Pet Store Near Me: ನಿಮ್ಮ ಮುದ್ದಿನ ನಾಯಿಗೆ ಬೇಕಾದ A to Z ವಸ್ತುಗಳು ಬೆಂಗಳೂರಿನ ಈ ಅಂಗಡಿಗಳಲ್ಲಿ ಸಿಗುತ್ತೆ

The Best Pet Stores Near Me: ನೀವು ಬೆಂಗಳೂರಿನಲ್ಲಿ ನಿಮ್ಮ ಮುದ್ದಿನ ಸಾಕು ಪ್ರಾಣಿಗೆ ವಸ್ತುಗಳನ್ನು ಖರೀದಿಸಲು ಪರದಾಡುತ್ತಿದ್ದರೆ, ನಾವು ನಿಮಗೆ ಸಹಾಯ ಮಾಡುತ್ತೇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನೆಯಲ್ಲಿ ಒಂದು ನಾಯಿ (Dog) ಇದ್ದರೆ ಜವಾಬ್ದಾರಿಗಳು (Responsibilities) ಬಹಳಷ್ಟಿರುತ್ತದೆ. ಅವುಗಳು ನಮಗೆ ಕೊಡುವ ಪ್ರೀತಿಯನ್ನು ಎಂದಿಗೂ ಲೆಕ್ಕ ಹಾಕುವುದಕ್ಕೆ ಸಾಧ್ಯವಿಲ್ಲ. ಹಾಗೆಯೇ ನಾವು ಅವುಗಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳಬೇಕು. ಅವುಗಳಿಗೆ ಮೀಸಲಾಗಿರುವ ಆಹಾರವನ್ನು ಹಾಕಬೇಕು. ಕೇವಲ ನಾಯಿ ಮಾತ್ರ ಅಲ್ಲ, ಬೆಕ್ಕು (Cat) ಹಾಗೂ ನಿಮ್ಮ ಮನೆಯಲ್ಲಿರುವ ಹಕ್ಕಿಗಳನ್ನು ಸಹ ಬಹಳ ನಾಜೂಕಿನಿಂದ ನೋಡಿಕೊಳ್ಳಬೇಕು. ನೀವು ಬೆಂಗಳೂರಿನಲ್ಲಿ ನಿಮ್ಮ ಮುದ್ದಿನ ಸಾಕು ಪ್ರಾಣಿಗೆ ವಸ್ತುಗಳನ್ನು ಖರೀದಿಸಲು ಪರದಾಡುತ್ತಿದ್ದರೆ, ನಾವು ನಿಮಗೆ ಸಹಾಯ ಮಾಡುತ್ತೇವೆ. ಬೆಂಗಳೂರಿನಲ್ಲಿರುವ ಬೆಸ್ಟ್ ಪೆಟ್​ ಶಾಪ್​ಗಳ ಲಿಸ್ಟ್​ ಇಲ್ಲಿದೆ.

ಗ್ಲೆನಾಂಡ್ಸ್  ಪೆಟ್ ಸ್ಟೋರ್, ಇಂದಿರಾ ನಗರ, ಬೆಂಗಳೂರು

ನಾಯಿ ಬಿಸ್ಕೆಟ್​ನಿಂದ ಹಿಡಿದು  ಎಲ್ಲಾ ರೀತಿಯ ಸಾಕುಪ್ರಾಣಿಗಳ ಆಹಾರಕ್ಕಾಗಿ ಗ್ಲೆನಾಂಡ್ಸ್ ಬಹುಶಃ ನಿಮಗೆ ಸೂಕ್ತವಾದ ಸ್ಥಳವಾಗಿದೆ. ಬೆಂಗಳೂರಿನಲ್ಲಿರುವ ಗ್ಲೆನಾಂಡ್ಸ್ ಸ್ಟೋರ್‌ಗಳು ಲೀಶ್‌ಗಳು, ಬೆಡ್‌ಗಳು, ಬ್ರಷ್‌ಗಳು ಸೇರಿದಂತೆ ಅನೇಕ ಉತ್ತಮ ವಸ್ತುಗಳು ಸಿಗುತ್ತದೆ. ಅಲ್ಲದೇ, ಇಂದಿರಾನಗರದಲ್ಲಿರುವ ವಿಶೇಷ ಸ್ಪಾ ನಿಮ್ಮ ಸಾಕುಪ್ರಾಣಿಗಳಿಗೆ ರಾಯಲ್ ಟ್ರೀಟ್‌ಮೆಂಟ್ ನೀಡುತ್ತದೆ.

ವಿಳಾಸ: 69 ರಾಯಲ್​ ಓಕ್ಸ್​ ಎದುರು, ಸಿಎಂಎಚ್​ ರೋಡ್​, ಇಂದಿರಾ ನಗರ

ಮೊಬೈಲ್ ನಂಬರ್: +919986801449

ಸಮಯ: ಬೆಳಗ್ಗೆ 10 ರಿಂದ ರಾತ್ರಿ 8.30

ಹೆಡ್ಸ್ ಅಪ್ ಫಾರ್ ಟೈಲ್ಸ್, ಅಶೋಕ್ ನಗರ, ಬೆಂಗಳೂರು

ನಾಯಿಗಳು, ಬೆಕ್ಕುಗಳು, ಪಕ್ಷಿಗಳು ಮತ್ತು ಮೀನುಗಳಿಗೆ ಬೇಕಾದ ಯಾವ ವಸ್ತುಗಳು ಇಲ್ಲಿ ಸಿಗುವುದಿಲ್ಲ ಎನ್ನುವುದಿಲ್ಲ. ಹೆಡ್ಸ್ ಅಪ್ ಫಾರ್ ಟೈಲ್ಸ್  ನಿಮ್ಮ ಮನ ಗೆಲ್ಲುವುದು ಸತ್ಯ. ಅವರ ಅಂಗಡಿಯಲ್ಲಿ 95 ಕ್ಕೂ ಹೆಚ್ಚು  ಬ್ರ್ಯಾಂಡ್‌ಗಳ ಹಲವಾರು ಆಟಿಕೆಗಳನ್ನು ಸಹ ಹೊಂದಿದ್ದಾರೆ.

ವಿಳಾಸ: 27, ಮಗರಥ ರಸ್ತೆ, ಅಶೋಕ್ ನಗರ, ಬೆಂಗಳೂರು

ಮೊಬೈಲ್ ನಂಬರ್: +918041317297

ಸಮಯ: ಬೆಳಗ್ಗೆ 11 ರಿಂದ ರಾತ್ರಿ 9.30

ಇದನ್ನೂ ಓದಿ: ಭಾರತದ ವಿಶೇಷ ನಾಯಿ ತಳಿಗಳಿವು, ಇವುಗಳ ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ

ಡಾಗ್‌ಮೈಕ್ಯಾಟ್ಸ್, ಇಂದಿರಾ ನಗರ, ಬೆಂಗಳೂರು

ಬೆಕ್ಕುಗಳು ಮತ್ತು ನಾಯಿಗಳು ಮಾತ್ರವಲ್ಲದೇ, ನಿಮ್ಮ ಯಾವುದೇ ಸಾಕುಪ್ರಾಣಿಗಳ ಆರೈಕೆ ಬೇಕಾದ ವಸ್ತುಗಳು ಇಲ್ಲಿ ಸಿಗುತ್ತದೆ. ನಿಮ್ಮ ಸಾಕುಪ್ರಾಣಿಗಳ ಆರೈಕೆ ಮತ್ತು ಸಂತೋಷಕ್ಕಾಗಿ ನಿಮಗೆ ಬೇಕಾದ ಎಲ್ಲವನ್ನೂ DogMyCats ಹೊಂದಿದೆ. ಅಲ್ಲದೇ, ಪೆಟ್ಸ್​ ಟ್ರಾವೆಲ್​ ಕಿಟ್​ಗಳು ಸಹ ಇಲ್ಲಿ ಲಭ್ಯವಿದೆ. ನಿಮಗೆ ಈ ಸ್ಥಳಕ್ಕೆ ಹೋಗಲು ಆಗುವುದಿಲ್ಲ ಎಂದರೆ ಮನೆಗೆ ಡೆಲಿವರಿ ಸಹ ನೀಡುತ್ತಾರೆ.

ವಿಳಾಸ: 3/2, ಅಂಬಲಿಪುರ, ಸರ್ಜಾಪುರ ರಸ್ತೆ, ಬೆಳ್ಳಂದೂರು, ಬೆಂಗಳೂರು

ಮೊಬೈಲ್ ನಂಬರ್: +917259124665

ಸಮಯ: ಬೆಳಗ್ಗೆ 9 ರಿಂದ ರಾತ್ರಿ 9.30

ವಿಳಾಸ: 479, 2ನೇ ಮುಖ್ಯ ರಸ್ತೆ , 2ನೇ ಸ್ಟೇಜ್, ಇಂದಿರಾನಗರ, ಬೆಂಗಳೂರು

ಮೊಬೈಲ್ ನಂಬರ್: +917259124665

ಸಮಯ: ಬೆಳಗ್ಗೆ 9 ರಿಂದ ರಾತ್ರಿ 9.30

ವಿಳಾಸ: 203 ಕಸ್ತೂರಿ ನಗರ ಮುಖ್ಯ ರಸ್ತೆ, 4ನೇ ಡಿ ಕ್ರಾಸ್​, ಬಿ ಚನ್ನಸಂದ್ರ ಕಸ್ತೂರಿ ನಗರ, ಬೆಂಗಳೂರು

ಮೊಬೈಲ್ ನಂಬರ್: +917259124665

ಸಮಯ: ಬೆಳಗ್ಗೆ 9 ರಿಂದ ರಾತ್ರಿ 9.30

ಇದನ್ನೂ ಓದಿ: ತರಕಾರಿ-ಹಣ್ಣಿನ ಸಿಪ್ಪೆ ವೇಸ್ಟ್​ ಅಲ್ವೇ ಅಲ್ಲ, ಹೀಗೆಲ್ಲಾ ಬಳಸ್ಬಹುದು!

ಎಲ್ಲಾ'ಸ್ ಪೆಟ್ಸ್ಕ್ಯಾಪ್, ಕಸವನಹಳ್ಳಿ, ಬೆಂಗಳೂರು

Ella's Petscape ಸಾಕುಪ್ರಾಣಿಗಳಿಗೆ ಸೂಕ್ತವಾದ ಸ್ಥಳ. ಪೆಟ್​ ಪೋಷಕರಿಗೆ ಈ ಜಾಗ ಇಷ್ಟವಾಗದೇ ಇರದು. ಇಲ್ಲಿ ನಿಮಗೆ ಬೇಕಾದ ವಸ್ತುಗಳು ಮಾತ್ರವಲ್ಲದೇ, ಸ್ಪಾ ಸೆಷನ್​ ಸಹ ಸಿಗುತ್ತದೆ.

ವಿಳಾಸ: 606, 2ನೇ ಮುಖ್ಯ ರಸ್ತೆ, ಕೆಪಿಸಿ ಲೇಔಟ್, ಕಸವನಹಳ್ಳಿ, ಬೆಂಗಳೂರು

ಮೊಬೈಲ್ ನಂಬರ್: +919620412152

ಸಮಯ: ಬೆಳಗ್ಗೆ 11.30 ರಿಂದ ರಾತ್ರಿ 10.00
Published by:Sandhya M
First published: