ನೀರಿಲ್ಲದೆ ಏನಿಲ್ಲ; ಜಿಮ್​ನಲ್ಲಿದ್ದಾಗ ಯಾಕೆ ನೀರು ಕುಡಿಯಬೇಕು ಗೊತ್ತಾ?

ಕ್ಲಾಸ್​ಮೇಟ್​, ಆಫೀಸ್​ಮೇಟ್, ರೂಂಮೇಟ್, ಸ್ಪೋರ್ಟ್ಸ್​ಮೇಟ್ ಹೀಗೆ ಹಲವಾರು ಮೇಟ್​ಗಳ ಸಾಲಿಗೆ ಈಗ ಜಿಮ್​ಮೇಟ್​ ಎಂಬ ಹೆಸರೂ ಸೇರಿಕೊಂಡಿದೆ. ಇಂದಿನ ಕಾಲದಲ್ಲಿ ಜಿಮ್​ಗೆ ಹೋಗದೇ ಇರುವವರು ಸೋಮಾರಿಗಳು ಎಂದು ಕೂಡ ಕೆಲವರು ಅಂದುಕೊಳ್ಳುವುದುಂಟು. ಅಷ್ಟರಮಟ್ಟಿಗೆ ಜಿಮ್​ ಅನಿವಾರ್ಯವಾಗಿಬಿಟ್ಟಿದೆ.

Sushma Chakre | news18
Updated:January 29, 2019, 9:52 PM IST
ನೀರಿಲ್ಲದೆ ಏನಿಲ್ಲ; ಜಿಮ್​ನಲ್ಲಿದ್ದಾಗ ಯಾಕೆ ನೀರು ಕುಡಿಯಬೇಕು ಗೊತ್ತಾ?
ಸಾಂದರ್ಭಿಕ ಚಿತ್ರ
  • News18
  • Last Updated: January 29, 2019, 9:52 PM IST
  • Share this:
ಮೊದಲೆಲ್ಲ ಮನೆಯ ಕೆಲಸಗಳು, ತೋಟದ ಕೆಲಸ, ಸಂಜೆಯಾಗುತ್ತಿದ್ದಂತೆ ವಾಕಿಂಗ್​, ಸುತ್ತಮುತ್ತಲಿನವರ ಮನೆಗೆಲ್ಲ ನಡೆದುಕೊಂಡೇ ಹೋಗುವುದು ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ದೇಹಕ್ಕೆ ವ್ಯಾಯಾಮವಾಗುತ್ತಿತ್ತು. ಆದರೆ, ಕಾಲ ಕಳೆದಂತೆ ಆಧುನಿಕ ತಂತ್ರಜ್ಞಾನಗಳು, ವೈಟ್​ ಕಾಲರ್​ ಕೆಲಸಗಳು ಸಿಗಲಾರಂಭಿಸಿದ ನಂತರ ಮೆದುಳಿಗೆ ಕೆಲಸ ಹೆಚ್ಚಾಗಿ ದೇಹಕ್ಕೆ ಸಿಗುತ್ತಿದ್ದ ವ್ಯಾಯಾಮ ಕಡಿಮೆಯಾಯಿತು. ಅಲ್ಲದೆ, ಇಂದಿನ ಆಹಾರಗಳಲ್ಲೂ ಮೊದಲಿನಷ್ಟು ಪೌಷ್ಟಿಕತೆ ಇಲ್ಲದಿರುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ.

ಈಗಂತೂ ಪುರುಷರು- ಮಹಿಳೆಯರೆನ್ನದೆ ಎಲ್ಲರೂ ಜಿಮ್​ಗೆ ಹೋಗುತ್ತಾರೆ. ಯುವಕ-ಯುವತಿಯರಿಂದ ಹಿಡಿದು ಮಧ್ಯವಯಸ್ಕರವರೆಗೂ ಜಿಮ್​ನಲ್ಲಿ ಬೆವರು ಹರಿಸುತ್ತಾರೆ. ಜಿಮ್​ನಲ್ಲಿ ವರ್ಕ್​ಔಟ್​ ಮಾಡುವಾಗ ನೀರು ಕುಡಿಯಲೇಬೇಕೆಂದು ಟ್ರೈನರ್​ ಹೇಳುತ್ತಾರೆ. ಆದರೆ, ಜಿಮ್​ ವರ್ಕ್​ಔಟ್​ ಆದಮೇಲೆ ಅಥವಾ ಮೊದಲು ನೀರು ಕುಡಿಯುವುದರಿಂದ ಏನೆಲ್ಲ ಉಪಯೋಗವಿದೆ? ಎಷ್ಟು ನೀರು ಕುಡಿಯಬೇಕು? ಎಂದೆಲ್ಲ ನಿಮಗೆ ಗೊತ್ತಾ?

ಇದನ್ನೂ ಓದಿ: ಮಲಗುವ ಮುನ್ನ ಎರಡು ಏಲಕ್ಕಿ ಸೇವಿಸಿ: ಆಮೇಲೆ ಕಾಣುವಿರಿ ಸಕಾರಾತ್ಮಕ ಪರಿಣಾಮ

ಬಹಳಷ್ಟು ಜನರಿಗೆ ನೀರು ಕುಡಿಯುವುದರಿಂದ ಏನೆಲ್ಲ ಉಪಯೋಗವೆಂಬ ಬಗ್ಗೆ ಗೊತ್ತೇ ಇಲ್ಲ. ನೀರು ಕುಡಿದೇ ದೇಹದ ಕೊಬ್ಬನ್ನು ಕರಗಿಸಿದವರಿದ್ದಾರೆ. ಇತ್ತೀಚಿನ ಅಧ್ಯಯನದ ಪ್ರಕಾರ, ನಾವು ತುಂಬ ಒತ್ತಡದಲ್ಲಿದ್ದರೆ ಊಟಕ್ಕೂ ಮೊದಲು 2 ಗ್ಲಾಸ್​ ನೀರು ಕುಡಿದರೂ ಸಾಕು ಆ ಒತ್ತಡವೆಲ್ಲ ಕಡಿಮೆಯಾಗುತ್ತದೆ. ಹಾಗೇ, ದೇಹದ ತೂಕವೂ ಕಡಿಮೆಯಾಗುತ್ತದೆ.

ಜಿಮ್​ಗೆ ಹೋಗುವವರಲ್ಲಿ ಅನೇಕರಿಗೆ ಮೊದಮೊದಲು ತಲೆಸುತ್ತು ಬರುವುದು, ಸುಸ್ತಾಗುವುದು ಸಹಜ. ಹೀಗಾಗಿಯೇ ನೀರು ಕುಡಿಯುತ್ತಿರಬೇಕು, ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಜಿಮ್​ ಟ್ರೈನರ್​ ಹೇಳುತ್ತಾರೆ. ಜಿಮ್​ನಲ್ಲಿ ವರ್ಕ್​ಔಟ್​ ಮಾಡುವಾಗ ನಾವು ಶೇ. 60ರಷ್ಟು ನೀರನ್ನು ಹೊರಹಾಕುತ್ತೇವೆ. ಹೀಗಾಗಿ, ದೇಹಕ್ಕೆ ನೀರಿನ ಪೂರೈಕೆಯನ್ನು ಮಾಡುತ್ತಿರಬೇಕಾಗುತ್ತದೆ. ಇಲ್ಲವಾದರೆ, ದೇಹ ಒಣಗಲಾರಂಭಿಸುತ್ತದೆ.

ಇದನ್ನೂ ಓದಿ: ದೇಹದಲ್ಲಿ ಕೊಬ್ಬಿನಾಂಶ ಜಾಸ್ತಿಯಾದರೆ ಮಾತ್ರವಲ್ಲ ಸೋಂಕು ತಗಲಿದರೂ ಹೃದಯಾಘಾತ ಸಂಭವಿಸುತ್ತೆ!

ನಮ್ಮ ದೇಹದಲ್ಲಿ ನೀರಿನಂಶ ಕಡಿಮೆ ಆಗಿದೆಯಾ ಎಂಬುದನ್ನು ತಿಳಿಯಲು ಸುಲಭವಾದ ವಿಧಾನಗಳಿವೆ. ಒಣಗಿದ ಬಾಯಿ, ತಲೆನೋವು, ನಿದ್ರಾಹೀನತೆ, ಕೆಲಸದಲ್ಲಿ ನಿರಾಸಕ್ತಿ, ಏಕಾಗ್ರತೆಯ ಕೊರತೆ, ಒಣ ಚರ್ಮ, ಮಾಮೂಲಿಗಿಂತ ಮೂತ್ರದ ಬಣ್ಣ ಗಾಢ ಬಣ್ಣದಲ್ಲಿರುತ್ತದೆ. ಈ ಸೂಚನೆಗಳು ನಮ್ಮ ದೇಹದಲ್ಲಿ ಕಂಡುಬಂದ ಕೂಡಲೆ ನಿರ್ಜಲೀಕರಣವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಾಕಷ್ಟು ನೀರು ಕುಡಿಯುವುದರಿಂದ ದೇಹದ ಮೇಲೆ ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ.ಊಟಕ್ಕೆ ಕೂರುವ ಮುನ್ನ ನೀರಿನ ಬಾಟಲಿ ಇಟ್ಟುಕೊಳ್ಳುವುದನ್ನು ಮರೆಯಬೇಡಿ. ಮಲಗುವ ಮುನ್ನ, ಎದ್ದ ತಕ್ಷಣ ನೀರು ಕುಡಿಯಿರಿ. ಹೊರಗೆ ಹೋಗುವಾಗ ನೀರಿನ ಬಾಟಲಿ ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ನೀರು ಕುಡಿಯಲು ಇಷ್ಟವಾಗದಿದ್ದರೆ ಹಣ್ಣಿನ ರಸವನ್ನೋ, ಲಿಂಬೆಹುಳಿಯನ್ನೋ ಸೇರಿಸಿಕೊಳ್ಳಿ.

First published: January 29, 2019, 9:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading