ಬಾಡಿ ಬಿಲ್ಡರ್ ಗಳು (Body Builders) ಸಾಮಾನ್ಯವಾಗಿ ಹೆಚ್ಚು ಪುರುಷರೇ (Men’s) ಇರುತ್ತಾರೆ. ಅದರಲ್ಲೂ ಅರ್ನಾಲ್ಡ್ ಶ್ವಾಜೆನೆಗ್ಗರ್, ರೋನಿ ಕೋಲ್ಮನ್, ಫಿಲ್ ಹೀತ್ ಅವರಂತಹ ಅನೇಕ ಪುರುಷ ಬಾಡಿಬಿಲ್ಡರ್ಗಳ ಹೆಸರನ್ನು (Name) ನೀವೆಲ್ಲರೂ ಕೇಳಿರಬಹುದು. ಅವರನ್ನು ನೋಡಿ ಜಗತ್ತಿನ (World) ಅನೇಕರು ಪ್ರೇರಣೆ ಪಡೆದು ಬಾಡಿ ಬಿಲ್ಡಿಂಗ್ ಲೋಕಕ್ಕೆ ಕಾಲಿಟ್ಟು ಸಾಕಷ್ಟು ಹೆಸರು ಗಳಿಸಿದ್ದಾರೆ. ಈಗ ತುಂಬಾ ಜನರು ಫಿಟ್ ಆಗಿರಲು ಆಧ್ಯತೆ ನೀಡುತ್ತಾರೆ. ಅದರಲ್ಲಿ ಕೆಲವು ಪುರುಷರು ಮತ್ತು ಮಹಿಳೆಯರು ತಮ್ಮನ್ನು ತಾವು ಫಿಟ್ ಆಗಿಟ್ಟುಕೊಳ್ಳಲು ವ್ಯಾಯಾಮ ಮಾಡುತ್ತಾರೆ. ಮತ್ತು ಕೆಲವರು ವೃತ್ತಿಪರ ಬಾಡಿಬಿಲ್ಡರ್ ಆಗಲು ವ್ಯಾಯಾಮ ಮಾಡುತ್ತಾರೆ.
ಈಗ 53 ವರ್ಷ ವಯಸ್ಸಿನ ಮಹಿಳೆಯೊಬ್ಬರು ಬಾಡಿ ಬಿಲ್ಡರ್ ಆಗಿದ್ದಾರೆ. ಅವರನ್ನು ನೋಡಿದ್ರೆ ಅವರಿಗೆ ವಯಸ್ಸು 53 ಎಂದು ಗುರುತಿಸಲು ಸಾಧ್ಯವೇ ಇಲ್ಲ. ಈ ಮಹಿಳೆ ಸಿಕ್ಸ್ ಪ್ಯಾಕ್ ಎಬಿಎಸ್ ಹೊಂದಿದ್ದಾರೆ. ಮತ್ತು ಅವರು ವೃತ್ತಿಪರ ಬಾಡಿಬಿಲ್ಡರ್ ಕೂಡ ಆಗಿದ್ದಾರೆ.
ತನ್ನ ಅರ್ಧ ವಯಸ್ಸಿನ ಜನರು ತನ್ನನ್ನು ಡೇಟ್ಗೆ ಹೊರಗೆ ಕರೆಯುತ್ತಾರೆ ಎಂದು ಈ ಮಹಿಳೆ ಹೇಳಿಕೊಂಡಿದ್ದಾಳೆ. ಹಾಗಾದರೆ ಈ ಮಹಿಳೆ ಯಾರು? ಇವ್ರು ಬಾಡಿ ಬಿಲ್ಡರ್ ಆಗಿದ್ದೇಗೆ? ಎಬಿಎಸ್ ಅನ್ನು ಹೇಗೆ ನಿರ್ವಹಿಸುತ್ತಿದ್ದಾರೆ ಎಂಬುದರ ಬಗ್ಗೆ ನಾವು ಇಲ್ಲಿ ತಿಳಿಯೋಣ.
ಇದನ್ನೂ ಓದಿ: ನೀವೆಷ್ಟೇ ಔಷಧ ಸೇವಿಸಿದರೂ ಅಧಿಕ ರಕ್ತದೊತ್ತಡ ನಿವಾರಣೆ ಆಗದಿರುವುದಕ್ಕೆ ಈ ಅಂಶಗಳು ಕಾರಣವಾಗಿರಬಹುದು!
ಸಿಕ್ಸ್ ಪ್ಯಾಕ್ ಎಬಿಎಸ್ ಹೊಂದಿರುವ ಈ ಮಹಿಳೆ ಯಾರು?
NYpost ಪ್ರಕಾರ, ಸಿಕ್ಸ್ ಪ್ಯಾಕ್ ಎಬಿಎಸ್ ಹೊಂದಿರುವ ಈ ಮಹಿಳೆಯ ಹೆಸರು ಆಂಡ್ರಿಯಾ ಸನ್ಶೈನ್. ಇವರು ಲಂಡನ್ನಲ್ಲಿ ವಾಸಿಸುತ್ತಿದ್ದಾರೆ. ಆಂಡ್ರಿಯಾ, ಬ್ರೆಜಿಲಿಯನ್ ಮತ್ತು ಡಚ್ ಮಾಡೆಲ್ ಮತ್ತು ವೃತ್ತಿಪರ ಬಾಡಿಬಿಲ್ಡರ್ ಆಗಿದ್ದಾರೆ. ಅವಳು ಸೂಪರ್ಫಿಟ್ ದಾದಿ ಎಂಬ ಹೆಸರಿನಿಂದ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ.
ಆಂಡ್ರಿಯಾ ಪ್ರಕಾರ, ಪುರುಷರು ಉತ್ತಮ ಫಿಟ್ನೆಸ್ ಹೊಂದಿರುವ ಮಹಿಳೆಯರ ಮೇಲೆ ಮನಸೋಲುತ್ತಾರೆ. ನನ್ನ ಫಿಟ್ನೆಸ್ ತುಂಬಾ ಚೆನ್ನಾಗಿದೆ. ಹಾಗಾಗಿ ಅನೇಕ ಯುವಕರು ನನ್ನನ್ನು ಡೇಟ್ಗೆ ಕರೆಯುತ್ತಾರೆ. ಈ ಪುರುಷರಲ್ಲಿ 25 ರಿಂದ 35 ವರ್ಷ ವಯಸ್ಸಿನವರೂ ಸೇರಿದ್ದಾರೆ.
ಆದರೆ ಪುರುಷರ ಗಮನ ಸೆಳೆಯಲು ನಾನು ಈ ರೀತಿ ಮಾಡುವುದಿಲ್ಲ ಎಂದು ಆಂಡ್ರಿಯಾ ಹೇಳಿದ್ದಾರೆ. ಜೊತೆಗೆ ತಾವು ಫಿಟ್ ಆಗಿರಲು ಇಷ್ಟ ಪಡುವುದಾಗಿ ತಿಳಿಸಿದ್ದಾರೆ.
8 ಗಂಟೆ ವ್ಯಾಯಾಮ
NYPost ಪ್ರಕಾರ, ಆಂಡ್ರಿಯಾ ದಿನಕ್ಕೆ 3 ಗಂಟೆಗಳ ಕಾಲ ವರ್ಕ್ ಔಟ್ ಮಾಡುತ್ತಾರೆ. ಆದರೆ ಕೆಲವೊಮ್ಮೆ ಅವರು 8 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಇಷ್ಟು ಒಳ್ಳೆ ದೇಹ ಪಡೆಯಲು ಅವರ ಶ್ರಮವೇ ಕಾರಣವಾಗಿದೆ. ತೂಕದ ತರಬೇತಿಗೆ 1 ಗಂಟೆ ಮೊದಲು ಅವಳು ಕಾರ್ಡಿಯೋ ಮಾಡುತ್ತಾಳೆ. ನಂತರ ಭಾರವಾದ ತೂಕವನ್ನು ಎತ್ತುತ್ತಾಳೆ.
ಅವಳು ಜಿಮ್ನಲ್ಲಿ ತನ್ನ ವರ್ಕೌಟ್ಗಳ ಮೇಲೆ ಮಾತ್ರ ಗಮನಹರಿಸುತ್ತಾಳೆ. ಅವರು ಅನೇಕ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ, ಅದರಲ್ಲಿ ಅರ್ಧದಷ್ಟು ವಯಸ್ಸಿನ ಹುಡುಗಿಯರು ಭಾಗವಹಿಸಿದ್ದರು. ಈ ವಯಸ್ಸಿನಲ್ಲೂ ನಾನು ತುಂಬಾ ಫಿಟ್ ಆಗಿದ್ದೇನೆ.
ಇದು ನನಗೆ ಹೆಮ್ಮೆಯ ವಿಷಯವಾಗಿದೆ. ಮನೆಕೆಲಸ ಬಿಟ್ಟು ಬೇರೆ ಏನಾದ್ರೂ ಮಾಡ್ಬೇಕು ಅಂತ ಆಸೆ ಇದ್ದು, ಫಿಟ್ ನೆಸ್ ನಲ್ಲಿ ಹೆಸರು ಗಳಿಸಿದೆ ಎಂದಿದ್ದಾರೆ.
ಆಂಡ್ರಿಯಾ ದೈನಂದಿನ ಆಹಾರ
ಆಂಡ್ರಿಯಾ ಪ್ರಕಾರ, ಯಾವಾಗಲೂ ಆಹಾರಕ್ರಮ ಆರೋಗ್ಯಕರವಾಗಿರಿಸಿಕೊಳ್ಳುತ್ತೇನೆ. ನಾನು ದೈನಂದಿನ ಆಹಾರದಲ್ಲಿ ಹೆಚ್ಚು ಬ್ರೊಕೊಲಿ ಮತ್ತು ಹಸಿರು ತರಕಾರಿ ತಿನ್ನುತ್ತೇನೆ. ಇದಲ್ಲದೆ, ಪ್ರೋಟೀನ್ ಹೊಂದಿರುವ ಆಹಾರಗಳು ನನ್ನ ಆಹಾರದಲ್ಲಿ ಸೇರಿವೆ.
ಕೆಲವೊಮ್ಮೆ ನಾನು 3500 ಕ್ಯಾಲೊರಿ ಆಹಾರ ಸೇಧವಿಸುತ್ತೇನೆ. ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಟ್ರಿಮ್ ಮಾಡಲು, ಸಿಹಿ ತರಕಾರಿಗಳಿಂದ ದೂರವಿರುವುದಾಗಿ ಮತ್ತು ಅಡುಗೆಯಲ್ಲಿ ಉಪ್ಪು ಮತ್ತು ಎಣ್ಣೆ ಬಳಕೆ ಮಾಡುವುದಿಲ್ಲ.
ಇದನ್ನೂ ಓದಿ: ಕಬ್ಬಿನ ಹಾಲು ಕುಡಿದ್ರೆ ಆರೋಗ್ಯದ ಮೇಲೆ ಯಾವೆಲ್ಲಾ ಅಡ್ಡ ಪರಿಣಾಮಗಳು ಉಂಟಾಗುತ್ತೆ?
53 ನೇ ವಯಸ್ಸಿನಲ್ಲಿ ಫಿಟ್ನೆಸ್ ರಹಸ್ಯ
ಆಂಡ್ರಿಯಾ ಸನ್ಶೈನ್, ಸಿಗರೇಟ್ ಸೇದಲ್ಲ. ಎಂದಿಗೂ ಫೋಟೋ ಎಡಿಟಿಂಗ್ ಮಾಡುವುದಿಲ್ಲ. ಧೂಮಪಾನ ಮಾಡದೆ ನೀವು ಫಿಟ್ ಆಗಿರಲು ಸಾಧ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ