ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ(Problems) ಅಂದ್ರೆ ಅದು ಹೇರ್ ಫಾಲ್(Hair fall). ದೇಹಕ್ಕೆ ಆರೋಗ್ಯಕರ, ಪೌಷ್ಠಿಕಾಂಶವುಳ್ಳ ಆಹಾರ(Food) ಸೇವಿಸದಿದ್ದರೆ ಈ ಹೇರ್ ಫಾಲ್ ಸಮಸ್ಯೆ ಬರುತ್ತದೆ. ಅಲ್ಲದೆ ಅತಿಯಾದ ಯೋಚನೆ, ನಿದ್ರಾಹೀನತೆ(less sleep) ಹಾಗೂ ಟೆನ್ಶನ್ ನಿಂದ(Tension )ಕೂಡ ಕೂದಲು ಉದುರೋಕೆ ಶುರುವಾಗುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ಕೂದಲು ಉದುರತ್ತೆ. ಆದ್ರೆ ಕೂದಲು ಉದುರಿರುವ ಸ್ಥಳದಲ್ಲಿ ಮತ್ತೆ ಕೂದಲು ಬೆಳೆಯದಿದ್ದರೆ ಅದಕ್ಕೆ ಹೇರ್ ಫಾಲ್ ಸಮಸ್ಯೆ ಎನ್ನುತ್ತಾರೆ..ಮಹಿಳೆ ಹಾಗು ಪುರುಷರು ಇಬ್ಬರಿಗೂ ಕೂದಲು ಉದುರುವುದು ಸಾಮಾನ್ಯ.ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವಿಕೆ ಸಮಸ್ಯೆ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಅವರ ಪಾಲಿನ ದೊಡ್ಡ ಸಮಸ್ಯೆಯಾಗಿ ಇದು ಅವರನ್ನ ಕಾಡುತ್ತಿದೆ. ಹೆಚ್ಚಿನ ಜನರು ಕೂದಲು ಉದುರುವಿಕೆಯ ಬಗ್ಗೆ ಚಿಂತಿತರಾಗಿದ್ದಾರೆ. ಕೂದಲು ಉದುರುವುದು ವ್ಯಕ್ತಿಯ ತಲೆಯನ್ನ ಬೋಳು ಮಾಡುತ್ತದೆ .. ಆದ್ರೆ ಈ ರೀತಿ ಕೂದಲು ಉದುರುವ ಸಮಸ್ಯೆಗೆ ಪುರುಷರು ಮಾಡುವ ಹಲವಾರು ತಪ್ಪುಗಳು ಸಹ ಕಾರಣ ಆಗಿವೆ..
1) ಪ್ರತಿನಿತ್ಯ ಸ್ನಾನ ಮಾಡುವುದು: ಮಹಿಳೆಯರಿಗಿಂತ ಪುರುಷರು ಹೆಚ್ಚಾಗಿ ಹೊರಗಡೆ ಓಡಾಟ ಮಾಡುತ್ತಾರೆ. ಹೀಗಾಗಿ ಅವರು ಪ್ರತಿನಿತ್ಯ ತಲೆ ಸ್ನಾನ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ.. ಆದ್ರೆ ಪ್ರತಿನಿತ್ಯ ತಲೆ ಸ್ನಾನ ಮಾಡುವ ಪುರುಷರ ಅಭ್ಯಾಸವೇ ಅವರಿಗೆ ಬೊಕ್ಕತಲೆ ಉಂಟಾಗಲು ಕಾರಣ.
ಪ್ರತಿನಿತ್ಯ ಸ್ನಾನ ಮಾಡುವುದರಿಂದ ತಲೆ ಕೂದಲು ಹೆಚ್ಚು ಉದುರಲು ಆರಂಭ ಆಗುತ್ತದೆ.. ಹೀಗಾಗಿ ವಾರದಲ್ಲಿ ಎರಡು ಬಾರಿ ತಲೆಸ್ನಾನ ಮಾಡಿದರೆ ಸೂಕ್ತ.
ಇದನ್ನೂ ಓದಿ: ಮಕ್ಕಳಿಗೆ ಈ ಆಹಾರಗಳನ್ನು ಕೊಟ್ರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತಂತೆ!
2) ಶಾಂಪೂ ಬಳಕೆ: ಪ್ರತಿದಿನ ಸ್ನಾನ ಮಾಡುವಾಗ ಪುರುಷರು ಹೆಚ್ಚು ಹೆಚ್ಚು ಶಾಂಪೂ ತಲೆಗೆ ಬಳಸುತ್ತಾರೆ.. ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಶಾಂಪೂಗಳಲ್ಲಿ ರಾಸಾಯನಿಕಗಳ ಬಳಕೆ ಅಧಿಕ ಪ್ರಮಾಣದಲ್ಲಿರುತ್ತದೆ.. ಹೀಗಾಗಿ ಯಾವ ಶಾಂಪೂ ಬಳಕೆ ಮಾಡಿದರೆ ಸೂಕ್ತ ಎಂದು ಅರಿಯುವ ಮೊದಲೇ ಪುರುಷರು ಹೆಚ್ಚಿನ ಪ್ರಮಾಣದಲ್ಲಿ ಶಾಂಪೂ ಬಳಕೆ ಮಾಡುವುದು ತಲೆ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.
ಶಾಂಪೂಗಳ ಬದಲಾಗಿ ಶೀಗೇಕಾಯಿ, ಕಡಲೆಹಿಟ್ಟು, ಅಂಟವಾಳಕಾಯಿಯಂತಹ ನೈಸರ್ಗಿಕ ಪದಾರ್ಥಗಳನ್ನೂ ಸಹ ಬಳಸಿ ತಲೆಸ್ನಾನ ಮಾಡಿದರೆ ತಲೆ ಶುಭ್ರವಾಗಿ ಆಗುತ್ತದೆ.
3)ಬಿಸಿ ನೀರಿನ ಬಳಕೆ: ಪ್ರತಿ ಬಾರಿ ನಾವು ಸ್ನಾನ ಮಾಡುವಾಗ ಚರ್ಮ ಹಾಗೂ ಕೂದಲಿನ ಆರೈಕೆಗಾಗಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ.. ಅದೇ ರೀತಿ ಪುರುಷರು ಅತಿ ಹೆಚ್ಚು ಬಿಸಿ ನೀರಿನಿಂದ ಸ್ನಾನ ಮಾಡುವ ಬದಲು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದರೆ ಅವರಲ್ಲಿ ಕೂದಲು ಉದುರುವ ಸಮಸ್ಯೆ ತಪ್ಪುತ್ತದೆ.. ಒಂದು ವೇಳೆ ಅತಿ ಹೆಚ್ಚು ಬಿಸಿ ನೀರಿನಿಂದ ಸ್ನಾನ ಮಾಡಿದರೆ ಬೊಕ್ಕತಲೆ ಉಂಟಾಗುತ್ತದೆ.
4)ಒದ್ದೆ ಕೂದಲು ಬ್ರಷ್ ಮಾಡುವುದು: ಕೂದಲು ಒದ್ದೆಯಾಗಿರುವಾಗ ಅದನ್ನು ಬ್ರಷ್ ಮಾಡಬೇಡಿ. ಇದರಿಂದಾಗಿ ಕೂದಲು ಉದುರುವುದು ಹೆಚ್ಚಾಗುತ್ತದೆ. ಆದರೆ ನೀವು ಕೂದಲನ್ನು ದೊಡ್ಡ ಹೆಣಿಗೆ ಇರುವ ಬಾಚಾಣಿಗೆಯಿಂದ ತಲೆ ಬಾಚಿಕೊಳ್ಳಿ. ನಿಯಮಿತವಾಗಿ ಬ್ರಷ್ ಮಾಡುವುದನ್ನು ನಿಲ್ಲಿಸಿ. ಇದರಿಂದ ನಿಮ್ಮ ಕೂದಲಿಗೆ ಹಾನಿಯಾಗಿ, ಕೂದಲು ಉದುರುವುದು ಅಧಿಕವಾಗುತ್ತದೆ. ಸಿಕ್ಕನ್ನು ಬಿಡಿಸಲು ಬಾಚಣಿಗೆ ಅಥವಾ ಬ್ರಷ್ ಬದಲು, ನಿಮ್ಮ ಬೆರಳುಗಳನ್ನು ಬಳಸಿ.
ಇದನ್ನೂ ಓದಿ: ನೀವು ರನ್ನಿಂಗ್ ಮಾಡುವಾಗ ಹೆಚ್ಚು ಆಯಾಸಗೊಳ್ಳುತ್ತೀರಾ? ಹಾಗಿದ್ರೆ ಈ ಸಲಹೆಗಳನ್ನ ಫಾಲೋ ಮಾಡಿ
5)ಟ್ರೆಂಡಿ ಹೇರ್ ಸ್ಟೈಲ್: ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ಹೇರ್ ಸ್ಟೈಲ್ ಗಳು ಸಿಕ್ಕಾಪಟ್ಟೆ ಫೇಮಸ್ ಆಗಿವೆ..ಅದ್ರಲ್ಲೂ ಹೊಸಬಗೆಯ ಹೇರ್ ಸ್ಟೈಲ್ ಮತ್ತು ಹೇರ್ ಕಲರಿಂಗ್ ತಂತ್ರಗಳಿಗೆ ಮೊರೆ ಹೋಗುತ್ತಿರುವುದು. ಇಲ್ಲಿ ವಿವಿಧ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಯಾಗುವುದರಿಂದ ಮತ್ತು ಹೆಚ್ಚಿನ ತಾಪಮಾನ ತಲೆಕೂದಲಿಗೆ ತಗಲುವುದರಿಂದ ಕೂದಲು ಉದುರುತ್ತದೆ. ಹೀಗಾಗಿ ಪುರುಷರು ಟ್ರೆಂಡಿ ಹೇರ್ ಸ್ಟೈಲ್ ಗೆ ಬ್ರೇಕ್ ಹಾಕುವುದು ಉತ್ತಮ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ