ನಿವೃತ್ತಿ ನಿಧಿಯನ್ನು ಯಾವ ರೀತಿ ಖರ್ಚುಮಾಡಬೇಕು? ಹೂಡಿಕೆಯನ್ನು ಯಾವ ರೀತಿ ಮಾಡಬೇಕು?

ನಿವೃತ್ತಿ ಹಣವನ್ನು ನೀವು ವ್ಯಯಿಸುವ ಮುನ್ನ ನಿಮ್ಮ ಮುಂದಿರುವ ಯೋಜನೆ 30:30:30:10 ಎಂಬ ಯೋಜನೆಯಾಗಿರಬೇಕು ಎಂಬುದಾಗಿ ಈ ಲೇಖನದ ಲೇಖಕಿ ತಿಳಿಸುತ್ತಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನಿವೃತ್ತಿ ನಿಧಿಯನ್ನು ನೀವು ಹೇಗೆ ವ್ಯಯಿಸಬೇಕು ಎಂಬುದು ಇಂದಿನ ಲೇಖನದ ಮುಖ್ಯ ಅಂಶವಾಗಿದ್ದು ನಿಮ್ಮ ವೈಯಕ್ತಿಕ ಖರ್ಚುಗಳಿಗೆ ಈ ಹಣವನ್ನು ಖರ್ಚುಮಾ ಡುವ ಮುನ್ನ ಹೂಡಿಕೆಯತ್ತ ಕೂಡ ಗಮನ ನೀಡುವುದು ಅಗತ್ಯವಾಗಿದೆ. ಈ ಸಮಯದಲ್ಲಿ ಹೂಡಿಕೆ ಮಾಡುವುದು ಅಗತ್ಯವಲ್ಲವೆಂದು ನಿಮಗನ್ನಿಸಿದಲ್ಲಿ ಈ ಲೇಖನ ಹೂಡಿಕೆಯು ಏಕೆ ಅಗತ್ಯ ಎಂಬುದನ್ನು ವಿವರಿಸುತ್ತದೆ. ನಿವೃತ್ತಿ ಹಣವನ್ನು ನೀವು ವ್ಯಯಿಸುವ ಮುನ್ನ ನಿಮ್ಮ ಮುಂದಿರುವ ಯೋಜನೆ 30:30:30:10 ಎಂಬ ಯೋಜನೆಯಾಗಿರಬೇಕು ಎಂಬುದಾಗಿ ಈ ಲೇಖನದ ಲೇಖಕಿ ತಿಳಿಸುತ್ತಾರೆ. ನಿವೃತ್ತಿ ನಿಧಿಯಲ್ಲಿ 30% ಮಕ್ಕಳಿಗಾಗಿ ಇನ್ನು 30% ನಿಮ್ಮ ಭವಿಷ್ಯದ ಸುರಕ್ಷತೆಗಾಗಿ 30% ನಿಮ್ಮ ನಿವೃತ್ತಿಯ ನಂತರ ವ್ಯಯಿಸಲು ಹಾಗೂ ಬಳಕೆಗೆ ಹಾಗೂ ಇನ್ನು 10% ವನ್ನು ತುರ್ತು ಸಂದರ್ಭಗಳಿಗಾಗಿ ಮೀಸಲಿರಿಸುವುದು ಬುದ್ಧಿವಂತಿಕೆಯಾಗಿದೆ.

ಈ ಸಂದರ್ಭದಲ್ಲಿ ಹೂಡಿಕೆಯ ಬಗ್ಗೆಯೂ ನಾವು ಗಮನಹರಿಸಬೇಕಾಗಿದ್ದು ಸ್ಟಾಕ್‌ಗಳು, ಬ್ಯಾಂಕ್ ಠೇವಣಿಗಳು, ಸಾಲ ಮತ್ತು ಲಿಕ್ವಿಡ್ ಮ್ಯೂಚುವಲ್ ಫಂಡ್‌ಗಳು ಹೂಡಿಕೆಯ ಪಟ್ಟಿಯಲ್ಲಿರಬೇಕು. ನಿವೃತ್ತಿಯಾದವರಿಗೆ ಟ್ರ್ಯಾಕ್ ರೆಕಾರ್ಡ್ ಹಾಗೂ ನಿರ್ವಹಣೆ ಗುಣಮಟ್ಟ ಅತಿಮುಖ್ಯವಾಗಿರುವುದರಿಂದ ಪ್ರತಿಯೊಂದು ಚಲನವಲನೆಗಳನ್ನು ಟ್ರ್ಯಾಕ್ ಮಾಡುವುದರ ಬದಲಿಗೆ ಆದಷ್ಟು ಹೂಡಿಕೆಗಳನ್ನು ಸರಳವಾಗಿರಿಸುವುದು ಉತ್ತಮವಾಗಿದೆ. ಲೇಖಕಿಯು ತಮ್ಮ ನಿವೃತ್ತ ಗೆಳತಿಗೆ ಆರ್ಥಿಕತೆಯ ಕುರಿತು ಪ್ರಮುಖ ಅಂಶಗಳನ್ನು ನೀಡಿದ್ದು ನಿವೃತ್ತಿಯ ನಿಧಿಯನ್ನು ಜಾಗರೂಕವಾಗಿ ಖರ್ಚುಮಾಡುವ ಕುರಿತು ಮಾಹಿತಿ ನೀಡಿದ್ದಾರೆ.

ಲೇಖಕರ ಸ್ನೇಹಿತೆಗೆ ನಿವೃತ್ತ ನಿಧಿಯನ್ನು ಉತ್ತಮ ಯೋಜನೆಗಳಲ್ಲಿ ಹೂಡಿಕೆ ಮಾಡುವ ಇರಾದೆಯನ್ನು ಹೊಂದಿದ್ದರು. ಆಕೆಯ ಮಗಳು ಉತ್ತಮ ಉದ್ಯೋಗದಲ್ಲಿದ್ದರೂ ಆಕೆಯ ಸುಭದ್ರ ಭವಿಷ್ಯಕ್ಕಾಗಿ ಕೂಡ ನಿಧಿಯನ್ನು ಕಾಪಿಡಬೇಕು ಎಂಬುದು ಆಕೆಯ ಬಯಕೆಯಾಗಿತ್ತು. ತಾನು ಕಷ್ಟಪಟ್ಟ ಹಾಗೆ ಮಗಳು ಕಷ್ಟಪಡಬಾರದು ಆಕೆ ಆರ್ಥಿಕವಾಗಿ ಬೆಂಬಲವನ್ನು ಹೊಂದಬೇಕು ಎಂಬುದು ಅವರ ಇಚ್ಛೆಯಾಗಿತ್ತು.

ಇದನ್ನೂ ಓದಿ: 45 Children Die In Firozabad| ಉತ್ತರಪ್ರದೇಶದಲ್ಲಿ 45 ಮಕ್ಕಳೂ ಸೇರಿ 53 ಜನ ಸಾವು; ಶಂಕಿತ ಢೆಂಗ್ಯೂ ಸಾಧ್ಯತೆ!

ಹೂಡಿಕೆ ಮಾಡುವ ಸಮಯದಲ್ಲಿ ಆರ್ಥಿಕ ಸಂಗ್ರಹಣೆಯೂ ಅಗತ್ಯವಾಗಿದ್ದು ನಿಮಗೆ ಬೇಡವೆಂದು ತೋರುವ ಕೆಲವೊಂದು ಅನಗತ್ಯ ಸೌಲಭ್ಯಗಳನ್ನು ಮಾರಿ ಅದರ ಹಣವನ್ನು ನೀವು ವಿನಯೋಗಿಸಬಹುದು. ನಿವೃತ್ತಿಯ ನಂತರವೂ ಕೂಡ ನೀವು ಕೆಲವೊಂದು ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಲೇಖಕರ ಸ್ನೇಹಿತೆಯು ದೊಡ್ಡ ಫ್ಲಾಟ್‌ವೊಂದರಲ್ಲಿ ವಾಸವಾಗಿದ್ದರು. ಲೇಖಕರು ಈ ಸಮಯದಲ್ಲಿ ಫ್ಲಾಟ್ ಮಾರಿ ಆ ಹಣದಿಂದ ಯೋಜನೆಗಳಿಗೆ ಹೂಡಿಕೆ ಮಾಡಬಹುದೆಂಬ ಉಪಾಯವನ್ನು ತಿಳಿಸಿಕೊಟ್ಟರು.

ನಿವೃತ್ತಿಯ ಸಮಯದಲ್ಲಿ ನಿವೃತ್ತಿ ನಿಧಿಯನ್ನು ಬೇಕಾಬಿಟ್ಟಿಯಾಗಿ ಖರ್ಚುಮಾಡುವ ಬದಲಿಗೆ ಯೋಜನಾಬದ್ಧವಾಗಿ ಹಣ ವಿನಿಯೋಗಿಸಿ ಎಂಬುದು ಲೇಖಕರ ಅಭಿಪ್ರಾಯವಾಗಿದೆ. ವ್ಯರ್ಥಖರ್ಚುಗಳನ್ನು ಮಾಡದೆಯೇ ಉತ್ತಮ ನಿವೃತ್ತಿ ಯೋಜನೆಗಳಲ್ಲಿ ನಿವೃತ್ತಿ ನಿಧಿಯನ್ನು ಹೂಡಿಕೆ ಮಾಡುವುದು ಅತ್ಯುತ್ತಮವಾಗಿದೆ ಎಂದು ಲೇಖಕರು ತಿಳಿಸಿದ್ದಾರೆ.

ಇದನ್ನೂ ಓದಿ: DK Shivakumar| '60 ವರ್ಷಗಳಲ್ಲಿ ಕಾಂಗ್ರೆಸ್​ ಏನ್ ಮಾಡ್ತು ಎಂದವರು ಇಂದು ಎಲ್ಲವನ್ನೂ ಮಾರುತ್ತಿದ್ದಾರೆ'; ಡಿಕೆ ಶಿವಕುಮಾರ್ ಕಿಡಿ

30:30:30:10% ಈ ರೀತಿಯಲ್ಲಿ ನಿವೃತ್ತಿ ನಿಧಿಯನ್ನು ವಿನಿಯೋಗಿಸುವುದು ಅತಿಮುಖ್ಯವಾಗಿದೆ. ಮಕ್ಕಳ ಭವಿಷ್ಯ, ನಿಮ್ಮ ಖರ್ಚು, ಇತರ ಪ್ರಯಾಣ ಅವಶ್ಯಕತೆಗಳು ಮೊದಲಾದ ಅಗತ್ಯಗಳಿಗೆ ಖರ್ಚುಮಾಡಿ ಎಂಬುದು ಲೇಖಕರ ಅಭಿಪ್ರಾಯವಾಗಿದೆ. ನಿವೃತ್ತಿ ನಿಧಿ ಎಂಬುದು ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ನಿಧಿಯಾಗಿದ್ದರೂ ಬೇಕಾಬಿಟ್ಟಿಯಾಗಿ ವ್ಯಯಿಸಬಾರದು ಎಂಬುದು ಲೇಖಕರ ಅಭಿಪ್ರಾಯವಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published: