Weekend Spots: ನಿಮ್ಗೆ ಮನೆಯಲ್ಲಿಯೇ ಇದ್ದು ಬೋರ್ ಆಗಿದ್ಯಾ? ಹಾಗಿದ್ರೆ ಬೆಂಗಳೂರಿಗೆ ಹತ್ತಿರ ಇರುವ ಈ 10 ಸ್ಥಳಗಳಿಗೆ ಭೇಟಿ ಕೊಡಿ

ಬೆಂಗಳೂರಿಗೆ ಹತ್ತಿರದಲ್ಲಿ, ವಾರಾಂತ್ಯ ರಜೆಯನ್ನು ನೀವು ನಿಸರ್ಗದ ಮಧ್ಯೆ ಕಳೆಯಲು ಅನುಕೂಲವಾಗುವಂತಹ ಸಾಕಷ್ಟು ಸುಂದರ ಸ್ಥಳಗಳು ಇವೆ. ಅಂತಹ ಹತ್ತು ಆಸಕ್ತಿದಾಯಕ ಮತ್ತು ಉಲ್ಲಾಸ ನೀಡುವ ಪ್ರವಾಸಿ ತಾಣಗಳ ಕುರಿತು ನಾವು ಇಲ್ಲಿ ಮಾಹಿತಿ ನೀಡಿದ್ದೇವೆ. ಈ ಸ್ಥಳಗಳಿಗೆ ಭೇಟಿ ನೀಡಿ ಮತ್ತು ವಾರಾಂತ್ಯದ ರಜೆಯ ಆನಂದವನ್ನು ಅನುಭವಿಸಿ.

ಬೆಂಗಳೂರಿಗೆ ಹತ್ತಿರ ಇರುವ 10 ಪ್ರವಾಸಿ ಸ್ಥಳಗಳು

ಬೆಂಗಳೂರಿಗೆ ಹತ್ತಿರ ಇರುವ 10 ಪ್ರವಾಸಿ ಸ್ಥಳಗಳು

  • Share this:
ವಾರಾಂತ್ಯ ಬಂದರೆ ಸಾಕು, ಶಾಪಿಂಗ್ ಮಾಲ್, ಹೊಟೇಲ್, ಪಬ್ ಎಂದು ಸುತ್ತಾಡುವ ವರ್ಗ ಒಂದೆಡೆಯಾದರೆ, ಇನ್ನು ಕೆಲವರಿಗೆ ವಾರವಿಡೀ ಕೆಲಸ (Work) ಮಾಡಿ, ವಾರಾಂತ್ಯದಲ್ಲಿ (Weekend) ಆರಾಮವಾಗಿ ಪ್ರಕೃತಿಯ ಮಡಿಲಲ್ಲಿ ವಿಶ್ರಾಂತಿ (Rest) ಪಡೆಯುವ ಆಸೆ ಇರುತ್ತದೆ. ಆದರೆ ಬೆಂಗಳೂರಿನಲ್ಲಿ (Bengaluru) ಇದ್ದುಕೊಂಡು ಅದು ಸಾಧ್ಯವೇ? ಇಲ್ಲಿನ ಬಹಮಹಡಿ ಕಟ್ಟಡಗಳು, ಜನದಟ್ಟಣೆ ಮತ್ತು ವಾಹನ ದಟ್ಟಣೆ, ಧ್ವನಿವರ್ಧಕ, ಕಟ್ಟಡ ಕಾಮಗಾರಿ ಹಾಗೂ ವಾಹನಗಳ ಕಿವಿಗಡಚ್ಚಿಕ್ಕುವ ಶಬ್ಧಗಳು ಇತ್ಯಾದಿಗಳ ನಡುವೆ ಖಂಡಿತಾ ಸಾಧ್ಯವಿಲ್ಲ. ದೂರ ಎಲ್ಲಾದರೂ ಪ್ರವಾಸ (Tour) ಹೋಗೋಣವೆಂದರೆ, ಪ್ರಯಾಣದಲ್ಲೇ ಇಡೀ ದಿನ ಕಳೆದು ಹೋಗುತ್ತದೆ ಎಂಬ ಅನಿಸಿಕೆ ಕೆಲವರದ್ದು.

ಅದು ನಿಜವೇ, ಎರಡು ದಿನಗಳ ರಜೆಯಲ್ಲಿ ಹೆಚ್ಚಿನ ಪಾಲನ್ನು ಪ್ರಯಾಣಕ್ಕೆ ಮೀಸಲಿಟ್ಟರೆ, ವಾರಾಂತ್ಯದ ವಿಶ್ರಾಂತಿಗೆ ಅರ್ಥವಿರುವುದಿಲ್ಲ. ವಿಶ್ರಾಂತಿಗಿಂತ ಸುಸ್ತೇ ಹೆಚ್ಚಾಗುತ್ತದೆ ಅಲ್ಲವೇ? ಹಾಗಂತ ಪ್ರಕೃತಿಯ ಮಡಿಲಲ್ಲಿ ವಿಶ್ರಾಂತಿ ಪಡೆಯವುದು ಸಾಧ್ಯವಿಲ್ಲ ಎಂದು ನಿರಾಸೆ ಪಡುವ ಅಗತ್ಯ ಖಂಡಿತಾ ಇಲ್ಲ.

ಬೆಂಗಳೂರಿಗೆ ಹತ್ತಿರದಲ್ಲಿ, ವಾರಾಂತ್ಯ ರಜೆಯನ್ನು ನೀವು ನಿಸರ್ಗದ ಮಧ್ಯೆ ಕಳೆಯಲು ಅನುಕೂಲವಾಗುವಂತಹ ಸಾಕಷ್ಟು ಸುಂದರ ಸ್ಥಳಗಳು ಇವೆ. ಅಂತಹ ಹತ್ತು ಆಸಕ್ತಿದಾಯಕ ಮತ್ತು ಉಲ್ಲಾಸ ನೀಡುವ ಪ್ರವಾಸಿ ತಾಣಗಳ ಕುರಿತು ನಾವು ಇಲ್ಲಿ ಮಾಹಿತಿ ನೀಡಿದ್ದೇವೆ. ಈ ಸ್ಥಳಗಳಿಗೆ ಭೇಟಿ ನೀಡಿ ಮತ್ತು ವಾರಾಂತ್ಯದ ರಜೆಯ ಆನಂದವನ್ನು ಅನುಭವಿಸಿ.

1. ನಂದಿಬೆಟ್ಟ
ವಾರಾಂತ್ಯದಲ್ಲಿ ವಿಹಾರ ಹೋಗಲು ಬೆಂಗಳೂರಿಗೆ ಅತ್ಯಂತ ಹತ್ತಿರದಲ್ಲಿರುವ ಸ್ಥಳಗಳಲ್ಲಿ ಅತ್ಯುತ್ತಮ ಆಯ್ಕೆ ನಂದಿಬೆಟ್ಟ. ಇದು ಬೆಂಗಳೂರು ನಗರದಿಂದ ಕೇವಲ 60 ಕಿ ಮೀ ದೂರದಲ್ಲಿದೆ. ವಾರಾಂತ್ಯದಲ್ಲಿ ಅಲ್ಲೇ ಉಳಿಯುವ ಯೋಜನೆ ನಿಮಗಿದ್ದರೆ ಅತಿಥಿಗೃಹಗಳು ಕೂಡ ಇವೆ. ನಿಮಗೆ ಕ್ಯಾಂಪಿಂಗ್‍ನಲ್ಲಿ ಆಸಕ್ತಿ ಇದ್ದರೆ, ಟೆಂಟ್ ಹಾಕಲು ನಂದಿ ಬೆಟ್ಟದಲ್ಲಿ ಬೇಕಾದಷ್ಟು ಜಾಗಗಳಿವೆ. ಹೈಕಿಂಗ್ ಮಾಡಲು ಅನುಕೂಲಕರವಾದ ದಾರಿಗಳಿವೆ. ನಂದಿ ಬೆಟ್ಟದಲ್ಲಿ ಕಣ್ಣಿಗೆ ತಂಪು ಮತ್ತು ಮನಸ್ಸಿಗೆ ಅಹ್ಲಾದ ನೀಡುವ ಸಾಕಷ್ಟು ನೋಟಗಳನ್ನು ನೀವು ಕಾಣಬಹುದು.

2. ಗಾಳಿಬೋರ್ ಫಿಶಿಂಗ್ ಕ್ಯಾಂಪ್
ಗಾಳಿಬೋರ್ ಫಿಶಿಂಗ್ ಕ್ಯಾಂಪ್ ಕರ್ನಾಟಕದ ಕನಕಪುರದಲ್ಲಿ ಇದೆ. ಅಂದರೆ, ಇದು ಬೆಂಗಳೂರಿನಿಂದ ಕೇವಲ 103 ಕಿ ಮೀ ದೂರದಲ್ಲಿದೆ. ಬೆಂಗಳೂರಿನಿಂದ ಇಲ್ಲಿಗೆ ತಲುಪಲು ಕೇವಲ ಎರಡು ಗಂಟೆ ಸಾಕು. ಹೆಸರೇ ಸೂಚಿಸುವಂತೆ, ಗಾಳಿಬೋರ್ ಫಿಶಿಂಗ್ ಕ್ಯಾಂಪ್. ಮೀನು ಹಿಡಿಯುತ್ತಾ ರಜೆ ಕಳೆಯಲು ಅತ್ಯುತ್ತಮ ಸ್ಥಳವಾಗಿದೆ ಎನ್ನಬಹುದು.

ಇದನ್ನೂ ಓದಿ: Tourist Place: ಬ್ರಿಟಿಷರಿಂದ ಪ್ರಸಿದ್ಧವಾದ ಭಾರತದ ಸುಂದರ ಗಿರಿಧಾಮಗಳಿಗೆ ನೀವೂ ಒಮ್ಮೆ ಭೇಟಿ ಕೊಡಿ

ನಿಮಗೆ ಮೀನು ಹಿಡಿಯುವದರಲ್ಲಿ ಯಾವುದೇ ಆಸಕ್ತಿ ಇಲ್ಲವೆಂದರೂ ಪರವಾಗಿಲ್ಲ, ನೀವದನ್ನು ಮಾಡದೆಯೂ ಇಲ್ಲಿ ಅರ್ಥಪೂರ್ಣವಾದ ರಜೆಯನ್ನು ಕಳೆಯಬಹುದು. ಏಕೆಂದರೆ, ಕಾವೇರಿ ನದಿಯ ತೀರದಲ್ಲಿ ಟೆಂಟ್ ಹಾಕಿಕೊಂಡು ದಿನ ಕಳೆಯುವುದು ಕೂಡ ನಿಮಗೆ ಆನಂದ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲಿ ನೀವು ಸಂಪೂರ್ಣವಾಗಿ ಪ್ರಕೃತಿಯ ಮಡಿಲಲ್ಲಿ ಆರಾಮವಾಗಿ ರಜೆಯ ಮಜವನ್ನು ಅನುಭವಿಸುವ ಸಂತೋಷವನ್ನು ಪಡೆಯಬಹುದು.

3. ಹಾರ್ಸ್ಲೀ ಹಿಲ್ಸ್
ಈ ಬೆಟ್ಟಗಳು ಕರ್ನಾಟಕ ಮತ್ತು ಆಂಧ್ರ ಪೆದೇಶದ ಗಡಿಯಲ್ಲಿವೆ. ಅಲ್ಲಿಗೆ ತಲುಪಲು ನೀವು ಸರಿ ಸುಮಾರು 160 ಕಿ ಮೀ ಪ್ರಯಾಣವನ್ನು ಮಾಡಬೇಕಾಗುತ್ತದೆ. ಆದರೆ ಇಲ್ಲಿ ತಲುಪಿದಾಗ ನಿಮ್ಮ ಪ್ರಯಾಣ ಖಂಡಿತಾ ವ್ಯರ್ಥವಾಗಿಲ್ಲ ಎಂಬುವುದನ್ನ ಅರ್ಥ ಮಾಡಿಕೊಳ್ಳುತ್ತೀರಿ. ಏಕೆಂದರೆ, ಹಾರ್ಸ್ಲೀ ಬೆಟ್ಟಗಳ ವಿಹಂಗಮ ದೃಶ್ಯಗಳು ನಿಮ್ಮ ವಾರಾಂತ್ಯದ ರಜೆಯ ಸಂತೋಷವನ್ನು ದುಪ್ಪಟ್ಟು ಮಾಡುತ್ತದೆ.

ಚಿಕ್ಕ ಅವಧಿಯ ಹೈಕಿಂಗ್‍ಗೆ ಇಲ್ಲಿ ಬಹಳಷ್ಟು ದಾರಿಗಳಿವೆ ಮತ್ತು ಆರಾಮವಾಗಿ ವಿಶ್ರಾಂತಿ ಪಡೆಯಲು ಇಲ್ಲಿ ಸಾಕಷ್ಟು ಸ್ಥಳಗಳಿವೆ. ಪಕ್ಷಿ ವೀಕ್ಷಣೆಯ ಬಗ್ಗೆ ನಿಮಗೆ ಆಸಕ್ತಿ ಇದ್ದಲ್ಲಿ, ಹಾರ್ಸ್ಲೀ ಹಿಲ್ಸ್‍ನಲ್ಲಿ ಕೆಲವು ಸುಂದರವಾದ ಕಾಡುಗಳನ್ನು ಹೊಂದಿದ್ದು, ಪಕ್ಷಿ ವೀಕ್ಷಣೆಗೆ ಹೇಳಿ ಮಾಡಿಸಿದ ಸ್ಥಳವಾಗಿದೆ.

4. ಹೊಗೇನಕಲ್, ತಮಿಳು ನಾಡು
ಹೊಗೇನಕಲ್ ತಮಿಳುನಾಡಿನ ಧರ್ಮಪುರಿಯಲ್ಲಿ ಇದೆ. ಬೆಂಗಳೂರಿಂದ ಅಲ್ಲಿಗೆ ಹೋಗಲು ಕೇವಲ 180 ಕಿ ಮೀ ದೂರ ಪ್ರಯಾಣಿಸಿದರೆ ಸಾಕು. ಸುಂದರ ಜಲಪಾತವನ್ನು ಹೊಂದಿರುವ ತಾಣವದು. ಅಲ್ಲಿ ನೀವು ಧುಮ್ಮಿಕ್ಕುವ ಜಲಪಾತದ ಶಬ್ಧವನ್ನು ಆಲಿಸುತ್ತಾ, ರಜಾದಿನದ ವಿಶ್ರಾಂತಿಯನ್ನು ಪಡೆಯಬಹುದು.

ಇಲ್ಲಿ ನೀವು ನದಿಯಲ್ಲಿ ಕೊರಾಕಲ್ ಬೋಟ್ ಅಥವಾ ತೆಪ್ಪದ ಸವಾರಿಯನ್ನು ಆನಂದಿಸಬಹುದು. ಅಲ್ಲಿ ನಿಮಗೆ ಉಳಿದುಕೊಳ್ಳಲು ಸ್ಥಳಗಳ ಕೊರತೆ ಖಂಡಿತಾ ಇಲ್ಲ. ಹೊಗೇನಕಲ್‍ಗೆ ಹೋದಾಗ ಚಿಕಿತ್ಸಕ ಮತ್ತು ದೇಹಕ್ಕೆ ಅತ್ಯಂತ ಆರಾಮ ನೀಡುವ ಎಣ್ಣೆ ಮಸಾಜ್‍ಗಳನ್ನು ಮಾಡಿಸಿಕೊಳ್ಳಲು ಖಂಡಿತಾ ಮರೆಯಬೇಡಿ.

5. ಬಿಆರ್ ಬೆಟ್ಟಗಳು
ಬಿಆರ್ ಬೆಟ್ಟಗಳು ಬೆಂಗಳೂರಿನಿಂದ ಸರಿ ಸುಮಾರು 175 ಕಿ ಮೀ ದೂರದಲ್ಲಿ ಇವೆ. ಅವುಗಳು ಬಿಳಿಗಿರಿ ರಂಗನ ಬೆಟ್ಟಗಳು ಎಂದು ಜನಪ್ರಿಯವಾಗಿದೆ. ಅದು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಆಫ್‍ರೋಡಿಂಗ್ ಡೆಸ್ಟಿನೇಶನ್‍ಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಬಿಳಿಗಿರಿ ರಂಗನ ಬೆಟ್ಟಗಳು, ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಸಂಧಿಸುವ ಜಾಗವಾಗಿದೆ.

ಇದನ್ನೂ ಓದಿ: Incredible India: ಭಾರತದ ಅದ್ಭುತ ಸೌಂದರ್ಯಕ್ಕೆ ನಾರ್ವೆ ಅಧಿಕಾರಿ ಫಿದಾ, ನೀವೂ ಫೋಟೋ ನೋಡಿ

ನಿಮಗೆ ವಾರಾಂತ್ಯದಲ್ಲಿ ಯಾವುದಾದರೂ ಸಾಹಸಮಯ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು ಎಂಬ ಮನಸ್ಸಿದ್ದರೆ, ನೀವು ರಿವರ್ ರಾಫ್ಟಿಂಗ್‍ಗೂ ಕೂಡ ಹೋಗಬಹುದು. ಜೊತೆಗೆ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗಸ್ವಾಮಿಯ ದೇವಸ್ಥಾನಕ್ಕೂ ಭೇಟಿ ನೀಡಬಹುದು.

6. ಯೆರ್ಕಾಡ್, ತಮಿಳು ನಾಡು
ಯೆರ್ಕಾಡ್ ತಮಿಳು ನಾಡಿನಲ್ಲಿದ್ದು, ಬೆಂಗಳೂರಿನಿಂದ ಈ ಜಾಗ ತಲುಪಲು 198 ಕಿ ಮೀಗಳನ್ನು ಕ್ರಮಿಸಬೇಕು. ಇದು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಗಿರಿಧಾಮಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಯೆರ್ಕಾಡ್ ಗಿರಿಧಾಮ ಪೂರ್ವ ಘಟ್ಟಗಳಲ್ಲಿ ಇದೆ. ವರ್ಷವಿಡೀ ಅಹ್ಲಾದಕರ ವಾತಾವರಣವನ್ನು ಹೊಂದಿರುವ ಈ ಗಿರಿಧಾಮದಲ್ಲಿ ನೀವು ಹಚ್ಚಹರಿಸಿದ ಅರಣ್ಯ ಪ್ರದೇಶ ಮತ್ತು ಕಾಫಿ ತೋಟಗಳ ಅತ್ಯಂತ ಮನಮೋಹಕ ನೋಟವನ್ನು ಆನಂದಿಸಲು ಸಾಧ್ಯವಿದೆ.

7. ಚಿಕ್ಕಮಗಳೂರು
ಚಿಕ್ಕಮಗಳೂರು ಕರ್ನಾಟಕದ ಅತ್ಯಂತ ರಮಣೀಯ ಮತ್ತು ಜನಪ್ರಿಯ ಗಿರಿಧಾಮಗಳಲ್ಲಿ ಒಂದಾಗಿದೆ. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತಲುಪಲು ಸುಮಾರು 242 ಕಿ ಮೀ ದೂರ ಪ್ರಯಾಣಿಸಬೇಕು. ಈ ಗಿರಿಧಾಮವು ಸುಂದರ ಕಾಫಿ ತೋಟಗಳು, ಸಮೃದ್ಧವಾದ ಹಚ್ಚ ಹಸಿರಿನ ಅರಣ್ಯಗಳು ಮತ್ತು ಸುತ್ತಲೂ ಸುತ್ತುವರೆದಿರುವ ಕಣ್ಮನ ಸೆಳೆಯುವ ಬೆಟ್ಟಗಳಿದೆ ಹೆಸರುವಾಸಿಯಾಗಿದೆ.

ನೀವು ಚಿಕ್ಕಮಗಳೂರಿಗೆ ಭೇಟಿ ನೀಡಿದಾಗ ಕಾಫಿ ಎಸ್ಟೇಟ್‍ಗಳನ್ನು ನೋಡಬೇಕೆಂದು ಬಯಸಿದರೆ, ಅಲ್ಲಿ ಕಾಫಿ ಎಸ್ಟೆಟ್‍ಗಳಿಗೆ ಮಾರ್ಗದರ್ಶಿ ಪ್ರವಾಸಗಳು ಕೂಡ ಲಭ್ಯ. ಏಕಾಂಗಿಯಾಗಿ ಹೈಕಿಂಗ್ ಹೋಗಬೇಕು ಎಂದರೂ, ಚಿಕ್ಕಮಗಳೂರಿನಲ್ಲಿ ಸಾಕಷ್ಟು ಹೈಕಿಂಗ್ ದಾರಿಗಳಿವೆ. ಅಷ್ಟೇ ಅಲ್ಲ, ಚಿಕ್ಕಮಗಳೂರಿನಲ್ಲಿ ಕೆಲವು ಸುಂದರ ಜಲಪಾತಗಳನ್ನು ಕೂಡ ನೀವು ಕಾಣಬಹುದು.

8. ಕಬಿನಿ
ಕಬಿನಿ ರಾಜ್ಯದ ಅತ್ಯಂತ ಸುಂದರ ಅರಣ್ಯಗಳಲ್ಲಿ ಒಂದು. ಬೆಂಗಳೂರಿನಿಂದ 245 ಕಿ ಮೀ ದೂರಲ್ಲಿರುವ ಅದು ತನ್ನ ವನ್ಯಜೀವಿ ಅಭಯಾರಣ್ಯ ಮತ್ತು ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ನೀವು ಅಲ್ಲಿಯೇ ಉಳಿಯಲು ಇಷ್ಟಪಟ್ಟರೆ, ಕಬಿನಿ ನದಿಯ ಬಳಿ ಬೇಕಾದಷ್ಟು ವಸತಿ ಆಯ್ಕೆಗಳು ಇವೆ.

ಅಲ್ಲಿಯೇ ಉಳಿದು ಪ್ರಕೃತಿ ಸೌಂದರ್ಯವನ್ನು ಸವಿಯುವುದು ಉತ್ತಮ ಆಯ್ಕೆ. ಏಕೆಂದರೆ, ನದಿ ತೀರದ ರಜಾ ಸಮಯ ಎಂದಿಗೂ ನಿಮಗೆ ನಿರಾಸೆ ಉಂಟು ಮಾಡುವುದಿಲ್ಲ. ಅಷ್ಟೇ ಅಲ್ಲ, ವನ್ಯಜೀವಿ ಸಫಾರಿ ಟೂರ್, ಬೋಟ್‍ರೈಡ್‍ಗಳ ಆನಂದವನ್ನು ಕೂಡ ಪಡೆಯಬಹುದು. ಕಬಿನಿಗೆ ಭೇಟಿ ನೀಡಿದಿರಿ, ಎಂದಾದಲ್ಲಿ ನೀವು ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೂ ಭೇಟಿ ನೀಡಬಹುದು.

9. ಕೊಡಗು
ಮಂಜಿನಿಂದ ಆವೃತವಾದ ನಿಸರ್ಗ ಸೌಂದರ್ಯವನ್ನು ಒಳಗೊಂಡ ಕೊಡಗಿನ ಪ್ರವಾಸ ನಿಮ್ಮ ಮನಸ್ಸಿಗೆ ಸಂತೋಷ ನೀಡುವುದರಲ್ಲಿ ಸಂಶಯವಿಲ್ಲ. ಬೆಂಗಳೂರಿನಿಂದ 265 ಕಿ ಮೀ ದೂರದಲ್ಲಿ ಇರುವ ಕೊಡಗು ಸುಂದರ ಗಿರಿಧಾಮ. ಅಷ್ಟು ದೂರ ಪ್ರಯಾಣಿಸಿದರೂ, ಭೇಟಿ ನೀಡಲು ಖಂಡಿತಾ ಅರ್ಹವಾದ ತಾಣವಿದು.

ಇದನ್ನೂ ಓದಿ:  School In Desert: ಮರುಭೂಮಿಯಲ್ಲೊಂದು ಮೊಟ್ಟೆಯಾಕಾರದ ಶಾಲೆ! ಇಲ್ನೋಡಿ ಫೋಟೋಸ್

ಭಾರತದ ಅತ್ಯಂತ ಜನಪ್ರಿಯ ಗಿರಿಧಾಮಗಳಲ್ಲಿ ಒಂದಾದ ಕೊಡಗು, ನಿಮಗೆ ರೋಚಕ ಅನುಭವಗಳನ್ನು ನೀಡುತ್ತದೆ. ಇಲ್ಲಿನ ಸಂಸ್ಕೃತಿ, ಆಹಾರ ಪದ್ಧತಿ, ಕಾಫಿ ತೋಟಗಳು, ನಯನ ಮನೋಹರ ಬೆಟ್ಟಗಳು ನಿಮ್ಮ ವಾರಾಂತ್ಯದ ಪ್ರವಾಸದ ಸಂತೋಷವನ್ನು ಇನ್ನಷ್ಟು ಅಧಿಕವಾಗಿಸುತ್ತದೆ.

10. ವಯನಾಡ್, ಕೇರಳ
ಕೇರಳ ರಾಜ್ಯದ ಸುಂದರ ಗಿರಿಧಾಮ ವಯನಾಡ್ ಅತ್ಯಂತ ಜನಪ್ರಿಯ. ಮಸಾಲೆ ಬೆಳೆಗಳ ತೋಟಗಳು, ಕೇರಳದ ಆಹಾರ ತಿನಿಸುಗಳು, ಟ್ರೆಕ್ಕಿಂಗ್ ಮತ್ತು ಹೈಕಿಂಗ್ ಹಾದಿಗಳು, ವನ್ಯಜೀವಿ ವೀಕ್ಷಣೆ ಮತ್ತು ಕೇವಿಂಗ್‍ನಂತಹ ಸಾಹಸಮಯ ಅನುಭವಗಳು ವಯನಾಡ್ ಪ್ರವಾಸದಲ್ಲಿ ನಿಮಗೆ ವಿಶೇಷ ಆನಂದವನ್ನು ನೀಡುತ್ತವೆ. ಪಶ್ಚಿಮ ಘಟ್ಟಗಳ ಮಡಿಲಲ್ಲಿ ವಾರಾತ್ಯ ಕಳೆಯುವ ಆಸೆ ಇದ್ದರೆ ನೀವು ಖಂಡಿತಾ ವಯನಾಡ್‍ಗೆ ಭೇಟಿ ನೀಡಬಹುದು.
Published by:Ashwini Prabhu
First published: