Two Heads Baby Born: ಡೈಸೆಫಾಲಿಕ್ ಪ್ಯಾರಾಫಾಗಸ್ ಇದ್ದರೆ ಎರಡು ತಲೆ, ಒಂದೇ ದೇಹದ ಮಕ್ಕಳು ಜನನ, ಇರಲಿ ಎಚ್ಚರ

ಎರಡು ತಲೆ ಹೊಂದಿರುವ ಒಂದು ದೇಹದ ಮಗುವಿಗೆ ಶಾಹೀನ್ ಎಂಬ ಮಹಿಳೆ ಜನ್ಮ ನೀಡಿದ್ದಾಳೆ. ಈ ಪ್ರಕರಣ ಮಧ್ಯಪ್ರದೇಶದ ರತ್ಲಂನಲ್ಲಿ ನಡೆದಿದೆ. ಶಿಶುವಿನ ಜನನದ ನಂತರ ಅದನ್ನು ಇಂದೋರ್‌ನ ಪ್ರಮುಖ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಮಗುವಿನ ತಾಯಿ ಶಾಹೀನ್ ರನ್ನು ಜಿಲ್ಲಾ ಆಸ್ಪತ್ರೆಯಲ್ಲಿಯೇ ಇರಿಸಲಾಗಿದೆ.

ಎರಡು ತಲೆ ಹೊಂದಿರುವ ಒಂದು ದೇಹದ ಮಗು ಜನನ

ಎರಡು ತಲೆ ಹೊಂದಿರುವ ಒಂದು ದೇಹದ ಮಗು ಜನನ

  • Share this:
    ಇತ್ತೀಚೆಗೆ ಭಾರತದಲ್ಲಿ (India) ಒಂದು ದೇಹ ಎರಡು ತಲೆ ಹೊಂದಿರುವ ಮಗು ಜನಿಸಿದ (Birth) ಪ್ರಕರಣ (Case) ಬೆಳಕಿಗೆ ಬಂದಿದೆ. ಮಗುವಿಗೆ (Baby) ಎರಡು ತಲೆ (Two heads), ಮೂರು ಕೈಗಳು ಮತ್ತು ಎರಡು ಹೃದಯ ಇದೆ. ಶಾಹೀನ್ ಖಾನ್ ಮತ್ತು ಸೊಹೈಲ್‌ ದಂಪತಿಗೆ ಜನಿಸಿದ ಮಗು ಇದಾಗಿದೆ. ದಂಪತಿಗೆ ಮೊದಲು ಅವಳಿ ಮಕ್ಕಳು ಜನಿಸಲಿವೆ ಎಂದು ಹೇಳಲಾಗಿತ್ತು. ಆದರೆ ಮಗು ಜನಿಸಿದಾಗ ವೈದ್ಯರು ಹಾಗೂ ವಾರ್ಡ್ ನಲ್ಲಿದ್ದವರು ಅಚ್ಚರಿಪಟ್ಟಿದ್ದರು. ಯಾಕೆಂದರೆ ಶಾಹೀನ್ ಎರಡು ತಲೆ ಹೊಂದಿರುವ ಒಂದು ದೇಹದ ಮಗುವಿಗೆ ಜನ್ಮ ನೀಡಿದ್ದಳು. ಈ ಪ್ರಕರಣ ಮಧ್ಯಪ್ರದೇಶದ ರತ್ಲಂನಲ್ಲಿ ನಡೆದಿದೆ. ಶಿಶುವಿನ ಜನನದ ನಂತರ ಅದನ್ನು ಇಂದೋರ್‌ನ ಪ್ರಮುಖ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಮಗುವಿನ ತಾಯಿ ಶಾಹೀನ್ ರನ್ನು ಜಿಲ್ಲಾ ಆಸ್ಪತ್ರೆಯಲ್ಲಿಯೇ ಇರಿಸಲಾಗಿದೆ.

    ಎರಡು ತಲೆ ಒಂದು ದೇಹದ ಮಗು ಜನಿಸಲು ಕಾರಣವೇನು?

    ಈ ರೀತಿಯ ಮಗು ಹುಟ್ಟಲು ಕಾರಣ ಡೈಸೆಫಾಲಿಕ್ ಪ್ಯಾರಾಫಾಗಸ್ ಎಂಬ ಕಾಯಿಲೆ ಎಂದಿದ್ದಾರೆ ವೈದ್ಯರು. ಇದು ಅಪರೂಪದ ಪ್ರಕರಣ. ಈ ರೀತಿಯ ಮಕ್ಕಳು ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ ಎಂದಿದ್ದಾರೆ. ಹಾಗಾದ್ರೆ ನಾವಿಂದು ಈ ರೀತಿಯ ಮಗು ಹುಟ್ಟಲು ಕಾರಣವಾಗುವ ಡೈಸೆಫಾಲಿಕ್ ಪ್ಯಾರಾಫಾಗಸ್ ಕಾಯಿಲೆ ಎಂದರೇನು? ಎರಡು ಮಕ್ಕಳು ಹೇಗೆ ಒಟ್ಟಿಗೆ ಬೆಸೆದುಕೊಳ್ಳುತ್ತಾರೆ? ಇದಕ್ಕೆ ಕಾರಣಗಳೇನು ಎಂದು ನೋಡೋಣ.

    ಡೈಸೆಫಾಲಿಕ್ ಪ್ಯಾರಾಫಾಗಸ್ ಕಾಯಿಲೆ ಎಂದರೇನು?

    ಡೈಸೆಫಾಲಿಕ್ ಪ್ಯಾರಾಫಾಗಸ್ ಕಾಯಿಲೆಯು ಒಂದೇ ದೇಹದ ಮೇಲೆ ಎರಡು ತುದಿಗಳನ್ನು ಹೊಂದಿರುವ ಅಪರೂಪದ ಭಾಗಶಃ ಸಮ್ಮಿಲನವಾಗಿದೆ. ನವಜಾತ ಶಿಶುಗಳ ಈ ಸಂಪರ್ಕವನ್ನು ಎರಡು ತಲೆಯ ಮಕ್ಕಳು ಎಂದು ಕರೆಯುತ್ತಾರೆ. ಈ ರೀತಿ ಜನಿಸಿದ ಮಕ್ಕಳಲ್ಲಿ ಹೆಚ್ಚಿನ ಶಿಶುಗಳು ಜನನದ ಮೊದಲು ಅಥವಾ ನಂತರ ಸಾವನ್ನಪ್ಪುತ್ತವೆ.

    ಇದನ್ನೂ ಓದಿ: ದೀರ್ಘಕಾಲ ಕುಳಿತುಕೊಳ್ಳುತ್ತೀರಾ? ಉಬ್ಬಿರುವ ರಕ್ತನಾಳ ಸಮಸ್ಯೆ ಬರದಂತೆ ಇರಲಿ ಎಚ್ಚರ

    ಮೇಯೊ ಕ್ಲಿನಿಕ್ ಪ್ರಕಾರ, ಡೈಸೆಫಾಲಿಕ್ ಪ್ಯಾರಾಫಾಗಸ್ ಕಾಯಿಲೆಯು ಅವಳಿ ಮಕ್ಕಳ ಸೊಂಟ, ಹೊಟ್ಟೆ ಅಥವಾ ಎದೆಯನ್ನು ಒಟ್ಟಿಗೆ ಬೆಸೆಯುವಂತೆ ಮಾಡುತ್ತದೆ. ಪ್ರತ್ಯೇಕ ತಲೆ ಇರುತ್ತದೆ. ಈ ಅವಳಿ ಶಿಶುಗಳು ಎರಡು, ಮೂರು ಅಥವಾ ನಾಲ್ಕು ತೋಳು ಮತ್ತು ಎರಡು ಅಥವಾ ಮೂರು ಕಾಲು ಹೊಂದಿರಬಹುದು. ದೇಹದ ಭಾಗಗಳು ಕೆಲವೊಮ್ಮೆ ಒಂದೇ ಅಥವಾ ವಿಭಿನ್ನವಾಗಿರಬಹುದು.

    ಇಂತಹ ಹಲವು ಪ್ರಕರಣಗಳಲ್ಲಿ ವೈದ್ಯರು ಎರಡೂ ಮಕ್ಕಳನ್ನು ಬೇರ್ಪಡಿಸುತ್ತಾರೆ. ಆದರೆ ಎರಡು ತಲೆ, ಒಂದು ಹೃದಯ, ಮೂರು ಕೈಗಳನ್ನು ಹೊಂದಿದ್ದು, ಒಟ್ಟಿಗೆ ಬೆಸೆದಿರುವ ಮಕ್ಕಳನ್ನು ಬೇರ್ಪಡಿಸುವ ಸಾಧ್ಯತೆಗಳು ತೀರಾ ಕಡಿಮೆ. ಇದು ಮಕ್ಕಳ ಯಾವ ಅಂಗ ಬೆಸೆದಿದೆ, ಯಾವ ಅಂಗಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬುದನ್ನು ಅವಲಂಬಿಸಿರುತ್ತದೆ.

    ಡೈಸೆಫಾಲಿಕ್ ಪ್ಯಾರಾಫಾಗಸ್‌ನ ಲಕ್ಷಣಗಳು ಯಾವುವು?

    ಡೈಸೆಫಾಲಿಕ್ ಪ್ಯಾರಾಫಾಗಸ್‌ ಕಾಯಿಲೆಯ ಯಾವುದೇ ಚಿಹ್ನೆಗಳು ಅಥವಾ ರೋಗ ಲಕ್ಷಣ ಗೋಚರಿಸುವುದಿಲ್ಲ. ಇತರ ಅವಳಿ ಗರ್ಭಧಾರಣೆಯಂತೆ ಇಲ್ಲಿಯೂ ಗರ್ಭಾಶಯವು ವೇಗವಾಗಿ ಬೆಳೆಯುತ್ತದೆ. ಗರ್ಭಾವಸ್ಥೆಯ ಆರಂಭಿಕ ದಿನಗಳಲ್ಲಿ ಮಹಿಳೆಯರು ಹೆಚ್ಚು ಆಯಾಸ, ತಲೆ ತಿರುಗುವಿಕೆ ಮತ್ತು ವಾಂತಿಯ ಸಮಸ್ಯೆ ಎದುರಿಸುತ್ತಾರೆ. ಸ್ಟ್ಯಾಂಡರ್ಡ್ ಅಲ್ಟ್ರಾಸೌಂಡ್ ಮೂಲಕ ಗರ್ಭಾವಸ್ಥೆಯ ಆರಂಭದಲ್ಲಿ ಸಂಯೋಜಿತ ಅವಳಿಗಳನ್ನು ಕಂಡು ಹಿಡಿಯಬಹುದು.

    ಮಕ್ಕಳು ಹೇಗೆ ಒಟ್ಟಿಗೆ ಬೆಸೆದುಕೊಳ್ಳುತ್ತಾರೆ?

    ಸಂಯೋಜಿತ ಅವಳಿ ಮಕ್ಕಳನ್ನು ಅವು ಎಲ್ಲಿ ಸಂಬಂಧಿಸಿವೆ ಎಂಬುದರ ಆಧಾರದ ಮೇಲೆ ವರ್ಗೀಕರಿಸುತ್ತಾರೆ. ಗರ್ಭಧಾರಣೆಯ ಕೆಲವು ವಾರಗಳ ನಂತರ, ಫಲವತ್ತಾದ ಮೊಟ್ಟೆಯು ಎರಡು ಪ್ರತ್ಯೇಕ ಭ್ರೂಣಗಳಾಗಿ ವಿಭಜನೆಯಾಗುತ್ತದೆ. ಮತ್ತು ಅಂಗಗಳನ್ನು ರೂಪಿಸುವ ಕೆಲಸವು ಅದರಲ್ಲಿ ಪ್ರಾರಂಭವಾಗುತ್ತದೆ. ಇದು ಸಂಭವಿಸಿದಾಗ ಅವಳಿಗಳು ಜನಿಸುತ್ತವೆ.

    ಇದನ್ನೂ ಓದಿ: ಚರ್ಮದ ವಿವಿಧ ಭಾಗಗಳಲ್ಲಿ ತುರಿಕೆ! ಇದಕ್ಕೇನು ಪರಿಹಾರ?   

    ಆದರೆ ಕೆಲವು ಸಂದರ್ಭದಲ್ಲಿ ಭ್ರೂಣದ ಈ ಪ್ರತ್ಯೇಕತೆಯ ಪ್ರಕ್ರಿಯೆಯು ಮಧ್ಯದಲ್ಲಿ ನಿಲ್ಲುತ್ತದೆ. ಇದು ಅವಳಿಗಳ ಬದಲಿಗೆ ಅವಳಿ-ತಲೆಯ ಅಥವಾ ಸಂಯೋಜಿತ ಮಕ್ಕಳ ಜನನಕ್ಕೆ ಕಾರಣವಾಗುತ್ತದೆ.
    Published by:renukadariyannavar
    First published: