Ramzan Special: ರಂಜಾನ್ ವೇಳೆ ಬೆಂಗಳೂರಿನ ಈ ಟಾಪ್ 5 ರೆಸ್ಟೋರೆಂಟ್​ಗೆ ಭೇಟಿ ನೀಡಿ, ವೆರೈಟಿ ಫುಡ್ ಟೇಸ್ಟ್ ಮಾಡಿ

ರಂಜಾನ್​ ಕಾಲದಲ್ಲಿ ಎಲ್ಲೆಲ್ಲಿ ಬೆಸ್ಟ್​ ಫುಡ್​ಗಳು ಸಿಗುತ್ತೆ ಅನ್ನೋದನ್ನು ತಿಳಿದುಕೊಳ್ಳೋದು ಅತಿ ಮುಖ್ಯವಾಗಿದೆ. ಉಪವಾಸ ಅಂತ್ಯಕ್ಕೆ ಫ್ಯಾಮಿಲಿ ಜೊತೆ ಈ ಹೋಟೆಲ್​ ರೆಸ್ಟೋರೆಂಟ್​​ಗಳಿಗೆ ಹೋಗಿ ನೀವು ಈ ಫುಡ್​ಗಳನ್ನು ಟ್ರೈ ಮಾಡಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಂಜಾನ್ (Ramzan) ಪವಿತ್ರ ಮಾಸದಲ್ಲಿ ಮುಸ್ಲಿಂರು (Muslim) ತಮ್ಮ ನಿತ್ಯ ಉಪವಾಸದ ಆಚರಣೆಯನ್ನು ಅಂತ್ಯಗೊಳಿಸಲು ಒಳ್ಳೆಯ ಬೇಕರಿ ರೆಸ್ಟೋರೆಂಟ್​ಗಳ ಮೊರೆ ಹೋಗ್ತಾರೆ. ಫ್ಯಾಮಿಲಿ ಸಮೇತ ಒಳ್ಳೆ ರೆಸ್ಟೋರೆಂಟ್​ (Restaurant) ಗಳಿಗೆ ಹೋಗಿ ಉಪವಾಸ (Fasting) ಅಂತ್ಯಗೊಳಿಸ್ತಾರೆ, ಬೆಂಗಳೂರಲ್ಲಿರೋ ಪ್ರಸಿದ್ಧ ಹೋಟೆಲ್​ಗಳು ಎಲ್ಲಿಲ್ಲಿವೆ. ರಂಜಾನ್​ ಕಾಲದಲ್ಲಿ ಎಲ್ಲೆಲ್ಲಿ ಬೆಸ್ಟ್​ ಫುಡ್​ಗಳು (Best Food) ಸಿಗುತ್ತೆ ಅನ್ನೋದನ್ನು ತಿಳಿದುಕೊಳ್ಳೋದು ಅತಿ ಮುಖ್ಯವಾಗಿದೆ. ಅನೇಕರು ಉಪವಾಸದ ವೇಳೆ ಕೂಡ ತಮ್ಮ ಕೆಲಸದಲ್ಲಿ ನಿರತರಾಗಿದುತ್ತಾರೆ. ಹೀಗಾಗಿ ಅವರಿರೋ ಸ್ಥಳಗಳಲ್ಲೇ ಉತ್ತಮ ಬೇಕ್ರಿ  ಹಾಗೂ ರೆಸ್ಟೋರೆಂಟ್​ಗಳಲ್ಲಿ ಉಪವಾಸ ಅಂತ್ಯಗೊಳಿಸಬಹುದು. ರಂಜಾನ್ ಉಪವಾಸ ಅಂತ್ಯಗೊಳಿಸಲು ಬೆಂಗಳೂರಲ್ಲಿ ಇರೋ ಬೆಸ್ಟ್​ ಬೇಕರಿ ಅಂಡ್​ ರೆಸ್ಟೋರೆಂಟ್​ ಲಿಸ್ಟ್​ ಇಲ್ಲಿದೆ.

ಆಲ್ಬರ್ಟ್ ಬೇಕರಿ

ಪ್ರತಿ ವರ್ಷ ಆಲ್ಬರ್ಟ್ ಬೇಕರಿಯಲ್ಲಿ ರಂಜಾನ್​ ಹಬ್ಬಕ್ಕೆ ವಿಶೇಷ ತಿನಿಸುಗಳನ್ನು ಸಿದ್ದಪಡಿಸಲಾಗುತ್ತೆ.  ಪ್ರಸಿದ್ಧ ಭೇಜಾ ಪಫ್‌ಗಳನ್ನು ಇಲ್ಲಿ ಸ್ಪೆಷಲ್​ ಡಿಶ್​.  ಆಲ್ಬರ್ಟ್​ ಬೇಕರಿ ಸುಮಾರು 120 ವರ್ಷಗಳಷ್ಟು ಹಳೆಯದಾಗಿದೆ. ರಂಜಾನ್​  ಪವಿತ್ರ ಮಾಸದಲ್ಲಿ ಒಮ್ಮೆ ಇಲ್ಲಿಗೆ ಭೇಟಿ ನೀಡಲೇಬೇಕು. ಭೇಜಾ ಪಫ್‌ಗಳ ಜೊತೆ ಖೋವಾ ನಾನ್, ಚೋಬಾ ನಾನ್ ಮತ್ತು ಕಾಕ್ಟೈಲ್ ಚಿಕನ್ ಮತ್ತು ಮಟನ್ ಸಮೋಸಾಗಳಿಗೆ ಇಲ್ಲಿ ಬೆಸ್ಟ್​ ಫುಡ್​ಗಳಾಗಿವೆ

ಸ್ಥಳ: ಆಲ್ಬರ್ಟ್ ಬೇಕರಿ, 93, ಮಸೀದಿ ರಸ್ತೆ, ಕ್ಲೀವ್​ಲ್ಯಾಂಡ್ ಟೌನ್, ಪುಲಿಕೇಶಿ ನಗರ

ಶರೀಫ್ ಭಾಯಿ

ರಂಜಾನ್​ ಸಮಯದಲ್ಲಿ ಒಮ್ಮೆ ಶರೀಪ್​ ಭಾಯ್​ ಅವ್ ಹೋಟೆಲ್​ಗೆ ಒಮ್ಮೆ ಭೇಟಿ ಕೊಡಿ. 2017ರಲ್ಲಿ ಸ್ಥಾಪಿಸಿರೋ ಈ ಹೋಟೆಲ್​ಗೆ ನೂರಾರು ರೆಗ್ಯುಲರ್​ ಕಸ್ಟಮರ್​ ಇದ್ದಾರೆ. ರಂಜನ್​ ಸಮಯದಲ್ಲಂತೂ ಇಲ್ಲಿಗೆ ಹೆಚ್ಚು ಮಂದಿ ಭೇಟಿ ನೀಡ್ತಾರೆ. ಮುರ್ಗ್ ಚಾಪ್, ಕಬಾಬ್ಸ್, ನಲಿ ನಿಹಾರಿ ಮತ್ತು ದಮ್ ಬಿರಿಯಾನಿ ಸೇರಿದಂತೆ ಎಲ್ಲಾ ರೀತಿಯ ಮುಸ್ಲಿಂ ಫುಡ್​ಗಳು ಇಲ್ಲಿ ಲಭ್ಯವಿದೆ.

ಸ್ಥಳ: ಶರೀಫ್ ಭಾಯಿ, 10ನೇ ಗ್ರೌಂಡ್​ ಫ್ಲೋರ್​  ಮಸೀದಿ ರಸ್ತೆ, ಕ್ಲೀವ್‌ಲ್ಯಾಂಡ್ ಟೌನ್, ಪುಲಿಕೇಶಿ ನಗರ

ಇದನ್ನೂ ಓದಿ: Chinese Restaurants: ಸಿ ಫಾರ್ ಚೈನೀಸ್ ಫುಡ್ ಎನ್ನುವವರು ಈ ರೆಸ್ಟೋರೆಂಟ್​ಗಳಿಗೆ ಹೋಗಲೇಬೇಕು

ರಹಮ್ಸ್

ಫ್ರೇಜರ್ ಟೌನ್‌ನಲ್ಲಿರುವ ರಹಮ್ಸ್ ರೆಸ್ಟೋರೆಂಟ್‌ನ ಬಹಳ ಜನಪ್ರಿಯವಾಗಿದೆ. 1998ರಲ್ಲಿ ಆರಂಭವಾದ ರಹಮ್ಸ್​ ನನ್ನು ಮೊದಲು ಆಹಾರದ ಕೌಂಟರ್ ಆಗಿ ಸ್ಥಾಪಿಸಲಾಯಿತು. ಈಗ ಬೆಂಗಳೂರಿನಾದ್ಯಂತ ರಹಮ್ಸ್​ ರೆಸ್ಟೋರೆಂಟ್ ಶಾಖೆಗಳನ್ನು ಹೊಂದಿದೆ. ಇಲ್ಲಿ ವೈವಿಧ್ಯಮಯ ಚಿಕನ್ ಮತ್ತು ಮಟನ್ ಕಬಾಬ್ ಫೇಮಸ್​ ಆಗಿದೆ. ಇಲ್ಲಿಗೆ ಹೋದ್ರೆ ಟೀಟರ್ (ಕ್ವಿಲ್) ಮತ್ತು ದಖನಿ ಬಿರಿಯಾನಿಯನ್ನ ಒಮ್ಮೆ ತಿಂದು ನೋಡಿ.

ಸ್ಥಳ: ರಹಮ್ಸ್, 82, ಫ್ರೇಜರ್ ಟೌನ್, ಎಂಎಂ ರಸ್ತೆ

ಕರಾಮಾ ರೆಸ್ಟೋರೆಂಟ್

ಕರಾಮಾವು ರೆಸ್ಟೋರೆಂಟ್​ನಲ್ಲಿ ಅರೇಬಿಕ್ ಮತ್ತು ಮಲಬಾರಿ ರುಚಿಕರ ಫುಡ್​ಗಳನ್ನು ಸವಿಯ ಬಹುದು ಇಲ್ಲಿ ರಂಜಾನ್ ಆಫರ್​ ಸಹ ಇರುತ್ತೆ. ಸ್ಟಫ್ಡ್ ಡಜಾಜ್, ರೋಲ್ಸ್, ನಲಿ ನಿಹಾರಿ, ಮಲಬಾರಿ ಬಿರಿಯಾನಿ ಮತ್ತು ಸಮುದ್ರಾಹಾರ ಬಾರ್ಬೆಕ್ಯೂ ಫುಡ್​ಗಳು ಬಹಳ ಫೇಮಸ್​.

ಚಿಚಾಬಾದ ತಾಜ್

1935ರಲ್ಲಿ ಶಿವಾಜಿನಗರದಲ್ಲಿ ತಾಜ್ ಹೋಟೆಲ್ ಆಗಿ ಸ್ಥಾಪಿತವಾದ ಚಿಚಾಬಾಸ್ ತಾಜ್ ಅನ್ನು ಈಗ ಮೂರನೇ ತಲೆಮಾರಿನ ಮಾಲೀಕರು ನಡೆಸುತ್ತಿದ್ದಾರೆ, ಅವರು ತಮ್ಮ ಅಜ್ಜನ ಮೂಲ ಪಾಕವಿಧಾನಗಳನ್ನು ಈ ಹೋಟೆಲ್​ನಲ್ಲಿ ಮುಂದುವರಿಸಿದ್ದಾರೆ. ಬೈದಾ ರೋಟಿ, ಅವರ ಪ್ರಸಿದ್ಧ ಶೀಕ್ ಕಬಾಬ್‌ಗಳು ಮತ್ತು ದಖನಿ ಬಿರಿಯಾನಿ ಇಲ್ಲಿ ಸಖತ್​ ಫೇಮಸ್​ ಆಗಿದೆ ನೀವು ಒಮ್ಮೆ ಭೇಟಿ ಕೊಟ್ಟು ಸಖತ್​ ಊಟವನ್ನು ಎಂಜಾಯ್​ ಮಾಡಿ.

ಸ್ಥಳ: ಚಿಚಬಾಸ್ ತಾಜ್, 383, ಜುಮ್ಮಾ ಮಸೀದಿ ರಸ್ತೆ, OPH ರಸ್ತೆ, ಶಿವಾಜಿನಗರ

S.R & ಸನ್ಸ್ ಬೇಕರಿ ಮತ್ತು ಸಿಹಿತಿಂಡಿಗಳು

ನೀವು ರಂಜಾನ್ ಸಮಯದಲ್ಲಿ ಶಿವಾಜಿನಗರದಲ್ಲಿರೋ ಈ S.R  & ಸನ್ಸ್ ಬೇಕರಿಗೆ ಹೋಗಲೇಬೇಕು. ಇಲ್ಲಿ ಮಟನ್ ಅಥವಾ ಚಿಕನ್ ಸಮೋಸಾಗಳು ಫೇಮಸ್​, ಜೊತೆಗೆ ಚಿಕನ್, ಮೊಟ್ಟೆ ಮತ್ತು ಪ್ರಾನ್ಸ್ ಫಿಲ್ಲಿಂಗ್‌ಗಳೊಂದಿಗೆ ಪಫ್‌ಗಳು ಸಹ ಸಖತ್​ ಆಗಿಯೇ ಇರುತ್ತೆ.

ಸ್ಥಳ: S.R & ಸನ್ಸ್ ಬೇಕರಿ ಮತ್ತು ಸ್ವೀಟ್ಸ್, ಅಂಗಡಿ ಸಂಖ್ಯೆ. 442, 443, ಜುಮ್ಮಾ ಮಸೀದಿ ರಸ್ತೆ, ಸುಲ್ತಾನಗುಂಟಾ, ಶಿವಾಜಿ ನಗರ

ಇದನ್ನೂ ಓದಿ: Tandoori Chicken: ಬೆಂಗಳೂರಿನಲ್ಲಿ ಬಾಯಲ್ಲಿ ನೀರೂರಿಸೋ ತಂದೂರಿ ಚಿಕನ್ ಬೇಕು ಅಂದ್ರೆ ಇಲ್ಲಿಗೆ ಹೋಗಿ

ಪಿಸ್ತಾ ಹೌಸ್

ರಂಜಾನ್ ಸಮಯದಲ್ಲಿ ನಿಮ್ಮ ಹಲೀಮ್ ಡೋಸ್‌ಗಾಗಿ ಗುಲಿಸ್ತಾನ್ ಶಾದಿ ಮಹಲ್‌ನಲ್ಲಿರುವ ಪಿಸ್ತಾ ಹೌಸ್‌ಗೆ ಭೇಟಿ ನೀಡಲೇಬೇಕು. ಸ್ಟ್ಯೂ ಮಟನ್ ತಾಜಾ ಕೊತ್ತಂಬರಿ ಮತ್ತು ಸ್ವಲ್ಪ ಝಿಂಗ್ಗಾಗಿ ನಿಂಬೆ ಸ್ಕ್ವೀಸ್ನೊ ಫುಡ್​ ಒಮ್ಮೆ ಟ್ರೈ ಮಾಡಿ
Published by:Pavana HS
First published: