ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆ ಬಗ್ಗೆ ಹುಷಾರಾಗಿರಿ: ಶೀತ, ಕೆಮ್ಮು, ನೆಗಡಿ ಆದರೆ ಹೀಗೆ ಮಾಡಿ

ಒಂದು ಲೋಟ ನೀರಿಗೆ ಶುಂಠಿ, ನಿಂಬೆ ರಸ, ಕಾಳು ಮೆಣಸು ಮತ್ತು ಬೆಲ್ಲವನ್ನು ಹಾಕಿ ಕುದಿಸಬೇಕು. ಇದನ್ನು ಬಿಸಿ ಆರುವ ಮುನ್ನವೇ ಕುಡಿಯುವುದರಿಂದ ನೆಗಡಿ ಮತ್ತು ಕಫ ಕಡಿಮೆಯಾಗುತ್ತದೆ.

zahir | news18-kannada
Updated:October 30, 2019, 2:28 PM IST
ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆ ಬಗ್ಗೆ ಹುಷಾರಾಗಿರಿ: ಶೀತ, ಕೆಮ್ಮು, ನೆಗಡಿ ಆದರೆ ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
  • Share this:
ಒಂದೆಡೆ ಹವಾಮಾನದ ಬದಲಾವಣೆ. ಇನ್ನೊಂದೆಡೆ ಇನ್ನೇನು ಚಳಿಗಾಲದ ಆರಂಭ. ಈ ಋತುವಿನಲ್ಲಿ ಸಾಮಾನ್ಯವಾಗಿ ಶೀತ, ಕೆಮ್ಮು ಹಾಗೂ ನೆಗಡಿ ಸಮಸ್ಯೆಗಳು ಆವರಿಸಿಕೊಳ್ಳುತ್ತದೆ. ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆಯತ್ತ ಮುಖ ಮಾಡುವವರೇ ಹೆಚ್ಚು.

ಆದರೆ ಶೀತ-ಕೆಮ್ಮು ಸೇರಿದಂತೆ ಅನಾರೋಗ್ಯವನ್ನು ತಡೆಗಟ್ಟುವ ಬಗ್ಗೆ ಯಾರೂ ಕೂಡ ಯೋಚಿಸುವುದಿಲ್ಲ. ಏಕೆಂದರೆ ಸಾಮಾನ್ಯವಾಗಿ ಚಳಿಗಾಲದ ಆರಂಭದಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ವೈರಲ್ ಸೋಂಕಾಗಿರುವ ಸಾಧ್ಯತೆಗಳಿರುತ್ತದೆ. ತಂಗಾಳಿಯಿಂದ ಅಥವಾ ಗಾಳಿಯಲ್ಲಿರುವ ಬ್ಯಾಕ್ಟೀರಿಯಾಗಳಿಂದ ಅಲರ್ಜಿ ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದಂತೆ ಅಡುಗೆ ಮನೆಯಲ್ಲಿರುವ ಕೆಲ ಪದಾರ್ಥಗಳನ್ನು ಬಳಸಿ ಆರಂಭದಲ್ಲೇ ಪರಿಹಾರ ಕಂಡುಕೊಳ್ಳಬಹುದು. ಅಂತಹ ಕೆಲವೊಂದು ಮನೆಮದ್ದುಗಳನ್ನು ಇಲ್ಲಿ ತಿಳಿಸಲಾಗಿದೆ.

ಉಗುರು ಬೆಚ್ಚಗಿನ ನೀರು: ಗಂಟಲು ಕಿರಿಕಿರಿ ಅಥವಾ ನೋವು, ಮೂಗಿನ ಅಲರ್ಜಿ ಕಂಡು ಬಂದರೆ ನೀವು ಮಾಡಬೇಕಾದ ಮೊದಲ ಕೆಲಸ ತಣ್ಣೀರಿನಿಂದ ದೂರವಿರುವುದು. ಸ್ನಾನಕ್ಕಾಗಲಿ ಅಥವಾ ಕುಡಿಯಲು ಉಗುರು ಬೆಚ್ಚಗಿನ ನೀರನ್ನು ಮಾತ್ರ ಬಳಸಿ.

ಹಾಗೆಯೇ ನೀರಿನಲ್ಲಿ ಉಪ್ಪನ್ನು ಸೇರಿಸಿ ಸಾಧ್ಯವಾದಷ್ಟು ಬಾರಿ ಗಂಟಲನ್ನು ಮುಕ್ಕಳಿಸಬಹುದು. ಹಾಗೆಯೇ ಮೂಗಿಗೆ ಮಲಗುವ ಮುನ್ನ ವಿಕ್ಸ್ ಅನ್ನು ಅನ್ವಯಿಸಿ. ಇದು ನಿಮ್ಮ ಶೀತದ ಸಾಧ್ಯತೆಯನ್ನು ಶೇ. 50 ರಷ್ಟು ಕಡಿಮೆ ಮಾಡುತ್ತದೆ. ಹಾಗೆಯೇ ಶೀತ ಉಂಟಾಗುವುದನ್ನು ತಡೆಯುತ್ತದೆ.

ಅರಿಶಿನ: ಗಂಟಲು ನೋವು ಆರಂಭದಲ್ಲೇ ವಿಪರೀತವಾಗಿದ್ದರೆ ಮಲಗುವ ಮುನ್ನ ಹಾಲಿಗೆ ಅರಿಶಿನವನ್ನು ಹಾಕಿ ಕುಡಿಯುವುದು ಉತ್ತಮ. ಅರಿಶಿನದಲ್ಲಿ ರೋಗಾಣುಗಳನ್ನು ತಡೆಯುವ ಗುಣಗಳು ಹೇರಳವಾಗಿವೆ.

ಜೇನುತುಪ್ಪ-ಶುಂಠಿ:  ಬೆಳಿಗ್ಗೆ ಜೇನುತುಪ್ಪ ಮತ್ತು ಶುಂಠಿಯಿಂದ ಮಾಡಿದ ಬಿಸಿ ಚಹಾವನ್ನು ಕುಡಿಯಿರಿ. ಶುಂಠಿ ಮತ್ತು ಜೇನುತುಪ್ಪವು ನಿಮ್ಮ ಗಂಟಲು ನೋವನ್ನು ಶಮನಗೊಳಿಸುತ್ತದೆ.ಇದನ್ನೂ ನೋಡಿ: ಸಾಲು ಮರದ ತಿಮ್ಮಕ್ಕನ ಬಗ್ಗೆ ಮಾತನಾಡಲು ತಡಬಡಾಯಿಸಿದ ರಶ್ಮಿಕಾ: ನಟಿಗೆ ಮುಖ ಹೊಡೆದಂತೆ ಉತ್ತರ ಕೊಟ್ಟ ತಮಿಳು ನಟ

ಕಲ್ಲು ಸಕ್ಕರೆ ಮಿಶ್ರಣ: ನಿಂಬೆ, ಕಲ್ಲು ಸಕ್ಕರೆ ಮತ್ತು ಕಾಳುಮೆಣಸನ್ನು ಸೇರಿಸಿ ಗಟ್ಟಿಯಾದ ಪಾಕವನ್ನು ಮಾಡಿಕೊಳ್ಳಬೇಕು. ಈ ಪಾಕವನ್ನು ದಿನವೂ 2 ಚಮಚ ಸೇವಿಸುತ್ತಾ ಬಂದರೆ ಕಫ ಕಡಿಮೆಯಾಗುವುದಲ್ಲದೇ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.

ನೆಗಡಿ: ಒಂದು ಲೋಟ ನೀರಿಗೆ ಶುಂಠಿ, ನಿಂಬೆ ರಸ, ಕಾಳು ಮೆಣಸು ಮತ್ತು ಬೆಲ್ಲವನ್ನು ಹಾಕಿ ಕುದಿಸಬೇಕು. ಇದನ್ನು ಬಿಸಿ ಆರುವ ಮುನ್ನವೇ ಕುಡಿಯುವುದರಿಂದ ನೆಗಡಿ ಮತ್ತು ಕಫ ಕಡಿಮೆಯಾಗುತ್ತದೆ.

ಶುಂಠಿ ಟೀ: ಶುಂಠಿಯ ಚಹಾವನ್ನು ಮಾಡಿ ಕುಡಿಯುವುದರಿಂದ ಸಹ ನೆಗಡಿ ಮತ್ತು ಕಫವನ್ನು ನಿವಾರಿಸಿಕೊಳ್ಳಬಹುದು. ಈ ವೇಳೆ ಬ್ಲ್ಯಾಕ್ ಟೀ ಮಾಡಿಕೊಳ್ಳುವುದು ಉತ್ತಮ.

ಇದನ್ನೂ ಓದಿ: ಮಲಯಾಳಂ ಸಂದರ್ಶನದಲ್ಲಿ ಕನ್ನಡ ಗೀತೆ ಹಾಡಿದ ಮುದ್ದು ಮುಖದ ಚೆಲುವೆ: ನಿತ್ಯಾ ಮೆನನ್ ವಿಡಿಯೋ ವೈರಲ್

ಶುಂಠಿ ಮತ್ತು ಲವಂಗ: ಉಪ್ಪಿನ ಜೊತೆ ಶುಂಠಿ ಮತ್ತು ಲವಂಗವನ್ನು ಸೇರಿಸಿ ಅಗಿಯುವುದರಿಂದ ಕಫ ಮತ್ತು ಗಂಟಲ ಕೆರೆತವನ್ನು ದೂರ ಮಾಡಬಹುದು.

ನೆಲ್ಲಿಕಾಯಿ: ಹಾಗೆಯೇ ನೆಲ್ಲಿಕಾಯಿಯನ್ನು ಸೇವಿಸುತ್ತಿದ್ದರೆ ನೆಗಡಿ, ಕೆಮ್ಮು, ಕಫದ ಸಮಸ್ಯೆಯಿಂದ ದೂರವಿರಬಹುದು.

ಬಿಸಿ ನೀರು: ನೆಗಡಿ ಅಥವಾ ಕೆಮ್ಮು ಉಂಟಾದಾಗ ಪ್ರತಿನಿತ್ಯ ಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ. ಇದರಿಂದ ಗಂಟಲಿನ ಉರಿಯೂತ ಕಡಿಮೆಯಾಗುತ್ತದೆ.
First published:October 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ