ಈ ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶ ನಿಷಿದ್ಧ ಯಾಕೆ ಗೊತ್ತಾ..?
Temples in India: ದೇಶದ 51 ಶಕ್ತಿಪೀಠಗಳಲ್ಲಿ ಒಂದಾದ ಗುವಾಹಟಿಯ ಕಾಮಾಕ್ಯ ದೇವಸ್ಥಾನದ ಸಂಪ್ರದಾಯಗಳಿಗೆ ವಿಶಿಷ್ಟವಾಗಿದೆ. ಆಷಾಢ ಮಾಸದ ಮೂರು ದಿನ ದೇವಾಲಯ ಮುಚ್ಚಿರುತ್ತದೆ. ಈ ಸಮಯದಲ್ಲಿ ದೇವತೆ ಋತುಮತಿಯಾಗುತ್ತಾಳೆ ಎಂಬ ನಂಬಿಕೆಯಿಂದ ಆಷಾಢ ತಿಂಗಳಲ್ಲಿ ಮೂರು ದಿನ ಮುಚ್ಚಲಾಗುತ್ತದೆಯಂತೆ.
ಹಿಂದೂ ಸಂಸ್ಕೃತಿ(Hindu culture) ಹಾಗೂ ಆಚರಣೆಗಳು ಬಹಳ ಪ್ರಸಿದ್ಧವಾದದ್ದು. ವಿಶಾಲವಾದ ವ್ಯಾಪ್ತಿ ಹಾಗೂ ವಿಭಿನ್ನ ಆಚರಣೆಗಳೊಂದಿಗೆ ಜನರ ಮನವನ್ನು ಗೆಲ್ಲುವ ಧರ್ಮ(Religion). ಸತ್ಯ-ನಿಷ್ಠೆ, ಧರ್ಮ-ತ್ಯಾಗ, ವಿಜ್ಞಾನ ಹಾಗೂ ಸಂಸ್ಕೃತಿಗಳನ್ನು ಒಳಗೊಂಡಂತಹ ಪವಿತ್ರವಾದ ಧರ್ಮ. ಈ ಧರ್ಮದಲ್ಲಿ ಕೈಗೊಳ್ಳುವ ಆಚರಣೆಗಳು, ವಿಧಿ-ವಿಧಾನಗಳು ವಿಶೇಷ ನಂಬಿಕೆ ಹಾಗೂ ಹಿನ್ನೆಲೆಯನ್ನು ಪಡೆದುಕೊಂಡಿರುತ್ತವೆ.ಹೀಗಾಗಿ ದೇವಸ್ಥಾನ(Temple) ಪ್ರವೇಶ ಮಾಡಲು ಸಹ ಕಲವೊಂದು ಪದ್ಧತಿಗಳನ್ನು ಬಳಸಲಾಗುತ್ತದೆ.. ಅದರಲ್ಲೂ ಭಾರತದಲ್ಲಿ(India) ಶಬರಿಮಲೆಯನಂತಹ(Shabarimalai) ದೇವಸ್ಥಾನ ಮಹಿಳೆಯರ ಪ್ರವೇಶ ನಿಷಿದ್ಧವಾಗಿರೋದು ಎಲ್ಲರಿಗೂ ತಿಳಿದಿರುವ ವಿಚಾರ.. ದೇಶದ ಅದೆಷ್ಟೋ ದೇವಾಲಯಗಳಿಗೆ ವೈಜ್ಞಾನಿಕ ಕಾರಣಗಳಿಂದಾಗಿ ಮಹಿಳೆಯರಿಗೆ ಪ್ರವೇಶವನ್ನು ನಿಷೇಧಿಸಿದ್ದ ಅದೆಷ್ಟೋ ದೇವಾಲಯಗಳು ಭಾರತದಲ್ಲಿದೆ ಎನ್ನುವುದು ತಿಳಿದಿದೆ. ಆದರೆ ದೇಶದಲ್ಲಿ ಪುರುಷರಿಗೂ ಪ್ರವೇಶವಿರದ ದೇವಾಲಯಗಳು ಇವೆ ಎಂಬುವುದನ್ನು ತಿಳಿದಿರುವುದೇ ಅಪರೂಪ
1)ಅಟ್ಟುಕಾಲು ಭಗವತಿ ದೇವಸ್ಥಾನ, ಕೇರಳ: ದೇವಸ್ಥಾನದಲ್ಲಿ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಮಹಿಳೆಯರು ಇಲ್ಲಿ ಬಂದು ಸೇರುತ್ತಾರೆ. ಇದು ಧಾರ್ಮಿಕ ಚಟುವಟಿಕೆಗಾಗಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಸಮಾವೇಶವೊಂದನ್ನು ಗಿನ್ನಿಸ ದಾಖಲೆಯ ಪುಸ್ತಕದಲ್ಲಿ ಸೇರಿಗೆ.ಇದು 10 ದಿನಗಳ ಕಾಲ ನೆಡೆಯಲಿರುವ ಈ ಉತ್ಸವದ ಅವಧಿಯಲ್ಲಿ ಪುರುಷರಿಗೆ ದೇವಸ್ಥಾನದ ಒಳಗಡೆ ಪ್ರವೇಶವನ್ನು ನಿಷೇಧಿಸಲಾಗಿದೆ.
2)ಚಕ್ಕುಲಥುಕಾವು ದೇವಾಲಯ: ಚಕ್ಕುಲತ್ತುಕಾವು ಮಂದಿರವು ಕೇರಳದಲ್ಲೇ ಇರುವ, ಭಗವತಿದೇವಿಗೇ ಮುಡಿಪಾಗಿರುವ ಇನ್ನೊಂದು ಮಂದಿರ. ಪ್ರತಿ ವರ್ಷದ ಡಿಸೆಂಬರ್ ತಿಂಗಳ ಮೊದಲ ಶುಕ್ರವಾರವನ್ನು ‘ಧನು’ ಎಂದು ಕರೆಯಲಾಗುತ್ತದೆ. ಈ ಪವಿತ್ರ ದಿನದಂದು ವಾರ್ಷಿಕ ‘ನಾರಿ ಪೂಜೆ’ಯೂ ನಡೆಯುತ್ತದೆ. ಈ ಪೂಜೆಯಲ್ಲಿ ಭಾಗವಹಿಸಲು ಇಚ್ಛಿಸುವ ಮಹಿಳೆಯರು ಈ ದಿನಕ್ಕೂ ಹತ್ತುದಿನಗಳಿಂದಲೇ ಉಪವಾಸ ಆಚರಿಸಿಕೊಂಡು ಬಂದು ಹತ್ತನೆಯ ದಿನ ಮಂದಿರಕ್ಕೆ ಆಗಮಿಸುತ್ತಾರೆ. ಈ ಪೂಜೆಯಲ್ಲಿ ದೇವಸ್ಥಾನದ ಪೂಜಾರಿಗಳು ಈ ಮಹಿಳೆಯರ ಕಾಲುಗಳನ್ನು ತೊಳೆದು ಪೂಜೆಯನ್ನು ಸಂಪನ್ನಗೊಳಿಸುತ್ತಾರೆ.
3)ಕಾಮಾಕ್ಯ ದೇವಸ್ಥಾನ ಅಸ್ಸಾಂ: ದೇಶದ 51 ಶಕ್ತಿಪೀಠಗಳಲ್ಲಿ ಒಂದಾದ ಗುವಾಹಟಿಯ ಕಾಮಾಕ್ಯ ದೇವಸ್ಥಾನದ ಸಂಪ್ರದಾಯಗಳಿಗೆ ವಿಶಿಷ್ಟವಾಗಿದೆ. ಆಷಾಢ ಮಾಸದ ಮೂರು ದಿನ ದೇವಾಲಯ ಮುಚ್ಚಿರುತ್ತದೆ. ಈ ಸಮಯದಲ್ಲಿ ದೇವತೆ ಋತುಮತಿಯಾಗುತ್ತಾಳೆ ಎಂಬ ನಂಬಿಕೆಯಿಂದ ಆಷಾಢ ತಿಂಗಳಲ್ಲಿ ಮೂರು ದಿನ ಮುಚ್ಚಲಾಗುತ್ತದೆಯಂತೆ. ಈ ದೇವಾಲಯಕ್ಕೆ ಮಹಿಳೆಯರು ಮುಟ್ಟಾದ ಸಂದರ್ಭದಲ್ಲಿ ಕೂಡ ಹೋಗಬಹುದು ಎಂಬುದು ಇನ್ನೊಂದು ವಿಶೇಷವಾಗಿದೆ.
4)ಕನ್ಯಾಕುಮಾರಿ ದೇವಾಲಯ: ಕನ್ಯಾಕುಮಾರಿಯಲ್ಲಿರುವ ಕುಮಾರಿ ಅಮ್ಮನ್ ದೇವಸ್ಥಾನದಲ್ಲಿ ಭಗವತಿ ದುರ್ಗೆಯ ಗುಡಿಯಿದೆ. ದೇವಸ್ಥಾನದ ಗೇಟ್ ವರೆಗೆ ಅವಿವಾಹಿತ ಪುರುಷರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. ದೇವಸ್ಥಾನದ ಆವರಣಕ್ಕೆ ವಿವಾಹಿತ ಪುರುಷರು ಹೋಗಬಾರದು. ಪಾರ್ವತಿ ತನ್ನ ಗಂಡ ಶಿವನನ್ನು ಪಡೆಯಲು ಇದೇ ಸ್ಥಳದಲ್ಲಿ ಕುಳಿತು ಘೋರ ತಪಸ್ಸು ಮಾಡಿದಳು ಎಂಬ ಪ್ರತೀತಿಯಿದೆ.
5)ಮಾತಾ ದೇವಸ್ಥಾನ, ಬಿಹಾರ: ಬಿಹಾರದ ಮುಜಾಫರ್ಪುರ್ ದಲ್ಲಿರುವ ಈ ದೇವಸ್ಥಾನದಲ್ಲಿ ವಿಶೇಷ ಅವಧಿಯ ಸಂದರ್ಭ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶ ಅವಕಾಶ ಇದೆ.ಈ ಸಮಯದಲ್ಲಿ ದೇವಸ್ತಾನದ ಅರ್ಚಕರು ಸಹ ದೇವಸ್ಥಾನದ ಆವರಣವನ್ನು ಪ್ರವೇಶಿಸುವಂತಿಲ್ಲ.
6)ಬ್ರಹ್ಮ ದೇವಸ್ಥಾನ, ರಾಜಸ್ಥಾನ: ಇಡೀ ವಿಶ್ವದಲ್ಲಿಯೇ ಬ್ರಹ್ಮನಿಗೆ ಇರುವುದು ಒಂದೇ ಒಂದು ದೇವಸ್ಥಾನ ಅದು ರಾಜಸ್ತಾನದ ಪುಷ್ಕರ ದಲ್ಲಿದೆ.ಈ ಬ್ರಹ್ಮ ದೇವಸ್ಥಾನದಲ್ಲಿ ವಿವಾಹಿತ ಪುರುಷರಿಗೆ ಪ್ರವೇಶವಿಲ್ಲ.ಕಾರ್ತಿಕ ಪೌರ್ಣಮಿಯ ದಿನ ಈ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ನೆಡೆಯುತ್ತದೆ
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ