• Home
  • »
  • News
  • »
  • lifestyle
  • »
  • Men Fashion Tips: ಪುರುಷರು ಚೆಕ್ಸ್​ ಶರ್ಟ್​ ಸೆಲೆಕ್ಟ್​ ಮಾಡುವಾಗ ಈ ಟಿಪ್ಸ್​ ಫಾಲೋ ಮಾಡ್ಬೇಕಂತೆ

Men Fashion Tips: ಪುರುಷರು ಚೆಕ್ಸ್​ ಶರ್ಟ್​ ಸೆಲೆಕ್ಟ್​ ಮಾಡುವಾಗ ಈ ಟಿಪ್ಸ್​ ಫಾಲೋ ಮಾಡ್ಬೇಕಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

The guide to Select a Check Shirt: ನಿಮ್ಮ ಲುಕ್ ಹಾಳು ಮಾಡಿಕೊಳ್ಳಬಾರದು ಎಂದರೆ ಮೊದಲು ಅದನ್ನು ಧರಿಸಿ, ಕನ್ನಡಿಯ ಮುಂದೆ ನಿಂತು ಪ್ರಯೋಗಿಸಿ. ಚೆಕ್ಸ್​ ಮತ್ತು ಬಣ್ಣಗಳಲ್ಲಿ ಲಭ್ಯವಿರುವ ಹಲವು ಆಯ್ಕೆಗಳ ಹೊರತಾಗಿಯೂ, ಸ್ಟೈಲಿಂಗ್‌ಗೆ ಬಂದಾಗ ನೀವು ಎಂದಿಗೂ ಗೊಂದಲಕ್ಕೀಡಾಗಬಾರದು.

ಮುಂದೆ ಓದಿ ...
  • Share this:

ಪುರುಷರ ವಾರ್ಡ್ರೋಬ್ (Men Wardrobe) ಅವಶ್ಯಕತೆಯ ವಿಷಯಕ್ಕೆ ಬಂದಾಗ ಚೆಕ್ಸ್​ ಶರ್ಟ್ (Checks Shirt) ಖಂಡಿತವಾಗಿಯೂ ಇರಲೇ ಬೇಕಾದ ಒಂದು ಬಟ್ಟೆ (Dress). ಅದರಲ್ಲೂ ವೆರೈಟಿ ಚೆಕ್ಸ್​ ಶರ್ಟ್​ಗಳು ಇದ್ದರೆ, ಅದೇನೋ ಚೆಂದ. ವರ್ಷಪೂರ್ತಿ ಪ್ರತಿ ಸಂದರ್ಭಕ್ಕೂ ಅದರ ವೆರೈಟಿಯೊಂದಿಗೆ ಇದು ಕ್ಲಾಸಿಕ್ ಬಿಳಿ ಶರ್ಟ್‌ಗೆ  ಕಾಂಪಿಟೇಷನ್​ (competition) ನೀಡುತ್ತದೆ. ಡೇಟ್​, ವೀಕೆಂಡ್​ ಅಥವಾ ಆಫೀಸ್​ ಹೀಗೆ ಇದನ್ನು ಎಲ್ಲಾ ಕಡೆ ಧರಿಸಬಹುದು. ಈ ರೀತಿ ಶರ್ಟ್​ ಖರೀದಿ ಮಾಡುವಾಗ ನಮಗೆ ಗೊಂದಲವಾಗುತ್ತದೆ. ಯಾವುದನ್ನ ಆಯ್ಕೆ ಮಾಡಿಕೊಳ್ಳಬೇಕು ಎಂದು ಸ್ನೇಹಿತರನ್ನು ಕೇಳುತ್ತೇವೆ. ನೀವು ಚೆಕ್ಸ್​ ಶರ್ಟ್​ ಖರೀದಿ ಮಾಡುವಾಗ ಫಾಲೋ ಮಾಡಬೇಕಾದ ಕೆಲ ಟಿಪ್ಸ್ (Fashion Tips) ಇಲ್ಲಿದೆ.


ಚೆಕ್ಸ್​ ಸೈಜ್​


ನೀವು ಆಫಿಶಿಯಲ್​ ಲುಕ್​ ಬೇಕು ಎಂದರೆ ನೀವು ದೊಡ್ಡ ಚೆಕ್ಗಳೊಂದಿಗೆ ಶರ್ಟ್ ಅನ್ನು ಆರಿಸಿಕೊಳ್ಳಬೇಕು. ದೊಡ್ಡ ಚೆಕ್  ಶರ್ಟ್ ಹಾಕಿ ನೀವು ಕ್ಲಾಸಿಕ್ ಲುಕ್ ಪಡೆಯಬಹುದು. ನೀವು ಡೇಟ್​ಗೆ ಹೋಗುವ ಪ್ಲ್ಯಾನ್ ಇದ್ದರೆ ಸಣ್ಣ ಚೆಕ್ಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ದೊಡ್ಡ ಚೆಕ್ ಶರ್ಟ್​ ಹೆಚ್ಚು ಶಾಂತವಾದ ಅನುಭವವನ್ನು ನೀಡುತ್ತದೆ ಆದರೆ, ಆದರೆ ಚಿಕ್ಕ ಚೆಕ್‌ಗಳು ವಿಬಿನ್ನ ಲುಕ್ ನೀಡುತ್ತದೆ. ಸಣ್ಣ ಗಾತ್ರದ ಚೆಕ್‌ಗಳು ಸ್ಲಿಮ್ ಹುಡುಗರಿಗೆ ಉತ್ತಮವಾಗಿ ಹೊಂದಿಕೆಯಾಗುತ್ತವೆ.


ಬಣ್ಣ ಸಹ ಮುಖ್ಯವಾಗುತ್ತದೆ


ನಿಮ್ಮ ಬಣ್ಣಗಳನ್ನು ಆಯ್ಕೆಮಾಡಲು ಬಂದಾಗ, ಅಲಿಖಿತ ನಿಯಮವಿದೆ. ನಿಮ್ಮ ಚರ್ಮದ ಬಣ್ಣದ ವಿರುದ್ಧವಾಗಿ ಬಟ್ಟೆ ಖರೀದಿಸುವುದು. ಆದರೆ, ಶರ್ಟ್ ಖರೀದಿ ಮಾಡುವಾಗ ಈ ತಪ್ಪು ಮಾಡಬೇಡಿ. ನಿಮಗೆ ಶರ್ಟ್‌ನಲ್ಲಿ ಕಣ್ಣಿಗೆ ಕಟ್ಟುವ ವೈವಿಧ್ಯಮಯ ಬಣ್ಣಗಳು ಸಿಗುತ್ತದೆ. ಗಾಢ ಬಣ್ಣದ ಚೆಕ್ ಶರ್ಟ್‌ ಬಹುತೇಕ ಎಲ್ಲರಿಗೂ ಸೂಟ್​ ಆಗುತ್ತದೆ. ಚೆಕ್ಡ್ ಶರ್ಟ್ ಧರಿಸುವ ಉತ್ತಮ ವಿಧಾನವೆಂದರೆ ಟೈ ಹಾಕಿ ಧರಿಸಬೇಕು.




ಇದನ್ನೂ ಓದಿ: ದೇಹಕ್ಕೆ ಶಕ್ತಿ ನೀಡುತ್ತವೆ ಈ ನೈಸರ್ಗಿಕ ಸಿರಪ್​ಗಳು, ಫಿಟ್ ಆ್ಯಂಡ್​ ಫೈನ್​ ಆಗ್ತೀರ


ದಪ್ಪ


ಅಂಗಿಯ ದಪ್ಪವನ್ನು ಸಾಮಾನ್ಯವಾಗಿ ಜನರು ಕಡೆಗಣಿಸುತ್ತಾರೆ ಆದರೆ ನಿಮ್ಮ ಲುಕ್​ ನಿರ್ಧರಿಸುವಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸುತ್ತದೆ. ದಪ್ಪ ಶರ್ಟ್‌ಗಳನ್ನು ವರ್ಷಪೂರ್ತಿ ಧರಿಸಬಹುದು. ನೀವು ಹೆಚ್ಚಾಗಿ ಫ್ಲಾನೆಲ್ ಶರ್ಟ್ಗಳನ್ನು ಆರಿಸಿಕೊಳ್ಳಿ. ಬೇಸಿಗೆ ಕಾಲದಲ್ಲಿ ಫ್ಲಾನೆಲ್ ಶರ್ಟ್‌ಗಳಿಂದ ದೂರವಿರಿ.


ಈ ಶರ್ಟ್​ ಧರಿಸಲು ಕೆಲ ಟಿಪ್ಸ್ ಇಲ್ಲಿದೆ


ಶುಕ್ರವಾರದಂದು ನಿಮ್ಮ ಸಹೋದ್ಯೋಗಿಗಳನ್ನು ಮೆಚ್ಚಿಸಲು, ಡಾರ್ಕ್ ಟಾರ್ಟನ್ ಚೆಕ್ ಶರ್ಟ್ ಅನ್ನು ಪ್ರಯತ್ನಿಸಿ. ನೀವು ಪಾರ್ಟಿಗೆ ಹೋಗುತ್ತಿದ್ದರೆ, ಟೀ ಶರ್ಟ್​ ಬೋರ್​ ಬಂದಿದೆ ಎಂದರೆ ಕ್ಯಾಶುಯಲ್ ಚೆಕ್ಡ್ ಶರ್ಟ್‌ನ ಹಾಕಿಕೊಳ್ಳಿ.


ನೀವು ಮೀಟಿಂಗ್​ ಹೋಗುವಾಗ ಬಹಳ ಫಾರ್ಮಲ್ ಆಘಿ ಇರಬೇಕು. ಈ ಸಮಯದಲ್ಲಿ ನೀವು ಹೆಚ್ಚು ಆಕರ್ಷಕವಾಗಿರಲು ನೇವಿ ಬ್ಲೂ ಪ್ಯಾಂಟ್‌ನೊಂದಿಗೆ ಬಟನ್-ಡೌನ್ ಕಾಲರ್ ಶರ್ಟ್ ಅನ್ನು ಧರಸಿಬಹುದು.  ನೀವು ಚೆಕ್​ ಶರ್ಟ್ ಧರಿಸಲು ಚಿನೋಸ್‌ ಆಯ್ಕೆ  ಮಾಡಿಕೊಳ್ಳಿ.


ಇದನ್ನೂ ಓದಿ: ಇವುಗಳನ್ನು ತಿಂದು ತಕ್ಷಣ ನೀರು ಕುಡಿಲೇಬೇಡಿ, ಒಂದೆಲ್ಲಾ ಒಂದು ಸಮಸ್ಯೆ ಬರುತ್ತೆ


ಸ್ಟ್ರೈಪ್ಡ್ ಅಥವಾ ಚೆಕ್ಡ್ ಪ್ಯಾಂಟ್ ಈ ಸಮಯದಲ್ಲಿ ಹಾಕಲೇಬೇಡಿ.  ನೀವು ಸಾರ್ವಜನಿಕವಾಗಿ ನಿಮ್ಮ ಲುಕ್ ಹಾಳು ಮಾಡಿಕೊಳ್ಳಬಾರದು ಎಂದರೆ ಮೊದಲು ಅದನ್ನು ಧರಿಸಿ, ಕನ್ನಡಿಯ ಮುಂದೆ ನಿಂತು ಪ್ರಯೋಗಿಸಿ. ಚೆಕ್ಸ್​ ಮತ್ತು ಬಣ್ಣಗಳಲ್ಲಿ ಲಭ್ಯವಿರುವ ಹಲವು ಆಯ್ಕೆಗಳ ಹೊರತಾಗಿಯೂ, ಸ್ಟೈಲಿಂಗ್‌ಗೆ ಬಂದಾಗ ನೀವು ಎಂದಿಗೂ ಗೊಂದಲಕ್ಕೀಡಾಗಬಾರದು.

Published by:Sandhya M
First published: