Non Veg Restaurants: ಬೆಂಗಳೂರಿನಲ್ಲಿ ಬಾಯಲ್ಲಿ ನೀರೂರಿಸುವ ನಾನ್​ವೆಜ್​ ರೆಸ್ಟೊರೆಂಟ್​ಗಳ ಲಿಸ್ಟ್ ಇಲ್ಲಿದೆ

Near Me Restaurants: ನಾನ್​ವೆಜ್​ಗೆ ಈ ರೀತಿ ಹೆಸರುವಾಸಿಯಾದ ರೆಸ್ಟೊರೆಂಟ್​ಗಳ ಬಗ್ಗೆ ಹಲವಾರು ಜನರಿಗೆ ಗೊತ್ತಿಲ್ಲ. ಆದರೆ ನಾವಿಲ್ಲಿ ಬೆಂಗಳೂರಿನ ಬೆಸ್ಟ್ ನಾನ್​ವೆಜ್​ ರೆಸ್ಟೊರೆಂಟ್​ಗಳ ಲಿಸ್ಟ್​ ನೀಡಿದ್ದೇವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರಿನಲ್ಲಿರುವ (Bengaluru) ಉತ್ತಮ ಮಾಂಸಾಹಾರಿ ರೆಸ್ಟೋರೆಂಟ್‌ಗಳನ್ನು (Non Veg Restaurants)  ಗುರುತಿಸುವುದು ಅಪರೂಪ. ಏಕೆಂದರೆ ಇಲ್ಲಿ ನಿಮಗೆ ಬಹಳಷ್ಟು ನಾನ್​ವೆಜ್​ ರೆಸ್ಟೊರೆಂಟ್​ಗಳು ಸಿಗುತ್ತದೆ, ಆದರೆ ಅವುಗಳ ಸ್ವಚ್ಛತೆ ಮತ್ತು ರುಚಿಯ ಬಗ್ಗೆ ಗ್ಯಾರಂಟಿ ನೀಡಲಾಗುವುದಿಲ್ಲ. ವೆಜ್​ ವಿಚಾರಕ್ಕೆ ಬಂದಾಗ ವಿದ್ಯಾರ್ಥಿ ಭವನ, ಬ್ರಾಹ್ಮಣರ ಕೆಫೆ ಮತ್ತು ಶಾಂತಿ ಸಾಗರ್‌ಗಳಿವೆ ಆದರೆ ನಾನ್​ವೆಜ್​ಗೆ ಈ ರೀತಿ ಹೆಸರುವಾಸಿಯಾದ ರೆಸ್ಟೊರೆಂಟ್​ಗಳ ಬಗ್ಗೆ ಹಲವಾರು ಜನರಿಗೆ ಗೊತ್ತಿಲ್ಲ. ಆದರೆ ನಾವಿಲ್ಲಿ ಬೆಂಗಳೂರಿನ ಬೆಸ್ಟ್ ನಾನ್​ವೆಜ್​ ರೆಸ್ಟೊರೆಂಟ್​ಗಳ ಲಿಸ್ಟ್​ ನೀಡಿದ್ದೇವೆ.

 ಲಾಕಾಸಾ - ಸರ್ಜಾಪುರ ರಸ್ತೆ

ಲಾಕಾಸಾವು ಅದರ ಒಳಾಂಗಣಕ್ಕೆ ಹೆಸರುವಾಸಿಯಾದ ಸ್ಥಳವಾಗಿದ್ದು, ಸುಂದರವಾದ ಬಹುಮಹಡಿ ಕಟ್ಟಡ ನಿಮಗೆ ಮನೆಯ ವಾತಾವರಣವನ್ನು ನೀಡುತ್ತದೆ. ಇದು ಶಾಂತವಾದ ಸ್ಥಳವಾಗಿದ್ದು, ನಿಮಗೆ ಇಷ್ಟವಾಗದೇ ಇರದು.  ಆಹಾರದ ವಿಚಾರಕ್ಕೆ ಬರುವುದಾದರೆ, ಕಾಂಟಿನೆಂಟಲ್‌ನಿಂದ ದೇಸಿಯವರೆಗೆ ಸಾಕಷ್ಟು ಆಯ್ಕೆಗಳೊಂದಿಗೆ ಇಲ್ಲಿ ಮೆನು ಇದ್ದು. ಇಲ್ಲಿ ನೀವು ಮಿಸ್​ ಮಾಡಬಾರದು ಒಂದು ವಿಷಯವೆಂದರೆ ಆರೆಂಜ್ ಸಾಸ್‌ನೊಂದಿಗೆ ಪೋರ್ಕ್. ಎಲ್ಲಾ ಹಂದಿಮಾಂಸ ಪ್ರಿಯರಿಗೆ ಪರಿಪೂರ್ಣ ಸ್ವರ್ಗ-ನಿರ್ಮಿತ ಸ್ಥಳ ಇದು ಎನ್ನಬಹುದು.

ಸಮಯ: 11 AM ನಿಂದ 11 PM

ವಿಳಾಸ: 15, ಅಮೃತಾ ಇಂಜಿನಿಯರಿಂಗ್ ಕಾಲೇಜು ರಸ್ತೆ, ಕಸವನಹಳ್ಳಿ, ಸರ್ಜಾಪುರ ರಸ್ತೆಯಿಂದ ಹೊರಕ್ಕೆ, ಸರ್ಜಾಪುರ ರಸ್ತೆ, ಬೆಂಗಳೂರು.

 ಟೋಸ್ಕಾನೊ - ಫೋರಮ್ ವ್ಯಾಲ್ಯೂ ಮಾಲ್‌, ವೈಟ್‌ಫೀಲ್ಡ್ 

ಬೆಂಗಳೂರಿನಲ್ಲಿ ಅತ್ಯುತ್ತಮ ಇಟಾಲಿಯನ್ ಆಹಾರದ ವಿಚಾರದಲ್ಲಿ  ಟೊಸ್ಕಾನೊದಂತಹ ಸ್ಥಳವನ್ನು ನೀವು ಎಂದಿಗೂ ನೋಡಿರುವುದಿಲ್ಲ ಎಂದರೆ ತಪ್ಪಾಗಲಾರದು. ವಾತಾವರಣ, ಸೇವೆ ಮತ್ತು ಮೂಲೆಯಲ್ಲಿ ನುಡಿಸುವ ಸುಂದರ ಸಂಗೀತ, ಅಬ್ಬಾ ಒಂದು ಪರಿಪೂರ್ಣದಿನವನ್ನು ಇಲ್ಲಿ ಕಳೆಯಬಹುದು. ನೀವು ಸ್ಪಾಗೆಟ್ಟಿ ಆಗ್ಲಿಯೊ ಒಲಿಯೊ ಪಾಸ್ಟಾ, ವೆರ್ಡುರ್ ಪಿಜ್ಜಾ, ಬಫಲೋ ಮೊಝ್ಝಾರೆಲ್ಲಾ, ಚಿಕನ್ ಡಿ ಟೊಸ್ಕಾನೊ, ಕ್ಯಾರೆಟ್ ಕೇಕ್​ ಹೀಗೆ ವಿಭಿನ್ನ ಆಹಾರಗಳನ್ನು ಆಯ್ಕೆ ಮಾಡಿ ಎಂಜಾಯ್ ಮಾಡ್ಬೋದು.  ಇಲ್ಲಿನ ಪಾಕವಿಧಾನಗಳು ಅಸಾಧಾರಣ ಎನ್ನಬಹುದು.ಅಲ್ಲದೇ ಇಲ್ಲಿನ ಅಡುಗೆ ಮಾಡುವವರು ಇಟಾಲಿಯನ್ ಪಾಕಪದ್ಧತಿಯಲ್ಲಿ ಅದ್ಭುತ ಮಟ್ಟದ ಪರಿಣತಿಯನ್ನು ಹೊಂದಿದ್ದಾರೆ.

ಇದನ್ನೂ ಓದಿ: ವಾರ ಪೂರ್ತಿ ಕೆಲಸ ಮಾಡಿ ಬೋರ್ ಆಗಿದ್ರೆ, ವೀಕೆಂಡ್​ ಬೆಂಗಳೂರಿನ ರೆಸಾರ್ಟ್​ಗಳಿಗೆ ಹೋಗಿ ಎಂಜಾಯ್ ಮಾಡಿ

ಸಮಯ: ಮಧ್ಯಾಹ್ನ 12:00 ರಿಂದ ಮಧ್ಯಾಹ್ನ 3:30 ಮತ್ತು ಸಂಜೆ 6:30 ರಿಂದ ರಾತ್ರಿ 10:45 ರವರೆಗೆ

ವಿಳಾಸ: 54, 5ನೇ ಎ ಕ್ರಾಸ್, ಕೆನರಾ ಬ್ಯಾಂಕ್ ರಸ್ತೆ, ಕೋರಮಂಗಲ 6ನೇ ಬ್ಲಾಕ್, ಬೆಂಗಳೂರು

ಓ ಕಲ್ಕತ್ತಾ - ಚರ್ಚ್ ಸ್ಟ್ರೀಟ್

ಈ ಶಾಸ್ತ್ರೀಯ ಬಂಗಾಳಿ ಸ್ಥಳವು ನಿಮಗೆ ಅತ್ಯಂತ ರುಚಿಕರ ಸೀಫುಡ್‌ ನೀಡುತ್ತದೆ. ಬಂಗಾಳ ಆಹಾರದ ರುಚಿ ಮತ್ತು ಪರಿಮಳವನ್ನು ನೀವಿಲ್ಲಿ ಅನುಭವಿಸಬಹುದು. ನೀವು ಬೆಂಗಾಲಿ ಅಥವಾ ಬೆಂಗಾಲಿ ಆಹಾರಗಳ ಅಭಿಮಾನಿಯಾಗಿದ್ದರೆ, ಓಹ್ ಕಲ್ಕತ್ತಾ ನಿಮಗೆ ಅತ್ಯುತ್ತಮ ಸ್ಥಳವಾಗಿದೆ. ಕೊಶೋ ಮಾಂಗ್‌ಶೋ, ಕಾಕ್ರ ಚಿಂಗ್ರಿ ಭಾಪಾ, ಮಲೈ ಚಿಂಗ್ರಿ ಕರಿಯಿಂದ ಕಲೈ ಮಚ್ಚ್ ಮತ್ತು ಮಿಶ್ತಿ ದೋಯಿ ವರೆಗೆ, ಓಹ್ ಕಲ್ಕತ್ತಾದ ಮೆನುವು ನಿಮ್ಮ ಬಾಯಲ್ಲಿ ನೀರೂರಿಸುತ್ತದೆ.

ಸಮಯ: ಮಧ್ಯಾಹ್ನ 12:00 ರಿಂದ ಮಧ್ಯಾಹ್ನ 3:30 ಮತ್ತು ಸಂಜೆ 7 ರಿಂದ ರಾತ್ರಿ 11

ವಿಳಾಸ: 2ನೇ ಮಹಡಿ, 14, ಚರ್ಚ್ ಸ್ಟ್ರೀಟ್, ಬೆಂಗಳೂರು

ತಂದೂರು - ಎಂಜಿ ರಸ್ತೆ

ತಂದೂರು ಬೆಂಗಳೂರಿನಲ್ಲಿ ನಾನ್​ ವೆಜ್​ ಊಟ ಮಾಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ತಂದೂರಿನ ಅದ್ಭುತವಾದ ಅಲಂಕಾರವು ನೀವು ಯಾವುದೋ ಅರಮನೆಯಲ್ಲಿ ಇದ್ದೀರ ಎನ್ನುವ ಭಾವನೆಯನ್ನು ನೀಡುತ್ತದೆ. ಮೊಘಲೈ ಪಾಕಪದ್ಧತಿಯು ಅತ್ಯುತ್ತಮವಾಗಿದೆ, ತಂದೂರ್ ಒಂದು ಶ್ರೇಷ್ಠ ರೆಸ್ಟೋರೆಂಟ್ ಮತ್ತು ಅವರ ಕಲ್ಮಿ ಕಬಾಬ್ ಮತ್ತು ತಂದೂರಿ ಚಿಕನ್ ಟ್ರೈ ಮಾಡಲೇಬೇಕು.

ಸಮಯ: ಮಧ್ಯಾಹ್ನ 12:00 ರಿಂದ ಮಧ್ಯಾಹ್ನ 3:30 ಮತ್ತು ಸಂಜೆ 7 ರಿಂದ ರಾತ್ರಿ 11:30 ರವರೆಗೆ
ವಿಳಾಸ: 28, ಶತಮಾನೋತ್ಸವ ಕಟ್ಟಡ, ಎಂಜಿ ರಸ್ತೆ, ಬೆಂಗಳೂರು

 ಓಯ್​  ಅಮೃತಸರ - ಕೋರಮಂಗಲ

ಓಯ್​ ಅಮೃತಸರದ ವಾತಾವರಣ ಮತ್ತು ಆಹಾರದ ಗುಣಮಟ್ಟದ ಬಗ್ಗೆ ಮಿಶ್ರ ಅಭಿಪ್ರಾಯವಿದೆ ಆದರೆ ನೀವು ಧಾಬಾ ರೀತಿಯ ಪರಿಸರದಲ್ಲಿ ದೇಸಿ ಪಂಜಾಬಿ ಆಹಾರವನ್ನು ಪ್ರಯತ್ನಿಸಲು ಬಯಸಿದರೆ ಈ ಸ್ಥಳವು ಉತ್ತಮ ಆಯ್ಕೆಯಾಗಿದೆ. ಮ್ಯೂಸಿಕ್ ಜೊತೆ ಲಸ್ಸಿ, ದಾಲ್ ಮಖಾನಿ ಮತ್ತು ತಂದೂರಿ ಖಂಡಿತವಾಗಿಯೂ ನಿಮಗೆ ಇಷ್ಟವಾಗುತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ರೇಷ್ಮೆ ಸೀರೆ ಎಲ್ಲಿ ಖರೀದಿ ಮಾಡೋದು ಅನ್ನೊ ಯೋಚ್ನೆ ಬಿಡಿ, ಈ ಅಂಗಡಿಗಳಿಗೆ ಹೋಗಿ

ಸಮಯ: ಮಧ್ಯಾಹ್ನ 12:00 ರಿಂದ ಮಧ್ಯಾಹ್ನ 3:30 ಮತ್ತು ಸಂಜೆ 7 ರಿಂದ ರಾತ್ರಿ 11:00 ರವರೆಗೆ

ವಿಳಾಸ: 5ನೇ ಎ ಕ್ರಾಸ್, ಕೆನರಾ ಬ್ಯಾಂಕ್ ರಸ್ತೆ, 6ನೇ ಬ್ಲಾಕ್, ಕೋರಮಂಗಲ 6ನೇ ಬ್ಲಾಕ್, ಬೆಂಗಳೂರು
Published by:Sandhya M
First published: