Exam Fear: ಟೆನ್ಶನ್ ಇಲ್ಲದೆ ಪರೀಕ್ಷೆ ಎದುರಿಸೋಕೆ ಇಲ್ಲಿದೆ ಸರಳ ಸೂತ್ರಗಳು, ಆರಾಮಾಗಿ ಪರೀಕ್ಷೆ ಬರೆಯಿರಿ!

ಕೆಲವೊಮ್ಮೆ ವಿದ್ಯಾರ್ಥಿಗಳ ಒತ್ತಡದ ಓದಿನಿಂದ  ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ಒತ್ತಡವನ್ನು ನಿಭಾಯಿಸಲು ಕೆಲವು ಸಲಹೆಯನ್ನು ಇಲ್ಲಿ ನೀಡಲಗಿದೆ.

ಪ್ರಾತಿನಿಧಿಕ ಚಿತ್ರ (ಗೂಗಲ್)

ಪ್ರಾತಿನಿಧಿಕ ಚಿತ್ರ (ಗೂಗಲ್)

  • Share this:
    ರಾಜ್ಯದಲ್ಲಿ ಇಂದು ಎಸ್​​ಎಸ್​ಎಲ್​ಸಿ ಪರೀಕ್ಷೆ ಆರಂಭಗೊಂಡಿದೆ. 8,76,581 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆ ಎಂದೊಡನೆ ಮಕ್ಕಳಲ್ಲಿ ಕೊಂಚ ಭಯ ಆವರಿಸುತ್ತದೆ. ಉತ್ತಮ ಅಂಕ ಪಡೆಯಲು ನಿದ್ದೆಗೆಟ್ಟು ಓದಿರುತ್ತಾರೆ. ಆದರೆ ಕೆಲವೊಮ್ಮೆ ವಿದ್ಯಾರ್ಥಿಗಳ ಒತ್ತಡದ ಓದಿನಿಂದ  ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ಒತ್ತಡವನ್ನು ನಿಭಾಯಿಸಲು ಕೆಲವು ಸಲಹೆಯನ್ನು ಇಲ್ಲಿ ನೀಡಲಗಿದೆ.

    ವಾಸ್ತವಿಕ ಗುರಿಯನ್ನು ಹೊಂದಿರಿ

    ವಿದ್ಯಾರ್ಥಿಗಳು ಸರಿಯಾದ ಗುರಿಯನ್ನು ಇಟ್ಟುಕೊಳ್ಳಿ. ನಂತರ ಗುರಿ ತಲುಪಲು ಸರಿಯಾದ ಮಾರ್ಗ ಕಂಡುಕೊಳ್ಳಿ. ಶಿಕ್ಷಕರು, ಪೋಷಕರ ಸಹಾಯ ಪಡೆದು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ಪ್ರಯತ್ನಿಸಿ.

    ಸಮಯ ನಿರ್ವಹಣೆ

    ಸಮಯದ ಬಗ್ಗೆ ಹೆಚ್ಚು ಜ್ನಾನ ಬೆಳೆಸಿಕೊಳ್ಳಿ. ಸಮಯದ ಕೊರತೆಯಾದಗ ಒತ್ತಡ ಹೆಚ್ಚಾಗುತ್ತದೆ. ಸರಿಯಾಗಿ ಅಧ್ಯಯನ ಮಾಡಿದರೆ ಇಂತಹ ಒತ್ತಡಗಳು ಬೀಳುವುದಿಲ್ಲ. ವೇಳಾಪಟ್ಟಿ ರಚಿಸಿ ಅದಕ್ಕೆ ಇಂತಿಷ್ಟು ಸಮಯವಕಾಶ ನೀಡಿ ಓದಬೇಕು.

    ಆರೋಗ್ಯಕರ ಮನಸ್ಥಿತಿ

    ನಿಮಗೆ ಗೊತ್ತಿಲ್ಲದ ಮತ್ತು ಉತ್ತರ ಸಿಗದ ಅನೇಕ ಪ್ರಶ್ನೆಗಳಿರಬಹುದು. ಅಂತಹ ಪ್ರಶ್ನೆಗಳಿದ್ದರೆ ಪೋಷಕರ ಮತ್ತು ಶಿಕ್ಷಕರ ಸಲಹೆ ಪಡೆದು ಉತ್ತರ ಪಡೆಯಿರಿ. ಮನಸ್ಸು ನೆಮ್ಮದಿಯಾಗಿದ್ದರೆ ಯಾವುದೇ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ.

    ಪ್ರೇರಣೆ

    ನೀವು ದಿನದಲ್ಲಿ ಏನು ಮಾಡಿದ್ದೀರಿ ಎಂದು ನೆನಪಿಸಿಕೊಳ್ಳಿ. ವಾಸ್ತವಿಕ ಗುರಿಯ ಜತೆಗೆ ದಿನದ ಕೆಲಸ ಹೆಚ್ಚಿಸಿಕೊಳ್ಳಿ. ಪ್ರತಿ ದಿನ ಸಾಧನೆ ಪಟ್ಟಿ ತಯಾರಿಸಿ. ಇವು ನಿಮ್ಮ ಪ್ರೇರಣೆಯನ್ನು ಹೆಚ್ಚಿಸುತ್ತದೆ.

    ಅಸ್ತವ್ಯಸ್ತ

    ಮೇಜಿನ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳು ವಿದ್ಯಾರ್ಥಿಯ ಮನಸ್ಸನ್ನು ಸೂಚಿಸುತ್ತದೆ. ಹಾಗಾದಾಗ ಮೆದುಳು ನಿಮ್ಮನ್ನು ದುರ್ಬಲಗೊಳಿಸುತ್ತದೆ ಮತ್ತು ಒತ್ತಡಕ್ಕೆ ಕಾರಣವಾಗುತ್ತದೆ.

    ವ್ಯಾಯಾಮ ಮಾಡಿ

    ವಾರದಲ್ಲಿ ಮೂರು ದಿನ ಅಥವಾ 5 ದಿನ ಜಾಗಿಂಗ್​, ವಾಕಿಂಗ್​, ಏರೋಬಿಕ್ಸ್​ನಂತಹ  ವ್ಯಾಯಾಮಾ ಮಾಡಿರಿ. ಹೀಗಿದ್ದಾಗ ಮನಸ್ಸು ಶಾಂತ ಸ್ಥಿತಿಯಲ್ಲಿ ಇರುತ್ತದೆ. ಹೊಸ ಸ್ಪಷ್ಟ ಆಲೋಚನೆಗಳು ಬರಲು ಪ್ರೋತ್ಸಾಹಿಸುತ್ತದೆ.

    ವಿರಾಮಕ್ಕಾಗಿ ಓದಿ

    ಪಠ್ಯ ಪುಸ್ತಕಗಳನ್ನು ಹೊರತು ಪಡಿಸಿ ವಿರಾಮದ ನಡುವೆ ಅಥವಾ 15 ನಿಮಿಷಗಳ ಕಾಲ ಬೇರೆ ಪುಸ್ತಕಗಳನ್ನು ಓದಿ. ಇಂಟ್ರೆಸ್ಟಿಂಗ್​ ಇರುವ ಅಥವ ನಿಮ್ಮಿಷ್ಟದ ಕಥೆ ಪುಸ್ತಕ ಓದಿ. ಇದರಿಂದ ಮನಸ್ಸು ನೆಮ್ಮದಿಯಿಂದ ಇರುತ್ತದೆ.

    ಸಮಯವನ್ನು ಮೌಲ್ಯೀಕರಿಸಿ, ಕೆಲಸಕ್ಕೆ ಆದ್ಯತೆ ನೀಡಿ

    ವೇಳಾಪಟ್ಟಿ ರಚಿಸಿ, ಅದಕ್ಕೆ ಅನುಗುಣವಾಗಿ ದಿನದಲ್ಲಿ ಏನು ಮಾಡಬೇಕು. ಓದಲು ಎಷ್ಟು ಸಮಯ ನೀಡಬೇಕು ಎಂದು ಪಟ್ಟಿ ಮಾಡಿರಿ. ಇದರಿಂದ ಕೆಸಲಕ್ಕೆ ಹೆಚ್ಚಿನ ಒತ್ತು ನೀಡಿದಂತಾಗುತ್ತದೆ.

    ವಿಶ್ರಾಂತಿ ಪಡೆಯಿರಿ

    ಸಂಶೋದನೆ ಪ್ರಕಾರ ವಿದ್ಯಾರ್ಥಿಗಳಿಗೆ ನಿದ್ದೆ ಅವಶ್ಯಕ, ಸರಿಯಾದ ನಿದ್ರೆ ಮಾಡಿದರೆ ಓದಲು ಮತ್ತು ಏಕಾಗ್ರತೆ ಬರುತ್ತದೆ. ಇದು ಶೈಕ್ಷನಿಕ ಸಾಧನೆ ಮೇಲೆ ಪರಿಣಾಮ ಬೀರುತ್ತದೆ.

    ಸಂಗೀತವನ್ನು ಆಲಿಸಿ

    ಸಂಗೀತ ಮನಸ್ಸಿಗೆ ಶಾಂತಿ ಮುದನೀಡುತ್ತದೆ. ಓದಿ ಅಥವಾ ಹೆಚ್ಚು ಸುತ್ತಾದರೆ ಒಂದು ಬಾರಿ ಸಂಗೀತ ಆನಂದಿಸಿರಿ. ಸಂಗೀತ ಮೆದುಳಿಗೂ ವಿಶ್ರಾಂತಿ ನೀಡುತ್ತದೆ. ಜ್ನಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.
    Published by:Harshith AS
    First published: