ವಿಟಮಿನ್ ಸಿ (Vitamin C) ಪ್ರಸ್ತುತ ಅತ್ಯಂತ ಜನಪ್ರಿಯವಾಗಿ ಬಳಸುವ ಚರ್ಮದ ರಕ್ಷಣೆಯ (Skincare Products) ಉತ್ಪನ್ನಗಳಲ್ಲಿ ಒಂದಾಗಿದೆ. ವಿಟಮಿನ್ ಸಿ ಹಾನಿಗೊಳಗಾದ ಚರ್ಮದ (Exfoliate Skin) ಕೋಶಗಳನ್ನು ಸರಿಪಡಿಸಲು, ಚರ್ಮವನ್ನು ಹಾನಿಯಿಂದ ರಕ್ಷಿಸಲು ಚರ್ಮದ ಟೋನ್ ಅನ್ನು ಹೊರಹಾಕಲು ಮತ್ತು ಕೊಲಾಜನ್ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಕೊಲಾಜನ್ (Collagen) ನಿಮ್ಮ ದೇಹದಲ್ಲಿ ಹೇರಳವಾಗಿರುವ ಪ್ರೋಟೀನ್ಗಳಲ್ಲಿ (Proteins) ಒಂದಾಗಿದೆ. ಇದು ನಮ್ಮ ಚರ್ಮವನ್ನು ಬಿಗಿಯಾಗಿ, ದೃಢವಾಗಿಸುತ್ತದೆ.
ಮಾರುಕಟ್ಟೆಯಲ್ಲಿ ವಿಟಮಿನ್ ಸಿ ಸೀರಮ್ನ ಹಲವು ಬ್ರ್ಯಾಂಡ್ಗಳು ಲಭಿಸುತ್ತಿವೆ. ಯಾವ್ಯಾವುದೋ ಸೀರಮ್ ಆಯ್ಕೆ ಮಾಡುವ ಮುನ್ನ ನಿಮ್ಮ ತ್ವಚೆಗೆ ಅರ್ಹವಾದ ಕಾಂತಿ ವರ್ಧಕವನ್ನು ನೀಡಲು ಅತ್ಯುತ್ತಮವಾದ ವಿಟಮಿನ್ ಸಿ ಸೀರಮ್ ಅನ್ನುಆಯ್ಕೆ ಮಾಡಿಕೊಳ್ಳಬೇಕು. ವಿಟಮಿನ್ ಸಿ ಸೀರಮ್ ಬಗ್ಗೆ ಕೆಲವು ಚರ್ಮದ ತಜ್ಞರು, ಬ್ಯೂಟಿಷಿಯನ್, ಬ್ಯೂಟಿ ಬ್ರ್ಯಾಂಡ್ಗಳ ಸಂಸ್ಥಾಪಕರು ಕೆಲವು ಸೀರಮ್ಗಳನ್ನು ಸೂಚಿಸಿದ್ದಾರೆ. ಹಾಗಾದರೆ ಅವರು ಸೂಚಿಸಿರುವ ಮತ್ತು ನಿಮಗೆ ಸಹಾಯ ಮಾಡುವ ಕೆಲವು ಆಯ್ಕೆಗಳು ಈ ಕೆಳಕಂಡಂತಿವೆ.
1 ) ಸ್ಕಿನ್ ಸ್ಯೂಟಿಕಲ್ಸ್ ಸಿ ಪ್ಯುರಿಕಲ್ ವಿತ್ 15% ಆ್ಯಸ್ಕಾರ್ಬಿಕ್ ಆ್ಯಸಿಡ್
Skinceuticals CE Ferulic ಒಣ ತ್ವಚೆ ಮೇಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಈ ವಿಟಮಿನ್ ಸಿ ಸೀರಮ್ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ, ಚರ್ಮಕ್ಕೆ ಹೊಳಪು ನೀಡುತ್ತದೆ.
ಇದನ್ನೂ ಓದಿ: Vitamin D ಸಪ್ಲಿಮೆಂಟ್ಸ್ ತೆಗೆದುಕೊಳ್ತಿದ್ರೆ ಹುಷಾರಾಗಿರಿ... ಯಾಕೆ ಅಂತಾ ಈ ಸ್ಟೋರಿ ಓದಿ..!
2) ಲಾ ರೋಚೆ-ಪೋಸಯ್ 10% ಪ್ಯೂರ್ ವಿಟಮಿನ್- ಸಿ ಸೀರಮ್
ಲಾ ರೋಚೆ-ಪೋಸಯ್ 10% ವಿಟಮಿನ್ ಸಿ ಸೀರಮ್ ಕೈಗೆಟುಕುವ ಆಯ್ಕೆಯಾಗಿದ್ದು ಕಿರಿಕಿರಿಯಿಲ್ಲದೆ ಚರ್ಮವನ್ನು ರಕ್ಷಿಸುತ್ತದೆ ಮತ್ತು ಕಾಂತಿಯುತವಾಗಿರುತ್ತದೆ. ಸೂಕ್ಷ್ಮ ಚರ್ಮಕ್ಕೆ ಹಾನಿಯಾಗದಂತೆ ಮುಖ ಮತ್ತು ಕತ್ತಿನ ಭಾಗದ ಚರ್ಮದ ಟೋನ್ ಅನ್ನು ಸ್ಯಾಲಿಸಿಲಿಕ್ ಮತ್ತು ನ್ಯೂರೋಸೆನ್ಸಿನ್ ಇರುವ ವಿಟಮಿನ್ ಸಿ ಕಾಕ್ಟೈಲ್ ಸಹಕಾರಿಯಾಗಿದೆ.
3) ಅವ್ಯಾ ಸ್ಕಿನ್ಕೇರ್ ಆ್ಯಂಟಿ ಏಜಿಂಗ್ ಪವರ್ ಸೀರಮ್
ಆ್ಯಂಟಿ ಏಜಿಂಗ್ ಪವರ್ ಸೀರಮ್ ಚರ್ಮದ ಮೇಲ್ಮೈಯನ್ನು ಸುಧಾರಿಸಲು ಸಹಾಯವಾಗಿದೆ. ಹೈಡ್ರೇಷನ್ಗಾಗಿ ಹೈಲುರಾನಿಕ್ ಆಮ್ಲ, ಹೊಳಪಿಗಾಗಿ ವಿಟಮಿನ್ ಸಿ, ಕೊಲಾಜನ್ ವರ್ಧಕ ಹೆ್ಚ್ಚಿಸುವ ಗುಣ ಹೊಂದಿದೆ.
4) ಬ್ಯೂಟಿ ಸ್ಟ್ಯಾಟ್ ಯೂನಿವರ್ಸಲ್ C ಸ್ಕಿನ್ ರೀಫೈನರ್
ಈ ಸೀರಮ್ 20% ಶುದ್ಧ ವಿಟಮಿನ್ ಸಿ ಮತ್ತು ಸ್ಥಿರವಾದ ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ ಅನ್ನು ಹೊಂದಿದೆ, ಇದು ಗ್ರೀನ್ ಟೀಯಲ್ಲಿ ಕಂಡುಬರುವ ಚರ್ಮಕ್ಕೆ ಸಹಾಯ ಮಾಡುವ ಅಂಶ ಇದರಲ್ಲಿದೆ. ಇದರಲ್ಲಿರುವ ಟಾರ್ಟಾರಿಕ್ ಮತ್ತು ಸ್ಕ್ವಾಲೇನ್ ಚರ್ಮದ ಟೋನ್ ಅನ್ನು ಹೆಚ್ಚಿಸುತ್ತದೆ.
5) ಬ್ಲಿಸ್ ಬ್ರೈಟ್ ಐಡಿಯಾ ವಿಟಮಿನ್ ಸಿ + ಟ್ರೈ-ಪೆಪ್ಟೈಡ್ ಕೊಲಾಜನ್ ಪ್ರೊಟೆಕ್ಟಿಂಗ್ ಮತ್ತು ಬ್ರೈಟನಿಂಗ್ ಸೀರಮ್
ಈ ಸೀರಮ್ ಚರ್ಮದ ಕಾಂತಿಗೆ ಸಹಕಾರಿಯಾಗಿದ್ದು, ಪೆಪ್ಟೈಡ್ಗಳೊಂದಿಗೆ ಸೇರಿ ಕೊಲಾಜನ್ ಅನ್ನು ಹಾನಿಯಿಂದ ರಕ್ಷಿಸುತ್ತದೆ.
6) ಇಸ್ಡಿನ್ ಇಸ್ಡಿನ್ಯೂಟಿಕ್ಸ್ ಫ್ಲೇವೊ-ಸಿ ಅಲ್ಟ್ರಾಗ್ಲಿಕನ್ ಆ್ಯಂಪೌಲ್ಸ್
ವಿಟಮಿನ್ ಸಿ ಉತ್ಪನ್ನವಾಗಿದ್ದರೂ, ಈ ಸೀರಮ್ನಲ್ಲಿರುವ ಹೈಲುರಾನಿಕ್ ಆಮ್ಲವು ಇದನ್ನು ಮತ್ತಷ್ಟು ಹದವಾಗಿಸಿದೆ. ವಿಟಮಿನ್ ಸಿ ಆ್ಯಂಪೌಲ್ಗಳು ಗಾಳಿ ಮತ್ತು ಬಿಸಿಲಿಗೆ ಹೋದಾಗ ಚರ್ಮವನ್ನು ರಕ್ಷಿಸುತ್ತದೆ. ಇದರಲ್ಲಿರುವ ಉತ್ತಮ ನಿಮ್ಮನ್ನು ಸುಗಂಧವು ರಿಫ್ರೆಶ್ ಮಾಡುತ್ತದೆ.
ಇದನ್ನೂ ಓದಿ: Zinc ಇರೋ ಈ ಆಹಾರಗಳನ್ನು ತಿಂದ್ರೆ ಕೊರೊನಾ ನಿಮ್ಮ ಹತ್ತಿರಕ್ಕೂ ಬರಲ್ವಂತೆ, ಸೋಂಕಿತರಿಗೆ ವೈದ್ಯರು ಹೇಳೋದು ಇದನ್ನೇ!
7) ಕೂಕಿಂಡ್ ವಿಟಮಿನ್ ಸಿ ಸೀರಮ್ ವಿತ್ ಸೀ ಗ್ರೇಪ್ಸ್ ಕ್ಯಾವಿಯರ್
ರ್ಈ ಸೀರಮ್ ತ್ಚಚೆಗೆ ತೇವಾಂಶವನ್ನು ನೀಡುತ್ತದೆ ಮತ್ತು ಕಪ್ಪು ಕಲೆಗಳನ್ನು ಹೋಗಿಸಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
8) ಡ್ರಂಕ್ ಎಲಿಫೆಂಟ್ ಸಿ- ಫರ್ಮಾ ಡೇ ಸೀರಮ್
ಚರ್ಮವನ್ನು ಬಲಪಡಿಸಲು ಮತ್ತು ಹೊಳಪು ನೀಡಲು ಸಹಾಯ ಮಾಡುತ್ತದೆ.
9) ಮ್ಯಾಡ್ ಹಿಪ್ಪಿ ವಿಟಮಿನ್ ಸಿ ಸೀರಮ್
ಈ ಸೀರಮ್ ಚರ್ಮವನ್ನು ಹೊಳಪುಗೊಳಿಸಲು ಮತ್ತು ಬಿಗಿಗೊಳಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಕೊಂಜಾಕ್ ಸಸ್ಯದ ಬೇರಿನಲ್ಲಿನ ಫೆರುಲಿಕ್ ಆಮ್ಲ, ಹೈಲುರಾನಿಕ್ ಆಮ್ಲ ಮತ್ತು ವಿಟಮಿನ್ ಸಿ ಮತ್ತು ಇ ಅಂಶಗಳು ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ