Health Tips: ಸಿಹಿ ತಿಂಡಿಗಳಿಗೆ ಸಕ್ಕರೆ ಬದಲು ಪರ್ಯಾಯವಾಗಿ ಇವುಗಳನ್ನು ಬಳಸಿ

ಕೃತಕ ಸಿಹಿಕಾರಕಗಳ ಸುರಕ್ಷತೆಯ ಬಗ್ಗೆ ಚರ್ಚೆಗಳು ನಡೆದೇ ಇವೆ ಮತ್ತು ವಿವಿಧ ರೋಗಗಳ ಕಾರಣಗಳಲ್ಲಿ ಅವುಗಳ ಪಾತ್ರದ ಬಗ್ಗೆ ಅಧ್ಯಯನ ಆವಿಷ್ಕಾರಗಳು ವಿಭಿನ್ನವಾಗಿವೆ. ಹೃದಯರಕ್ತನಾಳದ ಕಾಯಿಲೆಗಳ ಮೇಲೆ ಆಹಾರ ಸಂಯೋಜನೆಗಳ ನಕಾರಾತ್ಮಕ ಪ್ರಭಾವವನ್ನು ಪ್ರಾಯೋಗಿಕ ಅಧ್ಯಯನಗಳಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ:

ಇದನ್ನೂ ಓದಿ:

  • Share this:
ನಮಗೆ ಏನು ತಿನ್ನಬೇಕು ಅಂತ ಅನ್ನಿಸುತ್ತೋ, ಅದನ್ನು ಮನೆಯಲ್ಲಿಯೇ ಮಾಡಿಕೊಂಡು ತಿನ್ನುವುದು ಉತ್ತಮ ಅಂತ ಮನೆಯಲ್ಲಿರುವ ಹಿರಿಯರು ಅನೇಕ ಬಾರಿ ಹೇಳುವುದನ್ನು ನಾವು ಕೇಳಿರುತ್ತೇವೆ. ನಿಮ್ಮ ಪೌಷ್ಟಿಕ ಆಹಾರವನ್ನು (Nutritious food) ಮನೆಯಲ್ಲಿಯೇ ತಯಾರಿಸಿಕೊಳ್ಳಿ ಮತ್ತು ಸಂಸ್ಕರಿಸಿದ ಸಕ್ಕರೆಯ (Sugar) ಸೇವನೆಯನ್ನು ಆದಷ್ಟು ಕಡಿಮೆ ಮಾಡಲು ಸಕ್ಕರೆಯಿಂದ ಸಮೃದ್ಧವಾಗಿರುವ ಪ್ಯಾಕ್ ಮಾಡಿದ ಆಹಾರಗಳು ಮತ್ತು ಪಾನೀಯಗಳಿಂದ (Drinks) ಆದಷ್ಟು ದೂರವಿರಿ. ಏಕೆಂದರೆ ಈ ರೀತಿಯ ಕೃತಕ ಸಿಹಿಕಾರಕಗಳು ಮತ್ತು ಪ್ಯಾಕೆಟ್ ಗಳಲ್ಲಿರುವ ಪದಾರ್ಥಗಳಲ್ಲಿ ಬಳಸಿದ ಸಕ್ಕರೆಯು ಹಲವಾರು ದೀರ್ಘಕಾಲೀನ ರೋಗಗಳಿಗೆ (Diseases) ಕಾರಣವಾಗುತ್ತದೆ ಎಂದು ತಿಳಿದುಬಂದಿದೆ.

ಕೃತಕ ಸಿಹಿಕಾರಕಗಳ ಸುರಕ್ಷತೆಯ ಬಗ್ಗೆ ಅಧ್ಯಯನ ಏನು ಹೇಳಿದೆ 
ಈಗಂತೂ ಆಹಾರ ಪದಾರ್ಥಗಳನ್ನು ತಯಾರಿಸುವ ಕೈಗಾರಿಕೆಗಳು ವ್ಯಾಪಕ ಶ್ರೇಣಿಯ ಆಹಾರ ಪದಾರ್ಥಗಳು ಮತ್ತು ಪಾನೀಯಗಳಲ್ಲಿ ಪರ್ಯಾಯವಾಗಿ ಕೃತಕ ಸಿಹಿಕಾರಕಗಳನ್ನು ಬಳಸುತ್ತಿವೆ. ಆದಾಗ್ಯೂ, ಕೃತಕ ಸಿಹಿಕಾರಕಗಳ ಸುರಕ್ಷತೆಯ ಬಗ್ಗೆ ಚರ್ಚೆಗಳು ನಡೆದೇ ಇವೆ ಮತ್ತು ವಿವಿಧ ರೋಗಗಳ ಕಾರಣಗಳಲ್ಲಿ ಅವುಗಳ ಪಾತ್ರದ ಬಗ್ಗೆ ಅಧ್ಯಯನ ಆವಿಷ್ಕಾರಗಳು ವಿಭಿನ್ನವಾಗಿವೆ. ಹೃದಯರಕ್ತನಾಳದ ಕಾಯಿಲೆಗಳ ಮೇಲೆ ಆಹಾರ ಸಂಯೋಜನೆಗಳ ನಕಾರಾತ್ಮಕ ಪ್ರಭಾವವನ್ನು ಪ್ರಾಯೋಗಿಕ ಅಧ್ಯಯನಗಳಲ್ಲಿ ಸೂಚಿಸಲಾಗಿದೆ.

ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದಲ್ಲಿ ಫ್ರಾನ್ಸ್ ನ ಸಂಶೋಧಕರು ಕೃತಕ ಸಿಹಿಕಾರಕಗಳು (ವಿಶೇಷವಾಗಿ ಆಸ್ಪರ್ಟೇಮ್, ಅಸೆಸಲ್ಫೇಮ್ ಪೊಟ್ಯಾಸಿಯಮ್ ಮತ್ತು ಸುಕ್ರಾಲೋಸ್) ಹೃದಯರಕ್ತನಾಳ, ಸೆರೆಬ್ರೊವಾಸ್ಕುಲರ್ ಮತ್ತು ಪರಿಧಮನಿಯ ಹೃದಯ ರೋಗಗಳ ಹೆಚ್ಚಿನ ಅಪಾಯದೊಂದಿಗೆ ಸಂಬಂಧ ಹೊಂದಿವೆ ಎಂದು ಕಂಡುಕೊಂಡಿದ್ದಾರೆ.

ಸಂಶೋಧನೆ ಹೇಗೆ ನಡೆಯಿತು?
ಈ ಸಂಶೋಧನೆಯನ್ನು ಒಂದು ಲಕ್ಷಕ್ಕೂ ಹೆಚ್ಚು ಜನರ ಮೇಲೆ ನಡೆಸಲಾಯಿತು. ಅವರಲ್ಲಿ ಸುಮಾರು 80 ಪ್ರತಿಶತದಷ್ಟು ಮಹಿಳೆಯರು ಸರಾಸರಿ 42 ವರ್ಷ ವಯಸ್ಸಿನವರಾಗಿದ್ದರು.

ಇದನ್ನೂ ಓದಿ: Toilet Health Tips: ಟಾಯ್ಲೆಟ್ ಸೀಟ್ ಬಳಸುವಾಗ ಈ ತಪ್ಪು ಮಾಡಿದ್ರೆ ಕಿಡ್ನಿ ಸಮಸ್ಯೆ ಬರುತ್ತೆ

ಸೋರ್ಬೊನ್ ಪ್ಯಾರಿಸ್ ನಾರ್ಡ್ ವಿಶ್ವವಿದ್ಯಾಲಯದ ತಜ್ಞರ ನೇತೃತ್ವದಲ್ಲಿ, ಪಾನೀಯಗಳು, ಟೇಬಲ್-ಟಾಪ್ ಸಿಹಿಕಾರಕಗಳು ಮತ್ತು ಡೈರಿ ಉತ್ಪನ್ನಗಳು ಸೇರಿದಂತೆ ಎಲ್ಲಾ ಆಹಾರಗಳನ್ನು ಸೇವಿಸಿದ ಜನರ ಸಿಹಿಕಾರಕಗಳ ಸೇವನೆಯನ್ನು ಪರಿಶೀಲಿಸಿದರು ಮತ್ತು ಅದನ್ನು ಹೃದಯ ಅಥವಾ ರಕ್ತಪರಿಚಲನಾ ಕಾಯಿಲೆಗಳ ಅಪಾಯಕ್ಕೆ ಹೋಲಿಸಿದರು.

ಲಕ್ಷಾಂತರ ಜನರು ಪ್ರತಿದಿನ ಸೇವಿಸುವ ಅನೇಕ ರೀತಿಯ ಆಹಾರಗಳು ಮತ್ತು ಪಾನೀಯಗಳಲ್ಲಿ ಇರುವ ಈ ಸಿಹಿಕಾರಕಗಳನ್ನು ಹಲವಾರು ಆರೋಗ್ಯ ಸಂಸ್ಥೆಗಳ ಪ್ರಸ್ತುತ ಸ್ಥಿತಿಗೆ ಅನುಗುಣವಾಗಿ ಸಕ್ಕರೆಗೆ ಆರೋಗ್ಯಕರ ಮತ್ತು ಸುರಕ್ಷಿತ ಪರ್ಯಾಯವೆಂದು ಪರಿಗಣಿಸಬಾರದು ಎಂದು ಸಂಶೋಧನೆಗಳು ಸೂಚಿಸುತ್ತವೆ.

ಸಕ್ಕರೆ ಸೇವನೆ ಹೃದಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ 
"ತಮ್ಮ ಬೆಳಗಿನ ಚಹಾಕ್ಕೆ ಇಂತಹ ಸಿಹಿಕಾರಕಗಳನ್ನು ಸೇರಿಸಿಕೊಳ್ಳುವ ಜನರು, ಅವರು ಸುರಕ್ಷಿತವಾಗಿದ್ದಾರೆ ಮತ್ತು ತಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತಾರೆ ಎಂದು ಭಾವಿಸಿದರೆ, ಅದು ಅವರ ಹೃದಯದ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿದಿರಬೇಕು" ಎನ್ನುತ್ತಾರೆ ತಜ್ಞರು. ಕೃತಕ ಸಿಹಿಕಾರಕಗಳು ರುಚಿಯಲ್ಲಿ ಬದಲಾವಣೆ, ಕಿಬ್ಬೊಟ್ಟೆಯ ಅಸ್ವಸ್ಥತೆ, ತಲೆನೋವು, ನಿದ್ರೆಯ ಕೊರತೆ ಮತ್ತು ಜ್ಞಾಪಕ ಶಕ್ತಿ ದೌರ್ಬಲ್ಯಕ್ಕೆ ಕಾರಣವಾಗಬಹುದು ಎಂದು ಈ ಮೊದಲು ನಮಗೆ ತಿಳಿದಿತ್ತು.

ಇದನ್ನೂ ಓದಿ:  Stroke: ಫ್ಲೂ ಲಸಿಕೆ ಪಡೆದುಕೊಂಡ್ರೆ ಸ್ಟ್ರೋಕ್‌ ಅಪಾಯ ಕಡಿಮೆಯಂತೆ: ಸಂಶೋಧನೆ

ಆದರೆ ಹೊಸ ಅಧ್ಯಯನದಲ್ಲಿ, ಸಂಶೋಧಕರು ಕೃತಕ ಸಿಹಿಕಾರಕಗಳು ಮತ್ತು ಹೃದ್ರೋಗಗಳ ನಡುವಿನ ಸಂಭಾವ್ಯ ಸಂಬಂಧವನ್ನು ಗುರುತಿಸಿದ್ದಾರೆ ಮತ್ತು ಈ ರೀತಿಯ ಆಹಾರ ಸೇರ್ಪಡೆಗಳನ್ನು ಸಕ್ಕರೆಗೆ ಆರೋಗ್ಯಕರ ಮತ್ತು ಸುರಕ್ಷಿತ ಪರ್ಯಾಯವೆಂದು ಪರಿಗಣಿಸಬಾರದು ಎಂದು ಹೇಳಿದ್ದಾರೆ ಎಂದು ದೆಹಲಿಯ ಪ್ರಸಿದ್ಧ ಬಿಎಲ್‌ಕೆ-ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ನಿರ್ದೇಶಕ ಡಾ. ಅಶೋಕ್ ಕುಮಾರ್ ಜಿಂಗಾನ್ ಅವರು ಹೇಳಿದ್ದಾರೆ.

ಸಕ್ಕರೆಯ ಪರ್ಯಾಯವಾಗಿ ಏನನ್ನು ಬಳಸಬಹುದು 
"ಈ ಕ್ಯಾಲೋರಿಗಳನ್ನು ಕಡಿಮೆ ಮಾಡಿಕೊಳ್ಳುವ ಭರದಲ್ಲಿ ಜನರು ಆಹಾರದಲ್ಲಿ ಕೃತಕ ಸಿಹಿಕಾರಕಗಳನ್ನು ಆಯ್ಕೆ ಮಾಡುವುದನ್ನು ನೋಡಬಹುದು. ಇದಕ್ಕೆ ಪರ್ಯಾಯವಾಗಿ ನೀವು ಜೇನುತುಪ್ಪವನ್ನು ಬಳಸಬಹುದು, ಇದು ಸುರಕ್ಷಿತ ನೈಸರ್ಗಿಕ ಸಿಹಿಕಾರಕವಾಗಿದೆ. ಸ್ಟೀವಿಯಾವನ್ನು ಸಹ ಬಳಸಬಹುದು. ಮನೆಯಲ್ಲಿಯೇ ಸಿಹಿತಿಂಡಿಗಳನ್ನು ತಯಾರಿಸಲು ಕೃತಕ ಸಿಹಿಕಾರಕಗಳನ್ನು ಬಳಸುವುದು ಕ್ಯಾಲೋರಿಗಳನ್ನು ಕಡಿಮೆ ಮಾಡಿಕೊಳ್ಳಲು ಸರಿಯಾದ ಮಾರ್ಗವಲ್ಲ. ಕೃತಕ ಸಿಹಿಕಾರಕಗಳನ್ನು ಮಿತವಾಗಿ ತೆಗೆದುಕೊಳ್ಳುವುದು ಉತ್ತಮ ಮತ್ತು ಸಕ್ಕರೆಗೆ ಇದು ಪರ್ಯಾಯವಲ್ಲ" ಎಂದು ಡಾ. ಜಿಂಗಾನ್ ಹೇಳಿದ್ದಾರೆ.
Published by:Ashwini Prabhu
First published: