ನೀವು ಒಂದು ಕೆಲಸ ಮುಗಿಸಲು ಹೆಣಗಾಡುತ್ತಿದ್ದರೆ 'ಕೈಜೆನ್' ಎಂದು ಕರೆಯಲ್ಪಡುವ ಜಪಾನೀಯರು ಅನುಸರಿಸುವ ಒಂದು ಆಸಕ್ತಿದಾಯಕ ತಂತ್ರ ಇಲ್ಲಿದೆ ನೋಡಿ, ಅದು ನಿಮ್ಮ ಸೋಮಾರಿತನವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಏನಿದು ಜಪಾನೀಯರ ತಂತ್ರ ಕೈಜೆನ್..?

ಸ್ವಯಂ ಸುಧಾರಣೆಗಾಗಿ 'ಒಂದು ನಿಮಿಷದ ತತ್ವ' ಎಂದೂ ಕರೆಯಲ್ಪಡುವ ಕೈಜೆನ್, ಸೋಮಾರಿತನವನ್ನು ಹೋಗಲಾಡಿಸಲು ಮತ್ತು ಕೆಲಸವನ್ನು ಉತ್ಸಾಹದಿಂದ ಮಾಡಲು ಜಪಾನಿನ ಒಂದು ಉತ್ತಮ ತಂತ್ರವಾಗಿದೆ ಎಂದು ಹೇಳಲಾಗುತ್ತಿದೆ.

ಈ ಅಭ್ಯಾಸದ ಹಿಂದಿನ ಕಲ್ಪನೆ ಅಥವಾ ಪರಿಕಲ್ಪನೆಯೆಂದರೆ ಜನರು ಕನಿಷ್ಠ ಒಂದು ನಿಮಿಷ, ಪ್ರತಿದಿನ ಒಂದೇ ಸಮಯದಲ್ಲಿ ಚಟುವಟಿಕೆಗೆ ಬದ್ಧರಾಗಿರಬೇಕು. ಈ ಪದದ ಅರ್ಥ 'ಕೈ' (ಬದಲಾವಣೆ) ಮತ್ತು 'ಜೆನ್' (ಬುದ್ಧಿವಂತಿಕೆ) ಮತ್ತು ಇದನ್ನು ಜಪಾನಿನ ಸಾಂಸ್ಥಿಕ ಸಿದ್ಧಾಂತಿ ಮತ್ತು ನಿರ್ವಹಣಾ ಸಲಹೆಗಾರ ಮಸಾಕಿ ಇಮಾಯ್ ಕಂಡು ಹಿಡಿದರು, ಇದು ಕೆಲಸದ ಗುಣಮಟ್ಟದ ನಿರ್ವಹಣೆಗೆ ತುಂಬಾನೇ ಜನಪ್ರಿಯವಾಗಿದೆ.

ಇದನ್ನೂ ಓದಿ: Japanese Secret: ಜಪಾನೀಯರು ಧೀರ್ಘಕಾಲ ಬದುಕುತ್ತಾರೆ! ಅದಕ್ಕಾಗಿ ಏನೆಲ್ಲಾ ಮಾಡುತ್ತಾರೆ ಗೊತ್ತಾ?

ಜಪಾನ್‌ನಲ್ಲಿ, ಕೈಜೆನ್ ನಿರ್ವಹಣಾ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ಅನ್ವಯಿಸುವ ತಂತ್ರವಾಗಿದೆ. ಇಮಾಯ್ ಪ್ರಕಾರ, "ಕೈಜೆನ್ ಕಾರ್ಯತಂತ್ರದ ಸಂದೇಶವೆಂದರೆ, ಯಾವ ಒಂದು ರೀತಿಯ ಸುಧಾರಣೆಯಾಗದೆ ಒಂದು ದಿನವೂ ವ್ಯರ್ಥವಾಗಬಾರದು."

"ನೀವು ಬರೀ ಕೈಜೆನ್ ಅನ್ನು ಒಂದು ಅಥವಾ ಎರಡು ಬಾರಿ ಮಾಡಿ ಅದರಿಂದ ಫಲಿತಾಂಶವನ್ನು ನಿರೀಕ್ಷಿಸಿದರೆ ಅದು ತಪ್ಪಾಗುತ್ತದೆ. ನೀವು ಇದನ್ನು ದೀರ್ಘಕಾಲದವರೆಗೆ ಮುಂದುವರೆಸಿಕೊಂಡು ಹೋದಾಗ ನಿಮಗೆ ಇದರ ಮಹತ್ವದ ಬಗ್ಗೆ ಅರಿವಾಗುತ್ತದೆ ಮತ್ತು ನಿಮ್ಮ ಜೀವನದಲ್ಲಿ ಬದಲಾವಣೆಯನ್ನು ಕಾಣುತ್ತೀರಿ" ಎಂದು ಅವರು ಹೇಳುತ್ತಾರೆ.

ಜಪಾನೀಯರ ತಂತ್ರ ಕೈಜೆನ್ ಹೇಗೆ ಕೆಲಸ ಮಾಡುತ್ತದೆ?

ಕೈಜೆನ್ ಒಂದು ಸರಳ ತಂತ್ರವಾಗಿದ್ದು, ಪ್ರತಿದಿನ ನಿಮ್ಮ ಜೀವನದ ಒಂದು ನಿಮಿಷವನ್ನು ಮಾತ್ರ ಬಯಸುತ್ತದೆ. ಉದಾಹರಣೆಗೆ, ನೀವು ಪುಸ್ತಕವನ್ನು ಓದಲು ಅಥವಾ ಸಂಗೀತ ವಾದ್ಯವನ್ನು ನುಡಿಸಲು ಬಯಸುತ್ತಿದ್ದರೆ, ನೀವು ಅದನ್ನು ಮಾಡಲು ನಿಮ್ಮ ಸಮಯದ ಒಂದು ನಿಮಿಷವನ್ನು ಪ್ರತಿದಿನ ಅದೇ ಸಮಯದಲ್ಲಿ ಮೀಸಲಿಡಬೇಕು. ನೀವು ಕೆಲಸವನ್ನು ಮುಗಿಸಲು ಎಷ್ಟೇ ಸೋಮಾರಿಯಾಗಿದ್ದರೂ, ನೀವು ಎದ್ದು ಸ್ವಲ್ಪ ಸಮಯವಾದರೂ ಅದನ್ನು ಮಾಡಿ.

ಅವಸರ ಮಾಡಬೇಡಿ, ಒಂದು ಬಾರಿಗೆ ಒಂದು ಕೆಲಸ ಮಾತ್ರ ತೆಗೆದುಕೊಳ್ಳಿ

ಕೈಜೆನ್ ವಿಷಯಕ್ಕೆ ಬಂದಾಗ, ನೀವು ಆತುರ ಪಡಬೇಕಾಗಿಲ್ಲ. ನಿಮ್ಮ ಸಮಯದ ಒಂದು ನಿಮಿಷವನ್ನು ಇದಕ್ಕೆ ಮೀಸಲಿಡಿ. ಒಮ್ಮೆ ನೀವು ಈ ಅಭ್ಯಾಸವನ್ನು ರೂಢಿಸಿಕೊಂಡ ನಂತರ, ನೀವು ಕ್ರಮೇಣ ಸಮಯದ ಮಿತಿಯನ್ನು ಹೆಚ್ಚಿಸುವುದನ್ನು ಕಾಣಬಹುದು, ಕೆಲವೊಮ್ಮೆ ಅದನ್ನು ಒಂದು ಗಂಟೆಯವರೆಗೆ ವಿಸ್ತರಿಸುತ್ತೀರಿ.

ಇದನ್ನೂ ಓದಿ: Whiskey: ಬರೋಬ್ಬರಿ 4 ಕೋಟಿ ಮೊತ್ತದ Japanese whiskey ಬಾಟಲಿ ಖರೀದಿ ಮಾಡಿದ ಚೀನಾದ ಭೂಪ..!

ಇದು ಜೀವನದ ಯಾವುದೇ ಹಂತದಲ್ಲಿ ಯಾರು ಬೇಕಾದರೂ ತೆಗೆದುಕೊಳ್ಳಬಹುದಾದ ತಂತ್ರವಾಗಿದೆ. ನೀವು ಏನು ಸಾಧಿಸಲು ಬಯಸುತ್ತೀರಿ ಮತ್ತು ನಿಮ್ಮ ಉದ್ದೇಶಗಳು ಯಾವುವು ಎಂಬುದನ್ನು ಅರ್ಥಮಾಡಿಕೊಳ್ಳುವುದು ಇಲ್ಲಿ ತುಂಬಾನೇ ಮುಖ್ಯವಾಗುತ್ತದೆ.

ಜೀವನದ ಗುಣಮಟ್ಟವನ್ನು ಸುಧಾರಿಸಲು ಇರುವ ಜಪಾನೀಯರ ಇತರೆ ತಂತ್ರಗಳು

ಜಪಾನಿನ ಸಂಸ್ಕೃತಿಯು ಅನೇಕ ಉಪಯುಕ್ತ ತಂತ್ರಗಳನ್ನು ಒಳಗೊಂಡಿದೆ, ಕೈಜೆನ್ ಸೋಮಾರಿತನವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ, ಕಕೀಬೊ ಹಣವನ್ನು ಉಳಿಸುವ ಕಲೆಯಾಗಿದೆ ಮತ್ತು ಕೊನ್ಮಾರಿ ಮನೆಗಳನ್ನು ಗೊಂದಲ ಮುಕ್ತಗೊಳಿಸಿ ಮನೆಯವರನ್ನೆಲ್ಲಾ ಒಟ್ಟಿಗೆ ಬಾಳಲು ಸಹಾಯ ಮಾಡುತ್ತದೆ.
Published by:vanithasanjevani vanithasanjevani
First published: