Ajio: ಅಜಿಯೋ ಆಲ್ ಸ್ಟಾರ್ಸ್ ಸೇಲ್ ಪ್ರಾರಂಭ​! ಗ್ರಾಹಕರಿಗಾಗಿ ಭರ್ಜರಿ ಉಡುಗೊರೆ

ವೈವಿಧ್ಯಮಯ ಬ್ರಾಂಡ್‌ಗಳ ಹೊರತಾಗಿ, ಆಲ್-ಸ್ಟಾರ್ಸ್ ಸೇಲ್ ಸಮಯದಲ್ಲಿ ಅಜಿಯೋ ಅಪ್ಲಿಕೇಶನ್‌ನಲ್ಲಿ ಈ ಹಿಂದೆಯೂ ಕಂಡಿರದ ಕೆಲವು ಅತ್ಯುತ್ತಮ ಡೀಲ್‌ಗಳನ್ನು ನಿರೀಕ್ಷಿಸಬಹುದು.

ಅಜಿಯೋ ಆಲ್ ಸ್ಟಾರ್ಸ್ ಸೇಲ್

ಅಜಿಯೋ ಆಲ್ ಸ್ಟಾರ್ಸ್ ಸೇಲ್

  • Share this:
    ಬೆಂಗಳೂರು, ಸೆಪ್ಟೆಂಬರ್ 17, 2022: ಭಾರತದ ಪ್ರಮುಖ ಆನ್‌ಲೈನ್ ಫ್ಯಾಷನ್ ಇ-ರಿಟೇಲರ್ ಆಗಿರುವ ಅಜಿಯೋದಿಂದ (Ajio), ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಸ್ಟಾರ್ ಬ್ರಾಂಡ್‌ಗಳನ್ನು (Star Brand) ಒಳಗೊಂಡ ಮತ್ತೊಂದು ಅದ್ದೂರಿಯಾದ ಪ್ರಸ್ತುತಿ ಬರುತ್ತಿದೆ. ಇಲ್ಲಿನ ಸಂಗ್ರಹಗಳು ಮತ್ತು ಸಾಟಿಯಿಲ್ಲದ ಡೀಲ್‌ಗಳು (Deals) ಗ್ರಾಹಕರ ಆಸೆಗಳನ್ನು ಬಡಿದೆಬ್ಬಿಸುತ್ತವೆ. ಅಜಿಯೋ ಆಲ್ ಸ್ಟಾರ್ಸ್ ಸೇಲ್ ಈಗ ಸೆಪ್ಟೆಂಬರ್ 16 ರಿಂದ 25 ರವರೆಗೆ ಲೈವ್ ಆಗಿದೆ. 

    3500+ ಉನ್ನತವಾದ ಭಾರತೀಯ ಹಾಗೂ ಅಂತರರಾಷ್ಟ್ರೀಯ ಫ್ಯಾಷನ್ ಬ್ರಾಂಡ್‌ಗಳಲ್ಲಿ 1 ದಶಲಕ್ಷಕ್ಕೂ ಹೆಚ್ಚು ಸ್ಟೈಲ್‌ಗಳು 50-90% ರಿಯಾಯಿತಿಯಲ್ಲಿ ಲಭ್ಯವಾಗಲಿವೆ. ಮೊದಲ ಬಾರಿಗೆ ಗ್ರಾಹಕರು ಆ್ಯಪ್ ಗೆ ಸೈನ್ ಅಪ್ ಮಾಡಿಕೊಂಡಾಗ ತಕ್ಷಣ ₹ 500 ರಿಯಾಯಿತಿ ಪಡೆಯುತ್ತಾರೆ.

    ಪಾಶ್ಚಾತ್ಯ ಉಡುಗೆಗಳು, ಡೆನಿಮ್‌ಗಳು, ಸ್ನೀಕರ್‌ಗಳು, ಅಥ್ಲೀಶರ್, ಎಥ್ಲೀಶರ್, ಸಾಂಪ್ರಾದಾಯಿಕ ಉಡುಗೆ ಮತ್ತು ಹೆಚ್ಚಿನವುಗಳಲ್ಲಿ ಅಜಿಯೋ ಐಕಾನಿಕ್ ಬ್ರಾಂಡ್‌ಗಳ ಗಮ್ಯಸ್ಥಾನವಾಗಿದೆ. ಅಡಿಡಾಸ್, ನೈಕ್, ಸೂಪರ್ಡ್ರಿ, ಸ್ಟೀವ್ ಮ್ಯಾಡೆನ್, ಲೆವಿಸ್, ಮಾರ್ಕ್ಸ್ & ಸ್ಪೆನ್ಸರ್, ಅರ್ಮಾನಿ ಎಕ್ಸ್ಚೇಂಜ್, ಮಾವಿ, ರಿತು ಕುಮಾರ್, ಡಬ್ಲ್ಯೂ, ಮಸಾಬಾ, ಮುಜಿ ಮತ್ತು ಇನ್ನೂ ಹೆಚ್ಚಿನ ಹೆಸರುಗಳನ್ನು ಒಳಗೊಂಡಿರುವ ಅದ್ದೂರಿಯ ಬ್ರಾಂಡ್ ಲೈನ್ಅಪ್‌ನಲ್ಲಿ ಕಂಡು ಕೇಳರಿಯದ ಡೀಲ್‌ಗಳನ್ನು ನಿರೀಕ್ಷಿಸಿ.

    ಜನಪ್ರಿಯ ಸ್ಟೈಲ್‌ಗಳಲ್ಲಿ ಅಲಂಕರಿಸಲ್ಪಟ್ಟ ಬಾಲಿವುಡ್ ನ ಹೆಸರಾಂತ ತಾರೆಗಳು ಅಜಿಯೋ ಆಲ್ ಸ್ಟಾರ್ಸ್ ಸೇಲ್‌ನ ಮರಳುವಿಕೆಯ ಬಗ್ಗೆ ಮಾತನಾಡಲು 'ಬೀದಿಗಳಿಗೆ' ಬಂದಿದ್ದಾರೆ. ಶ್ರದ್ಧಾ ಕಪೂರ್, ವಾಣಿ ಕಪೂರ್, ಜಿಮ್ ಸರ್ಭ್ ಮತ್ತು ಬಾದ್ ಶಾ ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಧೂಳೆಬ್ಬಿಸುತ್ತಿರುವ ಇತ್ತೀಚಿನ ಅಜಿಯೋ ಅಭಿಯಾನದ ತಾರಾಬಳಗದಲ್ಲಿದ್ದಾರೆ.

    ಇದನ್ನೂ ಓದಿ: Amazon Washing Machine Offer: ವಾಷಿಂಗ್​ ಮೆಷಿನ್​ಗಳ ಮೇಲೆ ಅದ್ಭುತ ಕೊಡುಗೆ! ಎಕ್ಸ್​ಚೇಂಜ್​ ಆಫರ್​ ಜೊತೆಗೆ ರಿಯಾಯಿತಿ ಬೆಲೆಗೂ ಖರೀದಿಸಬಹುದು

    ವೈವಿಧ್ಯಮಯ ಬ್ರಾಂಡ್‌ಗಳ ಹೊರತಾಗಿ, ಆಲ್-ಸ್ಟಾರ್ಸ್ ಸೇಲ್ ಸಮಯದಲ್ಲಿ ಅಜಿಯೋ ಅಪ್ಲಿಕೇಶನ್‌ನಲ್ಲಿ ಈ ಹಿಂದೆಯೂ ಕಂಡಿರದ ಕೆಲವು ಅತ್ಯುತ್ತಮ ಡೀಲ್‌ಗಳನ್ನು ನಿರೀಕ್ಷಿಸಬಹುದು. ಗ್ರಾಹಕರು ಸೂಪರ್ ಫಾಸ್ಟ್ ಡೆಲಿವರಿ, ಮನೆ ಬಾಗಿಲಿಗೆ ಮರುಪಾವತಿ ಮತ್ತು ಸುಲಭ ವಿನಿಮಯದಂತಹ ಹೆಚ್ಚುವರಿ ಸೌಲಭ್ಯಗಳನ್ನು ಆನಂದಿಸಬಹುದಾಗಿದ್ದು ಇದು ಅಜಿಯೋದ ಕೊಡುಗೆಯನ್ನು ಇನ್ನಷ್ಟು ಆಕರ್ಷಣೀಯವಾಗಿಸುತ್ತದೆ.

    ಇದನ್ನೂ ಓದಿ: Bigg Boss Season 9: ಒಟಿಟಿಯಿಂದ ಬಿಗ್ ಬಾಸ್​ಗೆ ಹೊರಟ ಸ್ಪರ್ಧಿಗಳು; ಸೀಸನ್ 9ರಲ್ಲಿ ಈ ನಾಲ್ವರು ಇರ್ತಾರೆ!

    ಭಾರತೀಯ ಮಾರಾಟ ಋತುವು ಬರುತ್ತಿದ್ದ ಹಾಗೆ, ಅಜಿಯೋ ಆಲ್ ಸ್ಟಾರ್ಸ್ ಸೇಲ್ ಈ ಋತುವಿನಲ್ಲಿ ನಿಮ್ಮ ಫ್ಯಾಷನ್ ಶಾಪಿಂಗ್ ಅಗತ್ಯಗಳಿಗೆ ಏಕಮೇವ ಸ್ಥಳವಾಗಿದೆ ಎಂದು ಸಾಬೀತುಪಡಿಸುತ್ತಿದೆ! ನಿಮ್ಮ ಮೊಬೈಲ್ ಫೋನ್‌ಗಳಲ್ಲಿ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಅಜಿಯೋ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಫ್ಯಾಷನ್ ಕಿರೀಟಕ್ಕೆ ಇನ್ನೊಂದು ಗರಿ ಸೇರಿಸಿ.
    Published by:Harshith AS
    First published: