ತಾಯಿಯಾಗಲು ಸೂಕ್ತ ವಯಸ್ಸು ಯಾವುದು..? ವೈದ್ಯರ ಅಭಿಪ್ರಾಯ ಹೀಗಿದೆ..

35ರ ನಂತರ ಗರ್ಭಧಾರಣೆಗೆ ಹೆಚ್ಚಿನ ತೊಡಕುಗಳು ಅಪಾಯಗಳು ಇರುವುದರಿಂದ, ಅದಕ್ಕೂ ಮುನ್ನವೇ ಸ್ತ್ರೀಯರು ಗರ್ಭಧಾರಣೆಗೆ ಸಿದ್ಧರಾಗಬಹುದು ಎಂಬುದು ವೈದ್ಯರ ಅಭಿಪ್ರಾಯವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ತಾಯ್ತನ ಎಂಬುದು ಭಗವಂತ ಹೆಣ್ಣಿಗೆ ನೀಡಿರುವ ಅತ್ಯದ್ಭುತ ವರವಾಗಿದ್ದು ತಾಯ್ತನದ 9 ತಿಂಗಳ ಪ್ರಯಾಣ ಒಂದು ಹೆಣ್ಣಿಗೆ ಅತ್ಯಂತ ಪ್ರಾಮುಖ್ಯವಾದುದು. ಹಿರಿಯರ ಅಭಿಪ್ರಾಯದಂತೆ ಒಬ್ಬ ಸ್ತ್ರೀ ಪರಿಪೂರ್ಣವಾಗುವುದು ತಾಯಿಯಾದ ನಂತರ ಎಂದಾಗಿದೆ. ಮೊದಲೆಲ್ಲಾ 20 ವರ್ಷ  ತುಂಬುವುದರೊಳಗೆ ಸ್ತ್ರೀಯರಿಗೆ ವಿವಾಹವಾಗುತ್ತಿತ್ತು ಹಾಗೂ 25ರ ಹರೆಯದ ಮೊದಲೇ ಆಕೆ ತಾಯಿಯಾಗುತ್ತಿದ್ದಳು. ಆದರೆ ಈಗ ಕಾಲ ಬದಲಾಗಿದೆ. ಸ್ತ್ರೀಯರು ಉನ್ನತ ಶಿಕ್ಷಣ ಪಡೆದು ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು, ಸ್ವಾವಲಂಬಿಗಳಾಗಬೇಕು ಎಂಬ ಬಯಕೆಯಿಂದ ಉತ್ತಮ ವೃತ್ತಿ ಹುಡುಕಿ ಜೀವನದಲ್ಲಿ ಸೆಟಲ್ ಆಗಬಯಸುತ್ತಾರೆ. ಹೀಗಾಗಿ ವಿವಾಹ ಪ್ರಕ್ರಿಯೆ ತಡವಾಗಿ ನಡೆಯುತ್ತಿದೆ. ತಾನು ಇನ್ನೊಬ್ಬರ ಮುಂದೆ ಕೈಚಾಚಬಾರದೆಂಬ ನಿಲುವಿನಿಂದ ಹೆಣ್ಣು ಕಷ್ಟಪಟ್ಟು ಓದಿ ಕೈತುಂಬಾ ಸಂಬಳದ ಉದ್ಯೋಗಗಳಿಗೆ ತೆರಳುತ್ತಿದ್ದಾರೆ. ಸ್ತ್ರೀಯರ ಆದ್ಯತೆಗಳಿಗೆ ಈಗ ಮನ್ನಣೆ ನೀಡಲಾಗುತ್ತಿದೆ.


ಪುರುಷರಷ್ಟೇ ಸಮಾನವಾಗಿ ಸ್ತ್ರೀಯರಿಗೂ ಶಿಕ್ಷಣ ಕೊಡಿಸಿ ಉತ್ತಮ ಉದ್ಯೋಗಕ್ಕೆ ಅರ್ಹತೆ ಪಡೆಯುವಂತೆ ಹೆಣ್ಣಿನ ತಂದೆ ತಾಯಿಯರು ಸಮರ್ಥರಾಗಿಸುತ್ತಿದ್ದಾರೆ. ಆದರೆ ಶಿಕ್ಷಣ, ವೃತ್ತಿ ಒಬ್ಬ ಹೆಣ್ಣಿಗೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ವಿವಾಹ ಹಾಗೂ ಸಂಗಾತಿಯ ಆಸರೆ. ಪುರುಷ ಹಾಗೂ ಸ್ತ್ರೀ ಇಬ್ಬರಿಗೂ ವಿವಾಹವು ಜೀವನದ ಅತ್ಯಂತ ಪ್ರಮುಖ ಘಟ್ಟವಾಗಿದೆ. ತದನಂತರ ತಾಯ್ತನ ಎಂಬುದು ಗಂಡು ಹೆಣ್ಣು ಇಬ್ಬರಿಗೂ ಅತ್ಯಂತ ಮಹತ್ವವಾದ ಹಂತವಾಗಿದೆ. ಈ ಸಮಯದಲ್ಲಿ ಗಂಡು ಹೆಣ್ಣಿನ ಜೋಪಾನ ಮಾಡಬೇಕಾಗುತ್ತದೆ. ತನ್ನ ಕಣ್ರೆಪ್ಪೆಯಂತೆ ನೋಡಿಕೊಳ್ಳಬೇಕಾಗುತ್ತದೆ.


ಇದನ್ನೂ ಓದಿ:ಇಂದಿನಿಂದ ತಮಿಳುನಾಡಿಗೆ KSRTC ಬಸ್​ ಸಂಚಾರ ಪ್ರಾರಂಭ

ವೈಜ್ಞಾನಿಕ ಲೋಕ ಹೇಳುವಂತೆ ನಿರ್ದಿಷ್ಟ ವಯಸ್ಸನ್ನು ಆಧರಿಸಿ ಒಬ್ಬ ಮಹಿಳೆ ತಾಯಿಯಾದಲ್ಲಿ ಆಕೆಯ ಹಾಗೂ ಮಗುವಿನ ಆರೋಗ್ಯ ಅತ್ಯುತ್ತಮವಾಗಿರುತ್ತದೆ ಎಂದಾಗಿದೆ. ಇನ್ನು ತಾಯಿಯಾಗಲು ಒಬ್ಬ ಸ್ತ್ರೀ ಮಾನಸಿಕವಾಗಿ, ದೈಹಿಕವಾಗಿ ಹಾಗೂ ಆರ್ಥಿಕವಾಗಿ ಸದೃಢರಾಗಿರಬೇಕು ಎಂಬುದು ಆಧುನಿಕ ಲೋಕದ ಅಭಿಪ್ರಾಯವಾಗಿದೆ. ಹಾಗಾದರೆ ಒಬ್ಬ ಹೆಣ್ಣಿಗೆ ತಾಯಿಯಾಗಲು ಸರಿಯಾದ ಸಮಯ ಯಾವುದು ಎಂಬುದು ಈ ಲೇಖನದ ಮೂಲಕ ಸ್ಪಷ್ಟ ಉತ್ತರ ದೊರೆಯಲಿದೆ.


20 ವರ್ಷವಾಗುವ ಮುನ್ನ:


20 ರ ಹರೆಯಕ್ಕೂ ಮುನ್ನ ಒಬ್ಬ ಸ್ತ್ರೀ ತಾಯಿಯಾದರೆ ಅದು ಆಕೆಗೆ ಹೆಚ್ಚಿನ ಅಪಾಯ ತಂದೊಡ್ಡಬಹುದು ಎಂಬುದು ವೈದ್ಯರಾದ ಮೆಕ್‌ಡೊನಾಲ್ಡ್ ಅಭಿಪ್ರಾಯವಾಗಿದೆ. ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಂತಹ ಗರ್ಭಧಾರಣೆಯ ಅಪಾಯಗಳನ್ನು ಹೆಚ್ಚಿಸುವ ಕಡಿಮೆ ತೂಕ ಈ ಹರೆಯದಲ್ಲಾಗಿರುತ್ತದೆ. ಇನ್ನು ಆರ್ಥಿಕ ಸ್ವಾವಲಂಬನೆ ಕೂಡ ಈ ಹರೆಯದಲ್ಲಿ ಮಗುವಿನ ಲಾಲನೆ ಪಾಲನೆಗೆ ಅವಶ್ಯಕವಾಗಿರುತ್ತದೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.


20-24 ರ ನಡುವಿನ ವಯಸ್ಸು:


ಈ ವಯಸ್ಸಿನ ಮಹಿಳೆಯರು ಫಲವತ್ತಾಗಿದ್ದು ಗರ್ಭಧಾರಣೆಯ ಅವಕಾಶ 25% ಆಗಿರುತ್ತದೆ. ಆದರೆ ಇಂದಿನ ಜಗತ್ತಿನಲ್ಲಿ ಮಗುವಿನ ಲಾಲನೆ ಪಾಲನೆಗೆ ಆರ್ಥಿಕ ಸದೃಢತೆ ಕೂಡ ಮುಖ್ಯವಾಗಿರುವುದರಿಂದ ಈ ವಯಸ್ಸು ಅಷ್ಟೊಂದು ಸೂಕ್ತವಲ್ಲ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ. ಈ ಸಮಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ಪಡೆದ ಸಾಲ ಪಾವತಿಯನ್ನೇ ಹೆಚ್ಚಿನ ಪುರುಷ ಸ್ತ್ರೀಯರು ಮಾಡುವುದರಿಂದ ಕುಟುಂಬ ನಡೆಸಲು ಅವರಲ್ಲಿ ಸಾಕಷ್ಟು ಉಳಿತಾಯ ಹಾಗೂ ಯೋಜನೆಗಳು ಇರುವುದಿಲ್ಲ.


ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

25-29 ರ ನಡುವಿನ ವಯಸ್ಸು:


ಈ ವಯಸ್ಸಿನಲ್ಲಿ ಸ್ತ್ರೀಯ ಗರ್ಭಧಾರಣೆ ಅವಕಾಶಗಳು 25% ಆಗಿರುತ್ತದೆ. ಮಿಯಾಮಿಯ ಕ್ರಿಸ್ಟಲ್ ಎನ್ನುವವರು 27ರ ಹರೆಯದಲ್ಲೇ ವಿವಾಹವಾದ ಒಡನೆಯೇ ತಾಯಿಯಾಗಲು ನಿರ್ಧರಿಸಿದರು. ಹೆಚ್ಚಿನವರು ಆಕೆಗೆ ಇಷ್ಟು ಬೇಗನೇ ತಾಯಿಯಾಗುವುದಕ್ಕಿಂತ ಕೊಂಚ ಸಮಯ ಕಾಯುವಂತೆ ಸಲಹೆ ನೀಡಿದ್ದರು. ಆದರೆ ಕ್ರಿಸ್ಟಲ್ ದಂಪತಿ ತಾಯ್ತನಕ್ಕೆ ಸಿದ್ಧರಾಗಿದ್ದರು. 27 ಹರೆಯದಲ್ಲೇ ಅವರು ಹೆಣ್ಣುಮಗುವಿನ ತಾಯಿಯಾದರು ಹಾಗೂ ಆಕೆ ಹೆಚ್ಚು ಖುಷಿಯಾಗಿದ್ದಾರೆ. ಆದರೆ ಇನ್ನು ಕೆಲವರು ಈ ವಯಸ್ಸಿನಲ್ಲಿ ತಾಯಿಯಾಗುವುದಕ್ಕೆ ಹಲವಾರು ಅಡೆತಡೆಗಳನ್ನು ಹೊಂದಿರುತ್ತಾರೆ. 28ನೇ ವಯಸ್ಸಿನಲ್ಲಿ ಮೊದಲನೆಯ ಮಗುವಿಗೆ ತಾಯಿಯಾದ ಅಟ್ಲಾಂಟಾದ ಮೆಡಲಿನ್ ಕುಟುಂಬದವರು ಆಕೆಗೆ ಇನ್ನೊಂದು ಮಗುವಿಗೆ ಪ್ರಯತ್ನಿಸಲು ಹೇಳುತ್ತಿದ್ದಾರೆ. 30ರ ಹರೆಯದ ಒಳಗೇ 2ನೇ ಮಗು ಹೆರುವಂತೆ ಒತ್ತಾಯಪಡಿಸುತ್ತಿದ್ದಾರೆ ಎಂಬುದು ಮೆಡಲಿನ್ ಹೇಳಿಕೆಯಾಗಿದೆ.


30-34ರ ನಡುವಿನ ವಯಸ್ಸು:


ನೀವು 30ನೇ ವಯಸ್ಸನ್ನು ತಲುಪುತ್ತಿದ್ದಂತೆಯೇ ಅಂದರೆ 35 ಹಾಗೂ ಅದಕ್ಕೂ ಹೆಚ್ಚಿನ ವಯಸ್ಸಿನಲ್ಲಿ ತಾಯಿಯಾಗುವ ಅಂಶದಲ್ಲಿ ಕುಸಿತ ಕಾಣಲಾರಂಭಿಸುತ್ತೀರಿ. ನಿಮ್ಮ ವೃತ್ತಿಜೀವನದಲ್ಲಿ ನೀವು ಬ್ಯಸಿಯಾಗಿದ್ದರೆ ಅಥವಾ ಇನ್ನೂ ವಿವಾಹವಾಗದೇ ಇದ್ದಲ್ಲಿ ಬರೇ ಮಗು ಹೊಂದಲು ಮಾತ್ರವೇ ನೀವು ಗರ್ಭಧಾರಣೆಗೆ ಪ್ರಯತ್ನಿಸಬಾರದು ಎಂಬುದು ಯೇಲ್ ವಿಶ್ವವಿದ್ಯಾನಿಲಯದ ಒಬ್-ಜಿನ್‌ನ ವೈದ್ಯಕೀಯ ಪ್ರಾಧ್ಯಾಪಕ ಮೇರಿ ಜೇನ್ ಮಿಂಕಿನ್ ಹೇಳುತ್ತಾರೆ. ಈ ಹರೆಯದಲ್ಲಿ ನಿಮಗೆಷ್ಟು ಮಕ್ಕಳು ಬೇಕು ಎಂಬುದನ್ನು ನೀವು ಲೆಕ್ಕಾಚಾರ ಹಾಕಿ ನಂತರ ತಾಯ್ತನಕ್ಕೆ ಸಿದ್ಧತೆ ಮಾಡಿಕೊಳ್ಳಿ ಎಂಬುದು ವೈದ್ಯರ ಸಲಹೆಯಾಗಿದೆ.


35-39 ರ ನಡುವಿನ ವಯಸ್ಸು:


ದುರಾದೃಷ್ಟದ ವಿಶಯವೆಂದರೆ ಈ ಹರೆಯದಲ್ಲಿ ನಿಮ್ಮ ಫಲವತ್ತತೆ ಕುಸಿತಗೊಳ್ಳುತ್ತದೆ. ಐವಿಎಫ್‌ನಂತಹ ವೈದ್ಯಕೀಯ ನೆರವು ಈ ಸಮಯದಲ್ಲಿ ಸಹಕಾರಿಯಾಗಿರುವುದಿಲ್ಲ. ಹೆಚ್ಚು ಹಣ ಖರ್ಚುಮಾಡುವ ಸ್ಥಿತಿ ಬಂದೊದಗಬಹುದು ಎಂಬುದು ಮೆಕ್‌ಡೊನಾಲ್ಡ್ ಅಭಿಪ್ರಾಯವಾಗಿದೆ. ಅಧಿಕ ರಕ್ತದೊತ್ತಡ, ಮಧುಮೇಹ ಈ ವಯಸ್ಸಿನಲ್ಲಿ ಗರ್ಭಾವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು ಎಂಬುದು ವೈದ್ಯರ ಸಲಹೆಯಾಗಿದೆ.


40-45ರ ನಡುವಿನ ವಯಸ್ಸು:


40 ನೇ ವಯಸ್ಸಿಗೆ ಒಬ್ಬ ಸ್ತ್ರೀ ತಾಯಿಯಾಗುವ ಸಂಭವ ಬಹಳ ಕಡಿಮೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ. 40ರ ಹರೆಯದಲ್ಲಿ ಸ್ತ್ರೀಗೆ ಗರ್ಭಪಾತದಂತಹ ಅಪಾಯಗಳು ಹೆಚ್ಚಿರುತ್ತದೆ. ಅಲ್ಲದೆ ಮಧುಮೇಹ, ಕಡಿಮೆ ತೂಕವಿರುವ ಮಗುವಿನ ಜನನ, ಅವಧಿಪೂರ್ವ ಹೆರಿಗೆ, ಭ್ರೂಣದ ಮರಣ ಮೊದಲಾದ ಸಮಸ್ಯೆಗಳು ತಲೆದೋರಬಹುದು. ಇನ್ನು ಮಹಿಳೆಯರು ಹೆಚ್ಚು ತೂಕ, ಮಧುಮೇಹ, ರಕ್ತದೊತ್ತಡ ಸಮಸ್ಯೆಯನ್ನು ಹೊಂದಿದ್ದರೆ ಈ ಅಪಾಯ ಇನ್ನೂ ತೀವ್ರವಾಗಿರುತ್ತದೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.
ಯಾವ ವಯಸ್ಸಿನಲ್ಲಿ ಗರ್ಭಧಾರಣೆ ಸೂಕ್ತ ಎಂಬುದು ಸ್ತ್ರೀಯರ ಮಾನಸಿಕ ಹಾಗೂ ದೈಹಿಕ ಸ್ಥಿತಿಯನ್ನು ನಿರ್ಧರಿಸುತ್ತದೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ. 35ರ ನಂತರ ಗರ್ಭಧಾರಣೆಗೆ ಹೆಚ್ಚಿನ ತೊಡಕುಗಳು ಅಪಾಯಗಳು ಇರುವುದರಿಂದ, ಅದಕ್ಕೂ ಮುನ್ನವೇ ಸ್ತ್ರೀಯರು ಗರ್ಭಧಾರಣೆಗೆ ಸಿದ್ಧರಾಗಬಹುದು ಎಂಬುದು ವೈದ್ಯರ ಅಭಿಪ್ರಾಯವಾಗಿದೆ. ಆರೋಗ್ಯಕರ ಆಹಾರ ಪದ್ಧತಿ, ಸೂಕ್ತ ವ್ಯಾಯಾಮ ಅನುಸರಿಸುವ ಮೂಲಕ ಸುಲಭ ಹೆರಿಗೆಯ ಅನುಕೂಲವನ್ನು ಮಹಿಳೆಯರು ಪಡೆದುಕೊಳ್ಳಬಹುದಾಗಿದೆ.


Published by:Latha CG
First published: