• Home
  • »
  • News
  • »
  • lifestyle
  • »
  • Heart Attack: ವಿಪರೀತ ತಾಪಮಾನ ಹೃದಯ ವೈಫಲ್ಯಕ್ಕೆ ಕಾರಣಕಾರಿಯೇ? ಇಲ್ಲಿದೆ ಶಾಕಿಂಗ್​ ವರದಿ

Heart Attack: ವಿಪರೀತ ತಾಪಮಾನ ಹೃದಯ ವೈಫಲ್ಯಕ್ಕೆ ಕಾರಣಕಾರಿಯೇ? ಇಲ್ಲಿದೆ ಶಾಕಿಂಗ್​ ವರದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Heart attack: ಬದಲಾಗುತ್ತಿರುವ ತಾಪಮಾನ ಹಾಗೂ ಹೃದಯರಕ್ತನಾಳದ ಕಾಯಿಲೆಗಳಿಗೆ ಏನಾದರೂ ಸಂಬಂಧವಿದೆಯೇ ಎಂಬುದನ್ನು ಪ್ರಸ್ತುತ ಅಧ್ಯಯನಗಳು ತನಿಖೆ ನಡೆಸುತ್ತಿವೆ. ಸಾಮಾನ್ಯವಾಗಿ ಹೃದಯ ರಕ್ತನಾಳಗಳಿಂದಾದ ಮರಣಗಳು ನಿರ್ದಿಷ್ಟ ಕಾರಣಗಳಿಂದ ಸಂಭವಿಸುವ ಕಾಯಿಲೆಗಳಾಗಿವೆ.

  • Share this:

ಹೃದ್ರೋಗ ಎಂಬುದು ಇದೀಗ ಜಾಗತಿಕ ಕಾಯಿಲೆಯಾಗಿ ಮಾರ್ಪಟ್ಟಿದೆ. ವಿಶ್ವದಾದ್ಯಂತ ಸಾವಿಗೆ ಕಾರಣವಾಗಿರುವ ಹೃದ್ರೋಗ (Heart attack) ಹಿರಿಯರು, ಕಿರಿಯರು ಎನ್ನದೆ ಎಲ್ಲರನ್ನೂ ಆಹುತಿ ತೆಗೆದುಕೊಳ್ಳುತ್ತಿದೆ. ಇದೀಗ ಹವಾಮಾನ (Weather)  ವೈಪರೀತ್ಯಗಳು ಅಂತೆಯೇ ವಿಪರೀತ ತಾಪಮಾನ ಹೃದಯರಕ್ತನಾಳದ ಮರಣಗಳಿಗೆ ಕಾರಣವಾಗಿಯೇ ಎಂಬುದನ್ನು ತಜ್ಞರು ಅನ್ವೇಷಣೆ ನಡೆಸಿದ್ದಾರೆ.


ಬದಲಾಗುತ್ತಿರುವ ತಾಪಮಾನ ಹಾಗೂ ಹೃದ್ರೋಗ:


ಬದಲಾಗುತ್ತಿರುವ ತಾಪಮಾನ ಹಾಗೂ ಹೃದಯರಕ್ತನಾಳದ ಕಾಯಿಲೆಗಳಿಗೆ ಏನಾದರೂ ಸಂಬಂಧವಿದೆಯೇ ಎಂಬುದನ್ನು ಪ್ರಸ್ತುತ ಅಧ್ಯಯನಗಳು ತನಿಖೆ ನಡೆಸುತ್ತಿವೆ. ಸಾಮಾನ್ಯವಾಗಿ ಹೃದಯ ರಕ್ತನಾಳಗಳಿಂದಾದ ಮರಣಗಳು ನಿರ್ದಿಷ್ಟ ಕಾರಣಗಳಿಂದ ಸಂಭವಿಸುವ ಕಾಯಿಲೆಗಳಾಗಿವೆ. ಒತ್ತಡದ ಜೀವನ ಶೈಲಿ, ಅನಿಯಮಿತ ಆಹಾರ ಕ್ರಮ, ವ್ಯಾಯಾಮದ ಕೊರತೆ, ಬೊಜ್ಜು ಹೀಗೆ ಹೃದ್ರೋಗ ಅಥವಾ ಹೃದಯ ರಕ್ತನಾಳದ ಕಾಯಿಲೆಗಳಿಗೆ ಕೆಲವೊಂದಿಷ್ಟು ಅಂಶಗಳು ಕಾರಣವಾಗಿದೆ. ಆದರೆ ಬದಲಾಗುವ ತಾಪಮಾನ ಹಾಗೂ ಹೃದಯ ರಕ್ತನಾಳದಿಂದ ಉಂಟಾಗುವ ಮರಣಕ್ಕೆ ಏನಾದರೂ ಪರಿಣಾಮ ಬೀರಿದೆಯೇ ಎಂಬುದನ್ನು ತಜ್ಞರು ಅನ್ವೇಷಿಸಿದ್ದಾರೆ.


ಸಂಶೋಧಕರು ಯಾವ ಅಂಕಿಅಂಶಗಳನ್ನು ಪರಿಗಣಿಸಿದ್ದಾರೆ?:


ಹೃದ್ರೋಗಗಳ ಮೇಲೆ ತೀವ್ರತರವಾದ ಉಷ್ಣತೆಯು ಯಾವ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಪರೀಕ್ಷಿಸಲು, ಸಂಶೋಧಕರು 1979 ರಿಂದ 2019 ರವರೆಗಿನ ಐದು ಖಂಡಗಳ 27 ದೇಶಗಳಲ್ಲಿ 567 ನಗರಗಳಲ್ಲಿ 32 ದಶಲಕ್ಷಕ್ಕೂ ಹೆಚ್ಚು ಹೃದಯ ರಕ್ತನಾಳದ ಸಾವುಗಳ ಅಂಕಿಅಂಶವನ್ನು ಪರಿಗಣಿಸಿದ್ದಾರೆ.


ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಮತ್ತು ಪ್ರಪಂಚದಾದ್ಯಂತ ಹೃದ್ರೋಗವು ಸಾವಿಗೆ ಪ್ರಮುಖ ಕಾರಣವಾಗಿದೆ.


ಫಲಿತಾಂಶಗಳು:


ತಜ್ಞರು ಕಲೆಹಾಕಿದ ಅಂಕಿಅಂಶಗಳಲ್ಲಿ ಹೃದಯ ರಕ್ತನಾಳದ (32 154 935), ರಕ್ತಕೊರತೆಯ ಹೃದ್ರೋಗ (11 745 880), ಪಾರ್ಶ್ವವಾಯು (9 351 312), ಹೃದಯ ವೈಫಲ್ಯ (3 673 723), ಮತ್ತು ಆರ್ಹೆತ್ಮಿಯಾ (850) ನಿಂದ ಉಂಟಾದ ಮರಣಗಳು ಒಳಗೊಂಡಿವೆ.


ಇದನ್ನೂ ಓದಿ: Heart Attack: ಸ್ನಾನದ ಸಮಯದಲ್ಲಿ ಈ ಸಣ್ಣ ಮಿಸ್ಟೇಕ್ ಮಾಡಿದ್ರೆ ಹೃದಯಾಘಾತವಾಗುತ್ತಂತೆ!


ತೀವ್ರ ತಾಪಮಾನಗಳು ಅಂದರೆ ಅತಿಯಾದ ಬಿಸಿ ಹಾಗೂ ಶೀತವು ಹೃದಯ ರಕ್ತನಾಳ ಸಮಸ್ಯೆಗಳೊಂದಿಗೆ ಜೋಡಣೆಗೊಂಡಿದ್ದು ರಕ್ತಕೊರತೆಯ ಹೃದ್ರೋಗ, ಪಾರ್ಶ್ವವಾಯು ಮತ್ತು ಹೃದಯ ವೈಫಲ್ಯದಿಂದ ಮರಣ ಹೊಂದಿರುವುದು ವರದಿಯಾಗಿದೆ.


ತೀವ್ರ ಚಳಿ ಹಾಗೂ ತೀವ್ರ ಬಿಸಿಯಿಂದ ಉಂಟಾದ ಹೃದ್ರೋಗ ಮರಣ ಪ್ರಮಾಣ


ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಜರ್ನಲ್ ಸರ್ಕ್ಯುಲೇಶನ್‌ನಲ್ಲಿ ಪ್ರಕಟವಾದ ಅಂತರರಾಷ್ಟ್ರೀಯ ಸಂಶೋಧನೆಯ ಪ್ರಕಾರ, ಅತ್ಯಂತ ಶೀತ ಹವಾಮಾನವು ಹೃದಯ ವೈಫಲ್ಯದಿಂದ ಸಾಯುವ ಅಪಾಯವನ್ನು 37% ದಷ್ಟು ಹೆಚ್ಚಿಸುತ್ತದೆ ಎಂದಾಗಿದೆ. ಅತ್ಯಂತ ಬಿಸಿ ತಾಪಮಾನವು ಕಡಿಮೆ ಮಾರಣಾಂತಿಕ ಎಂಬುದಾಗಿ ವರದಿಯಾಗಿದೆ ಆದರೆ ಹೃದಯ ವೈಫಲ್ಯದ ಮರಣದ ಅಪಾಯವನ್ನು 12% ದಷ್ಟು ಹೆಚ್ಚಿಸಿದೆ.


ತೀಕ್ಷ್ಣ ಬಿಸಿ (97.5 % ಕ್ಕಿಂತ ಹೆಚ್ಚು) ತೀವ್ರ ಶೀತ (2.5 % ಕ್ಕಿಂತ ಕೆಳಗೆ) ಪ್ರತಿ 1000 ಹೃದಯ ರಕ್ತನಾಳದ ಮರಣಗಳೊಂದಿಗೆ ಹೆಚ್ಚುವರಿ ಮರಣ ದಾಖಲೆಗಳನ್ನು ವರದಿ ಮಾಡಿದೆ. ಇನ್ನು ಪ್ರತಿ 1000 ಹೃದಯ ವೈಫಲ್ಯಕ್ಕೆ ಕಾರಣ ತೀಕ್ಷ್ಣ ಬಿಸಿ ಹಾಗೂ ಶೀತದ ತಾಪಮಾನ ಎಂಬುದು ವರದಿಯಾಗಿದೆ.


ಹೃದಯ ರಕ್ತನಾಳದ ಕಾರಣದಿಂದ ಹೆಚ್ಚು ಮರಣ


ಸಂಶೋಧನೆಯಲ್ಲಿ ಭಾಗವಹಿಸಿದ ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ ವಿಶ್ವವಿದ್ಯಾನಿಲಯ ಉಲ್ಲೇಖಿಸಿರುವಂತೆ, ಬಾಲ್ಟಿಮೋರ್‌ನಲ್ಲಿ 20 ಡಿಗ್ರಿ ಫ್ಯಾರನ್‌ಹೀಟ್‌ಗಿಂತ ಕಡಿಮೆ ಅಥವಾ 86 ಡಿಗ್ರಿಗಿಂತ ಹೆಚ್ಚಿನ ತಾಪಮಾನದೊಂದಿಗೆ - ಹೃದಯರಕ್ತನಾಳದ ಕಾರಣದಿಂದ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಒಟ್ಟಾರೆಯಾಗಿ, ಹೃದಯರಕ್ತನಾಳದ ಕಾರಣದಿಂದ ಪ್ರತಿ 1,000 ಸಾವುಗಳಿಗೆ, ಅತಿ ಶೀತದ ತಾಪಮಾನ ಸುಮಾರು ಒಂಬತ್ತು ಹೆಚ್ಚುವರಿ ಸಾವುಗಳಿಗೆ ಕಾರಣವಾಗಿದ್ದರೆ ತುಂಬಾ ಬಿಸಿಯಾದ ತಾಪಮಾನವು ಸುಮಾರು ಎರಡು ಹೆಚ್ಚುವರಿ ಸಾವುಗಳಿಗೆ ಕಾರಣವಾಗಿವೆ.


ಆದರೆ ಹೃದಯ ವೈಫಲ್ಯದಿಂದ ಬಳಲುತ್ತಿರುವವರಲ್ಲಿ ಅತ್ಯಂತ ಶೀತದ ದಿನಗಳಲ್ಲಿ 13 ಮರಣಗಳು ಹಾಗೂ ಅತಿಯಾದ ಉಷ್ಣತೆಯ ದಿನಗಳಲ್ಲಿ ಎರಡು ಮರಣಗಳು ಸಂಭವಿಸಿವೆ.


ಜಾಗೃತರಾಗಿರಲು ಸಂಶೋಧಕರ ಮನವಿ


ಹವಾಮಾನ ಬದಲಾವಣೆಯಿಂದ ತೀವ್ರ ಉಷ್ಣತೆ ಹಾಗೂ ತೀವ್ರ ಚಳಿಗಾಲ ಉಂಟಾಗುತ್ತದೆ ಹಾಗಾಗಿ ಸಂಶೋಧಕರು ತಾಪಮಾನದ ವೈಪರೀತ್ಯಗಳಿಂದ ಉಂಟಾಗುವ ಆರೋಗ್ಯದ ಅಪಾಯಗಳ ಬಗ್ಗೆ ಹೆಚ್ಚು ಜಾಗೃತರಾಗಿರಲು ರೋಗಿಗಳು, ವೈದ್ಯರು, ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.

Published by:shrikrishna bhat
First published: