Beard Show: ಬಿಯರ್ಡ್​ ಶೋನಲ್ಲಿ ಗಡ್ಡಧಾರಿಗಳ ಬಿಂಕಬಿನ್ನಾಣ -ಏನಿದರ ವಿಶೇಷತೆ ಇಲ್ಲಿದೆ ನೋಡಿ

The Bearded Show : ಪೇಪರ್‌ ಸಾಲ್ಟ್‌ ಗಡ್ಡಕ್ಕೆ ಯುವತಿಯರು ಫಿದಾ ಆಗ್ಬಿಟ್ಟಿದ್ದಾರೆ. ಅಂತಹ ಗಡ್ಡಧಾರಿಗಳಿಗಾಗಿ ದೆಹಲಿಯಲ್ಲಿ ನಡೆದ ಬಿಯರ್‌ ಶೋ ಸಾಕಷ್ಟು ವಿಶೇಷತೆಗಳಿಂದ ಕೂಡಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬಹಳ ಮಂದಿ ಪುರುಷರಿಗೆ ಗಡ್ಡ ಬಿಡುವುದು ಸದ್ಯಕ್ಕೆ ಫ್ಯಾಷನ್ ಆಗ್ಬಿಟ್ಟಿದೆ, ಅದಕ್ಕಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ(New Delhi) ನಾಲ್ಕನೇ ಆವೃತ್ತಿ ಬಿಯರ್ಡ್‌ ಶೋವನ್ನು (Beard Show)ಆಯೋಜಿಸಲಾಗಿತ್ತು. ಶೋನಲ್ಲಿ ಪಾಲ್ಗೋಲು ಗಡ್ಡಧಾರಿಗಳ ದಂಡೆ ಹರಿದು ಬಂದಿತ್ತು. ದೆಹಲಿಗೂ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಬಿಯರ್ಡ್‌ ಶೋ ನಡೆದಿತ್ತು ಎಂಬುದು ಗಮರ್ನಾಹ. ಶೋನಲ್ಲಿ ಗಡ್ಡಧಾರಿಗಳು ಕೂಡ ಲಲನೆಯರಂತೆ ಬೆಕ್ಕಿನ (cat walk)ನಡಿಗೆ ಹೆಜ್ಜೆ ಹಾಕಿ ನೆರೆದಿದ್ದವರನ್ನು ಮನಸೂರೆಗೊಂಡರು. ಮಹಿಳೆಯರನ್ನು ಆಕರ್ಷಿಸಲು ಅಥವಾ ಫ್ಯಾಶನ್‌ (fashion) ಪರವಾಗಿ ಹೇಳುವುದಾದರೆ ಗಡ್ಡ ಸಾಕಷ್ಟು ಗಮನ ಸೆಳೆಯುತ್ತದೆ. ಆದರೆ ಗಡ್ಡ ಬೆಳೆಸುವುದರಿಂದ ಆರೋಗ್ಯ ಲಾಭವೂ(health) ಇದೆ ಗಡ್ಡ ಬೆಳೆಸುವುದರಿಂದ ಚರ್ಮದ ಕ್ಯಾನ್ಸರ್‌ ತಡೆಯುವುದೂ(preventing skin cancer from growing beards) ಸೇರಿದಂತೆ ಅನೇಕ ಆರೋಗ್ಯ ಲಾಭಗಳಿವೆ.

  ಇದನ್ನು ಓದಿ:world beard day: ಗಡ್ಡ ಬಿಟ್ಟು ಟ್ರೆಂಡ್​ ಹುಟ್ಟುಹಾಕಿದ ಸಿನಿತಾರೆಯರು

  ಗಡ್ಡ ನಮ್ಮ ಮುಖದ ಚರ್ಮವನ್ನು ಹಾನಿಕರ ಅಲ್ಟ್ರಾವಯಲೆಟ್‌ ಕಿರಣಗಳಿಂದ ರಕ್ಷಿಸುತ್ತದೆ: ನಮ್ಮ ದೇಹದ ಬಹುಭಾಗ ಬಟ್ಟೆಯಿಂದ ಮುಚ್ಚಿದ್ದು ಸೂರ್ಯನ ಅಲ್ಟ್ರಾ ವಯಲೆಟ್ ಕಿರಣಗಳಿಂದ ರಕ್ಷಣೆ ದೊರೆಯುತ್ತದೆ. ಆದರೆ ನಮ್ಮ ಮುಖ ಬಿಸಿಲಿಗೆ ತೆರೆದಿರುತ್ತದೆ. ಮುಖದ ಚರ್ಮವು ನಿರಂತರವಾಗಿ ಅತಿ ನೇರಳೆ ಕಿರಣಗಳಿಗೆ ತೆರೆದುಕೊಂಡಿದ್ದರೆ ಚರ್ಮದ ಕಜ್ಜಿಗಳು ಅಥವಾ ಚರ್ಮದ ಕ್ಯಾನ್ಸರ್‌ ಕೂಡ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಗಡ್ಡವು ಮುಖದ ಕೆಳಭಾಗ ಮತ್ತು ಕುತ್ತಿಗೆಯನ್ನೂ ಮುಚ್ಚಿ ಬಿಸಿಲಿನಿಂದ ರಕ್ಷಿಸುತ್ತದೆ.

  ಸಾಕಷ್ಟು ವಿಶೇಷತೆ
  ಇಂತಹ ಗಡ್ಡದ ಬಗ್ಗೆ ಇತ್ತೀಚಿನ ಸಾಕಷ್ಟು ಕ್ರೇಜ್‌ ಹುಟ್ಟು ಹಾಕಿದೆ. ಗಡ್ಡ ಬಿಡೋದು, ಮೀಸೆ ಬಿಡೋದು ಫ್ಯಾಷನ್‌ ಆಗಿ ಬಿಟ್ಟಿದೆ. ಅದೊಂದು ರೀತಿಯಲ್ಲಿ ಟ್ರೆಂಡ್​ ಆಗ್ಬಿಟ್ಟಿದೆ ಎಲ್ಲಿ ನೋಡಿದ್ರೂ ಗಡ್ಡಧಾರಿ ವ್ಯಕ್ತಿಗಳೇ ಕಾಣಿಸುತ್ತಾರೆ. ಅದರಲ್ಲೂ ಪೇಪರ್‌ ಸಾಲ್ಟ್‌ ಗಡ್ಡಕ್ಕೆ ಯುವತಿಯರು ಫಿದಾ ಆಗ್ಬಿಟ್ಟಿದ್ದಾರೆ. ಅಂತಹ ಗಡ್ಡಧಾರಿಗಳಿಗಾಗಿ ದೆಹಲಿಯಲ್ಲಿ ನಡೆದ ಬಿಯರ್‌ ಶೋ ಸಾಕಷ್ಟು ವಿಶೇಷತೆಗಳಿಂದ ಕೂಡಿತ್ತು.

  ಇಷ್ಟು ದಿನ ವಿದೇಶಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದ ಈ ಶೋ ಭಾರತದಲ್ಲೂ ನಿಧಾನವಾಗಿ ಜನಪ್ರಿಯತೆ ಗಳಿಸುತ್ತಿದೆ. ದೆಹಲಿಯಲ್ಲಿ ಗಡ್ಡಧಾರಿಗಳಿಗಾಗಿಯೇ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದು ದೇಶದಲ್ಲಿ ನಡೆದ ನಾಲ್ಕನೇ ಆವೃತ್ತಿಯ ಸ್ಪರ್ಧೆ. ಇದಕ್ಕೂ ಮುನ್ನ ಮೂರು ಆವೃತ್ತಿಗಳು ನಡೆದಿವೆ. ಮೊದಲ ಆವೃತ್ತಿ ನಡೆದಿರುವುದು ನಮ್ಮ ಬೆಂಗಳೂರಿನ ಯುಬಿ ಸಿಟಿಯಲ್ಲಿ ಎಂಬುದು ವಿಶೇಷವೇ ಸರಿ.

  ಏಳು ವಿಭಾಗದಲ್ಲಿ ಸ್ಪರ್ಧೆ
  ಈ ಸ್ಪರ್ಧೆಗೆ 128 ಅರ್ಹ ಸ್ಪರ್ಧಿಗಳನ್ನು ಆಹಾನಿಸಲಾಗಿತ್ತು. ಅದರಲ್ಲಿ 25 ರಿಂದ 60ರ ವರೆಗಿನ ವಯೋಮಾನದವರು ಇದ್ರು. ದೆಹಲಿ, ಕಾಶ್ಮೀರ, ಮಾಹಾರಾಷ್ಟ್ರ, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಸ್ಪರ್ಧಿಗಳು ಪಾಲ್ಗೊಂಡಿದ್ರು. ಒಟ್ಟು ಏಳು ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಒಂದೊಂದು ವಿಭಾಗದ ಸ್ಪರ್ಧೆಯೂ ಅತ್ಯಾಕರ್ಷಕವಾಗಿತ್ತು. ನೋಡುಗರಿಗೆ ಪಕ್ಕಾ ಮನರಂಜನೆ ನೀಡುವಂತಿತ್ತು. ಒಟ್ಟು ಏಳು ವಿಭಾಗದಲ್ಲಿ ಸ್ಪರ್ಧೆ ನಡೆದಿದೆ. ಎಲ್ಲಾ ವಿಭಾಗದಲ್ಲಿಯೂ ತೀವ್ರ ಸ್ಪರ್ಧೆ ಇತ್ತು. ಅದರಲ್ಲಿ ಉತ್ತಮ ಗಡ್ಡಧಾರಿ ಸ್ಪರ್ಧೆಯಲ್ಲಿ ನಿರ್ಭಯ್ ಗುಜ್ಜರ್‌ ಫಸ್ಟ್‌ ಪ್ಲೇಸ್‌ ಬಂದಿದ್ರೆ, ಕೇರಳದಿಂದ ಬಂದಿದ್ದ ಪ್ರವೀಣ್ ಪರಮೇಶ್ವರ್ ಅತಿ ಉದ್ದದ ಗಡ್ಡಧಾರಿ ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡ್ರು. ಬರೀ ಗಡ್ಡ ಮಾತ್ರವಲ್ಲ.. ಅತಿ ಉದ್ದದ ಮೀಸೆ ವಿಭಾಗದಲ್ಲಿ ವಿಶಾಲ್‌ ಮೊದಲ ಸ್ಥಾನ ಪಡೆದಿದ್ದಾರೆ. ಅತಿ ಉದ್ದದ ಸುರುಳಿ ಮೀಸೆ ಅನ್ನೋ ಪ್ರಶಸ್ತಿನ್ನು ದಕ್ಷ್ ಚೌದ್ರಿ ಬಾಚಿಕೊಂಡ್ರು. ಇನ್ನೂ ಕಪ್ಪು ಬಿಳುಪು ಗಡ್ಡಧಾರಿ ವಿಭಾಗದಲ್ಲಿ ನಿತಿನ್ ಅನ್ನೋರು ಟಾಪ್‌ ಪ್ಲೇಸ್‌ನಲ್ಲಿ ಬಂದ್ರು. ಫಂಕಿ ಗಡ್ಡಧಾರಿ ವಿಭಾಗದಲ್ಲಿ ಆಯುಷ್‌ ಮೊದಲ ಸ್ಥಾನ ಪಡೆದ್ರು. ಬಿಯರ್ಡ್‌ ಆಯಂಡ್‌ ಬಾಡಿ ವಿಭಾಗದಲ್ಲಿ ಅಕ್ಷಯ್‌ ಫಸ್ಟ್‌ ಪ್ಲೇಸ್‌ನಲ್ಲಿ ವಿಜೇತರಾದರು.

  ಇದನ್ನು ಓದಿ:World Beard Day 2021: ಗಡ್ಡ ಬಿಡುವ ಯುವಕರೇ... ಸದ್ಯ ಟ್ರೆಂಡಿಂಗ್​ನಲ್ಲಿರುವ ಬಿಯರ್ಡ್ ಲುಕ್ ಇಲ್ಲಿದೆ

  ತರಾವೇರಿ ಪ್ರದರ್ಶನ
  ಸ್ಪರ್ಧಿಗಳು ಕ್ಯಾಟ್‌ವಾಕ್‌ ಮಾಡಿ ತಮ್ಮ ಗಡ್ಡವನ್ನು ತರಾವೇರಿ ಪ್ರದರ್ಶಸಿದ್ದರೇ, ಯಲ್ಲಿ , ಮೀಸೆ ಹೇಗೆ ಸುಂದರವಾಗಿದೆ ಅನ್ನೋದನ್ನು ತೋರಿಸಿದ್ದಾರೆ.
  ಮನೆ ಬಿಟ್ಟು ಹೊರ ಹೋಗುವ ಸ್ಥಿತಿಯೂ ಇರಲಿಲ್ಲ. ಸಲೂನ್‌ ಶಾಪ್‌ಗಳು ಓಪನ್‌ ಇರಲಿಲ್ಲ. ಇಂತಹ ಸಂದರ್ಭದಲ್ಲಿಯೇ ಮನುಷ್ಯರು ನಾನಾ ರೀತಿಯ ಹವ್ಯಾಸ ಕಲಿತಿದ್ದಾರೆ. ಅದೇ ರೀತಿ ಬಿಯರ್ಡ್‌ ಸ್ಪರ್ಧೆಯಲ್ಲಿ ಪಾಲ್ಗೊಂಡ ಗಡ್ಡಧಾರಿಗಳು ಕೂಡ ತಾವು ಲಾಕ್‌ಡೌನ್‌ ಟೈಮ್‌ನಲ್ಲಿ ಗಡ್ಡವನ್ನು ಸ್ಟೈಲೀಶ್‌ ಆಗಿ ಬಿಡೋದನ್ನು ಕಲಿತೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು. ಇಂದು ಅದೇ ಹವ್ಯಾಸ ಶೋಗೆ ಸ್ಪೂರ್ತಿಯಾಯಿತು
  Published by:vanithasanjevani vanithasanjevani
  First published: