ಉತ್ತಮ ವ್ಯಕ್ತಿತ್ವಕ್ಕೆ (Personality) ಎತ್ತರ (Height) ಹಿಡಿದ ಕನ್ನಡಿಯಂತೆ (Mirror) ಇರುತ್ತದೆ. ಎತ್ತರ ಇದ್ದವರ ವ್ಯಕ್ತಿತ್ವ ಮೇಲ್ನೋಟಕ್ಕೆ ಕಂಡು ಬರುತ್ತದೆ. ಪ್ರತಿಯೊಬ್ಬರೂ (Everyone) ಒಳ್ಳೆಯ ಎತ್ತರ ಹೊಂದಿರಬೇಕು ಎಂದು ಬಯಸುತ್ತಾರೆ. ದೈಹಿಕವಾಗಿ (Physical) ಉತ್ತಮ ಎತ್ತರ ತುಂಬಾ ಆಕರ್ಷಕವಾಗಿರುತ್ತದೆ. ಆದರೆ ಹೊಸ ಅಧ್ಯಯನವೊಂದು ಹೊರ ಬಂದಿದ್ದು, ಅದನ್ನು ಓದಿದ ನಂತರ ಎತ್ತರ ಹೊಂದಿದವರಿಗೆ ಆಘಾತ ಉಂಟಾಗಬಹುದು. ಅಮೇರಿಕನ್ ಕ್ಯಾನ್ಸರ್ ಸೊಸೈಟಿ ಸಂಶೋಧನೆ ಮಾಡಿದೆ. ಕಡಿಮೆ ಎತ್ತರದವರಿಗೆ ಹೋಲಿಸಿದರೆ ಉತ್ತಮ ಎತ್ತರ ಹೊಂದಿರುವ ಜನರು ಹೆಚ್ಚಾಗಿ ರೋಗದ ಅಪಾಯ ಹೊಂದಿರುತ್ತಾರೆ ಎಂದು ಬಹಿರಂಗಪಡಿಸಿದೆ. ಈ ಅಪಾಯಕಾರಿ ಕಾಯಿಲೆಯ ಹೆಸರು ವೃಷಣ ಕ್ಯಾನ್ಸರ್ ಎಂದು ಪತ್ತೆ ಹಚ್ಚಲಾಗಿದೆ.
ಪುರುಷರಲ್ಲಿ ವೃಷಣ ಕ್ಯಾನ್ಸರ್
ಪುರುಷರ ವೃಷಣಗಳಲ್ಲಿ ಸಂಭವಿಸುವ ಕ್ಯಾನ್ಸರ್ ನ್ನು ವೃಷಣ ಕ್ಯಾನ್ಸರ್ ಎಂದು ಕರೆಯುತ್ತಾರೆ. ವೃಷಣಗಳು ಪುರುಷರ ಶಿಶ್ನದ ಅಡಿಯಲ್ಲಿ ಇವೆ. ಸಂತಾನೋತ್ಪತ್ತಿಗಾಗಿ ಲೈಂಗಿಕ ಹಾರ್ಮೋನುಗಳು ಮತ್ತು ವೀರ್ಯವನ್ನು ಉತ್ಪಾದಿಸುವ ಕೆಲಸವನ್ನು ವೃಷಣಗಳು ಮಾಡುತ್ತವೆ. ಕ್ಯಾನ್ಸರ್ ಗಳಲ್ಲಿ ಹಲವು ವಿಧಗಳಿವೆ. ಆ ಎಲ್ಲಾ ಕ್ಯಾನ್ಸರ್ಗಳಿಗೆ ಹೋಲಿಸಿದರೆ ವೃಷಣ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ತುಂಬಾ ಕಡಿಮೆ.
ಆರೋಗ್ಯ ತಜ್ಞರು ಹೇಳುವ ಪ್ರಕಾರ, ವೃಷಣ ಕ್ಯಾನ್ಸರ್ ಉಂಟಾದಾಗ ವೃಷಣಗಳಲ್ಲಿ ಅಸಹಜ ಜೀವಕೋಶಗಳು ಬೆಳೆಯಲು ಪ್ರಾರಂಭ ಆಗುತ್ತವೆ. ಈ ಕ್ಯಾನ್ಸರ್ ಅಪಾಯವು ಸಾಮಾನ್ಯವಾಗಿ 15 ರಿಂದ 49 ವರ್ಷ ವಯಸ್ಸಿನ ಪುರುಷರಲ್ಲಿ ಹೆಚ್ಚು ಕಂಡು ಬರುತ್ತದೆ.
ಇದನ್ನೂ ಓದಿ: ಬರೋಬ್ಬರಿ 194 ಕೆಜಿ ಇದ್ದ ವೈದ್ಯ ತೂಕ ಇಳಿಸಿಕೊಳ್ಳಲು ಕಾರಣವೇನಿತ್ತು ಗೊತ್ತಾ?
UK ಯ ರಾಷ್ಟ್ರೀಯ ಆರೋಗ್ಯ ಸೇವೆಯ ತಜ್ಞರು ಹೇಳುವ ಪ್ರಕಾರ, ವೃಷಣ ಕ್ಯಾನ್ಸರ್ ಇತರ ಕ್ಯಾನ್ಸರ್ಗಳಿಗಿಂತ ಯುವಕರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇತರ ದೇಶಗಳ ಪುರುಷರಿಗಿಂತ ಬಿಳಿ ಬಣ್ಣ ಹೊಂದಿರುವ ಪುರುಷರಲ್ಲಿ ವೃಷಣ ಕ್ಯಾನ್ಸರ್ ಅಪಾಯ ಹೆಚ್ಚು ಎಂದು ಅನೇಕ ಸಂಶೋಧನೆಗಳು ಹೇಳಿವೆ. ಆದರೆ ಇದಕ್ಕೆ ಯಾವುದೇ ನಿಖರ ಸಾಕ್ಷ್ಯ ಅಥವಾ ಪುರಾವೆಗಳು ಇಲ್ಲ.
ತಜ್ಞರು ಏನ್ ಹೇಳ್ತಾರೆ ಗೊತ್ತಾ?
ಕೆಲವು ಆರೋಗ್ಯ ತಜ್ಞರು ಎತ್ತರ ಹೊಂದಿರುವ ಪುರುಷರು ವೃಷಣ ಕ್ಯಾನ್ಸರ್ ಗೆ ಹೆಚ್ಚು ತುತ್ತಾಗುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಮೇರಿಕನ್ ಕ್ಯಾನ್ಸರ್ ಸೊಸೈಟಿ ಪ್ರಕಾರ, ಕೆಲವು ಅಧ್ಯಯನಗಳು ತುಂಬಾ ಎತ್ತರ ಹೊಂದಿರುವ ಪುರುಷರು ವೃಷಣ ಕ್ಯಾನ್ಸರ್ ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯ ಹೊಂದಿರುತ್ತಾರೆ ಎಂದು ಹೇಳಿದೆ.
UK ಯ ಕ್ಯಾನ್ಸರ್ ಸಂಶೋಧನೆ ಕಡಿಮೆ ಎತ್ತರವಿರುವ ಪುರುಷರಿಗಿಂತ ಸಾಮಾನ್ಯಕ್ಕಿಂತ ಹೆಚ್ಚಿನ ಎತ್ತರ ಹೊಂದಿರುವ ಪುರುಷರು ವೃಷಣ ಕ್ಯಾನ್ಸರ್ ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯ ಹೊಂದಿರುತ್ತಾರೆ ಎಂಬುದಕ್ಕೆ ಪುರಾವೆಗಳಿವೆ ಎಂದು ಹೇಳಿದೆ.
ನೀವು ಧೂಮಪಾನ ಮಾಡುತ್ತಿದ್ದರೆ, ನಿಮ್ಮ ಜೀವನಶೈಲಿ ಮತ್ತು ಕುಟುಂಬದ ಇತಿಹಾಸ ಸೇರಿದಂತೆ ಇತರೆ ಕೆಲ ವಿಷಯಗಳು ವೃಷಣ ಕ್ಯಾನ್ಸರ್ಗೆ ಕಾರಣ ಆಗುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ವೃಷಣ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳು
- ವೃಷಣದಲ್ಲಿ ಉಂಡೆ ರಚನೆ ಅಥವಾ ಗಾತ್ರ ವ್ಯತ್ಯಾಸ
- ವೃಷಣಗಳು ಭಾರವಾದಂತೆ ಭಾವನೆ
- ಹೊಟ್ಟೆಯಲ್ಲಿ ಅಥವಾ ಸೊಂಟದ ಸುತ್ತಲೂ ನೋವು
- ವೃಷಣದಲ್ಲಿ ದ್ರವ ಶೇಖರಣೆ
- ವೃಷಣಗಳಲ್ಲಿ ನೋವು
ಇದನ್ನೂ ಓದಿ: ಬರ್ನೌಟ್ ಸಮಸ್ಯೆ ಎಂದರೇನು? ಮಾನಸಿಕವಾಗಿಯೂ ಭಾರೀ ಡೇಂಜರ್ ಇದು
- ವೃಷಣ ಕ್ಯಾನ್ಸರ್ ನಲ್ಲಿ ರೋಗ ಲಕ್ಷಣಗಳು ಕೇವಲ ಒಂದು ವೃಷಣದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ.
ಕುಟುಂಬದಲ್ಲಿ ಯಾರಿಗಾದರೂ ಈ ಮೊದಲು ವೃಷಣ ಕ್ಯಾನ್ಸರ್ಗೆ ಬಲಿಯಾಗಿದ್ದರೆ ಕುಟುಂಬದ ಇತರೆ ಸದಸ್ಯರಿಗೆ ಉಂಟಾಗುವ ಸಾಧ್ಯತೆ ಇದೆ. ಮಾನ್ಯವಾಗಿ ಅಕಾಲಿಕ ಶಿಶುಗಳಲ್ಲಿ ಕಂಡುಬರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ