ಫಿಟ್​ನೆಸ್​ ಚಾಲೆಂಜ್ : ಆರೋಗ್ಯದಿಂದ ವಿಶ್ವದ ಗಮನ ಸೆಳೆದ ಪ್ರಮುಖ ನಾಯಕರು

news18
Updated:May 28, 2018, 3:25 PM IST
ಫಿಟ್​ನೆಸ್​ ಚಾಲೆಂಜ್ : ಆರೋಗ್ಯದಿಂದ ವಿಶ್ವದ ಗಮನ ಸೆಳೆದ ಪ್ರಮುಖ ನಾಯಕರು
news18
Updated: May 28, 2018, 3:25 PM IST
ನ್ಯೂಸ್ 18 ಕನ್ನಡ

ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್‌ ಅವರು ಟ್ವಿಟರ್‌ನಲ್ಲಿ ‘ಹಮ್‌ ಫಿಟ್‌ ತೋ ಇಂಡಿಯಾ ಫಿಟ್‌’ ಎಂಬ ಅಭಿಯಾನ ಆರಂಭಿಸಿದ್ದರು. ತಮ್ಮ ವ್ಯಾಯಾಮದ ವಿಡಿಯೋವನ್ನು ಪ್ರಕಟಿಸಿ, ವಿರಾಟ್‌ ಕೊಹ್ಲಿ ಅವರಿಗೆ ಫಿಟ್​ನೆಸ್​ ಸವಾಲು ನೀಡಿದ್ದರು. ಈ ಸವಾಲನ್ನು ಸ್ವೀಕರಿಸಿದ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರಿಕೆಟಿಗ ಮಹೇಂದ್ರ ಸಿಂಗ್‌ ದೋನಿ ಅವರಿಗೂ ಫಿಟ್​ನೆಸ್ ಸವಾಲು ನೀಡಿದ್ದರು. ಇದೀಗ ಈ ಚಾಲೆಂಜಿಂಗ್ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ರಾಜಕಾರಣಿಯೊಬ್ಬರು ಪ್ರಾರಂಭಿಸಿದ ಈ ಹೊಸ ಚಾಲೆಂಜ್ ಸದ್ಯ ರಾಜಕೀಯ ಬಣ್ಣ ಪಡೆದಿದ್ದು, ಇದರ ನಡುವೆ ವಿಶ್ವದ ಪ್ರಮುಖ ನಾಯಕರಲ್ಲಿ ಯಾರು ಅತ್ಯಂತ ಫಿಟ್​ ಎಂಬ ಮಾಹಿತಿ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

ಕೆನಡಾ ದೇಶದ ಪ್ರಧಾನಿ ಜಸ್ಟಿನ್ ಟ್ರುಡೋ. ಟ್ರುಡೋ ತನ್ನ ಫಿಟ್​ನೆಸ್​ನಿಂದ ಇತರೆ ದೇಶದ ನಾಯಕರುಗಳಿಗಿಂತ ಹೆಚ್ಚು ಗಮನ ಸೆಳೆಯುತ್ತಾರೆ. 46 ವರ್ಷದ ಕೆನಡಾ ಪ್ರಧಾನಿ ಅತ್ಯುತ್ತಮ ಬಾಕ್ಸರ್ ಆಗಿದ್ದಾರೆ. ಬಾಕ್ಸಿಂಗ್​ಗಾಗಿ ತಮ್ಮ ದಿನಚರಿಯಲ್ಲಿ ಸಮಯವನ್ನು ಕಾಯ್ದಿರಿಸಿಕೊಳ್ಳುತ್ತಾರೆ.


ರಷ್ಯಾ ಅಧ್ಯಕ್ಕ್ಷ ವ್ಲಾಡಿಮಿರ್ ಪುಟಿನ್. 65 ವರ್ಷದ ಪುಟಿನ್ ಕೆಲ ವರ್ಷಗಳ ಹಿಂದೆ ಕರಾಟೆಯಲ್ಲಿ 8ನೇ ಬ್ಲಾಕ್ ಬೆಲ್ಟ್​ ಪಡೆದಿದ್ದಾರೆ. ಇದಲ್ಲದೆ ಜುಡೊ ಮಾರ್ಷಲ್ ಆರ್ಟ್ಸ್​​ನಲ್ಲೂ ವಿಶೇಷ ಆಸಕ್ತಿ ಹೊಂದಿದ್ದಾರೆ. ತಮ್ಮ 14 ನೇ ವಯಸ್ಸಿನಲ್ಲೇ ಪ್ರಾರಂಭವಾದ ಕರಾಟೆಯಾಟ 60 ವರ್ಷಗಳ ನಂತರವು ಮುಂದುವರಿದಿರುವುದು ಅವರ ಫಿಟ್​ನೆಸ್​ ಅನ್ನು ತೋರಿಸುತ್ತದೆ. ಇದಲ್ಲದೆ ಬ್ಯಾಡ್ಮಿಂಟನ್, ಮೀನುಗಾರಿಕೆ, ಸೈಕ್ಲಿಂಗ್​, ಹಾಕಿ ಕ್ರೀಡೆಯಲ್ಲೂ ರಷ್ಯಾ ಅಧ್ಯಕ್ಷರು ಎತ್ತಿದ ಕೈ.


ಕಾಂಬೋಡಿಯಾ ರಾಜ ನೊರೊಡಮ್ ಸಿಹಾಮೋನಿ ಅತ್ಯುತ್ತಮ ನೃತ್ಯಪಟು ಎಂದು ಹೆಸರುಗಳಿಸಿದವರು. ಇವರು 1981 ರಲ್ಲಿ ಫ್ರಾನ್ಸ್​ನಲ್ಲಿ ಬ್ಯಾಲೆ ನೃತ್ಯ ಶಿಕ್ಷಕರಾಗಿ ಕೂಡ ಕೆಲಸ ಮಾಡಿದ್ದಾರೆ. ಇದಲ್ಲದೆ ಬೈಕಿಂಗ್ ಮತ್ತು ನಿತ್ಯ ವಾಕಿಂಗ್ ಮೂಲಕ ಫಿಟ್​ನೆಸ್​ ಅನ್ನು ಕಾಪಾಡಿಕೊಳ್ಳುತ್ತಾರೆ.


ಭೂತಾನ್ ರಾಜ ಜಿಗ್ಮೆ ಕೇಸರ್ ನಾಮ್​​ಗ್ಯಾಲ್ ವಾಂಗ್​ಚುಕ್. 38 ವರ್ಷ ಪ್ರಾಯದ ಭೂತಾನ್ ರಾಜ ಅಂತರಾಷ್ಟ್ರೀಯ ಬಾಸ್ಕೆಟ್​ಬಾಲ್ ಆಟಗಾರ. ಹಾಗೆಯೇ ಫುಟ್ಬಾಲ್​ ಆಡುವುದರಲ್ಲು ಪರಿಣತಿ ಹೊಂದಿರುವ ನಾಮ್​​ಗ್ಯಾಲ್ ವಾಂಗ್​ಚುಕ್ ಅತ್ಯುತ್ತಮ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದಾರೆ.


ಸ್ಪೇನ್ ರಾಜ ಫಿಲಿಪ್ VI - 1992 ರಲ್ಲಿ ಬಾರ್ಸಿಲೋನಾದಲ್ಲಿ ನಡೆದ ಒಲಿಂಪಿಕ್ಸ್​ ಕ್ರೀಡಕೂಟದಲ್ಲಿ ಸ್ಪೇನ್ ರಾಜ ಫಿಲಿಪ್ VI ಕೂಡ ಭಾಗವಹಿಸಿದ್ದರು. ಒಲಿಂಪಿಕ್ಸ್​ನಲ್ಲಿ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಫಿಲಿಪ್ VI ಯುರೋಪ್​ನ ಅತ್ಯಂತ ಫಿಟ್​ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

Loading...

ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಮಾಲ್ಕಂ ಟರ್ನ್​ಬುಲ್ - 60 ವರ್ಷದ ಹಿರಿಯ ನಾಯಕರಾಗಿದ್ದರೂ ಮಾಲ್ಕಂ ಟರ್ನ್​ಬುಲ್ ಫಿಟ್​ನೆಸ್​ ವಿಷಯದಲ್ಲಿ ಕಟ್ಟುನಿಟ್ಟು. 2012 ರಲ್ಲಿ 14 ಕೆ.ಜಿ ಗಳಷ್ಟು ತೂಕವನ್ನು ಅವರು ಕಡಿಮೆ ಮಾಡಿಕೊಂಡಿದ್ದ ಅವರು, ಕಡಿಮೆ ಆಹಾರದ ಮೂಲಕ ಫಿಟ್​ನೆಸ್​ ಮೇಲೆ ಗಮನ ಹರಿಸುತ್ತಾರೆ.


ಅರ್ಜೆಂಟೀನಾ ಅಧ್ಯಕ್ಷ ಮೌರಿಸಿಯೊ ಮಾಕ್ರಿ - 60 ನೇ ವಯಸ್ಸಿನಲ್ಲೂ ಅರ್ಜೆಂಟೀನಾ ಅಧ್ಯಕ್ಷರು ಜಿಮ್​ನಲ್ಲಿ ಕಸರತ್ತು ಮಾಡುತ್ತಾರೆ. ಅಷ್ಟೇ ಅಲ್ಲದೆ ಬೈಕಿಂಗ್​ ಅನ್ನು ಇಷ್ಟಪಡುವ ಇವರು 2016ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾಗೆ ವಿದ್ಯುತ್​ ಬೈಕ್ ನೀಡಿದ್ದರು.


ಜರ್ಮನಿ ಚಾನ್ಸಲರ್ ಏಂಜೆಲಾ ಮರ್ಕೆಲ್‌- 2014 ರಲ್ಲಿ ತಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡಿರುವ ಏಂಜೆಲಾ ಮರ್ಕೆಲ್ ಚೀಸ್​ ಮತ್ತು ಸಾಸೇಜ್ ಸ್ಯಾಂಡ್ವಿಚ್​ ಅನ್ನು ತಿನ್ನುವುದು ನಿಲ್ಲಿಸಿದ್ದಾರೆ. ಸಭೆಗಳಲ್ಲಿ ಕ್ಯಾರೆಟ್ ಮತ್ತು ಸಲಾಡ್​ಗಳನ್ನು ಸೇವಿಸುತ್ತಾರೆ ಎಂಬ ಅಪವಾದ ಕೂಡ ಜರ್ಮನಿ ಚಾನ್ಸಲರ್​ ಮೇಲಿದೆ. ಇದೆಲ್ಲವೂ ಅವರಿಗೆ ಆರೋಗ್ಯದ ಮೇಲಿರುವ ಕಾಳಜಿ ಎನ್ನಲಾಗುತ್ತದೆ. 60 ವರ್ಷ ಪ್ರಾಯವಾದರೂ ಸ್ಕೀಯಿಂಗ್​ನಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.
First published:May 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...