Healthy Food: ಮಳೆಗಾಲದಲ್ಲಿ ನೀವು ಆರೋಗ್ಯಕರವಾಗಿರಲು ಈ ಆಹಾರಗಳನ್ನೇ ಹೆಚ್ಚಾಗಿ ಸೇವಿಸಿ

ಮುಲುಂದ್ ನ ಫೋರ್ಟಿಸ್ ಆಸ್ಪತ್ರೆಯ ಹಿರಿಯ ಪೌಷ್ಠಿಕಾಂಶ ಚಿಕಿತ್ಸಕರಾದ ಮಿನಾಲ್ ಶಾ ಅವರು ಮಳೆಗಾಲದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೇವಿಸಬೇಕಾದ ಟಾಪ್ 10 ಆಹಾರ ಪದಾರ್ಥಗಳನ್ನು ಪಟ್ಟಿ ಮಾಡಿದ್ದಾರೆ. ಇದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಹೆಚ್ಚಿನ ಜನರು ಮಳೆಗಾಲವನ್ನು (Rainy Season) ತುಂಬಾನೇ ಆನಂದಿಸುತ್ತಾರೆ. ಉದಾಹರಣೆಗೆ ಬೆಳಿಗ್ಗೆ ಆ ತುಂತುರು ಮಳೆಯಲ್ಲಿ ಬಿಸಿ ಬಿಸಿಯಾದ ಒಂದು ಕಪ್ ಚಹಾದೊಂದಿಗೆ (Tea) ಮನೆಯ ಬಾಲ್ಕನಿಯಲ್ಲಿ ಕುಳಿತುಕೊಂಡು ಮತ್ತು ಸಂಜೆ ಹೊತ್ತು ಗರಿಗರಿಯಾದ ತಿಂಡಿಗಳನ್ನು (Snacks) ಮಾಡಿಕೊಂಡು ಅದರ ಜೊತೆಗೆ ಬಿಸಿ ಬಿಸಿಯಾದ ಕಾಫಿ (Coffee) ಕುಡಿಯುತ್ತಾ ಮಳೆಯನ್ನು ಆನಂದಿಸುತ್ತಾರೆ. ಅದೇ ರೀತಿಯಲ್ಲಿ ಕೆಲಸ ಮುಗಿಸಿ ಸಂಜೆ ಹೊತ್ತಿನಲ್ಲಿ ಮನೆಗೆ ಬಂದಾಗ ಆ ತಂಪಾದ ಮಳೆಯಲ್ಲಿ ಬಿಸಿ ಬಿಸಿಯಾದ ಈರುಳ್ಳಿ ಮತ್ತು ಮೆಣಸಿನಕಾಯಿ ಪಕೋಡಾಗಳು ಮತ್ತು ಬಜ್ಜಿಗಳು, ಆಲೂಗಡ್ಡೆ ಪಲ್ಯದಿಂದ ಮಾಡಿದ ಸಮೋಸಾಗಳನ್ನು ತಿನ್ನುವುದು ಎಂದರೆ ಅದೊಂದು ವಿಭಿನ್ನವಾದ ಮಜಾ ನೀಡುತ್ತದೆ ಎಂದು ಹೇಳಬಹುದು.

ಆದರೆ ಎಲ್ಲದಕ್ಕೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇರುವಂತೆ ಮಳೆಗಾಲ ನೋಡಲು ಎಷ್ಟು ಸುಂದರವೋ ಅಷ್ಟೇ ರೋಗಗಳನ್ನು ತರಿಸುವ ಋತು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಮಳೆಗಾಲವು ನಿಮ್ಮ ಮತ್ತು ನಮ್ಮೆಲ್ಲರ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಪರೀಕ್ಷಿಸುವ ಹಲವಾರು ಆರೋಗ್ಯ ಸಮಸ್ಯೆಗಳನ್ನು ತರುತ್ತದೆ. ಅನೇಕ ಕಾಯಿಲೆಗಳು, ಅಲರ್ಜಿಗಳು, ಇತ್ಯಾದಿಗಳಿವೆ, ಇದು ಕೆಲ ವಯಸ್ಸಾದ ಹಿರಿಯರಿಗೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವಂತಹ ಜನರಿಗೆ ‘ಮಳೆಗಾಲ ಯವಾಗಪ್ಪಾ ಮುಗಿಯುತ್ತೆ’ ಅಂತ ಪರಿತಪಿಸುವಂತೆ ಸಹ ಮಾಡುತ್ತದೆ ಎಂದು ಹೇಳಬಹುದು.

ಆರೋಗ್ಯಕರ, ಮನೆಯಲ್ಲಿ ಬೇಯಿಸಿದ ಆಹಾರ ಸೇವನೆ 
ಹಾಗಾದರೆ ಇದಕ್ಕೆ ಪರಿಹಾರ ಇಲ್ಲವೇ? ಅಂತ ನೀವು ಕೇಳಬಹುದು. ಆರೋಗ್ಯಕರ, ಮನೆಯಲ್ಲಿ ಬೇಯಿಸಿದ ಆಹಾರಗಳು, ತಾಜಾ ಹಣ್ಣುಗಳು, ತರಕಾರಿಗಳು, ಇತ್ಯಾದಿಗಳೊಂದಿಗೆ ಈ ಮಳೆಗಾಲವನ್ನು ನೀವು ಸಮರ್ಥವಾಗಿ ಎದುರಿಸಬಲ್ಲಿರಿ ಅಂತ ನಾವು ನಿಮಗೆ ಇಲ್ಲಿ ಹೇಳಲು ಬಯಸುತ್ತಿದ್ದೇವೆ. ಮುಲುಂದ್ ನ ಫೋರ್ಟಿಸ್ ಆಸ್ಪತ್ರೆಯ ಹಿರಿಯ ಪೌಷ್ಠಿಕಾಂಶ ಚಿಕಿತ್ಸಕರಾದ ಮಿನಾಲ್ ಶಾ ಅವರು ಮಳೆಗಾಲದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೇವಿಸಬೇಕಾದ ಟಾಪ್ 10 ಆಹಾರ ಪದಾರ್ಥಗಳನ್ನು ಪಟ್ಟಿ ಮಾಡಿದ್ದಾರೆ. ಇದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

1) ಹಸಿರು ಕಾಳು ಮೆಣಸು ತಿನ್ನಿರಿ
ಹಸಿರು ಕಾಳು ಮೆಣಸುಗಳು ಪೈಪರಿನ್ ಎಂಬ ಅಂಶವನ್ನು ಹೊಂದಿರುತ್ತವೆ, ಇದು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಆಲ್ಕಲಾಯ್ಡ್ ಆಗಿದೆ ಎಂದು ಹೇಳಬಹುದು. ಇದು ಗಮನಾರ್ಹ ಪ್ರಮಾಣದ ವಿಟಮಿನ್ ಸಿ ಮತ್ತು ಕೆ ಅನ್ನು ಸಹ ಹೊಂದಿದೆ. ಹಸಿರು ಕಾಳು ಮೆಣಸುಗಳು ಉತ್ಕರ್ಷಣ ನಿರೋಧಕಗಳಾಗಿರುತ್ತವೆ, ಇದು ಫ್ರೀ ರ್‍ಯಾಡಿಕಲ್ ಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ಗಂಭೀರ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:  Health Tips: ಮಳೆಗಾಲದ ರೋಗ-ರುಜಿನಗಳನ್ನು ತಪ್ಪಿಸಲು ಈ 7 ಆರೋಗ್ಯ ಸಲಹೆಗಳನ್ನು ಪಾಲಿಸಿ

ಆಹಾರದ ಜೀರ್ಣಕ್ರಿಯೆಯನ್ನು ಸುಧಾರಿಸುವ ಹೈಡ್ರೋಕ್ಲೋರಿಕ್ ಆಮ್ಲದ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಅವು ಅನಿಲವನ್ನು ಕಡಿಮೆ ಮಾಡಬಹುದು. ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಸಹ ಹೊಂದಿದೆ, ಅಂದರೆ ಇದು ಆಹಾರದಿಂದ ಹರಡುವ ಕಾಯಿಲೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ತೆಗೆದು ಹಾಕುವ ಮೂಲಕ ಆಹಾರ ವಿಷದ ಅಪಾಯವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

2) ಚೆನ್ನಾಗಿ ಹಣ್ಣುಗಳನ್ನು ಸೇವಿಸಿರಿ
ಪೀಚ್, ಪ್ಲಮ್, ಚೆರ್ರಿ, ದಾಳಿಂಬೆಯಂತಹ ಋತುಮಾನದ ಹಣ್ಣುಗಳು ವಿಟಮಿನ್ ಎ ಮತ್ತು ಸಿ, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ. ರಸ್ತೆ ಬದಿ ವ್ಯಾಪಾರಿಗಳಿಂದ ಮೊದಲೇ ಕತ್ತರಿಸಿದ ಹಣ್ಣುಗಳನ್ನು ತಿನ್ನುವುದನ್ನು ಮತ್ತು ಹಣ್ಣುಗಳ ರಸ ಅಥವಾ ಜ್ಯೂಸ್ ಗಳನ್ನು ಕುಡಿಯುವುದನ್ನು ನಿಲ್ಲಿಸಿರಿ. ಮನೆಯಲ್ಲಿ ತಯಾರಿಸಿದ ಉತ್ತಮ ಗುಣಮಟ್ಟದ ತಾಜಾ ಕತ್ತರಿಸಿದ ಹಣ್ಣುಗಳು ಮತ್ತು ಹಣ್ಣುಗಳ ಜ್ಯೂಸ್ ಅನ್ನು ನಿಯಮಿತವಾಗಿ ಸೇವಿಸಿರಿ ಮತ್ತು ಆರೋಗ್ಯವಾಗಿರಿ.

3) ಹೆಚ್ಚಾಗಿ ದ್ರವ ಪದಾರ್ಥಗಳನ್ನು ಸಹ ಸೇವಿಸಿರಿ
ಮಳೆಗಾಲದಲ್ಲಿ ನೀವು ಸೂಪ್, ಮಸಾಲಾ ಚಹಾ, ಹಸಿರು ಚಹಾ, ಸಾರು, ದಾಲ್, ಇತ್ಯಾದಿಗಳಂತಹ ಸಾಕಷ್ಟು ಬೆಚ್ಚಗಿನ ದ್ರವಗಳನ್ನು ಸೇವಿಸಿರಿ. ಏಕೆಂದರೆ ಅವು ಮರುಜಲೀಕರಣಕ್ಕೆ ಒಳ್ಳೆಯದು ಮತ್ತು ನಿಮ್ಮ ದೇಹದಲ್ಲಿನ ರೋಗ ನಿರೋಧಕ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುತ್ತದೆ.

4) ಹಸಿರು ತರಕಾರಿಗಳನ್ನು ಹೆಚ್ಚಾಗಿ ತಿನ್ನಿರಿ
ಮಳೆಗಾಲವನ್ನು ಸಾಮಾನ್ಯವಾಗಿ ಸೋರೆಕಾಯಿಗಳ ಋತು ಎಂದು ಸಹ ಹೇಳುತ್ತಾರೆ, ಹಸಿರು ತರಕಾರಿಗಳು, ಪರಾಠಾ, ಸೂಪ್, ರೈತಾ ಇತ್ಯಾದಿಗಳಂತಹ ವಿವಿಧ ತಯಾರಿಕೆಗಳಲ್ಲಿ ಸೋರೆಕಾಯಿ ತರಕಾರಿಗಳನ್ನು ಸೇರಿಸಿಕೊಳ್ಳಿರಿ. ಹಸಿ ತರಕಾರಿಗಳ ಬದಲಿಗೆ ಹಬೆಯಲ್ಲಿ ಬೇಯಿಸಿದ ಸಲಾಡ್ ಗಳನ್ನು ಸೇವಿಸಿ, ಏಕೆಂದರೆ ಅವು ಸಕ್ರಿಯ ಬ್ಯಾಕ್ಟೀರಿಯಾ ಮತ್ತು ವೈರಸ್ ಅನ್ನು ಹೊಂದಿರುತ್ತವೆ, ಅದು ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳಿಗೆ ಕಾರಣವಾಗಬಹುದು.

5) ಪ್ರೋಬಯಾಟಿಕ್ ಆಹಾರ ಪದಾರ್ಥಗಳನ್ನು ಸೇವಿಸಿರಿ
ನಿಮ್ಮ ಕರುಳಿನ ಆರೋಗ್ಯವನ್ನು ಆರೋಗ್ಯಕರವಾಗಿರಿಸಲು ನಿಯಯಮಿತವಾಗಿ ಮೊಸರು, ಮಜ್ಜಿಗೆ, ಕೆಫಿರ್, ಉಪ್ಪಿನಕಾಯಿ ತರಕಾರಿಗಳಂತಹ ಪ್ರೋಬಯಾಟಿಕ್ ಗಳನ್ನು ಸೇವಿಸಿರಿ. ಇವು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ, ಇದು ಕೆಟ್ಟ ಬ್ಯಾಕ್ಟೀರಿಯಾ ಅಥವಾ ರೋಗವನ್ನು ಉಂಟು ಮಾಡುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹ ಸಹಾಯ ಮಾಡುತ್ತದೆ.

6) ಪ್ರೋಟೀನ್ ಅಂಶ ಇರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಿರಿ
ನಿಮ್ಮ ಊಟದಲ್ಲಿ ಆರೋಗ್ಯಕರ ಪ್ರೋಟೀನ್ ಅಂಶವಿರುವ ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳಿರಿ ಮತ್ತು ಇವುಗಳನ್ನು ನೀವು ಮಳೆಗಾಲದಲ್ಲಿ ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಸಹ ಇದು ಸಹಾಯ ಮಾಡುತ್ತದೆ. ಹಾಲು ಮತ್ತು ಹಾಲಿನ ಉತ್ಪನ್ನಗಳು, ದ್ವಿದಳ ಧಾನ್ಯಗಳಾದ ಹೆಸರು ಬೇಳೆ, ಕೆಂಪು ಬೇಳೆ, ಚೋಲೆ, ರಾಜ್ಮಾ, ಸೋಯಾ, ಮೊಟ್ಟೆ ಮತ್ತು ಕೋಳಿ ಮಾಂಸ ಆರೋಗ್ಯಕರ ಪ್ರೋಟೀನ್ ಗಳ ಉತ್ತಮ ಮೂಲಗಳಾಗಿವೆ ಎಂದು ಹೇಳಬಹುದು.

7) ಶುಂಠಿ ಮತ್ತು ಬೆಳ್ಳುಳ್ಳಿಯನ್ನು ನಿಮ್ಮ ಆಹಾರಗಳಲ್ಲಿ ಹೆಚ್ಚಾಗಿ ಬಳಸಿರಿ
 ಈಗಂತೂ ಎಲ್ಲರ ಅಡುಗೆ ಮನೆಯಲ್ಲೂ ಈ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಹೆಚ್ಚಾಗಿಯೇ ಬಳಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮಳೆಗಾಲದಲ್ಲಿ ಬರುವಂತಹ ಶೀತ ಮತ್ತು ಜ್ವರದ ವಿರುದ್ಧ ಹೋರಾಡಲು, ಮೂಗಿನ ಮತ್ತು ಗಂಟಲಿನಲ್ಲಿರುವ ದಟ್ಟಣೆಯನ್ನು ನಿವಾರಿಸಲು ಮತ್ತು ವೈರಲ್ ವಿರೋಧಿ ಗುಣಲಕ್ಷಣಗಳನ್ನು ಹೊಂದಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ:  Health Tips: ಈ 4 ಸಾಂಬಾರ್ ಪದಾರ್ಥ ಬಳಸಿ ಮಾನ್ಸೂನ್ ಕಾಯಿಲೆಗಳಿಗೆ ಗುಡ್ ಬೈ ಹೇಳಿ

ಶುಂಠಿ ಮತ್ತು ಬೆಳ್ಳುಳ್ಳಿ ಎರಡೂ ಉರಿಯೂತ ಶಮನಕಾರಿ, ಪ್ರತಿಜೀವಕ ಮತ್ತು ಉತ್ಕರ್ಷಣ ನಿರೋಧಕ ಪರಿಣಾಮಗಳನ್ನು ಸಹ ಹೊಂದಿವೆ. ಶುಂಠಿ ಚಹಾವು ಗಂಟಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಜಜ್ಜಿದ ಶುಂಠಿ ಅಥವಾ ಅದರ ಸಾರವನ್ನು ಜೇನುತುಪ್ಪಕ್ಕೆ ಸೇರಿಸಿ ಕೊಡಬಹುದು. ಇದನ್ನು ಸೂಪ್ ಗಳಿಗೆ ಅಥವಾ ವಯಸ್ಸಾದವರಿಗಾಗಿ ಚಹಾಗಳಲ್ಲಿ ಸಹ ಸೇರಿಸಬಹುದು. ಬೆಳ್ಳುಳ್ಳಿಯು ಆಂಟಿಮೈಕ್ರೋಬಿಯಲ್ ಮತ್ತು ಶಿಲೀಂಧ್ರ ವಿರೋಧಿ ಗುಣಲಕ್ಷಣಗಳನ್ನು ಸಹ ಹೊಂದಿದ್ದು, ಇದು ಪರಿಣಾಮಕಾರಿ ರೋಗ ನಿರೋಧಕ ಪ್ರಚೋದಕವಾಗಿದೆ.

8) ನಿಮ್ಮ ಊಟದಲ್ಲಿ ಮೆಂತ್ಯೆ ಬೀಜಗಳನ್ನು ಮತ್ತು ಮೆಂತ್ಯೆ ಸೊಪ್ಪನ್ನು ಬಳಸಿರಿ
ಮೆಂತ್ಯವು ಒಂದು ಶಕ್ತಿ ವರ್ಧಕವಾಗಿದ್ದು ಇದು ನಿಮಗೆ ಬರುವಂತಹ ಜ್ವರ ಮತ್ತು ಜೀರ್ಣಕಾರಿ ಅಸ್ವಸ್ಥತೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಸಮಯದಲ್ಲಿಯೂ ಸಹ ನಮ್ಮ ದೇಹವನ್ನು ನೋಡಿಕೊಳ್ಳಲು ಅಗತ್ಯವಿರುವ ಎಲ್ಲಾ ಖನಿಜಗಳನ್ನು ಇದು ಒಳಗೊಂಡಿದೆ ಎಂದು ಹೇಳಬಹುದು.

9) ಹಾಲಿನಲ್ಲಿ ಅರಿಶಿನ ಸೇರಿಸಿಕೊಂಡು ಕುಡಿಯಿರಿ
ಅರಿಶಿನವು ಕರ್ಕ್ಯುಮಿನ್ ಅನ್ನು ಹೊಂದಿದ್ದು, ಇದು ಉತ್ಕರ್ಷಣ ನಿರೋಧಕ, ಆಂಟಿಮೈಕ್ರೊಬಿಯಲ್ ಪರಿಣಾಮಗಳನ್ನು ಹೊಂದಿದೆ. ಇದು ಎಚ್. ಪೈಲೋರಿ, ಎಂ.ಆರ್.ಎಸ್.ಎ. ಮುಂತಾದ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಪ್ರತಿ ಬಂಧಿಸುತ್ತದೆ ಮತ್ತು ಗ್ಯಾಸ್ಟ್ರಿಕ್ ಹುಣ್ಣುಗಳನ್ನು ತಡೆಯುತ್ತದೆ, ರೋಗ ನಿರೋಧಕ ಪ್ರತಿಕ್ರಿಯೆಯನ್ನು ಸುಧಾರಿಸುತ್ತದೆ. ಇದು ಇತರ ರಕ್ಷಣಾತ್ಮಕ ಮತ್ತು ತಡೆಗಟ್ಟುವ ಕಾರ್ಯಗಳ ನಡುವೆ ಮಲೇರಿಯಾ ವಿರೋಧಿ ಚಟುವಟಿಕೆಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: Avocado Hair Mask: ಕೂದಲು, ಮುಖದ ಸೌಂದರ್ಯಕ್ಕೆ ಬೆಣ್ಣೆಹಣ್ಣಿನ ಮಾಸ್ಕ್! ತಯಾರಿಸೋದು ಹೇಗೆ?

ಒಂದು ಟೀ ಸ್ಪೂನ್ ಅರಿಶಿನವನ್ನು ನೀವು ಹಾಲಿಗೆ ಸೇರಿಸಿಕೊಂಡು ಕುಡಿಯಿರಿ. ಲ್ಯಾಟೆಯಾಗಿ, ಜೇನುತುಪ್ಪದೊಂದಿಗೆ ಅಥವಾ ಬಿಸಿ ನೀರಿನಲ್ಲಿ ಸಹ ನೀವು ಅರಿಶಿನವನ್ನು ಬಳಸುವುದು ಸೂಕ್ತ. ಇಷ್ಟೇ ಅಲ್ಲದೆ ನೀವು ಬೆಳಿಗ್ಗೆ ಮಾಡುವಂತಹ ಅವಲಕ್ಕಿ, ಮಂಡಕ್ಕಿ ಮತ್ತು ಉಪ್ಪಿಟ್ಟುಗಳಲ್ಲಿಯೂ ಸಹ ಈ ಅರಿಶಿನವನ್ನು ಸೇರಿಸಬಹುದು.

10) ಒಮೆಗಾ-3 ಕೊಬ್ಬಿನಾಮ್ಲಗಳಿರುವ ಪದಾರ್ಥಗಳನ್ನು ಸೇವಿಸಿರಿ
ಒಮೆಗಾ-3 ಕೊಬ್ಬಿನಾಮ್ಲಗಳು ಪ್ರತಿರಕ್ಷಣಾ ಮಾಡ್ಯುಲೇಟರಿ ಪರಿಣಾಮವನ್ನು ಹೊಂದಿವೆ. ಮಳೆಗಾಲದಲ್ಲಿ, ಆಹಾರ ಮತ್ತು ನೀರಿನ ಮೂಲಕ ಸೋಂಕಿನ ಅಪಾಯವು ಹೆಚ್ಚಾಗುವ ಸಮಯದಲ್ಲಿ, ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಒಮೆಗಾ-3 ಕೊಬ್ಬಿನಾಮ್ಲಗಳು ಮೀನುಗಳು, ಸೀಗಡಿಗಳು, ಸಿಂಪಿಗಳು, ಬೀಜಗಳು, ಮತ್ತು ವಾಲ್ನಟ್ ಗಳು, ಪಿಸ್ತಾ, ಚಿಯಾ ಬೀಜಗಳು, ಅಗಸೆ ಬೀಜಗಳು ಮುಂತಾದ ಎಣ್ಣೆ ಬೀಜಗಳಲ್ಲಿ ಕಂಡು ಬರುತ್ತವೆ ಎಂದು ಹೇಳಬಹುದು.
Published by:Ashwini Prabhu
First published: