Teeth Care: ಹಲ್ಲಿನ ಕೊಳೆತ ಮತ್ತು ಕೆಟ್ಟ ವಾಸನೆಗೆ ಮನೆಯಲ್ಲೇ ಇದೆ ಮದ್ದು

ಹಲ್ಲಿನ ಕೊಳೆತ ಮತ್ತು ಕೆಟ್ಟ ವಾಸನೆ ಉಂಟಾಗುವಿಕೆಯನ್ನು ಪಯೋರಿಯಾ ಎಂದು ಕರೆಯುತ್ತಾರೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಪಿರಿಯಾಂಟೈಟಿಸ್ ಎಂದು ಕರೆಯುತ್ತಾರೆ. ಪಯೋರಿಯಾ ಉಂಟಾದಾಗ ಒಸಡುಗಳಲ್ಲಿ ಕೊಳೆಯುವಿಕೆ ಶುರುವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಅಂದ್ರೆ ಬ್ಯಾಕ್ಟೀರಿಯಾಗಳು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹಲ್ಲು (Teeth) ದೇಹದ (Body) ಪ್ರಮುಖ ಅಂಗಗಳಲ್ಲಿ (Important Parts) ಒಂದಾಗಿದೆ. ಹಲ್ಲುಗಳು ನಾವು ತಿನ್ನುವ ಆಹಾರವನ್ನು (Food) ಜಗಿಯಲು ಸಹಾಯ ಮಾಡುತ್ತವೆ. ಅಲ್ಲದೇ ಆಹಾರ ಸರಾಗವಾಗಿ ದೇಹದೊಳಗೆ ಸೇರಲು ಹಲ್ಲುಗಳು ಬೇಕೇ ಬೇಕು. ಹಲ್ಲುಗಳು ಬಿಳಿ ಹಾಗೂ ಆರೋಗ್ಯಕರವಾಗಿದ್ದಷ್ಟು ವ್ಯಕ್ತಿಯೂ ಆರಾಮವಾಗಿ ಇರುತ್ತಾನೆ. ಅದಾಗ್ಯೂ ಹಲವರಲ್ಲಿ ಹಲ್ಲಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಲ್ಲುಗಳು ಕೊಳೆಯುವುದು, ಬೇಗನೆ ಮುರಿದು ಹೋಗುವುದು, ಬಾಯಿ ದುರ್ನಾತ ಮತ್ತು ಹಲ್ಲಿನ ಕೊಳೆತ ಮತ್ತು ಕೆಟ್ಟ ವಾಸನೆಯು ತುಂಬಾ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಇದು ವ್ಯಕ್ತಿಗೆ ತುಂಬಾ ಮುಜುಗರ ಉಂಟು ಮಾಡುತ್ತದೆ.

    ಹಲ್ಲಿನ ಕೊಳೆತ ಮತ್ತು ಕೆಟ್ಟ ವಾಸನೆ

    ಹಲ್ಲಿನ ಕೊಳೆತ ಮತ್ತು ಕೆಟ್ಟ ವಾಸನೆ ಉಂಟಾಗುವಿಕೆಯನ್ನು ಪಯೋರಿಯಾ ಎಂದು ಕರೆಯುತ್ತಾರೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಪಿರಿಯಾಂಟೈಟಿಸ್ ಎಂದು ಕರೆಯುತ್ತಾರೆ. ಪಯೋರಿಯಾ ಉಂಟಾದಾಗ ಒಸಡುಗಳಲ್ಲಿ ಕೊಳೆಯುವಿಕೆ ಶುರುವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಅಂದ್ರೆ  ಬ್ಯಾಕ್ಟೀರಿಯಾಗಳು ಹಲ್ಲು ಮತ್ತು ಒಸಡುಗಳ ನಡುವೆ ಕೊಳಕು ವಸ್ತುಗಳನ್ನು ಬಿಡುತ್ತವೆ.

    ಹಲ್ಲುಗಳಿಗೆ ತೀವ್ರ ಹಾನಿಯುಂಟಾಗುವಿಕೆ

    ಇದರಿಂದಾಗಿ ವಾಸನೆ ಹೊರ ಬರುತ್ತದೆ. ಪಯೋರಿಯಾಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದೇ ಹೋದರೆ ಅದು ಹಲ್ಲುಗಳಿಗೆ ತೀವ್ರ ಹಾನಿ ಉಂಟು ಮಾಡುತ್ತದೆ. ಈ ರೋಗವು ಹಲ್ಲುಗಳ ಹೊರತಾಗಿ ಮೂಳೆಗಳನ್ನು ಹಾನಿಗೊಳಿಸುತ್ತದೆ. ಹಾಗಾಗಿ ಹಲ್ಲಿನಲ್ಲಿ ಉರಿಯೂತ ಆರಂಭವಾಗುತ್ತದೆ. ಹಾಗಿದ್ರೆ ನಾವೀಗ ಇಲ್ಲಿ ಪಯೋರಿಯಾ ರೋಗದ ಲಕ್ಷಣಗಳು ಮತ್ತು ಅದಕ್ಕೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದನ್ನು ತಿಳಿಯೋಣ.

    ಇದನ್ನೂ ಓದಿ: ಮೂತ್ರದ ಬಣ್ಣ ಗಾಢವಾಗಿ ನೊರೆ ಇದ್ದರೆ ನಿರ್ಲಕ್ಷ್ಯ ಬೇಡ! ಅಪಾಯಕಾರಿ ರೋಗದ ಲಕ್ಷಣಗಳಿವು

    ಪಯೋರಿಯಾ ರೋಗದ ಲಕ್ಷಣಗಳು

    ಹಲ್ಲುಜ್ಜುವ ಸಮಯದಲ್ಲಿ ಹಲ್ಲುಗಳು ಅಥವಾ ಒಸಡುಗಳಲ್ಲಿ ರಕ್ತಸ್ರಾವ ಆಗುವುದು. ದುರ್ವಾಸನೆ ಹೊರ ಬರುವುದು. ಹಲ್ಲುಗಳ ಸ್ಥಿತಿ ಹದಗೆಡುವುದು. ಹಲ್ಲುಗಳು ವಕ್ರವಾಗಿ ಕಾಣಿಸಿಕೊಳ್ಳುವುದು. ಒಸಡುಗಳು ಕುಗ್ಗಲು ಪ್ರಾರಂಭಿಸುವುದು. ಒಸಡುಗಳು ಕೆಂಪು, ಜಿಗುಟಾಗಿ ಮತ್ತು ಊದಿಕೊಳ್ಳುವ ಲಕ್ಷಣಗಳು ಗೋಚರಿಸುತ್ತವೆ.

    ಹಲ್ಲುಗಳ ನಡುವೆ ಧೂಳು ಸಂಗ್ರಹವಾಗುತ್ತಾ ಹೋಗುತ್ತದೆ. ತಿನ್ನುವಾಗ, ಅಗಿಯುವಾಗ ಹಲ್ಲುಗಳಲ್ಲಿ ನೋವು ಇರುತ್ತದೆ. ಹಲ್ಲಿನ ಕ್ಷಯ ಪ್ರಾರಂಭವಾಗುತ್ತದೆ. ಬಾಯಿಯಿಂದ ದುರ್ವಾಸನೆ ಬರುತ್ತದೆ. ಇಡೀ ದೇಹದಲ್ಲಿ ಜುಮ್ಮೆನಿಸುವಿಕೆ ಆರಂಭವಾಗುತ್ತದೆ. ಬಾಯಿಯ ರುಚಿ ಬದಲಾಗುತ್ತದೆ.

    ಪಯೋರಿಯಾ ಕಾಯಿಲೆಗೆ ಚಿಕಿತ್ಸೆ ಏನು?

    ಅಲೋಪತಿಯಲ್ಲಿ, ವೈದ್ಯರು ಮೊದಲು ನೈರ್ಮಲ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಅಲ್ಲದೇ ಆ್ಯಂಟಿಬಯೋಟಿಕ್‌ ನೀಡುವ ಮೂಲಕ ಗುಣಪಡಿಸಬಹುದು. ಆದರೆ ಭಾರತದಲ್ಲಿ ಸ್ವದೇಶಿ ಪಾಕವಿಧಾನಗಳ ಕೊರತೆಯಿಲ್ಲ. ಶತಮಾನಗಳಿಂದಲೂ ಆಯುರ್ವೇದದಲ್ಲಿ ಹಲ್ಲುಗಳಿಗೆ ಹಲವು ಬಗೆಯ ಔಷಧ ಬಳಸಲಾಗುತ್ತಿದೆ.

    ಮನೆಮದ್ದುಗಳಿಂದ ಹಲ್ಲು ನೋವು ಹೋಗಲಾಡಿಸುವುದು ಹೇಗೆ?

    ನಿಂಬೆ: ಆಯುರ್ವೇದದಲ್ಲಿ ನಿಂಬೆಗೆ ವಿಶೇಷ ಮಹತ್ವವಿದ್ದು, ನಿಂಬೆ ವಿಟಮಿನ್-ಸಿ ಯ ಉತ್ತಮ ಮೂಲವಾಗಿದೆ. ಹಲ್ಲು ನೋವಿರುವ ಜಾಗದಲ್ಲಿ ನಿಂಬೆಹಣ್ಣಿನ ತುಂಡು ಹಾಕಿದರೆ ನೋವಿನಿಂದ ತ್ವರಿತ ಪರಿಹಾರ ದೊರೆಯುತ್ತದೆ.

    ಇದಲ್ಲದೇ ನಿಂಬೆ ಸಿಪ್ಪೆಗೆ ಸ್ವಲ್ಪ ಸಾಸಿವೆ ಎಣ್ಣೆ ಹಚ್ಚಿ ಹಲ್ಲು ಮತ್ತು ವಸಡುಗಳಿಗೆ ಹಚ್ಚುವುದರಿಂದ ಹಲ್ಲುಗಳು ಸ್ವಚ್ಛವಾಗಿ ವಸಡುಗಳು ದೃಢವಾಗುವುದರ ಜೊತೆಗೆ ಹಲ್ಲುಗಳಿಗೆ ಸಂಬಂಧಿಸಿದ ಅನೇಕ ರೋಗಗಳು ಬರದಂತೆ ತಡೆಯುತ್ತದೆ.

    ಲವಂಗ: ಭಾರತದಲ್ಲಿ ಜನರು ಯಾವಾಗಲೂ ಹಲ್ಲುಗಳಿಗೆ ಲವಂಗ ಬಳಸುತ್ತಾರೆ. ಲವಂಗವನ್ನು ಹಲ್ಲಿನ ಮಧ್ಯದಲ್ಲಿ ಇಟ್ಟುಕೊಳ್ಳುವುದರಿಂದ ಹಲ್ಲು ನೋವು ನಿವಾರಣೆಯಾಗುತ್ತದೆ. ಪೈಯೋರಿಯಾದ ಮುಖ್ಯ ಕಾರಣ ಬ್ಯಾಕ್ಟೀರಿಯಾ. ಲವಂಗವು ಬಹಳಷ್ಟು ಅರಿವಳಿಕೆ ಮತ್ತು ನೋವು ನಿವಾರಕ ಔಷಧೀಯ ಗುಣ ಹೊಂದಿದ್ದು ಅದು ಹಲ್ಲುಗಳಲ್ಲಿರುವ ಎಲ್ಲಾ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತದೆ. ಹಲ್ಲುಗಳಲ್ಲಿ ನೋವಿನ ಜಾಗದಲ್ಲಿ ಲವಂಗವನ್ನು ಇರಿಸಿ, ನೋವಿನಿಂದ ತ್ವರಿತ ಪರಿಹಾರವಿದೆ.

    ಇದನ್ನೂ ಓದಿ: ನಿಮ್ಮ ಅಡುಗೆ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ತೂಕ ಇಳಿಸುವ ಪ್ರಯತ್ನವನ್ನು ಸುಲಭವಾಗಿಸಿ!

    ಸಾಸಿವೆ ಎಣ್ಣೆ: ಸಾಸಿವೆ ಎಣ್ಣೆಯಿಂದ ಹಲ್ಲುಗಳಿಗೆ ಮಸಾಜ್ ಮಾಡಿ. ಇದು ಪಯೋರಿಯಾದಿಂದ ಮುಕ್ತಿ ನೀಡುತ್ತದೆ. ಮೂರರಿಂದ ನಾಲ್ಕು ಹನಿ ಸಾಸಿವೆ ಎಣ್ಣೆ, ಒಂದು ಚಿಟಿಕೆ ಅರಿಶಿನ ಮತ್ತು ಚಿಟಿಕೆ ಉಪ್ಪು ಬೆರೆಸಿ ನಿಯಮಿತವಾಗಿ ಹಲ್ಲುಗಳಿಗೆ ಮಸಾಜ್ ಮಾಡಿ. ಇದು ಪಯೋರಿಯಾ ಕಾಯಿಲೆಯನ್ನು ಹೊಡೆದೋಡಿಸುತ್ತದೆ. ಸಾಸಿವೆ ಎಣ್ಣೆಯ ಮಸಾಜ್‌ನಿಂದ ಹಲ್ಲುಗಳ ಹಳದಿಯಾಗುವಿಕೆ ದೂರವಾಗುತ್ತದೆ.
    Published by:renukadariyannavar
    First published: