Sex Life| ಉತ್ತಮ ಲೈಂಗಿಕ ಚಟುವಟಿಕೆಗಾಗಿ ಅತ್ಯುತ್ತಮ ವ್ಯಾಯಾಮಗಳು!

ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಹೇಗೆ ಸಹಕಾರಿಯೋ ಹಾಗೆಯೇ ಉತ್ತಮ ಲೈಂಗಿಕ ಆರೋಗ್ಯಕ್ಕೂ ವ್ಯಾಯಾಮ ಬುನಾದಿಯಾಗಿದೆ. ನಿತ್ಯದ ನಡಿಗೆ, ಜಿಮ್‌ನ ಕಸರತ್ತು, ಓಟ, ಯೋಗ ಮೊದಲಾದ ಜೀವನಶೈಲಿಯ ಬದಲಾವಣೆಗಳಿಂದ ಕೂಡ ನೀವು ಲೈಂಗಿಕ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಪಡೆದುಕೊಳ್ಳಬಹುದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ದಾಂಪತ್ಯ ಜೀವನದಲ್ಲಿ ಲೈಂಗಿಕ ಆಸಕ್ತಿ ಎಂಬುದು ಮೂಲಾಧಾರವಾಗಿದ್ದು ಸಂಗಾತಿಗಳು ಲೈಂಗಿಕ ಚಟುವಟಿಕೆಗಳಲ್ಲಿ ಸಮಾನ ಆಸಕ್ತಿಯನ್ನು ಹೊಂದಿದ್ದರೆ ಮಾತ್ರವೇ ಬಿಕ್ಕಟ್ಟು, ದುಃಖ ರಹಿತವಾಗಿ ದಾಂಪತ್ಯ ಜೀವನ ಸಾಗಬಲ್ಲುದು. ಪರಸ್ಪರರನ್ನು ಅರಿತುಕೊಳ್ಳಲು, ಪ್ರೀತಿಯನ್ನು ಹಂಚಿಕೊಳ್ಳಲು ಲೈಂಗಿಕ ವಾಂಛೆಗಳನ್ನು ಬಳಸಿಕೊಳ್ಳಬೇಕು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಲೈಂಗಿಕ ಆಸಕ್ತಿ ಎಂದರೆ ಕೇವಲ ಶಾರೀರಿಕ ಸುಖವನ್ನು ಮಾತ್ರವೇ ಪಡೆದುಕೊಳ್ಳು ವುದಲ್ಲ. ಶಾರೀರಿಕ ಹಾಗೂ ಮಾನಸಿಕವಾಗಿ ಕೂಡ ಜೊತೆಯಾಗಿ ಸೇರಬೇಕು ಎಂಬುದಾಗಿ ಅಧ್ಯಯನಗಳಿಂದ ತಿಳಿದು ಬಂದಿರುವ ವಿವರವಾಗಿದೆ. ಹಾಗಾದರೆ ಲೈಂಗಿಕ ಚಟುವಟಿಕೆಗಳನ್ನು ನಡೆಸುವಾಗ ವ್ಯಾಯಾಮ ಮಾಡುವುದು ಬಹುಮುಖ್ಯ ಪಾತ್ರವಹಿಸುತ್ತದೆ.


  ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಹೇಗೆ ಸಹಕಾರಿಯೋ ಹಾಗೆಯೇ ಉತ್ತಮ ಲೈಂಗಿಕ ಆರೋಗ್ಯಕ್ಕೂ ವ್ಯಾಯಾಮ ಬುನಾದಿಯಾಗಿದೆ. ನಿತ್ಯದ ನಡಿಗೆ, ಜಿಮ್‌ನ ಕಸರತ್ತು, ಓಟ, ಯೋಗ ಮೊದಲಾದ ಜೀವನಶೈಲಿಯ ಬದಲಾವಣೆಗಳಿಂದ ಕೂಡ ನೀವು ಲೈಂಗಿಕ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಪಡೆದುಕೊಳ್ಳಬಹುದಾಗಿದೆ. ಆಹಾರದ ಮೇಲೆ ಸಮತೋಲನ ಕಾಪಾಡುವುದೂ ಕೂಡ ಅತಿಮುಖ್ಯವಾಗಿದೆ. ಯಾವುದೇ ಸರಳ ವ್ಯಾಯಾಮಗಳನ್ನು ನಡೆಸಿ ಸಮತೋಲಿತ ಆಹಾರ ಕ್ರಮಗಳನ್ನು ಅನುಸರಿಸುವುದರಿಂದ ಲೈಂಗಿಕ ಕ್ರಿಯೆಗಳನ್ನು ಸರಾಗವಾಗಿ ಚಟುವಟಿಕೆಯಿಂದ ಮಾಡಬಹುದಾಗಿದೆ.


  ಮೊದಲೇ ಹೇಳಿದಂತೆ ವ್ಯಾಯಾಮಗಳು ನಿಮ್ಮ ಲೈಂಗಿಕ ಚಟುವಟಿಕೆಯನ್ನು ಉತ್ತೇಜನಕಾರಿಯಾಗಿಸಲು ಸಹಕಾರಿಯಾಗಿದ್ದು ಕೆಲವೊಂದು ವ್ಯಾಯಾಮಗಳು ಹಾಗೂ ಆಸನಗಳನ್ನು ಮಾಡುವುದರಿಂದ ನಿಮ್ಮ ಲೈಂಗಿಕ ಜೀವನ ಇನ್ನಷ್ಟು ಉತ್ತಮವಾಗುತ್ತದೆ. ಹಾಗಾದರೆ ಆ ವ್ಯಾಯಾಮ ಭಂಗಿಗಳೇನು ಎಂಬುದನ್ನು ತಿಳಿದುಕೊಳ್ಳೋಣ.


  20 ಸೆಕೆಂಡ್‌ಗಳ ಪ್ಲಾಂಕ್


  ಪ್ಲಾಂಕ್ ಸರಳ ವ್ಯಾಯಾಮವಾಗಿದ್ದರೂ ಸಂಪೂರ್ಣ ದೇಹವನ್ನು ಒಳಗೊಂಡು ನಡೆಸುವ ವ್ಯಾಯಾಮವಾಗಿದೆ. ಪುರುಷ ಹಾಗೂ ಮಹಿಳೆಯರಿಬ್ಬರಿಗೂ ಈ ವ್ಯಾಯಾಮವನ್ನು ಮಾಡಬಹುದಾಗಿದ್ದು ಹೊಟ್ಟೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಬೆನ್ನು, ಸೊಂಟ, ಭುಜ, ಹೀಗೆ ದೇಹದ ಅಂಗಗಳನ್ನು ದೃಢಗೊಳಿಸುತ್ತದೆ.


  ಗ್ಲುಟ್ ಬ್ರಿಡ್ಜ್ (ಸೇತುಬಂಧಾಸನ)


  ಸೇತುಬಂಧಾಸನವು ನಿಮ್ಮ ಮಂಡಿ ಹಾಗೂ ಕುಹರ ಭಾಗಗಳಿಗೆ ಶಕ್ತಿಯನ್ನು ನೀಡುತ್ತದೆ. ಲೈಂಗಿಕ ಕ್ರಿಯೆಯ ಸಮಯದಲ್ಲಿ ಇದು ಸಂಗಾತಿಗಳನ್ನು ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ. ಇದನ್ನು 15 ಪುನರಾವರ್ತನದಲ್ಲಿ ಮಾಡಬೇಕು.


  ಜಂಪ್ ಸ್ಕ್ವಾಟ್


  ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಸಾಮರ್ಥ್ಯ ಪಡೆಯಬೇಕೇ? ಹಾಗಾದರೆ ಈ ವ್ಯಾಯಾಮವನ್ನು ಅಭ್ಯಾಸ ಮಾಡಿ. ಇದು ನಿಮ್ಮ ಹೃದಯದ ಚಲನೆಗೂ ಸಹಕಾರಿಯಾಗಿದೆ. ಕಾಲುಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.


  ಕೆಗೆಲ್ಸ್


  ಇದು ಶ್ರೋಣಿಯ ಸ್ನಾಯುಗಳನ್ನು ಬಲಪಡಿಸುತ್ತದೆ. ಇದರಿಂದ ಲೈಂಗಿಕ ಆಸಕ್ತಿ ಕೂಡ ಹೆಚ್ಚುತ್ತದೆ.


  ಪುಶಪ್ಸ್


  ಪುಶಪ್ಸ್ ಸಂಪೂರ್ಣ ದೇಹಕ್ಕೆ ವ್ಯಾಯಾಮವನ್ನು ನೀಡುತ್ತದೆ. ಇದರಿಂದ ಲೈಂಗಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯುತ್ತದೆ.


  ಪಿಜನ್ ಪೋಸ್


  ನಿಮ್ಮ ಪೃಷ್ಠ, ತೊಡೆಯ ಭಾಗದ ಸ್ನಾಯುಗಳಿಗೆ ಈ ಭಂಗಿ ಶಕ್ತಿಯನ್ನು ನೀಡುತ್ತದೆ.


  ವ್ಯಾಯಾಮವನ್ನು ಲೈಂಗಿಕ ಚಟುವಟಿಕೆಗಳ ಭಾಗವಾಗಿ ಪರಿಗಣಿಸಲಾಗಿದ್ದು ನಿಮ್ಮ ಬೊಜ್ಜು ಕರಗುವುದರ ಜೊತೆಗೆ ದೇಹವೂ ಉಲ್ಲಾಸಮಯವಾಗಿರುತ್ತದೆ. ಹಲವಾರು ಲೈಂಗಿಕ ನಿರಾಸಕ್ತಿಗಳಿಗೆ, ಕಾಯಿಲೆಗಳಿಗೆ ವ್ಯಾಯಾಮವೇ ಉತ್ತಮ ಔಷಧಿಯಾಗಿದ್ದು ನಿಯಮಿತ ವ್ಯಾಯಾಮ ಹಾಗೂ ಸಮತೋಲಿತ ಆಹಾರ ಪದ್ಧತಿಯಿಂದ ಅತ್ಯುತ್ತಮ ಲೈಂಗಿಕ ಆಸಕ್ತಿಯನ್ನು ದಂಪತಿಗಳು ಪಡೆದುಕೊಳ್ಳಬಹುದಾಗಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: